ETV Bharat / sukhibhava

300 ಬಿಲಿಯನ್​ ಡಾಲರ್​ ತಲುಪಲಿದೆ ಭಾರತದ ಜೈವಿಕ ತಂತ್ರಜ್ಞಾನ ಉದ್ಯಮ; ಕೇಂದ್ರ ಸಚಿವ ಮಾಂಡವಿಯಾ - ಉದ್ಯಮ ಕ್ರಾಂತಿ

2025ರ ಹೊತ್ತಿಗೆ ಈ ಉದ್ಯಮದ ಮೌಲ್ಯ 150 ಬಿಲಿಯನ್​ ಡಾಲರ್​ ಆಗಲಿದ್ದು, 2030ರ ಹೊತ್ತಿಗೆ 300 ಬಿಲಿಯನ್​ ಡಾಲರ್​ ಆಗಲಿದೆ ಎಂದಿದ್ದಾರೆ.

Indias biotechnology industry eightfold growth in the past eight years

author img

By ETV Bharat Karnataka Team

Published : Dec 12, 2023, 12:37 PM IST

ಅಹಮದಬಾದ್​: ಆರೋಗ್ಯ ಚಿಕಿತ್ಸೆಯ ಮೂಲಾಧಾರವಾಗಿರುವ ಭಾರತದ ಜೈವಿಕ ತಂತ್ರಜ್ಞಾನ (ಬಯೋಟೆಕ್ನಾಲಾಜಿ) ಉದ್ಯಮವೂ ಕಳೆದ ಎಂಟು ವರ್ಷಗಳಿಂದ 80 ಬಿಲಿಯನ್​ ಡಾಲರ್​ಗೂ ಹೆಚ್ಚು ಬೆಳವಣಿಗೆ ಕಂಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ.

ಜೈವಿಕ ತಂತ್ರಜ್ಞಾನ ಶೃಂಗಸಭೆಯಲ್ಲಿ ವರ್ಚುಯಲ್​ ಆಗಿ ಮಾತನಾಡಿರುವ ಅವರು, 2025ರ ಹೊತ್ತಿಗೆ ಈ ಉದ್ಯಮದ ಮೌಲ್ಯ 150 ಬಿಲಿಯನ್​ ಡಾಲರ್​ ಆಗಲಿದ್ದು, 2030ರ ಹೊತ್ತಿಗೆ 300 ಬಿಲಿಯನ್​ ಡಾಲರ್​ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜಾಗತಿಕ ಹೊಸ ಉದ್ಯಮ ಕ್ರಾಂತಿಯಲ್ಲಿ ಜೈವಿಕ ಉತ್ಪಾದನೆ ಪ್ರಮುಖವಾಗಿದೆ. ಅಗ್ರಿ ಫುಡ್​, ಶಕ್ತಿ, ಆರೋಗ್ಯ, ಆರೈಕೆ ಮತ್ತು ಹವಾಮಾನ ಬದಲಾವಣೆ ಪರಿಹಾರದತ್ತ ಇದು ಗುರಿಯನ್ನು ಹೊಂದಿದೆ. ಆದಾಗ್ಯೂ ಜೈವಿಕ ಉತ್ಪಾದನೆ ವಲಯದಲ್ಲಿನ ಮಾನವಶಕ್ತಿ ಕೊರತೆಯು ಸವಾಲಾಗಿ ಉಳಿದಿದೆ. ಈ ಹಿನ್ನೆಲೆ ಅಗತ್ಯ ತರಬೇತಿ ನೀಡಲು ಮತ್ತು ಕೌಶಲ್ಯದ ಅಂತರವನ್ನು ಕಡಿಮೆ ಮಾಡಲು ಪ್ರಯತ್ನಗಳನ್ನು ಪ್ರೇರೇಪಿಸಲಾಗುವುದು ಎಂದು ಹೇಳಿದ್ದಾರೆ.

ಕಳೆದ ಎಂಟು ವರ್ಷದಲ್ಲಿ ಭಾರತದ ಜೈವಿಕ- ಆರ್ಥಿಕತೆ 10 ಬಿಲಿಯನ್​ ಡಾಲರ್​ ನಿಂದ 80 ಬಿಲಿಯನ್​ ಡಾಲರ್​​ ಬೆಳವಣಿಗೆಗೆ ಸಾಕ್ಷ್ಯವಾಗಿದೆ. ಭಾರತವು ಇದೀಗ ಜೈವಿಕ ತಂತ್ರಜ್ಞಾನ ವಲಯದಲ್ಲಿನ ವಿಸ್ತರಣೆಯ ಗುರಿಯನ್ನು ಹೊಂದಿದೆ ಎಂದು ತಿಳಿಸಿದರು.

ಸದ್ಯ ದೇಶದಲ್ಲಿ 760 ಬಯೋಟೆಕ್ನಾಲಜಿ ಕಂಪನಿಗಳಿದ್ದು, 4,240 ಸ್ಟಾರ್ಟ್​ಅಪ್​ಗಳಿವೆ. ಜಾಗತಿಕ ಜೈವಿಕ ತಂತ್ರಜ್ಞಾನದ ಕ್ರಾಂತಿಯಲ್ಲಿ ಭಾರತವು ಮುಂಚೂಣಿಯಲ್ಲಿರುವ ಗುರಿಯನ್ನು ಹೊಂದಿದೆ.

ಇದೇ ವೇಳೆ ಮಾತನಾಡಿದ ಬಯೋಟೆಕ್ನಾಲಾಜಿ ವಿಭಾಗದ ಕಾರ್ಯದರ್ಶಿ ಡಾ ರಾಜೇಶ್​ ಗೋಖಲೆ, ಮುಂದಿನ ಜಾಗತಿಕ ತಂತ್ರಜ್ಞಾನ ಕ್ರಾಂತಿಯಲ್ಲಿ ಬಯೋಟೆಕ್ನಾಲಾಜಿ ವಲಯವು ಸಾರಥ್ಯವಹಿಸದಲಿದೆ. ಈ ವಲಯದ ಬೆಳವಣಿಗೆಯು ದೇಶದ ಆರ್ಥಿಕತೆ ಮೇಲೆ ಗಮನಾರ್ಹ ಪರಿಣಾಮವನ್ನು ಹೊಂದಿದೆ. ಜೈವಿಕ ಆರ್ಥಿಕತೆಯು 2022 ರಲ್ಲಿ ಭಾರತದ ಜಿಡಿಪಿಯ ಸರಿಸುಮಾರು ಶೇ 4ರಷ್ಟು ಮೌಲ್ಯ ಅಂದರೆ, 137.24 ಬಿಲಿಯನ್​ ಡಾಲರ್​ ಹೊಂದಿದೆ. ಈ ಅಂಕಿ ಅಂಶವು 2030ರ ಹೊತ್ತಿಗೆ 300 ಬಿಲಿಯನ್​ ಡಾಲರ್​ ಮೀರಬಹುದು ಎಂದು ಅಂದಾಜಿಸಿದ್ದಾರೆ.

2025 ಬಯೋಟೆಕ್ ಸ್ಟಾರ್ಟ್‌ಅಪ್‌ಗಳು 2 ಪಟ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಜಾಗತಿಕ ಜೈವಿಕ ತಂತ್ರಜ್ಞಾನ ಉದ್ಯಮದಲ್ಲಿ ಭಾರತವೂ ಶೇ 3ರಷ್ಟು ಪಾಲನ್ನು ಹೊಂದಿದ್ದು, ದಕ್ಷಿಣ ಏಷ್ಯಾದ ಮೂರು ಅಗ್ರ ರಾಷ್ಟ್ರಗಳಲ್ಲಿ ಒಂದಾಗಿದೆ. ಹಾಗೇ ಜಾಗತಿಕವಾಗಿ 12ನೇ ಸ್ಥಾನದಲ್ಲಿದೆ. (ಐಎಎನ್​ಎಸ್​)

ಇದನ್ನೂ ಓದಿ: ಜೈವಿಕ ಚಿಕಿತ್ಸೆ ಮೂಲಕ ತೀವ್ರತರದ ಆಸ್ತಮಾ ನಿಯಂತ್ರಿಸಬಹುದು; ಅಧ್ಯಯನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.