ETV Bharat / sukhibhava

ವ್ಯಾಲಂಟೈನ್​ ಡೇ ದಿನ ಮೆಟಾವರ್ಸೆನಲ್ಲಿ ವರ್ಚುಯಲ್​ ಡೇಟಿಂಗ್​ ಮಾಡಲು ಉತ್ಸುಕರಾಗಿದ್ದರಂತೆ ಭಾರತೀಯರು

ತಂತ್ರಜ್ಞಾನ ಯುಗದಲ್ಲಿ ಪ್ರೀತಿಯ ಪರಿಭಾಷೆ ಕೂಡ ಬದಲಾಗಿದೆ. ಈಗಿನ ಜನರು ಕೈ ಕೈ ಹಿಡಿದು ಪಾರ್ಕ್​ ಸುತ್ತಾಡುವ ಬದಲು, ವರ್ಚುಯಲ್​ ಮೂಲಕವೇ ಡೇಟಿಂಗ್​ ನಡೆಸಲು ಇಷ್ಟಪಡುತ್ತಾರಂತೆ.

author img

By

Published : Feb 14, 2023, 3:43 PM IST

ವ್ಯಾಲಂಟೈನ್​ ಡೇ ದಿನ ಮೆಟಾವರ್ಸೆನಲ್ಲಿ ವರ್ಚುಯಲ್​ ಡೇಟಿಂಗ್​ ಮಾಡಲು ಉತ್ಸುಕರಾಗಿದ್ದರಂತೆ ಭಾರತೀಯರು
ವ್ಯಾಲಂಟೈನ್​ ಡೇ ದಿನ ಮೆಟಾವರ್ಸೆನಲ್ಲಿ ವರ್ಚುಯಲ್​ ಡೇಟಿಂಗ್​ ಮಾಡಲು ಉತ್ಸುಕರಾಗಿದ್ದರಂತೆ ಭಾರತೀಯರು

ಹೈದರಾಬಾದ್​: ತಂತ್ರಜ್ಞಾನ ಬೆಳೆದಂತೆಲ್ಲಾ ಮನುಷ್ಯ ಅದರ ಲಾಭವನ್ನು ಪಡೆಯುವುದು ಸುಳ್ಳಲ್ಲ. ಅಂತಹದ್ದೇ ತಂತ್ರಜ್ಞಾನವನ್ನೇ ಬಳಕೆ ಮಾಡಿ, ಪ್ರೇಮಿಗಳ ದಿನವನ್ನು ಕೆಲವರು ಸಂಭ್ರಮಿಸಲು ಇಚ್ಛಿಸುತ್ತಾರೆ ಎಂಬ ಅಂಶವನ್ನು ಸಂಶೋಧನೆಯೊಂದು ತಿಳಿಸಿದೆ. ಪ್ರೇಮಿಗಳ ದಿನ ಎಂದರೆ, ಎದುರಿಗೆ ಪ್ರೇಮಿಯಿಂದ ನಿವೇದನೆ, ಕೈ ಕೈ ಹಿಡಿದು ಶಾಪಿಂಗ್​, ಪ್ರಯಾಣ ಮಾಡಲು ಕೆಲವರು ಇಷ್ಟಪಡುತ್ತಾರೆ.

ಮತ್ತೆ ಕೆಲವು ಭಾರತೀಯರು ಮಾತ್ರ ಇದಕ್ಕೆ ವಿಭಿನ್ನವಾಗಿ ಚಿಂತಿಸುತ್ತಾರೆ ಎಂಬುದನ್ನು ಈ ಸಂಶೋಧನೆ ಹೊರ ಹಾಕಿದೆ. ಅದು ಹೇಗೆ ಎಂದರೆ, ವರ್ಚುಯಲ್​ ಡೇಟಿಂಗ್​. ಅಚ್ಚರಿಯಾದರೂ ಹೌದು, ಭಾರತೀಯರು ಮೆಟಾವರ್ಸೆಯಲ್ಲಿ ವರ್ಚುಯಲ್​ ಡೇಟಿಂಗ್​ ಮಾಡಲು ಸಿಕ್ಕಾಪಟ್ಟೆ ಉತ್ಸುಕರಾಗಿದ್ದಾರೆ ಎಂದು ಇದು ತಿಳಿಸಿದೆ. ಫೈನಾನ್ಸಿಯಲ್​ ಸರ್ವಿಸ್​ ಟೆಕ್ನಾಲಾಜಿ ಸಂಸ್ಥೆ ಅನುಸಾರ, ಶೇ 60 ರಷ್ಟು ಪುರುಷರು ಮತ್ತು ಶೇ 48ರಷ್ಟು ಮಹಿಳೆಯರು ಈ ರೀತಿ ಮೆಟಾವರ್ಸೆ ಮೂಲಕ ಈ ರೀತಿ ವರ್ಚಯಲ್​ ಡೇಟಿಂಗ್​ ನಡೆಸಲು ಇಚ್ಚಿಸುವುದಾಗಿ ತಿಳಿಸಿದ್ದಾರೆ.

ಭಾರತದಲ್ಲಿ ಅರೇಂಜ್​ ಮ್ಯಾರೇಜ್​ ಎಂಬುದು ಸಾಮಾನ್ಯ. ಡೇಟಿಂಗ್​ ಅವಕಾಶಗಳಿಗೆ ಇಲ್ಲಿ ಮಿತಿ ಇದೆ. ಆದರೆ, ಮೆಟಾವರ್ಸೆ ತಮ್ಮ ಸಂಗಾತಿಗಳನ್ನು ಹುಡುಕಲು ಹೊಸ ಹಾದಿಯನ್ನು ಹುಡುಕಿಕೊಡಲಿದೆ ಎಂಬುದನ್ನು ಸಂಶೋಧನೆ ತಿಳಿಸಿದೆ. ಈ ಮೆಟಾವರ್ಸೆ ಮೂಲಕ ವರ್ಚುಯಲ್​ ವರ್ಲ್ಡ್​ನಲ್ಲಿ ಹೊಸ ಅವತಾರ್​​ಗಳನ್ನು ಬಳಕೆ ಮಾಡಿಕೊಂಡು ತಮ್ಮನ್ನು ಪ್ರತಿನಿಧಿಸಬಹುದಾಗಿದೆ.

ನಾಚಿಕೆ ಮತ್ತು ಅಂತರ್ಮುಖಿ ಜನರಿಗೆ ವೈಯಕ್ತಿಕವಾಗಿ ಭೇಟಿ ಮಾಡುವುದಕ್ಕೆ ಹಿಂದೇಟು ಹಾಕುತ್ತಾರೆ. ಈ ಹಿನ್ನೆಲೆ ಈ ವರ್ಚುಯಲ್​ ಪ್ಲಾಟ್​ಫರ್ಮ್​ ಅವರಿಗೆ ಸಹಾಯ ಮಾಡಲಿದೆ ಎಂದು ಸಂಶೋಧನೆ ತಿಳಿಸಿದೆ. ವರ್ಚುಯಲ್ ಡೇಟಿಂಗ್ ವೈಯಕ್ತಿಕ ಡೇಟಿಂಗ್‌ನಂತೆಯೇ ಅನುಭೂತಿ ನೀಡದಿದ್ದರೂ ಸಹ, ಜನರ ನಡುವೆ ಸಂಪರ್ಕ ಸಾಧಿಸಲು ಮತ್ತು ಸಂಬಂಧಗಳನ್ನು ಸೃಷ್ಟಿಸಲು ಹೊಸ ಹಾದಿ ಸೃಷ್ಟಿಸಲಿದೆ.

ಭಾರತದಲ್ಲಿ ಹೆಚ್ಚು ಆಕರ್ಷಣೆ: ಈ ಮೊದಲು ಕೂಡ ಮೆಟಾವರ್ಸ್​​ ಭಾರತದಲ್ಲಿ ಆಕರ್ಷಣೆಯನ್ನು ಮೂಡಿಸಿದೆ. ಮೆಟಾವೈಬೆ, ಮಿಂಗ್​ಔಟ್​​ ಮತ್ತು ಸ್ಬೂನ್​ಮಿ ಡೇಟಿಂಗ್‌ನ ವಿಭಿನ್ನ ವಿಧಾನಗಳನ್ನು ಹೊಂದಿದ್ದು, ತಮ್ಮ ಬಳಕೆದಾರರಿಗೆ ಹೊಸ-ಯುಗದ ಡೇಟಿಂಗ್ ಅನುಭವಗಳನ್ನು ನೀಡುತ್ತದೆ. ಭಾರತದಲ್ಲಿ ಗೇಮಿಂಗ್, ಬ್ಯಾಂಕಿಂಗ್, ಡೇಟಿಂಗ್, ಶಾಪಿಂಗ್, ಉತ್ಪನ್ನ ಬಿಡುಗಡೆಗಳು ಮತ್ತು ಮುಂತಾದ ವಿವಿಧ ಸೇವೆಗಳನ್ನು ಒದಗಿಸಲು ಹೆಚ್ಚಿನ ಬ್ರ್ಯಾಂಡ್‌ಗಳು ಮೆಟಾವರ್ಸ್‌ನಂತಹ ತಂತ್ರಜ್ಞಾನಗಳನ್ನು ತನಿಖೆ ಮಾಡುತ್ತಿವೆ ಎಂದು ಸಂಶೋಧನೆ ಹೇಳುತ್ತದೆ.

ವರ್ಚುಯಲ್​ ರಿಯಾಲಿಟಿ ಹಲವು ಸಾಧ್ಯತೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ದೆಹಲಿ ಮೂಲದ ಮೆಟಾವರ್ಸೆ ಪ್ಲಾಟ್​ಫಾರ್ಮ್​ ಇದೀಗ ಇವುಗಳನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗುವಂತೆ ಮಾಡಿದೆ. ಅದರ ಅನುಸಾರ ಇದೀಗ ಡೇಟಿಂಗ್​ಗೂ ಮೆಟಾವರ್ಸೆ ಇದಾಗಿದೆ. ನಿಜವಾದ ವಾತಾವರಣಕ್ಕೆ ಸಮೀಪದ ರೀತಿ ವಾತಾವರಣನ್ನು ಕಂಪ್ಯೂಟರೈಸ್ಡ್​​ ಮೂಲಕ ಸೃಷ್ಟಿಸಿ ಅವರಿಗೆ ಅವಕಾಶ ನೀಡಲಾಗುವುದು.

ಇಂದಿನ ತಂತ್ರಜ್ಞಾನಯುಗದಲ್ಲಿ ವರ್ಚುಯಲ್​ ರಿಯಾಲಿಟಿ ಪ್ರಮುಖ ಸ್ಥಾನ ಪಡೆದಿದ್ದು, ಅದರ ಆದಾಯ ಕೂಡ ಹೆಚ್ಚುತ್ತಿದೆ. ಜಾಗತಿಕ ಮೆಟಾವರ್ಸ್ ಮಾರುಕಟ್ಟೆಯ ಆದಾಯವು 2021 ರಲ್ಲಿ 58.5 ಶತಕೋಟಿ ಡಾಲರ್​​ ದಾಟಿದೆ. ಇದು 2030 ರ ವೇಳೆಗೆ 1,525.7 ಶತಕೋಟಿ ಡಾಲರ್​ ತಲುಪಲಿದೆ.

ಇದನ್ನೂ ಓದಿ: ಬಣ್ಣದಲ್ಲಿದೆ ಪ್ರೀತಿಯ ಪರವಶತೆ: ಪ್ರೇಮದ ಸಂಕೇತವೇ 'ಕೆಂಪು'.. ಯಾಕೆ ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.