ಭಾರತದ ಆಹಾರ ಪದ್ಧತಿಯಲ್ಲಿ ಜಿಂಕ್, ಫೈಬರ್ ಹೆಚ್ಚಿರುತ್ತದೆ. ನಿಯಮಿತವಾಗಿ ಟೀ ಮತ್ತು ಆಹಾರದಲ್ಲಿ ಅರಿಶಿಣ ಸೇವಿಸುವುದರಿಂದ ಕೋವಿಡ್ ತೀವ್ರತೆ ಮತ್ತು ಸಾವಿನ ಪ್ರಮಾಣ ಕಡಿಮೆ ಮಾಡುತ್ತದೆ ಎಂದು ಅಧ್ಯಯನ ತಿಳಿಸಿದೆ. ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್ನ ಏಪ್ರಿಲ್ ಸಂಚಿಕೆ ಈ ಕುರಿತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.
ಕೋವಿಡ್ 19 ಸಾಕ್ರಾಂಮಿಕತೆ ಸಮಯದಲ್ಲಿ, ಕಡಿಮೆ ಜನಸಂಖ್ಯೆಯುಳ್ಳ ಪಶ್ಚಿಮ ದೇಶಗಳಿಗೆ ಹೋಲಿಕೆ ಮಾಡಿದರೆ, ಭಾರತದಲ್ಲಿ ಸಾವಿನ ಪ್ರಕರಣ ಶೇ 5- 8 ರಷ್ಟು ಕಡಿಮೆ ವರದಿ ಆಗಿದೆ. ಭಾರತ, ಬ್ರೆಜಿಲ್, ಜೋರ್ಡಾನ್, ಸ್ವಿಜರ್ಲೆಂಡ್ ಮತ್ತು ಸೌದಿ ಅರೇಬಿಯಾ ಒಳಗೊಂಡ ಅಂತಾರಾಷ್ಟ್ರೀಯ ತಂಡ ಈ ಅಧ್ಯಯನ ನಡೆಸಿದೆ. ಭಾರತ ಮತ್ತು ಪಶ್ಚಿಮಾತ್ಯ ದೇಶಗಳ ಆಹಾರ ಪದ್ದತಿ ಅಭ್ಯಾಸಗಳು ಕೋವಿಡ್ 19 ತೀವ್ರತೆ ಮತ್ತು ಸಾವು ನಡುವಿನ ಸಂಬಂಧವನ್ನು ಅಧ್ಯಯನ ನಡೆಸಿದೆ.
ಭಾರತದಲ್ಲಿ ತೀವ್ರತೆ ಕಡಿಮೆ: ಪಾಶ್ಚಿಮಾತ್ಯ ಜನಸಂಖ್ಯೆಗೆ ಹೋಲಿಕೆ ಮಾಡಿದರೆ, ಭಾರತದಲ್ಲಿ ಕೋವಿಡ್ 19 ತೀವ್ರತೆ ಮತ್ತು ಸಾವಿನ ಪ್ರಮಾಣ ಕಡಿಮೆ ಮಾಡುವಲ್ಲಿ ಆಹಾರ ಪದಾರ್ಥ ಪ್ರಮುಖ ಪಾತ್ರವಹಿಸಿದೆ ಎಂದು ಅಧ್ಯಯನ ತಿಳಿಸಿದೆ. ಆದಾಗ್ಯೂ, ಪ್ರಸ್ತುತ ಫಲಿತಾಂಶ ಬೆಂಬಲಿಸಲು ಹೆಚ್ಚಿನ ಬಹು ಕೇಂದ್ರಿತ ಪ್ರಕರಣದಲ್ಲಿ ನಿಯಂತ್ರಣ ಅಧ್ಯಯನ ಅವಶ್ಯಕತೆ ಇದೆ ಎಂದು ತಿಳಿಸಿದೆ.
ಭಾರತೀಯ ಆಹಾರ ಪದ್ಧತಿಯಲ್ಲಿ ಹೆಚ್ಚಾಗಿ ಕಬ್ಬಿಣ ಮತ್ತು ಜಿಂಕ್ ಇದೆ. ಅಲ್ಲದೇ ಸಮೃದ್ಧ ಫೈಬರ್ ಆಹಾರಗಳು ಇಂಗಾಲದ ಡೈ ಆಕ್ಸೆಡ್ ಮತ್ತು ಎಲ್ಪಿಎಸ್ ತಡೆಯುವಲ್ಲಿ ಪ್ರಮುಖವಾಗಿದೆ. ಈ ಎಲ್ಪಿಎಸ್ ಮಿದುಳಿನ ಉರಿಯೂತ ಪ್ರಚೋದಿಸಲು ಉರಿಯುತದ ಪ್ರಕ್ರಿಯೆಯಾಗಿದೆ.
ಭಾರತೀಯರ ಆಹಾರ ಶೈಲಿ: ಅಲ್ಲದೇ, ಭಾರತೀಯರು ಸೇವಿಸುವ ಟೀ, ಹೆಚ್ಚಿನ ಎಚ್ಡಿಲ್ ನಿರ್ವಹಣೆಗೆ ಸಹಾಯ ಮಾಡುತ್ತದೆ. ಇದನ್ನು ಉತ್ತಮ ಕೊಲೆಸ್ಟ್ರಾಲ್ ಎಂದು ಕರೆಯಲಾಗುವುದು. ಚಹಾದಲ್ಲಿ ರಕ್ತದಲ್ಲಿನ ಟ್ರೈಗ್ಲಿಸರೈನ್ ಅನ್ನು ಕಡಿಮೆ ಮಾಡುವ ನೈಸರ್ಗಿಕ ಅಡೊರ್ವಸ್ಟಿನ್ (ಹೃದಯ ರೋಗ ನಡೆಯಲು ಬಳಸುವ ಔಷಧ) ಇರುತ್ತದೆ.
ಭಾರತೀಯರ ಆಹಾರ ಪದ್ಧತಿಯಲ್ಲಿ ನಿಯಮಿತವಾಗಿ ಅರಿಶಿಣ ಬಳಕೆ ಊಡ ರೋಗ ನಿರೋಧಕ ಶಕ್ತಿಗೆ ಕಾರಣವಾಗಿದೆ. ಅರಿಶಿಣದಲ್ಲಿನ ಕುರ್ಕ್ಯುಮಿನ್ ಸಾರ್ಸ್ - ಕೋವಿಡ್ ಸೋಂಕು ಮತ್ತು ಕೋವಿಡ್ ತೀವ್ರತೆಯನ್ನು ಕಡಿಮೆ ಮಾಡುತ್ತದೆ. ಮತ್ತು ಸಾವಿನ ಪ್ರಮಾಣ ತಡೆಗಟ್ಟುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಪಾಶ್ಚಿಮಾತ್ಯರ ಆಹಾರ ಶೈಲಿಯಲ್ಲಿ ಕೆಂಪು ಮಾಂಸ, ಡೈರಿ ಉತ್ಪನ್ನ ಮತ್ತು ಸಂಸ್ಕರಿಸಿದ ಆಹಾರ ಹೆಚ್ಚಿನ ಸೇವನೆ ಅವರಲ್ಲಿ ಕೋವಿಡ್ ತೀವ್ರತೆ ಮತ್ತು ಸಾವಿಗೆ ಕಾರಣವಾಗಿದೆ. ಈ ಅಧ್ಯಯನಕ್ಕಾಗಿ ನಾಲ್ಜು ರಾಷ್ಟ್ರಗಳಲ್ಲಿ ಪ್ರಮುಖವಾಗಿ ಸೇವಿಸುವ 12 ಆಹಾರಗಳ ದತ್ತಾಂಶವನ್ನು ಸಂಗ್ರಹಿಸಲಾಗಿದೆ. ಅಲ್ಲದೇ ಈ ಆಹಾರಗಳು ನ್ಯೂಟ್ರಿಜೆನೊಮಿಕ್ ವಿಶ್ಲೇಷಣೆ ಮತ್ತು ಪ್ರತಿ ನಿತ್ಯ ವ್ಯಕ್ತಿಯೊಬ್ಬ ಸೇವಸುವ ಆಹಾರ ಪದ್ದತಿಯನ್ನು ತನಿಖೆ ನಡೆಸಲಾಗಿದೆ. ಅಧ್ಯಯನಕ್ಕೆ ತಂಡ, ಕೋವಿಡ್ 19 ತೀವ್ರತೆ ಹೊಂದಿರುವ ರೋಗಿಗಳ ರಕ್ತದ ಟ್ರಾನ್ಸ್ಕ್ರಿಪ್ಟೊಮ್ಸ್ ಮಾದರಿಯನ್ನು ಪಡೆದಿದ್ದಾರೆ.
ಇದನ್ನೂ ಓದಿ: ಹಣ್ಣು, ತರಕಾರಿ ಸೇವಿಸಿ.. ಗರ್ಭಪಾತದಿಂದ ಪಾರಾಗಿ..