ETV Bharat / sukhibhava

ಬಾಲ್ಯದಲ್ಲಿನ ನಿಷ್ಕ್ರಿಯತೆ ಭವಿಷ್ಯದಲ್ಲಿ ಹೃದಯಾಘಾತಕ್ಕೆ ಕಾರಣ; ಅಧ್ಯಯನ - ಭವಿಷ್ಯದಲ್ಲಿ ಹೃದಯಾಘಾತ ಮತ್ತು ಪಾರ್ಶ್ವವಾಯು

ಬಾಲ್ಯದಲ್ಲಿನ ಉದಾಸೀನತೆಯಿಂದ ಕೂಡಿದ ಜೀವನಶೈಲಿಯು ನಂತರದ ಜೀವನದಲ್ಲಿ ಹೃದಯದ ಹಾನಿಗೆ ಕಾರಣವಾಗುವ ಸಾಧ್ಯತೆ ಇರುತ್ತದೆ ಎಂದು ಅಧ್ಯಯನವೊಂದರಿಂದ ಬಯಲಾಗಿದೆ.

Inactivity in childhood causes heart attacks in future

author img

By ETV Bharat Karnataka Team

Published : Aug 24, 2023, 10:41 AM IST

ಬಾಲ್ಯದಲ್ಲಿ ಗಂಟೆಗಳ ಕಾಲ ಯಾವುದೇ ಚಟುವಟಿಕೆ ಮಾಡದೇ ನಿಷ್ಕ್ರಿಯವಾಗಿರುವುದರಿಂದ ಭವಿಷ್ಯದಲ್ಲಿ ಹೃದಯಾಘಾತ ಮತ್ತು ಪಾರ್ಶ್ವವಾಯುವಿನ ಅಪಾಯಕ್ಕೆ ಕಾರಣವಾಗುತ್ತದೆ ಎಂದು ಅಧ್ಯಯನ ತಿಳಿಸಿದೆ. ಯುರೋಪಿಯನ್​ ಸೊಸೈಟಿ ಆಫ್​ ಕಾರ್ಡಿಯೊಲಾಜಿ ಪ್ರಸ್ತುತ ಪಡಿಸಿದ ಈ ಅಧ್ಯಯನದಲ್ಲಿ, ಬಾಲ್ಯದಿಂದ ಯೌವನವಸ್ಥೆವರೆಗೆ ಸಂಗ್ರಹವಾದ ಜಡ ಜೀವನಶೈಲಿಯು ನಂತರದ ಜೀವನದಲ್ಲಿ ಹೃದಯದ ಹಾನಿಗೆ ಕಾರಣವಾಗುವ ಸಾಧ್ಯತೆ ಇರುತ್ತದೆ. ಇವರಲ್ಲಿ ಸಾಮಾನ್ಯ ತೂಕ ಮತ್ತು ಸಾಮಾನ್ಯ ರಕ್ತದೊತ್ತಡ ಇದ್ದರೂ ಈ ಹಾನಿ ಆಗುವ ಸಾಧ್ಯತೆ ಇರುತ್ತದೆ ಎಂದು ಅಧ್ಯಯನದಲ್ಲಿ ಕಂಡುಕೊಳ್ಳಲಾಗಿದೆ.

ಮಕ್ಕಳು ಗಂಟೆಗಳ ಕಾಲ ಸ್ಕ್ರೀನ್​ ಟೈಮ್​ ವೀಕ್ಷಣೆಯು ಹೃದಯದ ಆರೋಗ್ಯಕ್ಕೆ ಹೆಚ್ಚು ಪರಿಣಾಮ ಬೀರುತ್ತದೆ. ವಯಸ್ಕರಲ್ಲಿ ಹೃದಯಾಘಾತ ಮತ್ತು ಪಾರ್ಶ್ವವಾಯು ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನ ತಿಳಿಸುತ್ತದೆ ಎಂದು ಲೇಖಕ ಆ್ಯಂಡ್ರೂ ಅಗ್ಬಜೆ ತಿಳಿಸಿದ್ದಾರೆ. ಇದೇ ವೇಳೆ ಲೇಖಕರು ಹದಿಹರೆಯದ ಮಕ್ಕಳು ತಮ್ಮ ದೀರ್ಘಾವಧಿಯ ಆರೋಗ್ಯದ ರಕ್ಷಣೆಗೆ ಚಟುವಟಿಕೆಯಲ್ಲಿ ತೊಡಗಬೇಕು ಎಂದು ಸಲಹೆ ನೀಡಿದ್ದಾರೆ.

ಅಧ್ಯಯನದಲ್ಲಿ ಇನ್ನೂ ಏನೇನು ಹೇಳಲಾಗಿದೆ: ಈ ಅಧ್ಯಯನ ತನಿಖೆ ನಡೆಸಲು 11 ವರ್ಷದ ಮಕ್ಕಳಲ್ಲಿ 7 ದಿನಗಳ ಕಾಲ ಸ್ಮಾರ್ಟ್​ವಾಚ್​ ಧರಿಸುವಂತೆ ತಿಳಿಸಿ, ಪರಿಶೀಲನೆ ನಡೆಸಲಾಗಿದೆ. ಇದೇ ರೀತಿ 15 ವರ್ಷ ಮತ್ತು 24 ವರ್ಷದವರನ್ನು ಕೂಡ ಅಧ್ಯಯನಕ್ಕೆ ಒಳಪಡಿಸಲಾಗಿದೆ.

17 ಮತ್ತು 24ನೇ ವಯಸ್ಸಿನಲ್ಲಿ ಹೃದಯದ ಎಡ ಕುಗಹರದ ತೂಕವನ್ನು ಎಕೋಕಾರ್ಡಿಯೋಗ್ರಫಿ ರೀತಿಯ ಅಲ್ಟ್ರಾಸೌಂಡ್​ ಸ್ಕ್ಯಾನ್​ ಮೂಲಕ ನಿರ್ಣಯಿಸಲಾಗಿದೆ. ಸಂಶೋಧಕರು 11ರಿಂದ 24 ವರ್ಷ ಮತ್ತು 17 ರಿಂದ 24 ವರ್ಷದ ನಡುವಿನ ಜಡ ಜೀವನಶೈಲಿಯಲ್ಲಿ ಮಾಪನ ಮಾಡಿದ್ದಾರೆ. ಜೊತೆಗೆ ಪ್ರಭಾವ ಬೀರುವ ಸಂಬಂಧಗಳ ಅಂಶಗಳನ್ನು ಹೊಂದಾಣಿಕೆ ಮಾಡಲಾಗಿದೆ. ಇದರಲ್ಲಿ ವಯಸ್ಸು, ಲಿಂಗ, ರಕ್ತದೊತ್ತಡ, ದೇಹದ ಕೊಬ್ಬು, ಧೂಮಪಾನ ಮತ್ತು ದೈಹಿಕ ಚಟುವಟಿಕೆ ಹಾಗೂ ಸಾಮಾಜಿಕ ಆರ್ಥಿಕ ಸ್ಥಿತಿಗಳಿದೆ.

ಈ ಅಧ್ಯಯನವನ್ನು 766 ಮಕ್ಕಳ ಮೇಲೆ ನಡೆಸಲಾಗಿದ್ದು, ಇದರಲ್ಲಿ ಶೇ 55ರಷ್ಟು ಹುಡುಗಿಯರು ಶೇ 45ರಷ್ಟು ಹುಡುಗರು ಇದ್ದರು. 11 ವರ್ಷದ ಮಕ್ಕಳಲ್ಲಿ ದಿನದಲ್ಲಿ ಜಢ ಜೀವನಶೈಲಿ 362 ನಿಮಿಷ ಇದೆ. ಹದಿವಯಸ್ಸಿನಲ್ಲಿ ಅಂದರೆ, 15 ವರ್ಷದ ಮಕ್ಕಳಲ್ಲಿ 474 ನಿಮಿಷದಷ್ಟಿದೆ. 24 ವರ್ಷದವರಲ್ಲಿ 531 ನಿಮಿಷ ಜಢ ಜೀವನಶೈಲಿ ಇದೆ. ಇದರ ಅರ್ಥ ಈ ಜಢ ಜೀವನಶೈಲಿ ಏರಿಕೆ ಕಂಡಿದ್ದು, ಇದನಕ್ಕೆ 169 ನಿಮಿಷ ಹೆಚ್ಚಿದೆ ಎಂದು ಅಧ್ಯಯನ ತೋರಿಸಿದೆ.

ನಮ್ಮ ಅಧ್ಯಯನವೂ ಚಟುವಟಿಕೆ ಇರದ ಸಮಯದ ಶೇಖರಣೆ ಹೃದಯ ಹಾನಿಗೆ ಸಂಬಂಧಿಸಿದೆ. ಪಾಲಕರು ಮಕ್ಕಳು ಮತ್ತು ಹದಿಹರೆಯದವರನ್ನು ವಾಕಿಂಗ್‌ಗೆ ಕರೆದೊಯ್ಯುವ ಮೂಲಕ ಮತ್ತು ಸಾಮಾಜಿಕ ಮಾಧ್ಯಮ ಮತ್ತು ವಿಡಿಯೋ ಗೇಮ್‌ ಸಮಯವನ್ನು ಮಿತಿಗೊಳಿಸಿ, ಅವರಿಗೆ ಚಟುವಟಿಕೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಉತ್ತೇಜಿಸಬೇಕು ಎಂದಿದೆ.

ಇದನ್ನೂ ಓದಿ: 'ಬಾಲ್ಯದ ಮಧುಮೇಹ' ಟೈಪ್​ 1 ಡಯಾಬಿಟಿಸ್​: ಏನಿದರ ಲಕ್ಷಣ? ಪರಿಹಾರ ಹೇಗೆ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.