ETV Bharat / sukhibhava

RT-PCR ಒಮಿಕ್ರಾನ್ ಪರೀಕ್ಷಾ ಕಿಟ್ 'ಓಮಿಸೂರ್​': ಜನವರಿ 12ರಿಂದ ಬಳಕೆಗೆ ಲಭ್ಯ - ಜಿನೋಮ್ ಸೀಕ್ವೆನ್ಸಿಂಗ್ ಮೂಲಕ ಓಮಿಕ್ರಾನ್ ಪ್ರಕರಣಗಳನ್ನು ಪತ್ತೆ

ಇತ್ತೀಚೆಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಟಾಟಾ ಮೆಡಿಕಲ್ ಮತ್ತು ಡಯಾಗ್ನೋಸ್ಟಿಕ್ಸ್ ತಯಾರಿಸಿದ ಮೊದಲ RT-PCR ಒಮಿಕ್ರಾನ್ ಪರೀಕ್ಷಾ ಕಿಟ್ 'ಓಮಿಸೂರ್​​' ಗೆ ಅನುಮೋದನೆ ನೀಡಿದೆ. ಕೋವಿಡ್​​-19ನ ಹೊಸ ರೂಪಾಂತರವನ್ನು ಪತ್ತೆ ಹಚ್ಚಲು ಕಿಟ್​ ಬಳಸಬಹುದಾಗಿದೆ.

ಓಮಿಕ್ರಾನ್ ಪರೀಕ್ಷಾ ಕಿಟ್
ಓಮಿಕ್ರಾನ್ ಪರೀಕ್ಷಾ ಕಿಟ್
author img

By

Published : Jan 6, 2022, 7:29 PM IST

ದೇಶದ ಮೊದಲ ಆರ್​ಟಿ-ಪಿಸಿಆರ್​​ ಒಮಿಕ್ರಾನ್​ ಪರೀಕ್ಷಾ ಕಿಟ್​​ಗೆ ಡಿಸೆಂಬರ್‌ 30ರಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಅನುಮತಿ ನೀಡಿದೆ. ಈ ಪರೀಕ್ಷಾ ಕಿಟ್​​ಗೆ ಓಮಿಸೂರ್​​ (Omisure) ಎಂದು ಹೆಸರಿಡಲಾಗಿದೆ.

ಈ ಕಿಟ್​ನ ವಿನ್ಯಾಸ ಮತ್ತು ಅಭಿವೃದ್ಧಿಯನ್ನು ಯುಎಸ್ ಮೂಲದ ಕಂಪನಿ ಥರ್ಮೋ ಫಿಶರ್ ಮಾಡಿದ್ದು, ಇದನ್ನು ಟಾಟಾ ಕಂಪನಿ ತಯಾರಿಸಿದೆ. ಇದು ಎಸ್​​-ಜೀನ್ ಟಾರ್ಗೆಟ್ ಫೇಲ್ಯೂರ್​​ನನ್ನು ಬಳಸಿಕೊಂಡು, ಹೊಸ ರೂಪಾಂತರಿ ಒಮಿಕ್ರಾನ್ ಪತ್ತೆ ಮಾಡುತ್ತದೆ.

ಇಲ್ಲಿಯವರೆಗೆ ಜಿನೋಮ್ ಸೀಕ್ವೆನ್ಸಿಂಗ್ ಮೂಲಕ ಒಮಿಕ್ರಾನ್ ಪ್ರಕರಣಗಳನ್ನು ಪತ್ತೆ ಮಾಡಲಾಗುತ್ತಿತ್ತು. ಆರ್​ಟಿ-ಪಿಸಿಆರ್​​​ ಪರೀಕ್ಷೆ ಮಾಡುವಾಗ ಮೂಗು ಮತ್ತು ಬಾಯಿಯ ದ್ರವವನ್ನು ಸಂಗ್ರಹಿಸಲಾಗುತ್ತದೆ. ಇದೇ ದ್ರವದಿಂದ ಒಮಿಸೂರ್​​ ಕಿಟ್​ನ ಸಹಾಯದಿಂದ ಇದೀಗ ಒಮಿಕ್ರಾನ್​ ಪ್ರಕರಣಗಳನ್ನು ಪತ್ತೆ ಹಚ್ಚಬಹುದಾಗಿದೆ.ಪ್ರಸ್ತುತ ಭಾರತದಲ್ಲಿ ಈ ವಿಧಾನದ ಮೂಲಕ ಒಮಿಕ್ರಾನ್ ಪತ್ತೆ ಹಚ್ಚಲು ಬಳಸಬಹುದಾದ ಏಕೈಕ ಕಿಟ್ ಇದಾಗಿದೆ.

ಇದನ್ನೂ ಓದಿ:ಒಮಿಕ್ರಾನ್ ವಿರುದ್ಧ​ ಲಸಿಕೆಯ ಪರಿಣಾಮಕಾರಿತ್ವವನ್ನು ಬೂಸ್ಟರ್​ ಡೋಸ್ ಶೇ.88ರಷ್ಟು ಹೆಚ್ಚಿಸುತ್ತದೆ: ಅಧ್ಯಯನ

ವಿಜ್ಞಾನಿಗಳು ಯಾವ ಕೋವಿಡ್​​ ರೂಪಾಂತರಿ ಎಂದು ಪತ್ತೆ ಹಚ್ಚಲು ಎಸ್​​-ಜೀನ್ ಟಾರ್ಗೆಟ್ ಫೆಲ್ಯೂರ್​​ನಿಂದ ಸಹಾಯವಾಗುತ್ತದೆ. ಯಾರಾದ್ರೂ ಆರ್​ಟಿ-ಪಿಸಿಆರ್ ಪರೀಕ್ಷೆಗೆ ಒಳಗಾದ್ರೆ, ಈ ಕಿಟ್​​ ಯಾವ ಕೋವಿಡ್ ಜೀನ್‌ ಎಂದು ಪತ್ತೆ ಹಚ್ಚುತ್ತದೆ. ಎಸ್​​-ಜೀನ್ ಟಾರ್ಗೆಟ್ ಫೆಲ್ಯೂರ್​​ನನ್ನು ಪಿಸಿಆರ್​​(PCR) ಪರೀಕ್ಷೆ ಎಂದೂ ಸಹ ಕರೆಯಲಾಗುತ್ತದೆ. ಇಲ್ಲಿ N ಮತ್ತು ORF1ab ಜೀನ್‌ಗಳನ್ನು ಪತ್ತೆ ಮಾಡಲಾಗುತ್ತೆ, ಆದರೆ S-ಜೀನ್ ಅಲ್ಲ.

ಕಿಟ್ ಎರಡು ಹಂತಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಮೊದಲನೆಯದಾಗಿ ಇದು ಕೋವಿಡ್​​ ಪತ್ತೆ ಮಾಡುತ್ತದೆ. ಎರಡನೆಯದಾಗಿ, S-ಜೀನ್ ಪತ್ತೆಯಾದರೆ ಮಾದರಿಯು ಒಮಿಕ್ರಾನ್​ ಪಾಸಿಟಿವ್​ ಎಂದು ತೋರಿಸುತ್ತದೆ.

ಕಿಟ್​ನ ಬೆಲೆ ಎಷ್ಟು?

ಕಂಪನಿಯ ಪ್ರಕಾರ, ಕಿಟ್ ಜನವರಿ 12 ರಿಂದ ಲಭ್ಯವಾಗಲಿದೆ. ಅದರ ಬೆಲೆಯನ್ನು 250 ರೂ.ಗೆ ನಿಗದಿಪಡಿಸಲಾಗಿದೆ. ಕಿಟ್‌ನ ರನ್ ಸಮಯ 85 ನಿಮಿಷಗಳು ಮತ್ತು ಟರ್ನ್‌ಅರೌಂಡ್ ಸಮಯ 130 ನಿಮಿಷಗಳು (ಮಾದರಿ ಸಂಗ್ರಹದಿಂದ ಫಲಿತಾಂಶ ಘೋಷಣೆಯವರೆಗೆ).

ETV Bharat Logo

Copyright © 2025 Ushodaya Enterprises Pvt. Ltd., All Rights Reserved.