ETV Bharat / sukhibhava

ಬೇಸಿಗೆಗೆ ಮಾತ್ರ ಸನ್​ಸ್ಕ್ರೀನ್​ ಅವಶ್ಯಕತೆ ಎನ್ನಬೇಡಿ; ಮಳೆಗಾಲದಲ್ಲೂ ತ್ವಚೆ ಆರೈಕೆ ಮಾಡಿಕೊಳ್ಳಿ..

ವಾತಾವರಣ ಬದಲಾದಂತೆ ತ್ವಚೆ ಆರೈಕೆ ಅವಶ್ಯಕತೆ ಇಲ್ಲ ಎಂದು ಭಾವಿಸುತ್ತೇವೆ. ಆದರೆ, ಇದು ತಪ್ಪು ಕಲ್ಪನೆ ಆಗಿದೆ.

If you think sunscreen is only necessary during the summer think again

author img

By

Published : Jul 31, 2023, 4:02 PM IST

ಬೆಂಗಳೂರು: ಬಿರು ಬೇಸಿಗೆಯ ಬಳಿಕ ಬರುವ ಮಳೆಗಾಲ ನಿಜಕ್ಕೂ ಹಿತಕರವಾಗಿತ್ತದೆ. ಈ ಋತುಮಾನದ ಬದಲಾವಣೆಯು ನಿಮ್ಮ ಚರ್ಮ, ವಾತಾವರಣದ ಆರ್ದ್ರತೆ ಮೇಲೂ ಪರಿಣಾಮ ಬೀರುತ್ತದೆ. ವಾತಾವರಣ ಬದಲಾದಂತೆ ನಿಮ್ಮ ದೈನಂದಿನ ಚರ್ಮದ ಕಾಳಜಿ ಕೂಡ ಸಂಪೂರ್ಣವಾಗಿ ಬದಲಾಗುತ್ತದೆ. ಮಳೆಗಾಲದಲ್ಲಿ ನಿಮ್ಮ ತ್ವಚೆಯ ಕುರಿತು ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ.

ಕ್ಲೈನ್ಸಿಂಗ್​​: ಮಾನ್ಸೂನ್​ ವೇಳೆ ನಿಮ್ಮ ತ್ವಚೆಯನ್ನು ಶುದ್ಧ ಮತ್ತು ಒಣದಾಗಿರಿಸಿಕೊಳ್ಳುವುದು ಹೆಚ್ಚು ಮುಖ್ಯ. ಮಳೆ ವಾತಾವರಣವೂ ಗಾಳಿಯಲ್ಲಿ ರೋಗಾಣು ಮತ್ತು ಕೊಳೆಯನ್ನು ಹೊತ್ತು ತರುತ್ತದೆ. ಈ ಹಿನ್ನೆಲೆ ತ್ವಚೆಯ ಕಾಳಜಿ ವಹಿಸುವುದು ಅತ್ಯಗತ್ಯವಾಗಿದೆ. ಚರ್ಮದಲ್ಲಿರುವ ಸತ್ತ ಕೋಶವನ್ನು ತೆಗೆಯುವುದು ಅವಶ್ಯಕ.

ನೈಸರ್ಗಿಕ ಆರೈಕೆ: ಮಾನ್ಸೂನ್​ನಲ್ಲಿ ಆರ್ದ್ರತೆ ಹೆಚ್ಚಿರುತ್ತದೆ. ಇದರ ಅರ್ಥ ನೀವು ತಾಜಾತನದ ಪರಿಹಾರಕ್ಕೆ ಹೆಚ್ಚಿನ ಕಾಳಜಿ ಅಗತ್ಯವಾಗಿದೆ. ಹಣ್ಣು ಮತ್ತು ನಟ್​ಗಳಿಂದ ಕೂಡಿದ ಉತ್ಪನ್ನಗಳು ನಿಮ್ಮ ತ್ವಚೆಗೆ ಸಾಕಷ್ಟು ಪ್ರಯೋಜನ ನೀಡುತ್ತದೆ. ಏಪ್ರಿಕಾಟ್, ಮಾವು ಮತ್ತು ಅಕ್ಕಿ ಹಾಲು, ರಾಸ್ಪ್ಬೆರಿ, ಬ್ಲೂಬೆರ್ರಿ, ಬಾದಾಮಿ ಹಾಲಿನ ಬಳಕೆ ಮಾಡಬಹುದು.

ಎಕ್ಸ್ಫೋಲಿಯೇಟ್​: ಚರ್ಮದಲ್ಲಿ ಅಡಗಿರುವ ಸತ್ತ ಕೋಶಗಳನ್ನು ತೆಗೆಯಲು ಎಕ್ಸ್ಫೋಲಿಯೇಟ್ ಸಹಾಯ ಮಾಡುತ್ತದೆ. ಚರ್ಮದಲ್ಲಿ ಸತ್ತ ಚರ್ಮಗಳು ಸೇರಿರುತ್ತದೆ. ಇದರ ನಿವಾರಣೆಗೆ ಬಲವಾದ ಸ್ಕ್ರಬ್​ ಬಳಸುವುದರಿಂದ ಚರ್ಮ ಕಿರಿಕಿರಿ ಅನುಭವಿಸುತ್ತದೆ. ಇದರ ಬದಲಿಗೆ ಹಣ್ಣು ಅಥವಾ ಸಸ್ಯಾಧಾರಿತ ವಸ್ತುಗಳನ್ನು ಬಳಕೆ ಮಾಡಬಹುದು. ಮುಖ್ಯವಾದ ಅಂಶ ಎಂದರೆ, ಎಕ್ಸ್ಫೋಲಿಯೇಟ್ ಅನ್ನು ವಾರದಲ್ಲಿ ಎರಡು ಬಾರಿ ಮಾತ್ರ ಮಾಡಬೇಕು.

ಎಸ್​ಪಿಎಫ್​ ಬಳಕೆ ಮರೆಯಬೇಡಿ: ಬೇಸಿಗೆಯಲ್ಲಿ ಮಾತ್ರ ಸನ್​ಸ್ಕ್ರೀನ್​ಗಳು ತ್ವಚೆಗೆ ಅವಶ್ಯಕತೆ ಇದೆ ಎಂದು ನಂಬಿದ್ದರೆ, ಅದು ತಪ್ಪು. ಸನ್​ಸ್ಕ್ರೀನ್​ ಅನ್ನು ದೈನಂದಿನ ದಿನಚರಿಯಲ್ಲಿ ಸೇರಿಸಬೇಕು. ಇದು ನಿಮ್ಮ ತ್ವಚೆಯನ್ನು ಸೂರ್ಯನ ಕಿರಣಗಳಿಂದ ರಕ್ಷಿಸುತ್ತದೆ. ಮೋಡದ ವಾತಾವರಣ ಇದ್ದರೂ ಯುವಿ ಕಿರಣಗಳು ತ್ವಚೆಗೆ ಹಾನಿ ಮಾಡುತ್ತದೆ. ಈ ಹಿನ್ನೆಲೆ ಎಸ್​ಪಿಎಫ್​ 30 ಸನ್​ಸ್ಕ್ರೀನ್​ ಅನ್ನು ಬಳಕೆ ಮಾಡುವುದು ಅವಶ್ಯವಾಗಿದೆ.

ಹೈಡ್ರೇಷನ್​: ಮಾನ್ಸೂನ್​​ನಲ್ಲಿ ಮಾಶ್ಚರೈಸರ್​​ ಕೂಡ ಅನಗತ್ಯ ಎಂಬುದು ಅನೇಕರ ಭಾವನೆ. ಆದರೆ, ತ್ವಚೆಯ ಹೈಡ್ರೇಷನ್​ ನಿರ್ವಹಣೆ ಮಾಡಲು ಇದು ಅವಶ್ಯಕವಾಗಿದೆ. ಈ ಹಿನ್ನೆಲೆ ನಿಮ್ಮ ತ್ವಚೆಯ ದಿನಚರಿಯನ್ನು ಪಾಲಿಸುವುದರಿಂದ ಯಾವುದನ್ನು ಹೊರಗೆ ಇಡಬೇಡಿ. ಈ ಋತುಮಾನದಲ್ಲಿ ಜಿಗುಟಲ್ಲದ, ವಾಟರ್​ ಬೇಸ್ಡ್​ ಲೋಷನ್​ ಅನ್ನು ಹಚ್ಚುವುದು ಸೂಕ್ತ.

ಕಡೆಯದಾಗಿ ಮತ್ತೊಂದು ಪ್ರಮುಖ ಅಂಶ ಎಂದರೆ, ತ್ವಚೆಯ ಮೇಲಿನ ಆರೈಕೆ ಜೊತೆಗೆ ಆತಂರಿಕವಾಗಿ ನೀರು ಮತ್ತು ಹಣ್ಣು ಸೇವನೆ ಮಾಡುವುದು ಅವಶ್ಯ. ಈ ಹಿನ್ನೆಲೆ ಮಳೆಗಾಲದಲ್ಲೂ ಯಥೇಚ್ಛ ನೀರು ಮತ್ತು ಹಣ್ಣಿನ ಸೇವನೆಗೆ ಗಮನ ನೀಡಿ. ಇದರಿಂದ ದೇಹವೂ ನೈಸರ್ಗಿಕವಾಗಿ ಚರ್ಮದ ಆರೈಕೆ ಮಾಡಲು ಸಹಾಯ ಮಾಡುತ್ತದೆ. ಯಾವುದೇ ಋತುಮಾನ ಇದ್ದರೂ, ತ್ವಚೆಯ ಆರೈಕೆಗೆ ಸದಾ ಕಾಳಜಿವಹಿಸುವುದು ಅಗತ್ಯವಾಗಿದೆ.

ಇದನ್ನೂ ಓದಿ: ಮಳೆಗಾಲದಲ್ಲಿ ತ್ವಚೆ, ಕೂದಲ ರಕ್ಷಣೆ ಹೇಗೆ? ಇಲ್ಲಿದೆ ವೈದ್ಯರ ಸಲಹೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.