ETV Bharat / sukhibhava

ನಿದ್ರೆಗೆಟ್ಟರೆ ಮಿದುಳಿನ ಆಯಸ್ಸು ಕಡಿಮೆಯಾಗುತ್ತೆ: ಹುಷಾರ್​! - ಯುವ ಜನರ ತಂಡದ ಮೇಲೆ ಅಧ್ಯಯನ

ನಿದ್ದೆಗೆಟ್ಟರೆ ಮಿದುಳಿನ ವಯಸ್ಸಾಗುವಿಕೆ ಹೆಚ್ಚುತ್ತದೆ. ಇದರಿಂದ ಮಿದುಳಿನ ಆಯಸ್ಸು ಕಡಿಮೆಯಾಗುತ್ತದೆ ಎಂದು ಹೊಸ ಅಧ್ಯಯನಯೊಂದು ತಿಳಿಸಿದೆ

if-you-sleep-the-age-of-the-brain-decreases-be-careful

author img

By

Published : Mar 1, 2023, 3:33 PM IST

ಲಂಡನ್​: ನಿದ್ರಾಹೀನತೆ ಅನೇಕರನ್ನು ಕಾಡುವ ಸಮಸ್ಯೆ. ಈ ನಿದ್ದೆಯ ಕೊರತೆಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದು ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂಬುದನ್ನು ಈಗಾಗಲೇ ಅನೇಕ ಅಧ್ಯಯನಗಳು ತಿಳಿಸಿವೆ. ಇದೀಗ ಬಂದಿರುವ ಹೊಸ ಅಧ್ಯಯನ ಅನುಸಾರ, ಒಂದು ರಾತ್ರಿ ನಿದ್ದೆ ಮಾಡದಿರುವುದರಿಂದ ನಿಮ್ಮ ಮಿದುಳು ವಯಸ್ಸು ಕಡಿಮೆ ಆಗಲಿದೆ ಎಂದು ಅಧ್ಯಯನ ತಿಳಿಸಿದೆ.

ಮಿದುಳಿನ ವಯಸ್ಸಾಗುವಿಕೆ ಮೇಲೆ ಪರಿಣಾಮ: ಒಂದು ರಾತ್ರಿಯಿಡೀ ನಿದ್ದೆ ಮಾಡದೇ ಕಳೆದರೆ, ನಿಮ್ಮ ಮಿದುಳು ಎರಡು ಮತ್ತು ಮೂರು ವರ್ಷ ವಯಸ್ಸಾದಂತೆ ಅಥವಾ ಹೆಚ್ಚಿಗೆ ವಯಸ್ಸಾದಂತೆ ಕಾಣುತ್ತದೆ ಎಂದು ಜರ್ನಲ್​ ಆಫ್​​ ನ್ಯೂರೋ ಸೈನ್ಸ್​ನಲ್ಲಿ ಪ್ರಕಟವಾದ ಅಧ್ಯಯನ ತಿಳಿಸಿದೆ. ಇನ್ನು ರಾತ್ರಿ ಉತ್ತಮ ನಿದ್ದರೆ ಮಾಡಿದ್ದರೆ, ಇದರ ವಿರುದ್ಧ ಫಲಿತಾಂಶವನ್ನು ಕಾಣಲು ಸಾಧ್ಯವಾಗಿಲ್ಲ ಎಂದು ಜರ್ಮನಿಯ ಆರ್​ಡಬ್ಲ್ಯೂಟಿಎಚ್​ ಅಕೆನ್​ ಯುನಿವರ್ಸಿಟಿ ಒಳಗೊಂಡ ಅಂತಾರಾಷ್ಟ್ರೀಯ ಸಂಶೋಧನಾ ತಂಡ ತಿಳಿಸಿದೆ. ಇದರ ಜೊತೆಗೆ ಮಿದುಳಿನ ಆಯಸ್ಸಿನ ಮೇಲೆ ಭಾಗಶಃ ನಿದ್ರಾ ಹೀನತೆ ಕೂಡ ಗಮನಾರ್ಹ ಪರಿಣಾಮ ಬೀರಲಿದೆ ಎಂದು ಅಧ್ಯಯನ ಒತ್ತಿ ಹೇಳಿದೆ.

ಯುವ ಜನರ ತಂಡದ ಮೇಲೆ ಅಧ್ಯಯನ: ರಾತ್ರಿ ಸಂಪೂರ್ಣ ನಿದ್ದೆಗೆಡುವುದರಿಂದ ಮಿದುಳಿನ ರೂಪ ವಿಜ್ಞಾನದಲ್ಲಿ ಆಯಸ್ಸಿನ ಬದಲಾವಣೆ ಕಾಣಬಹುದಾಗಿದೆ. ಈ ಸಂಬಂಧ ಯುವ ಜನರ ತಂಡದ ಮೇಲೆ ಸಂಶೋಧನೆ ನಡೆಸಲಾಗಿದೆ. ಈ ಬದಲಾವಣೆಗೆ ನಿದ್ದೆ ಮಾಡುವ ಮೂಲಕ ಹಿಂದಿರುಗಿಸಬಹುದು ಎಂದು ಎವಾ - ಮರಿಯಾ ಎಲ್ಮೈ ಹೊರ್ಸ್ಟ್​ ತಿಳಿಸಿದ್ದಾರೆ. ನಿದ್ದೆಯಿಂದ ಮಿದುಳಿನ ವ್ಯಾಪ್ತಿ ಪರಿಣಾಮವೂ ವಯಸ್ಸಾಗುವಿಕೆಯ ರೀತಿಯ ನಿದರ್ಶನ ಹೊಂದಿದೆ ಎಂಬುದರ ಸಂಬಂಧ ನಮ್ಮ ಅಧ್ಯಯನ ಹೊಸ ಪೂರವೆ ನೀಡಿದೆ ಎಂದು ಅವರು ತಿಳಿಸಿದ್ದಾರೆ.

ನಿದ್ದೆ ಕೊರತೆ ಲಕ್ಷಣ: ನಿದ್ದೆಯ ಕೊರತೆ ಮಾನವನ ಮಿದುಳಿನ ಮೇಲೆ ಬಹು ಹಂತದಲ್ಲಿ ಪರಿಣಾಮ ಬೀರುತ್ತದೆ. ಅನೇಕ ರೀತಿಯ ನಿದ್ರೆಯ ಕೊರತೆಗೆಳು ವಯಸ್ಸಾಗುವಿಕೆ ರೀತಿಯ ಬದಲಾವಣೆ ಲಕ್ಷಣಗಳನ್ನು ಸಾಮಾನ್ಯವಾಗಿ ಹೊಂದಿದೆ. ವಯಸ್ಸಾಗುವಿಕೆ ಪ್ರಕ್ರಿಯೆಯಲ್ಲಿ ಅಂದರೆ, ವಯಸ್ಸಾದಂತೆ ಅನೇಕ ರೀತಿಯ ನಿದ್ದೆ ಅಡೆತಡೆಗಳನ್ನು ಎದುರಿಸುವುದು ಸಾಮಾನ್ಯ. ಈ ಹಿನ್ನೆಲೆ ಇದು ಕೂಡ ಮಿದುಳಿನ ಮೇಲೆ ವಯಸ್ಸು ಕೂಡ ಪರಿಣಾಮ ಇದೆಯಾ ಎಂಬುದನ್ನು ಕುರಿತು ತಿಳಿಯಬೇಕಿದೆ. ಈ ಹಿನ್ನೆಲೆ 19 ರಿಂದ 30 ವಯೋಮಾನದ 134 ಆರೋಗ್ಯ ಸ್ವಯಂ ಕಾರ್ಯಕರ್ತರನ್ನು ಎಂಆರ್​ಐ ದತ್ತಾಂಶಕ್ಕೆ ಒಳಪಡಿಸಲಾಗಿದೆ.

ಈ ಅಧ್ಯಯನದಲ್ಲಿ ಒಟ್ಟಾರೆ ನಿದ್ದೆ ಅವಧಿಯಲ್ಲಿ ನಿದ್ರಾಹೀತನೆ ಕೊರತೆಯಲ್ಲಿ ಮಿದುಳನ ವಯಸ್ಸನ್ನು ಒಂದರಿಂದ ಎರಡು ವರ್ಷ ಅಧಿಕವಾಗಿರುವುದು ಕಂಡು ಬಂದಿದೆ. ಒಟ್ಟು ನಿದ್ರಾಹೀನತೆಯು ಮೆದುಳಿನ ವಯಸ್ಸನ್ನು ಒಂದರಿಂದ ಎರಡು ವರ್ಷಗಳವರೆಗೆ ಹೆಚ್ಚಿಸುತ್ತದೆ ಎಂದು ಸತತವಾಗಿ ಗಮನಿಸಲಾಗಿದೆ. ಇನ್ನು ಒಂದು ರಾತ್ರಿ ನಿದ್ದೆಗೆಟ್ಟು ಮತ್ತೊಂದು ರಾತ್ರಿಯ ನಿದ್ರೆಯ ಚೇತರಿಕೆಯ ನಂತರ, ಮೆದುಳಿನ ವಯಸ್ಸು ಬೇಸ್‌ಲೈನ್‌ಗಿಂತ ಭಿನ್ನವಾಗಿರಲಿಲ್ಲ ಎಂದು ತಂಡವು ವಿವರಿಸಿದೆ.

ಇದನ್ನೂ ಓದಿ: ಭಾರತೀಯ ಕುಟುಂಬಗಳ ಅಚ್ಚುಮೆಚ್ಚಿನ ಪ್ರವಾಸಿ ತಾಣ ಗೋವಾ ಅಂತೆ; ಕಾರಣ ಇದು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.