ETV Bharat / sukhibhava

ಫಾರಿನ್​ ಟ್ರಿಪ್​ ಪ್ಲಾನ್​ ಇದೆಯೇ? ಈ ಬಜೆಟ್‌ಸ್ನೇಹಿ ದೇಶಗಳ ಬಗ್ಗೆ ತಿಳಿಯಿರಿ..

author img

By

Published : Dec 1, 2022, 11:02 AM IST

ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಮುಂದಾಗುತ್ತೀರಾ? ಈ ಕೆಳಗಿನ ಬಜೆಟ್​ ಸ್ನೇಹಿಯಾಗಿರುವ ದೇಶಗಳಿಗೆ ನೀವು ಭೇಟಿ ಭೇಟಿ ನೀಡಬಹುದು.

ಫಾರಿನ್​ ಟ್ರಿಪ್​ ಪ್ಲಾನ್​ ಮಾಡಿದ್ರೆ; ಬಜೆಟ್​ ಸ್ನೇಹಿಯಾದ ಈ ದೇಶಗಳಿಗೆ ಭೇಟಿ ನೀಡಿ

ಪ್ರಯಾಣ ಎಂಬುದು ವಿಶ್ರಾಂತಿಯ ಜೊತೆಗೆ ಅನೇಕರ ಜೀವನಶೈಲಿಯೂ ಆಗಿದೆ. ಅನೇಕ ಜನರು ಸದಾ ಪ್ರಯಾಣದ ಆಸೆಯನ್ನು ಹೊಂದಿರುತ್ತಾರೆ. ಅದರಲ್ಲೂ ಅಂತಾರಾಷ್ಟ್ರೀಯ ಪ್ರಯಾಣ ಎಂಬುದು ಸಂಭ್ರಮ, ಖುಷಿಯ ಜೊತೆಗೆ ಸಾಹಸವೂ ಆಗಿರುತ್ತದೆ. ಆದರೆ, ಈ ಪ್ರಯಾಣ ಮಾಡುವ ಮೊದಲು ನಿರ್ಧರಿತವಾಗುವ ಅಂಶವೇ ಬಜೆಟ್​.

ಯಾವುದೇ ಟ್ರಿಪ್​ ಹೊರಡುವ ಮುನ್ನ ಈ ಬಜೆಟ್​ ಲೆಕ್ಕಾಚಾರ ಸಾಮಾನ್ಯ. ಅದರಲ್ಲೂ ನೀವು ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಮುಂದಾಗುತ್ತೀರಾ ಎಂದರೆ ಬಜೆಟ್​ ಸ್ನೇಹಿಯಾಗಿರುವ ಈ ದೇಶಗಳಿಗೆ ಭೇಟಿ ಅವಶ್ಯವಾಗಿ ಭೇಟಿ ನೀಡಬಹುದು ಎನ್ನುತ್ತಾರೆ ಸೌಥರ್ನ್​ ಟ್ರವೆಲ್​ ಎಂಡಿ ಅಲಪಟಿ ಕೃಷ್ಣ ಮೋಹನ್​.

ವಿಯೆಟ್ನಾಂ: ಅತಿ ಹೆಚ್ಚು ಚಿರಪರಿಚಿತವಾಗಿರುವ ಈ ದೇಶ ನಿಮ್ಮ ಬಜೆಟ್​ ಸ್ನೇಹಿ ಸ್ಥಳ ಕೂಡ. ನೈಸರ್ಗಿಕ ಸೌಂದರ್ಯ, ಸಾಂಸ್ಕೃತಿಕ ಶ್ರೀಮಂತಿಕೆ, ಇತಿಹಾಸ ಹೊಂದಿರುವ ದೇಶದ ಪ್ರಯಾಣ ನಿಮಗೆ ಖಂಡಿತವಾಗಿಯೂ ಖುಷಿ ನೀಡುತ್ತದೆ.

ಪ್ರವಾಸಿಗರು ಪ್ರಯಾಣದ ವೇಳೆ ಸೈಟ್​ ಸೀಯಿಂಗ್​, ಯಾಚ್​ ಅಥವಾ ಬೋಟ್​ ಕ್ರೂಸ್​, ಸ್ಥಳೀಯ ಮಾರುಕಟ್ಟೆ, ಸಾಂಸ್ಕೃತಿಕ ಪ್ರವಾಸ, ದ್ವೀಪ ಪ್ರವಾಸ, ವನ್ಯಜೀವಿ ಪ್ರವಾಸ ಮಾಡಬಹುದು. ವಿಯೆಟ್ನಾಂನಲ್ಲಿ ಭೇಟಿ ನೀಡುವ ಸ್ಥಳಗಳಲ್ಲಿ ಪ್ರಮುಖವಾದವು ಹೊನಾಯಿ, ಹೊಚಿ, ಮಿನ್ಹಾ ಸಿಟಿ, ಸಪ, ನತ್ರಂಗ್​, ಮೆಕೊಂಗ್​​, ಡೆಲ್ಟಾ ಮತ್ತು ಯುನೆಸ್ಕೊ ಪಾರಂಪರಿಕ ತಾಣವಾದ ಹಾ ಲೊಂಗ್​ ಬೇ. ಇನ್ನು ಮೂರು ಹಗಲು 4 ರಾತ್ರಿಯ ಈ ದೇಶದ ಪ್ರಯಾಣ ಕೇವಲ 25 ಸಾವಿರ ರೂ.ದಲ್ಲೇ ಮುಗಿಸಬಹುದಾಗಿದೆ.

ಮಲೇಷಿಯಾ: ಆಗ್ನೇಯ ಏಷ್ಯಾದ ಈ ದೇಶ ಮಲಯ ಪರ್ಯಾಯ ದ್ವೀಪ ಮತ್ತು ಬೊರ್ನೊ ದ್ವೀಪವನ್ನು ಒಳಗೊಂಡಿದೆ. ಹೆಸರುವಾಸಿಯಾದ ಬೀಚ್​, ಮಳೆಕಾಡು, ಮಲಾಯ್​, ಚೀನಾ, ಭಾರತ ಮತ್ತು ಯುರೋಪಿನ್​ ಪ್ರಭಾವವನ್ನು ಈ ದೇಶದಲ್ಲಿ ಕಾಣಬಹುದಾಗಿದೆ. ಮೂರರಿಂದ ನಾಲ್ಕು ದಿನದ ಪ್ರವಾಸ 12 ಸಾವಿರ ರೂ.ಯಲ್ಲಿ ಮುಗಿದು ಹೋಗಲಿದೆ.

ಇಲ್ಲಿನ ತಮನ್​ ನೆಗಾರ ನ್ಯಾಷನಲ್​ ಪಾರ್ಕ್​ನಲ್ಲಿ ಟ್ರಕ್ಕಿಂಗ್​ ಮಾಡಬಹುದಾಗಿದೆ. ಕೋಟಾ ಭರುನಲ್ಲಿ ಸಾಂಸ್ಕೃತಿಕತೆ, ಸೆಪಿಲೊಕ್​ನಲ್ಲಿ ಒರಾಂಗುಟನ್ನರು ಕಾಣಬಹುದಾಗಿದೆ. ಮಲೇಷಿಯಾದ ಸೌಂದರ್ಯ ಅನ್ವೇಷಿಸಬಹುದು.

ಥಾಯ್ಲೆಂಡ್​: ಪ್ರವಾಸಿಗರ ಅತ್ಯಂತ ಅಚ್ಚುಮೆಚ್ಚಿನ ತಾಣದಲ್ಲಿ ಥಾಯ್ಲೆಂಡ್ ಪ್ರಮುಖವಾದದ್ದು. ಅತ್ಯಂತ ದುಬಾರಿಯಾದರೂ ಇಲ್ಲಿನ ಸ್ಥಳೀಯ ಪ್ರವಾಸೋದ್ಯಮ ನಿಮ್ಮ ಬಜೆಟ್​ಗೆ ಸರಿ ಹೊಂದಲಿದೆ. ನೈಟ್​ ಸ್ಕೈಲೈನ್​​, ಸ್ಪಾ, ಕ್ಲಬಿಂಗ್​, ಈಜು, ಕೈಗೆಟುಕುವ ಬೀದಿ ಬದಿ ತಿಂಡಿಗಳು, ಬ್ಯಾಂಕಾಕ್​ ಮತ್ತು ಪಟ್ಟಾಯಂ ಹೈ ಸ್ಟ್ರೀಟ್​ ಮಾರ್ಕೆಟ್​ ಎಂಜಾಯ್​ ಮಾಡಬಹುದು. ಬ್ಯಾಂಕಾಕ್​ ಪಾರ್ಟಿ, ಪಟ್ಟಾಯಂ ನೈಟ್​​ಲೈಫ್​ , ಚಿಂಗ್​ ರೈ ಗಿರಿಶಿಖರ ಏರಲು ಸೂಕ್ತವಾಗಿದೆ. ಮೂರು-ನಾಲ್ಕು ದಿನದ ಪ್ರವಾಸ 12 ಸಾವಿರದಲ್ಲಿ ಮುಗಿದು ಹೋಗಲಿದೆ.

ಬಾಲಿ: ಇಂಡೋನೇಷ್ಯಾದ ದ್ವೀಪ ಇದಾಗಿದ್ದು ಜನ, ಆಹಾರ, ನಿಸರ್ಗ, ನೀಲಿ ನೀರು, ಪರಿಸರದಿಂದ ಮಿಶ್ರಿತವಾಗಿದ್ದು, ಪ್ರವಾಸಿಗರನ್ನು ಸೆಳೆಯುತ್ತದೆ. ಕೆಲವೇ ಗಂಟೆಗಳಲ್ಲಿ ಬೀಚ್​ನಿಂದ ಮಳೆಕಾಡು ಅದರಿಂದ ಬೆಟ್ಟ ಹೀಗೆ ಸುತ್ತಬಹುದಾಗಿದೆ.

ಇಲ್ಲಿನ ನೈಟ್​ಲೈಫ್​ ಅನೇಕರನ್ನು ಸೆಳೆಯುತ್ತದೆ. ಬಾಲಿ ಪ್ರಮುಖ ಸ್ಥಳಗಳ ಹೊರತಾಗಿ ಬೇರೆ ಕಡೆ ಹೋದಾಗ ಆಹಾರದ ಬಗ್ಗೆ ಜಾಗ್ರತೆ ಇರಲಿ. ನಾಲ್ಕು ದಿನದ ಈ ಪ್ರವಾಸಕ್ಕೆ 20 ಸಾವಿರ ರೂ ವ್ಯಯವಾಗಲಿದೆ.

ಬಾಕು: ತೈಲಚಾಲಿತ ಆಧುನಿಕತೆ ಮತ್ತು ಏಷ್ಯನ್ ಸಂಪ್ರದಾಯಗಳ ಅತ್ಯಾಕರ್ಷಕ ಸಮ್ಮಿಲನವಾಗಿದೆ ಈ ಸ್ಥಳ. ಆಧುನಿಕ ಗಗನಚುಂಬಿ ಕಟ್ಟಡಗಳು ನಗರದ ಐತಿಹಾಸಿಕ ಮಸೀದಿಗಳು ಮತ್ತು ಇತರ ಸ್ಥಳೀಯ ವೈಶಿಷ್ಟ್ಯಗಳೊಂದಿಗೆ ಇದು ಕೂಡಿದೆ. ಹಳೆಯ ಮತ್ತು ಸಮಕಾಲೀನ ವಾಸ್ತುಶಿಲ್ಪದ ಕಟ್ಟಡಗಳು ಅದ್ಭುತ ಅನುಭವ ನೀಡಲಿದೆ. 18 ಸಾವಿರ ರೂ.ಯಲ್ಲಿ ನಾಲ್ಕು ದಿನದ ಪ್ರವಾಸವನ್ನು ನೀವು ಮುಗಿಸಬಹುದಾಗಿದೆ.

ಇದನ್ನೂ ಓದಿ: ಕೇರಳದ 22 ವರ್ಷದ ಯುವತಿಯಿಂದ ಸೈಕಲ್​ನಲ್ಲಿ 22 ದೇಶಗಳ ಪರ್ಯಟನೆ ಶುರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.