ಹೈದರಾಬಾದ್: ಮಾನವ ದೇಹದಲ್ಲಿರುವ ದೊಡ್ಡ ಅಂಗ ಎಂದರೆ ಅದು ಯಕೃತ್. ಮದ್ಯ ಸೇವನೆಯಿಂದ ಮೊದಲು ಪರಿಣಾಮಕ್ಕೆ ಒಳಗಾಗುವ ಅಂಗಾಂಗ ಎಂದರೆ ಅದು ಯಕೃತ್. ಬಳಿಕ ಆಲ್ಕೋಹಾಲ್ ಹೃದಯ ಮತ್ತು ಮೆದುಳು ಸೇರಿದಂತೆ ಇನ್ನಿತರ ಅಂಗಾಂಗದ ಮೇಲೆ ಪರಿಮ ಬೀರುತ್ತದೆ. ಅಲ್ಲದೆ ದೀರ್ಘ ಕಾಲದವರೆಗೆ ಯಥೇಚ್ಛ ಮದ್ಯ ಸೇವನೆಯು ಈ ಅಂಗಾಂಗಗಳ ಮೇಲೆ ಭಾರೀ ಹಾನಿ ಉಂಟು ಮಾಡುತ್ತದೆ.
ಯಕೃತ್ ತಜ್ಞರು ಹೇಳುವಂತೆ, ಪ್ರತಿನಿತ್ಯ ನಾನು ಆಲ್ಕೋಹಾಲ್ ಸಂಬಂಧಿತ ಯಕೃತ್ ರೋಗಿಗಳನ್ನು ಭೇಟಿ ಮಾಡುತ್ತೇವೆ. ಈ ವೇಳೆ ಫ್ಯಾಟಿ ಲಿವರ್, ಸಿರೋಸಿಸ್ ನಂತಹ ಪ್ರಕರಣಗಳನ್ನು ಕಾಣುತ್ತೇವೆ. ಈ ರೋಗಗಳು ಯಕೃತ್ ಹಾನಿಗೊಳಿಸಿ, ಅಂತಿಮ ಹಂತದವರೆಗೆ ಯಾವುದೇ ಲಕ್ಷಣಗಳನ್ನು ತೋರುವುದಿಲ್ಲ ಎನ್ನುತ್ತಾರೆ.
ಮೊದಲಿಗೆ, ಆಲ್ಕೋಹಾಲ್ಗಳು ಯಕೃತ್ ಅನ್ನು ಫ್ಯಾಟಿ ಲಿವರ್ ಮಾಡುತ್ತದೆ. ಯಕೃತ್ನಲ್ಲಿನ ಕೊಬ್ಬು ಅದರಲ್ಲಿ ಊರಿಯೂತಕ್ಕೆ ಕಾರಣವಾಗುತ್ತದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಅದು ಸ್ವತಃ ಉಪಶಮನವಾಗಲು ಪ್ರಯತ್ನಿಸಿ, ಅಂಗಾಂಶಗಳು ಗಾಯಗೊಳ್ಳುತ್ತವೆ. ಇದನ್ನು ಪರಿಶೀಲಿಸದೆ ಹೋದರೆ ಸಂಪೂರ್ಣ ಯಕೃತ್ ಗಾಯಗಳಿಂದ ಕೂಡ ಸಿರೋಸಿಸ್ ಸ್ಥಿತಿ ತಲುಪುತ್ತದೆ.
ಸಿರೋಸಿಸ್ ಅಂತಿಮ ಹಂತದಲ್ಲಿ ಯಕೃತ್ ಸೋಲುತ್ತದೆ. ಈ ವೇಳೆ ವ್ಯಕ್ತಿಗೆ ಜಾಂಡೀಸ್ ಬರುತ್ತದೆ. ದ್ರವಗಳೊಂದಿಗೆ ಊತ, ನಿದ್ರೆ ಮತ್ತು ಗೊಂದಲದಂತಹ ಪರಿಸ್ಥಿತಿ ಉಂಟಾಗಿ, ಇದು ಗಂಭೀರ ಮತ್ತು ಮಾರಣಾಂತಿಕ ಹಂತವಾಗಿ ರೂಪುಗೊಳ್ಳುತ್ತದೆ.
ವಾರದಲ್ಲಿ 14 ಯುನಿಟ್ ಆಲ್ಕೋಹಾಲ್ಗಿಂತ ಹೆಚ್ಚು ಕುಡಿಯುವವರು ಫ್ಯಾಟಿ ಲಿವರ್ ಸಮಸ್ಯೆಗೆ ಒಳಗಾಗಬಹುದು. ದೀರ್ಘಕಾಲದ ಮತ್ತು ಅಧಿಕ ಆಲ್ಕೋಹಾಲ್ ಸೇವನೆ ಈ ಗಾಯದ ಗುರುತು (ಸ್ಕಾರಿಂಗ್) ಮತ್ತು ಸಿರೋಸಿಸ್ ಅಭಿವೃದ್ಧಿಯಾಗುವ ಅಪಾಯವನ್ನು ಹೆಚ್ಚಿಸುತ್ತದೆ.
ಆಲ್ಕೋಹಾಲ್ ತ್ಯಜಿಸುವಿಕೆ: ಫ್ಯಾಟಿ ಲಿವರ್ ಹೊಂದಿರುವವರು ಈ ಸಮಸ್ಯೆ ಪತ್ತೆಯಾಗಿ ಎರಡು ಮೂರು ವಾರಗಳ ಕಾಲ ಆಲ್ಕೋಹಾಲ್ ತ್ಯಜಿಸುವುದರಿಂದ ಲಿವರ್ ತನ್ನನ್ನು ತಾನು ಸರಿಪಡಿಸಿಕೊಳ್ಳುತ್ತದೆ. ಅಲ್ಲದೆ ಇದು ಉತ್ತಮವಾಗಿ ಕಾರ್ಯಾಚರಣೆ ಮಾಡಲು ಆರಂಭಿಸುತ್ತದೆ.
ಊರಿಯುತ ಅಥವಾ ಸೌಮ್ಯದ ಗಾಯದ ಗುರುತು ಹೊಂದಿರುವ ಮಂದಿ ಏಳು ದಿನಗಳ ಕಾಲ ಆಲ್ಕೋಹಾಲ್ ತ್ಯಜಿಸುವುದರಿಂದ, ಗಮನಾರ್ಹ ಪ್ರಮಾಣದಲ್ಲಿ ಯಕೃತ್ ಕೊಬ್ಬು, ಉರಿಯೂತ ಮತ್ತು ಗಾಯದ ಗುರುತು ಕಡಿಮೆಯಾಗುತ್ತದೆ. ಹಲವು ತಿಂಗಳುಗಳ ಕಾಲ ಮದ್ಯ ತ್ಯಜಿಸುವುದರಿಂದ ಲಿವರ್ ಸಮಸ್ಯೆಯಿಂದ ಉಪಶಮನ ಹೊಂದಿ ಸಾಮಾನ್ಯ ಹಂತಕ್ಕೆ ತಲುಪುತ್ತದೆ.
ಅನೇಕ ಗಾಯದ ಗುರುತು ಅಥವಾ ಯಕೃತ್ ವೈಫಲ್ಯ ಹೊಂದಿರುವ ಹೆಚ್ಚು ಕುಡಿಯುವ ಅಭ್ಯಾಸ ಇರುವವರು ಮದ್ಯವನ್ನು ಹಲವು ವರ್ಷಗಳ ಕಾಲ ತ್ಯಜಿಸುವುದರಿಂದ ಅವರು ಸಾವಿನ ಅಥವಾ ಯಕೃತ್ ವೈಫಲ್ಯದಿಂದ ತಪ್ಪಿಸಿಕೊಳ್ಳಬಹುದು. ಆದಾಗ್ಯೂ ಅಧಿಕ ಕುಡಿಯುವ ಚಟ ಹೊಂದಿರುವವರು ಏಕಾಏಕಿ ಕುಡಿತ ಬಿಡುವುದು ಕೂಡ ಹಲವು ಪರಿಣಾಮಕ್ಕೆ ಕಾರಣವಾಗುತ್ತದೆ. ಅವರಲ್ಲಿ ಕೈ ಅದುರುವಿಕೆ, ಬೆವರುವಿಕೆ ಉಂಟಾಗುತ್ತದೆ. ಫಿಟ್ಸ್ ಮತ್ತು ಸಾವು ಕೂಡ ಸಂಭವಿಸಬಹುದು. ಈ ಹಿನ್ನೆಲೆ ಹೆಚ್ಚಿನ ಕುಡಿತ ಅಭ್ಯಾಸ ಹೊಂದಿರುವವರು ವೈದ್ಯರ ಸಲಹೆ ಮೇರೆಗೆ ನಿಧಾನವಾಗಿ ಈ ಅಭ್ಯಾಸದಿಂದ ಹೊರಬರಬೇಕು.
ಇತರೆ ಪ್ರಯೋಜನ: ಕುಡಿತ ಬಿಡುವುದರಿಂದ ನಿದ್ರೆ, ಮೆದುಳಿನ ಕಾರ್ಯಾಚರಣೆ, ರಕ್ತದೊತ್ತಡ ಕಡಿಮೆಯಂತಹ ಅನೇಕ ಸಕಾರಾತ್ಮಕ ಪ್ರಯೋಜನವಿದೆ. ಆಲ್ಕೋಹಾಲ್ ತ್ಯಜಿಸುವುದರಿಂದ ಅನೇಕ ವಿಧದ ಕ್ಯಾನ್ಸರ್ ಮತ್ತು ಹೃದಯಾಘಾತ ಮತ್ತು ಪಾರ್ಶ್ವವಾಯುನ ಅಪಾಯ ಕಡಿಮೆ ಮಾಡಬಹುದು.
ಆದಾಗ್ಯೂ, ಆಲ್ಕೋಹಾಲ್ ಕೇವಲ ಅನಾರೋಗ್ಯಕ್ಕೆ ಕಾರಣವಾಗುವುದಿಲ್ಲ. ಇದರಿಂದ ಅನೇಕ ಆರೋಗ್ಯ ಪ್ರಯೋಜನವೂ ಇದೆ. ಆರೋಗ್ಯಯುತ ಜೀವನ ಶೈಲಿಯ, ಸಮತೋಲಿತ ಡಯಟ್ ಮತ್ತು ನಿಯಮಿತ ದೈಹಿಕ ವ್ಯಾಯಾಮ ಪಾಲನೆ ಮಾಡುವುದರಿಂದ ಉತ್ತಮ ಫಲಿತಾಂಶ ಕಾಣಬಹುದು.
ಯಕೃತ್ನ ವಿಶೇಷ ಗುಣ: ಯಕೃತ್ ಹಾನಿಯಿಂದ ತನ್ನನ್ನು ತಾನೇ ಸರಿಪಡಿಸಿಕೊಳ್ಳುವ ಗುಣವನ್ನು ಹೊಂದಿದೆ. ಬಹುವಾಗಿ ಗಾಯಗೊಂಡಲ್ಲಿ ಇದು ಅಸಾಧ್ಯ. ಫ್ಯಾಟಿಲಿವರ್ ಆದಾಗ ಕುಡಿತ ಬಿಡುವುದರಿಂದ ಇದು ಸಾಮಾನ್ಯಕ್ಕೆ ಹಿಂದಿರುವ ಸಾಧ್ಯತೆ ಇದೆ. ಒಂದು ವೇಳೆ ಸಿರೋಸಿಸ್ ಆದಲ್ಲಿ ಕುಡಿತವನ್ನು ನಿಲ್ಲಿಸಿದರೂ ಇದರ ಕಾರ್ಯಾಚರಣೆ ಕೊಂಚ ಸುಧಾರಿಸಬಹುದೇ ಹೊರತು ಇದು ಸಂಪೂರ್ಣವಾಗಿ ಹಾನಿಯಿಂದ ಉಪಶಮನವಾಗದು. (ಪಿಟಿಐ)
ಇದನ್ನೂ ಓದಿ: ಕಡಿಮೆ - ಮಧ್ಯಮ ಆದಾಯದ ದೇಶಗಳಲ್ಲಿ ಯಕೃತ್ ರೋಗಿಗಳ ಸಾವಿನ ಅಪಾಯ ದುಪ್ಪಟ್ಟು!