ಮಕ್ಕಳ ಪ್ರತಿ ಚಿಕ್ಕ ಚಿಕ್ಕ ಸಂತೋಷ ಮತ್ತು ಖುಷಿಯ ಕ್ಷಣಗಳು ಪೋಷಕರಿಗೆ ದೊಡ್ಡವೇ. ಮಗುವಿನ ಬೆರಳ ತುದಿ ಹಿಡಿದು ನಡೆಸುವುದು, ಅದರ ಬೆಳವಣಿಗೆಯ ಹಂತಗಳು ಪೋಷಕರ ಮನಸ್ಸಿಗೆ ಬಹುದೊಡ್ಡ ಸಂತೋಷ ನೀಡುತ್ತದೆ. ಆದರೆ, ಇಂಥ ಪ್ರತಿ ಹೆಜ್ಜೆಯಲ್ಲಿ ಪೋಷಕರು ನಿರಂತರವಾಗಿ ಅವರ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ಯೋಚಿಸುತ್ತಾರೆ. ಹಲವು ಬಾರಿ ಪೋಷಕರ ಈ ಜವಾಬ್ದಾರಿ ದೊಡ್ಡ ಸವಾಲನ್ನು ಮೂಡಿಸುವುದರೊಂದಿಗೆ ಜವಾಬ್ದಾರಿ ನಿರ್ವಹಣೆಗೆ ಕಷ್ಟಪಟ್ಟು ಕೆಲಸ ಮಾಡುವಂತೆಯೂ ಮಾಡುತ್ತದೆ.
ಮಗುವಿಗೆ ಪೋಷಕಾಂಶ ಮತ್ತು ಆರೋಗ್ಯಯುತ ಆಹಾರಗಳನ್ನು ನೀಡುವುದು ಪೋಷಕರಿಗೆ ದೊಡ್ಡ ಚಿಂತೆ. ಆದಾಗ್ಯೂ ಮಕ್ಕಳು ಅನಾರೋಗ್ಯಕರ ಜಂಕ್ಫುಡ್ ಮತ್ತು ಸಕ್ಕರೆ ಹೊಂದಿರುವ ಜಂಕ್ಫುಡ್ಗೆ ಬೇಡಿಕೆ ಇಡುತ್ತಾರೆ. ಇದಕ್ಕಾಗಿ ಹಠ ಮಾಡುತ್ತಾರೆ. ಇದು ಮಗುವಿನಲ್ಲಿ ಸ್ಥೂಲಕಾಯತೆಯನ್ನು ಅಭಿವೃದ್ಧಿ ಮಾಡುವ ಜೊತೆಗೆ ಆರೋಗ್ಯದ ವಿಚಾರದಲ್ಲಿ ಅನೇಕ ಅಪಾಯವನ್ನೂ ಹೆಚ್ಚಿಸಬಲ್ಲದು. ಜಂಕ್ ಆಹಾರಗಳಿಂದ ಮಕ್ಕಳನ್ನು ದೂರವಿರಿಸುವ ಕುರಿತು ಪೇರಿಟಿಂಗ್ ಕೋಚ್ ಡಾ.ಪಲ್ಲವಿ ರಾವ್ ಚತುರ್ವೇದಿ ಕೆಲವು ಉಪಯುಕ್ತ ಸಲಹೆಗಳನ್ನು ನೀಡಿದ್ದಾರೆ.
ಮಕ್ಕಳಿಗೆ ಮಾದರಿಯಾಗಿ: ಮಕ್ಕಳು ಪೋಷಕರನ್ನು ಅನುಕರಣೆ ಮಾಡುತ್ತಾರೆ. ಪೋಷಕರನ್ನೇ ನೋಡುತ್ತಾ ಬೆಳೆಯುವುದರಿಂದ, ನೀವು ಅವರಿಗೆ ಉದಾಹರಣೆಯಾಗಬೇಕು. ಪೋಷಕರು ಮನೆಯಲ್ಲಿನ ಆಹಾರದ ಆಯ್ಕೆಯ ಜೊತೆ ಪೋಷಕಾಂಶದ ಆಹಾರವನ್ನೇ ಆರಿಸಬೇಕು. ಆರೋಗ್ಯಯುತ ಆಹಾರವೇ ರುಚಿಕರ ಎಂಬುದನ್ನು ಅವರಿಗೆ ಪರಿಚಯಿಸಬೇಕು.
ಶಿಕ್ಷಣ ನೀಡಿ: ನಿಮ್ಮ ಮಗುವಿಗೆ ಸಮತೋಲಿತ ಆಹಾರ ಪದ್ದತಿಯ ಕುರಿತು ಅರಿವು ಮೂಡಿಸಿ. ಅತಿ ಹೆಚ್ಚು ಫಾಸ್ಟ್ ಫುಡ್ ಆಹಾರ ಸೇವನೆಯಿಂದ ಆಗುವ ನಕಾರಾತ್ಮಕತೆ ಪರಿಣಾಮಗಳನ್ನು ಮನದಟ್ಟು ಮಾಡಿ. ಪೌಷ್ಟಿಕಾಹಾರದ ಮೌಲ್ಯದ ಕುರಿತು ಅವರಿಗೆ ಅರ್ಥೈಸಿ.
ಆಹಾರದ ಯೋಜನೆ, ಸಿದ್ದತೆಯಲ್ಲಿ ಭಾಗಿಯಾಗಿ: ನಿಮ್ಮ ಮಗುವು ಆಹಾರ ತಯಾರಿಯ ಯೋಜನೆಯಲ್ಲಿ ಭಾಗಿಯಾಗುವಂತೆ ಮಾಡಿದೆ. ಅವರಿಂದ ಸಲಹೆಯನ್ನು ಕೇಳಿ ಅದನ್ನು ಅಳವಡಿಸಿಕೊಳ್ಳಿ. ಹಣ್ಣು ಮತ್ತು ತರಕಾರಿಗಳನ್ನು ಆಯ್ಕೆ ಮಾಡಲು ಸಹಾಯ ಮಾಡಿ. ಇದರಿಂದ ಅವರಲ್ಲಿ ಆರೋಗ್ಯಯುತ ಆಹಾರದ ಆಯ್ಕೆ ಬಗ್ಗೆ ಜವಾಬ್ದಾರಿ ಬರುತ್ತದೆ.
ಫಾಸ್ಟ್ ಫುಡ್ ಅನ್ನು ಟ್ರೀಟ್ ಆಗಿ ನೀಡುವುದಕ್ಕಿರಲಿ ಒಂದು ಮಿತಿ: ಮಗುವಿಗೆ ಫಾಸ್ಟ್ಫುಡ್ ನೀಡಲು ನೋ ಎನ್ನುವ ಬದಲು ಯಾವುದಾದರೂ ಸಂದರ್ಭದಲ್ಲಿ ಸಾಮಾನ್ಯ ಆಹಾರದ ಭಾಗವಾಗಿ ನೀಡಿ. ಎಷ್ಟು ಸಮಯಕ್ಕೆ ಅದನ್ನು ಸೇವಿಸಬೇಕು ಎಂಬ ನಿಯಮ ರೂಪಿಸಿಕೊಳ್ಳಿ.
ಆರೋಗ್ಯಯುತ ಸ್ನಾಕ್ಸ್ ಸಿಗುವಂತೆ ಮಾಡಿ: ಮಗುವಿಗೆ ಸುಲಭವಾಗಿ ಆರೋಗ್ಯಯುತ ಸ್ನಾಕ್ಸ್ ಅನ್ನು ಕೈಗೆಟುಕುವಂತೆ ಮಾಡಿ. ತಾಜಾ ಹಣ್ಣು, ತರಕಾರಿ, ಧಾನ್ಯಗಳು, ಯೋಗರ್ಟ್ಗಳು ಸಿಗುವಂತೆ ಮಾಡಿ. ಸಂಸ್ಕರಿಸಿದ ಸ್ನಾಕ್ಸ್ ಮತ್ತು ಸಕ್ಕರೆ ಪದಾರ್ಥ ಲಭ್ಯತೆ ಕಡಿಮೆ ಸಿಗುವಂತೆ ನೋಡಿಕೊಳ್ಳಿ
ಆರೋಗ್ಯಯುತ ಆಹಾರ ಸೇವನೆ ಅಭ್ಯಾಸ ಒಂದೇ ರಾತ್ರಿ ನಡೆಯುವ ಜಾದುವಲ್ಲ. ಇದಕ್ಕೆ ಸಮಾಧಾನ ಮತ್ತು ನಿರಂತರವಾಗಿ ಕಾಯಬೇಕು. ಮಗುವಿನ ಆರೋಗ್ಯಯುತ ತಿನ್ನುವ ಪದ್ದತಿ ಬೆಳವಣಿಗೆಗೆ ಬೆಂಬಲ ನೀಡಿ, ಅವರ ಆರೋಗ್ಯಯುತ ನಾಳೆಗಳನ್ನು ರೂಪಿಸಿ.
ಇದನ್ನೂ ಓದಿ: Obesity Problem: ಭಾರತೀಯರಲ್ಲಿ ಹೆಚ್ಚುತ್ತಿದೆ ಸ್ಥೂಲಕಾಯದ ಸಮಸ್ಯೆ.. ಈ ಜನರು ಎಚ್ಚರ ವಹಿಸುವುದು ಅಗತ್ಯ