ETV Bharat / sukhibhava

ಮಣ್ಣಿನ ಮಾಲಿನ್ಯವು ಹೃದ್ರೋಗಗಳ ಅಪಾಯ ಹೆಚ್ಚಿಸುತ್ತದೆ!

author img

By

Published : Jul 4, 2022, 9:30 PM IST

ಮಣ್ಣಿನಲ್ಲಿರುವ ಕೀಟನಾಶಕಗಳು ಮತ್ತು ಭಾರ ಲೋಹಗಳು ಹೃದಯ ರಕ್ತನಾಳದ ವ್ಯವಸ್ಥೆ ಮೇಲೆ ಹಾನಿಕಾರಕ ಪರಿಣಾಮಗಳನ್ನು ಬೀರಬಹುದು ಎಂದು ಹೊಸ ಅಧ್ಯಯನವು ಕಂಡು ಹಿಡಿದಿದೆ.

ಮಣ್ಣಿನ ಮಾಲಿನ್ಯವು ಹೃದ್ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ

ಗಾಳಿ, ನೀರು ಮತ್ತು ಮಣ್ಣಿನ ಮಾಲಿನ್ಯವು ಪ್ರತಿ ವರ್ಷ ಕನಿಷ್ಠ ಒಂಬತ್ತು ಮಿಲಿಯನ್ ಸಾವುಗಳಿಗೆ ಕಾರಣವಾಗಿದೆ. ಜನರು ಹೆಚ್ಚು ಮಾಲಿನ್ಯ ಹಾಗೂ ಅದರ ಸಂಬಂಧಿತ ಕಾಯಿಲೆಗಳಿಂದಲೇ ಸಾಯುತ್ತಿದ್ದಾರೆ. ಅದರಲ್ಲೂ ದೀರ್ಘಕಾಲದ ರಕ್ತ ಕೊರತೆಯ ಹೃದ್ರೋಗ, ಹೃದಯಾಘಾತ, ಪಾರ್ಶ್ವವಾಯು ಮತ್ತು ಹೃದಯದ ಲಯದ ಅಸ್ವಸ್ಥತೆಗಳಿಗೆ ಇದು ಕಾರಣವಾಗುತ್ತಿದೆ.

ಮಣ್ಣಿನ ಮಾಲಿನ್ಯವು ಕೊಳಕು ಗಾಳಿಗಿಂತ ಮಾನವನ ಆರೋಗ್ಯಕ್ಕೆ ಕಡಿಮೆ ಗೋಚರಿಸುವ ಅಪಾಯವಾಗಿದೆ ಎಂದು ಯೂನಿವರ್ಸಿಟಿ ಮೆಡಿಕಲ್ ಸೆಂಟರ್ ಮೈಂಜ್ (ಜರ್ಮನಿ) ನ ಲೇಖಕ ಪ್ರೊಫೆಸರ್ ಥಾಮಸ್ ಮುಂಜೆಲ್ ಹೇಳಿದ್ದಾರೆ. ಆದರೂ ಮಣ್ಣಿನಲ್ಲಿರುವ ಮಾಲಿನ್ಯ ಕಾರಕಗಳು ಉರಿಯೂತ ಮತ್ತು ದೇಹದ ನೈಸರ್ಗಿಕ ವ್ಯವಸ್ಥೆಯನ್ನು ಅಡ್ಡಿಪಡಿಸುವುದು ಸೇರಿದಂತೆ ಹಲವಾರು ಕಾರ್ಯವಿಧಾನಗಳ ಮೂಲಕ ಹೃದಯ ರಕ್ತನಾಳದ ಆರೋಗ್ಯವನ್ನು ಹಾನಿಗೊಳಿಸಬಹುದು ಎಂಬುದಕ್ಕೆ ಪುರಾವೆಗಳು ಹೆಚ್ಚುತ್ತಿವೆ ಎಂದು ವಿವರಿಸಿದ್ದಾರೆ.

ಸಂಶೋಧನೆ ಬಗ್ಗೆ ಪ್ರಕಟವಾದ ಪತ್ರಿಕೆಯಲ್ಲಿ, ಕಲುಷಿತ ಮಣ್ಣು ರಕ್ತನಾಳಗಳಲ್ಲಿ ಆಕ್ಸಿಡೇಟಿವ್ ಒತ್ತಡವನ್ನು ಹೆಚ್ಚಿಸುವ ಮೂಲಕ ಹೃದಯರಕ್ತನಾಳದ ಕಾಯಿಲೆಗೆ ಕಾರಣವಾಗಬಹುದು. ಇದು ಉರಿಯೂತವನ್ನು ಉಂಟುಮಾಡುತ್ತದೆ ಎಂದು ಉಲ್ಲೇಖಿಸಲಾಗಿದೆ.

ಮರುಭೂಮಿಯ ಧೂಳು, ರಸಗೊಬ್ಬರ ಹರಳುಗಳು ಅಥವಾ ಪ್ಲಾಸ್ಟಿಕ್ ಕಣಗಳು ನಮ್ಮ ಉಸಿರಾಟದ ಮೂಲಕ ದೇಹ ಸೇರಬಹುದು. ಅಲ್ಲದೇ, ಕ್ಯಾಡ್ಮಿಯಮ್ ಮತ್ತು ಸೀಸದಂತಹ ಭಾರವಾದ ಲೋಹಗಳು, ಪ್ಲಾಸ್ಟಿಕ್​ಗಳು ​​ಮತ್ತು ಸಾವಯವ ವಿಷಕಾರಿಗಳು ಸಹ ಬಾಯಿಯ ಮೂಲಕವೇ ದೇಹ ಸೇರುತ್ತವೆ ಹಾಗೆ ಮಣ್ಣಿನ ಈ ಮಾಲಿನ್ಯಕಾರಕಗಳು ನದಿಗಳಿಗೆ ತಲುಪಿ ಅಲ್ಲಿ ನೀರನ್ನು ಕಲುಷಿತಗೊಳಿಸುತ್ತವೆ. ಆ ನೀರನ್ನು ನಾವು ಮತ್ತೆ ಸೇವಿಸುವ ಮೂಲಕ ಗಂಡಾಂತರ ತಂದುಕೊಳ್ಳಲಾಗುತ್ತಿದೆ ಎಂದು ಕಂಡುಕೊಳ್ಳಲಾಗಿದೆ.

ಕೀಟನಾಶಕಗಳು ಹೃದಯರಕ್ತನಾಳದ ಕಾಯಿಲೆಗೆ ಹೆಚ್ಚಿನ ಸಂಬಂಧ ಹೊಂದಿವೆ ಎನ್ನಲಾಗಿದೆ. ಕೃಷಿ ಮತ್ತು ರಾಸಾಯನಿಕ ಕೈಗಾರಿಕೆಗಳಲ್ಲಿನ ಉದ್ಯೋಗಿಗಳು ಈ ಸಮಸ್ಯೆಯನ್ನು ಹೆಚ್ಚಾಗಿ ಎದುರಿಸುತ್ತಿದ್ದಾರೆ. ಸಾಮಾನ್ಯ ಜನರು ಕಲುಷಿತ ಆಹಾರ, ಮಣ್ಣು ಮತ್ತು ನೀರಿನಿಂದ ಕೀಟನಾಶಕಗಳನ್ನು ಸೇವಿಸುತ್ತಿದ್ದಾರೆ. ಹಾಗೆ ಕ್ಯಾಡ್ಮಿಯಮ್ ಒಂದು ಭಾರವಾದ ಲೋಹವಾಗಿದ್ದು, ಅದು ನೈಸರ್ಗಿಕವಾಗಿ ಗಾಳಿ, ನೀರು, ಮಣ್ಣು ಮತ್ತು ಆಹಾರದಲ್ಲಿ ಸಣ್ಣ ಪ್ರಮಾಣದಲ್ಲಿ ಕಂಡು ಬರುತ್ತದೆ. ಇದು ಕೈಗಾರಿಕಾ ಮತ್ತು ಕೃಷಿ ಮೂಲಗಳಿಂದ ಉಂಟಾಗುತ್ತಿದ್ದು, ಆಹಾರದ ಮೂಲಕ ಇದು ದೇಹವನ್ನು ಸೇರಲಿದೆ.

ಸೀಸವು ನೈಸರ್ಗಿಕವಾಗಿ ಸಂಭವಿಸುವ ವಿಷಕಾರಿ ಲೋಹವಾಗಿದ್ದು, ಗಣಿಗಾರಿಕೆ, ಕರಗಿಸುವಿಕೆ, ಉತ್ಪಾದನೆ ಮತ್ತು ಮರುಬಳಕೆಯ ಮೂಲಕ ಪರಿಸರ ಮಾಲಿನ್ಯವನ್ನು ಉಂಟುಮಾಡುತ್ತಿದೆ. ಇನ್ನು ಆರ್ಸೆನಿಕ್ ನೈಸರ್ಗಿಕವಾಗಿ ಸಂಭವಿಸುವ ಮೆಟಾಲಾಯ್ಡ್‌ಗೆ ಒಡ್ಡಿಕೊಳ್ಳಲಿದ್ದು, ಇದು ಹೃದಯರಕ್ತನಾಳದ ಕಾಯಿಲೆಯಿಂದ ಸಾವಿನ ಹೆಚ್ಚಿನ ಅಪಾಯವನ್ನು ಉಂಟುಮಾಡುತ್ತದಂತೆ. ಕೈಗಾರಿಕಾ ಪ್ರಕ್ರಿಯೆಗಳು ಮತ್ತು ಬೆಳೆಗಳಿಗೆ ಕಲುಷಿತ ನೀರನ್ನು ಬಳಸುವುದರಿಂದ ಈ ಆರ್ಸೆನಿಕ್ ಉಂಟಾಗಲಿದೆ.

ಕಲುಷಿತ ಗಾಳಿಯಿಂದ ಬರುವ ಧೂಳಿನ ಸಂಭಾವ್ಯ ಅಪಾಯಗಳನ್ನು ಸಹ ಅಧ್ಯಯನದಲ್ಲಿ ಗುರುತಿಸಲಾಗಿದೆ. ಮರುಭೂಮಿಯ ಧೂಳು ದೂರದವರೆಗೆ ಪ್ರಯಾಣಿಸಬಲ್ಲದು. ಚೀನಾ ಮತ್ತು ಮಂಗೋಲಿಯಾದಲ್ಲಿನ ಮಣ್ಣಿನ ಕಣಗಳು ಜಪಾನ್‌ನಲ್ಲಿ ಹೃದಯಾಘಾತದ ಸಮಸ್ಯೆಗಳಿಗೆ ಸಂಬಂಧಿಸಿವೆ ಎಂದು ಸಂಶೋಧನೆಯಲ್ಲಿ ಕಂಡುಕೊಳ್ಳಲಾಗಿದೆ.

ನ್ಯಾನೊ ಮತ್ತು ಮೈಕ್ರೊಪ್ಲಾಸ್ಟಿಕ್‌ಗಳ ವಿಷಯದಲ್ಲಿ ಮಾನವರಲ್ಲಿ ಹೃದಯರಕ್ತನಾಳದ ಆರೋಗ್ಯದ ಪರಿಣಾಮಗಳ ಕುರಿತು ಯಾವುದೇ ಜನಸಂಖ್ಯೆಯ ಅಧ್ಯಯನಗಳಿಲ್ಲದಿದ್ದರೂ, ಈ ಕಣಗಳು ರಕ್ತನಾಳಗಳನ್ನು ತಲುಪಬಹುದು ಎಂದು ಸಂಶೋಧನೆಯಿಂದ ಕಂಡುಕೊಳ್ಳಲಾಗಿದೆ. ಅವು ಇತರೆ ಅಂಗಗಳಿಗೆ ಪ್ರಯಾಣಿಸಬಹುದು ಮತ್ತು ವ್ಯವಸ್ಥಿತ ಉರಿಯೂತ ಮತ್ತು ಕಾರ್ಡಿಯೊಮೆಟಾಬಾಲಿಕ್ ಕಾಯಿಲೆಗೆ ಕಾರಣವಾಗಬಹುದು ಎಂದು ಸಂಶೋಧನಾ ತಂಡವು ಹೇಳಿದೆ.

ಇದನ್ನೂ ಓದಿ: ಕೈಯಲ್ಲಿ ಪಿಸ್ತೂಲ್ ಹಿಡಿದು ಸಂಭ್ರಮ.. ಸಿಧು ಮೂಸೆವಾಲಾ ಹಂತಕರ ವಿಡಿಯೋ ವೈರಲ್!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.