ನವದೆಹಲಿ: ಕಳೆದ ಕೆಲವು ವರ್ಷಗಳಿಂದ ಸ್ಕಿನ್ ಕೇರ್ ಮತ್ತು ಇದಕ್ಕೆ ಸಂಬಂಧಿಸಿದ ಜೀವನ ಶೈಲಿ ಗಮನಾರ್ಹವಾಗಿ ಬದಲಾವಣೆಗೊಂಡಿದೆ. ಪ್ರತಿ ಎರಡು ತಿಂಗಳಿಗೆ ಒಮ್ಮೆ ನಿರ್ದಿಷ್ಟ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಟ್ರೆಂಡ್ ಆಗುತ್ತಿದೆ. ಆದರೆ, ಇವುಗಳನ್ನು ಬಳಕೆ ಮಾಡುವ ಮುನ್ನ ಇವುಗಳು ನಿಮ್ಮ ಚರ್ಮಕ್ಕೆ ಹೊಂದಿಕೆಯಾಗುತ್ತದೆಯೇ ಎಂದು ತಿಳಿಯುವುದು ಪ್ರಮುಖವಾಗುತ್ತದೆ. ಇನ್ನು ಈ ಟ್ರೆಂಡ್ಸ್ ಅನ್ನು ಯಾವುದೇ ಸಂಶೋಧನೆ ಮಾಡದೇ ಅನುಸರಿಸುವುದನ್ನು ಮಾಡಬೇಡಿ. ಇದರಲ್ಲಿ ಪ್ರಮುಖವಾದ ಉತ್ಪನ್ನ ಪೆಪ್ಟೈಡ್
ಈ ಚರ್ಮದ ಆರೈಕೆ ಉತ್ಪನ್ನಗಳಲ್ಲಿರುವ ಪೆಪ್ಟೈಡ್ಸ್ ಎಂಬುದು ಅಮಿನೋ ಆಮ್ಲವಾಗಿದ್ದು, ಚರ್ಮದ ರಕ್ಷಣಾತ್ಮಕ ಕವಚವಾಗಿದೆ. ಇದು ದೇಹ ಕೊಲಜನ್ ಅನ್ನು ಆಂತರಿಕವಾಗಿ ಸ್ವಯಂ ಉತ್ಪಾದನೆ ಮಾಡುವಂತೆ ಸಹಾಯ ಮಾಡುತ್ತದೆ. ಪೆಪ್ಟೈಡ್‌ಗಳು ಚರ್ಮದ ಮೈಬಣ್ಣವನ್ನು ಸುಧಾರಿಸುವ ಐದು ವಿಧಾನಗಳನ್ನು ಮಾಲಿನಿ ಅದಪುರೆಡ್ಡಿ ಪಟ್ಟಿ ಮಾಡಿದ್ದಾರೆ.
ಆ್ಯಂಟಿ ಏಜಿಂಗ್ ಉತ್ಪನ್ನಗಳು: ಪೆಪ್ಟೈಡ್ಸ್ ಅನ್ನು ನೇರವಾಗಿ ಚರ್ಮಕ್ಕೆ ಹಚ್ಚಿದರೆ, ಅದು ಹೊರಗಿನ ಪದರದ ಮೂಲಕ ಹಾದು ಹೋಗಬಹುದು. ಇಲ್ಲ ಆಳವಾಗಿ ಭೇದಿಸಬಹುದು, ಅಲ್ಲಿ ಕಾಲಜನ್ ರಚನೆಯಾಗುತ್ತದೆ. ಕಾಲಜನ್ ರಚನೆಯನ್ನು ಮತ್ತಷ್ಟು ಉತ್ತೇಜಿಸುತ್ತದೆ. ಚರ್ಮದ ಸ್ಥಿತಿಸ್ಥಾಪಕತ್ವ ಸುಧಾರಿಸುವ ಮತ್ತು ಸುಕ್ಕುಗಳ ಕಡಿಮೆ ಮಾಡುವ ಸಾಮರ್ಥ್ಯಕ್ಕಾಗಿ ತ್ವಚೆಯ ಉತ್ಪನ್ನಗಳಲ್ಲಿ ಇದು ಭರವಸೆಯ ಉತ್ಪನ್ನವಾಗಿದೆ.
ಆದಾಗ್ಯೂ, ತ್ವಚೆಯ ಉತ್ಪನ್ನಗಳಲ್ಲಿನ ಪೆಪ್ಟೈಡ್‌ಗಳ ಪರಿಣಾಮಕಾರಿತ್ವವು ಬಳಸಿದ ನಿರ್ದಿಷ್ಟ ಪೆಪ್ಟೈಡ್ಗಳನ್ನು ಅವಲಂಬಿಸಿ ಬದಲಾಗಬಹುದು ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ. ಡಿಕನ್‌ಸ್ಟ್ರಕ್ಟ್‌ನ ರೆಟಿನಾಲ್ ಮತ್ತು ಪೆಪ್ಟೈಡ್ ಸೀರಮ್ ಅತ್ಯುತ್ತಮ ಆಯ್ಕೆಯಾಗಿದೆ. ಇವು ಸುಕ್ಕುಗಳ ವಿರುದ್ಧ ಹೋರಾಡಲು ಚರ್ಮವನ್ನು ಪೋಷಿಸಿ, ತೇವಗೊಳಿಸುತ್ತದೆ.
ಚರ್ಮದ ತಡೆಗೋಡೆ ಅಭಿವೃದ್ಧಿ: ಬ್ಯಾಕ್ಟೀರಿಯಾ, ಯುವಿ ವಿಕಿರಣ, ಮಾಲಿನ್ಯ ಮತ್ತು ಇತರ ಕಣಗಳ ವಿರುದ್ಧ ಚರ್ಮ ತಡೆಗೋಡೆಯಾಗಿ ಕಾರ್ಯ ನಿರ್ವಹಿಸುತ್ತದೆ. ಚರ್ಮ ಸಿಪ್ಪೆ ಸುಲಿಯುವುದು. ಧೂಮಪಾನ ಹೊಗೆ, ಇತರ ಮಾಲಿನ್ಯ, ಕಡಿಮೆ ನಿದ್ದೆ ಕೂಡ ಚರ್ಮದ ತಡೆಗೋಡೆಗೆ ಕಾರಣವಾಗಬಹುದು. ಪೆಪ್ಟೈಡ್ಸ್ ಚರ್ಮದ ತಡೆಗೋಡೆಯನ್ನು ಅಭಿವೃದ್ಧಿಪಡಿಸುತ್ತದೆ. ಹೊಸ ಚರ್ಮದ ಕೋಶಗಳ ಉತ್ಪಾದನೆಯನ್ನು ಉತ್ತೇಜಿಸುವ ಮೂಲಕ, ಕಾಲಜನ್ ಮತ್ತು ಎಲಾಸ್ಟಿನ್ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಮತ್ತು ಚರ್ಮದಲ್ಲಿ ತೇವಾಂಶವನ್ನು ಉತ್ತೇಜಿಸುವ ಮೂಲಕ ಪೆಪ್ಟೈಡ್‌ಗಳು ಈ ತಡೆಗೋಡೆ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಊರಿಯೂತ ಕಡಿಮೆ: ದೇಹ ಗಾಯ ಅಥವಾ ಸೋಂಕಿಗೆ ತುತ್ತಾದಾಗ ನೈಸರ್ಗಿಕವಾಗಿ ಚರ್ಮದಲ್ಲಿ ಊರಿಯೂತ ಸಂಭವಿಸುತ್ತದೆ. ಆದರೆ, ದೀರ್ಘಕಾಲದ ಉರಿಯೂತ ಟಿಶ್ಯೂಗಳ ಮೇಲೆ ಹಾನಿ ಮಾಡುತ್ತದೆ. ಇದರಿಂದ ವಯಸ್ಸಾಗುವಿಕೆ ಪ್ರಕ್ರಿಯೆ ನಡೆಯುತ್ತದೆ. ಪೆಪ್ಟೈಡ್ಸ್ ಚರ್ಮದ ಈ ಊರಿಯೂತವನ್ನು ಕಡಿಮೆ ಮಾಡುತ್ತದೆ. ಇದು ಕೆಲವು ನಿರ್ದಿಷ್ಟ ಮೊಲೆಕ್ಯೂಲಸ್ ಅನ್ನು ಚಲನಾಶೀಲ ಗೊಳಿಸುವುದರ ಜೊತೆಗೆ ಆರೋಗ್ಯಯುತ ಮತ್ತು ಯೌವನ ತ್ವಚೆ ನಿಮ್ಮದಾಗುತ್ತದೆ.
ಚರ್ಮದ ಟೋನ್ಗೆ ಸಹಾಯಕವಾಗುತ್ತದೆ: ಅಸಮವಾದ ಚರ್ಮದ ಟೋನ್ ಅನ್ನು ಹೈಪರ್ಪಿಗ್ಮೆಂಟೆಷನ್ ಎಂದು ಕರೆಯಲಾಗುವುದು. ಇದು ಅನೇಕ ಕಾರಣದಿಂದ ಸಂಭವಿಸುತ್ತದೆ. ಸೂರ್ಯನಿಗೆ ಒಡ್ಡಿಕೊಳ್ಳುವುದು. ಹಾರ್ಮೋನ್ ಬದಲಾವಣೆ ಮತ್ತು ವಯಸ್ಸಾಗುವಿಕೆ ಕೂಡ ಕಾರಣವಾಗುತ್ತದೆ. ಪೆಪ್ಟೈಡ್ಸ್ ಚರ್ಮದ ಮೆಲನಿನ್ ಉತ್ಪಾದನೆಗೆ ನಿಯಂತ್ರಣದಲ್ಲಿ ಸಹಾಯ ಮಾಡುತ್ತದೆ. ಪಿಗ್ಮೆಂಟ್ ಚರ್ಮಕ್ಕೆ ಬಣ್ಣ ನೀಡುತ್ತದೆ. ಹೊರಗಿನ ಹಾನಿ ತಡೆಯಲು ಕಪ್ಪು ವರ್ತುಲ ಸೇರಿದಂತೆ ಇನ್ನಿತರ ಚರ್ಮದ ಹಾನಿಯನ್ನು ತಡೆಯುತ್ತದೆ.
ಚರ್ಮದ ಹೈಡ್ರೆಷನ್ ಸುಧಾರಿಸುತ್ತದೆ: ಪೆಪ್ಟೈಡ್ಸ್ ಚರ್ಮದ ಹೈಡ್ರೋಷನ್ ಅನ್ನು ಕಾಪಾಡಲು ಸಹಾಯ ಮಾಡುವುದರ ಜೊತೆಗೆ ಹೈಲುರೊನಿಕ್ ಆಮ್ಲ ಉತ್ಪನ್ನವನ್ನು ಉತ್ತೇಜಿಸುತ್ತದೆ. ಜೊತೆಗೆ ಚರ್ಮದ ಮಾಶ್ಚರೈಸರ್ ಅನ್ನು ಕಾಪಾಡುತ್ತದೆ. ಪೆಪ್ಟೈಡ್ಸ್ ನಲ್ಲಿರುವ ಎಂಜೈಮಸ್ ಚರ್ಮದಲ್ಲಿನ ಹೈಲೂರೊನಿಕ್ ಆಮ್ಲ ಮಟ್ಟವನ್ನು ನಿರ್ವಹಣೆ ಮಾಡುತ್ತದೆ. ಇದು ಚರ್ಮ ಟೆಕ್ಸ್ಚರ್, ಹೈಡ್ರಾಷನ್ ಹೆಚ್ಚಿಸಲು ಸಹಾಯ ಮಾಡುತ್ತದೆ. ಪೆಪ್ಟೈಡ್ಸ್ ಕೊಲಜನ್ ಸಿಂಥಿಸಿಸ್ ಹೆಚ್ಚಳ ಮಾಡುವುದರ ಜೊತೆಗೆ ಸುಕ್ಕನ್ನು ತಡೆಯುತ್ತದೆ.
ಇದನ್ನೂ ಓದಿ: ಮಕ್ಕಳ ವಿಷಯದಲ್ಲಿ ತುಂಬಾ ಕಟ್ಟುನಿಟ್ಟಾಗಬೇಡಿ; ಮಗುವಿನ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರತ್ತೆ