ETV Bharat / sukhibhava

ನೀರಿನಿಂದಲೇ ಜೀವನ, ಆರೋಗ್ಯ.. ದಿನವೊಂದಕ್ಕೆ ಒಬ್ಬ ವ್ಯಕ್ತಿ ಎಷ್ಟು ನೀರು ಕುಡಿಯಬೇಕು ಗೊತ್ತಾ? - ಅಮೆರಿಕದ ಕೃಷಿ ಇಲಾಖೆ ಸಲಹೆಗಳೇನು

How Much Water To Drink a Day ದಿನಕ್ಕೆವೊಂದಕ್ಕೆ ಎಷ್ಟು ನೀರು ಕುಡಿಯಬೇಕು.. ಎಷ್ಟು ನೀರು ದೇಹಕ್ಕೆ ಅವಶ್ಯಕ.. ದೇಹಕ್ಕೆ ಆಹಾರ, ಗಾಳಿ ಎಷ್ಟು ಮುಖ್ಯವೋ ನೀರು ಅಷ್ಟೇ ಮುಖ್ಯ.. ಆಹಾರದಂತೆ ನಿಯಮಿತವಾಗಿ ನೀರು ಸೇವನೆ ಮಾಡಬೇಕು ಅಂತಾರೆ ವೈದ್ಯರು.

How Much Water To Drink a Day
ನೀರಿನಿಂದಲೇ ಜೀವನ, ಆರೋಗ್ಯ... ದಿನವೊಂದಕ್ಕೆ ಒಬ್ಬ ವ್ಯಕ್ತಿ ಎಷ್ಟು ನೀರು ಕುಡಿಯಬೇಕು ಗೊತ್ತಾ?
author img

By

Published : Aug 19, 2023, 7:55 AM IST

ನಮ್ಮ ಬದುಕಿಗೆ ಆಹಾರದಷ್ಟೇ ನೀರು ಕೂಡ ಮುಖ್ಯ. ನಾವು ನೀವೆಲ್ಲ ಆಹಾರವಿಲ್ಲದೇ ಕೆಲವು ದಿನಗಳವರೆಗೆ ಬದುಕಬಹುದು, ಆದರೆ, ನೀರಿಲ್ಲದೆ ಬದುಕಲು ಸಾಧ್ಯವಿಲ್ಲ. ಹಾಗಾಗಿ ಮನುಷ್ಯರಿಗಷ್ಟೇ ಅಲ್ಲ.. ಈ ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಗಳಿಗೂ ನೀರು ಬಹಳ ಅವಶ್ಯಕ. ನಾವು ದಿನಕ್ಕೆ ಎಷ್ಟು ನೀರು ಕುಡಿಯಬೇಕು ಎಂಬುದರ ಕುರಿತು ಬೇರೆ ಬೇರೆಯಾದ ಅಭಿಪ್ರಾಯಗಳಿವೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಹೇಳುತ್ತಾರೆ.

ಒಬ್ಬ ವ್ಯಕ್ತಿ ದಿನವೊಂದಕ್ಕೆ ಎಷ್ಟು ನೀರು ಕುಡಿಯಬೇಕು ಎಂಬ ಚರ್ಚೆ 1940 ರ ದಶಕದಿಂದಲೇ ಪ್ರಾರಂಭವಾಯ್ತು. ಆಹಾರ ಮತ್ತು ಪೌಷ್ಟಿಕಾಂಶ ಮಂಡಳಿಯು ದಿನಕ್ಕೆ 8 ಗ್ಲಾಸ್ ನೀರು ಕುಡಿಯಬೇಕು ಎಂದು ಶಿಫಾರಸು ಮಾಡಿದೆ. 8 ಗ್ಲಾಸ್ ನೀರು ಅಂದರೆ ಸುಮಾರು 2.5 ಲೀಟರ್​ಗಳಿಗೆ ಸಮವಾಗಿರುತ್ತದೆ. ಅಂದು ಈ ಮಾತು ಪ್ರಚಲಿತದಲ್ಲಿತ್ತು. ಪ್ರಸ್ತುತ ಈಗ ಜಗತ್ತ ಭಾರಿ ಮುಂದೆ ಸಾಗಿದೆ. ದಿನವೊಂದಕ್ಕೆ ಎಷ್ಟು ನೀರು ಬೇಕು ಎಂಬ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ಹಾಗಾಗಿ 1940ರ ಮಾನದಂಡಗಳು ಈಗ ಬದಲಾಗಿವೆ.

2004 ರಲ್ಲಿ, ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್, ಇಂಜಿನಿಯರಿಂಗ್ ಮತ್ತು ಮೆಡಿಸಿನ್ ಹೇಳುವಂತೆ ದಿನವೊಂದಕ್ಕೆ ಒಬ್ಬ ಪುರುಷ ಸುಮಾರು 3.7 ಲೀಟರ್​ ನೀರು ಕುಡಿಯಬೇಕು. ಇನ್ನು ಮಹಿಳೆಯರು ಸುಮಾರು 2.7 ಲೀಟರ್​ ನೀರು ಸೇವನೆ ಮಾಡಬೇಕು ಎಂದು ಶಿಫಾರಸು ಮಾಡಿತ್ತು. ಆದರೆ ಅಮೆರಿಕದ ಕೃಷಿ ಇಲಾಖೆ ವರದಿ ಪ್ರಕಾರ, ಒಬ್ಬ ವ್ಯಕ್ತಿಯು ತನ್ನ ವಯಸ್ಸು, ಲಿಂಗ ಮತ್ತು ಆರೋಗ್ಯದ ಸ್ಥಿತಿಯನ್ನು ಆಧರಿಸಿ ನೀರನ್ನು ಕುಡಿಯಬೇಕು ಎಂದು ಸಲಹೆ ನೀಡಿದೆ. ಬಿಸಿ ವಾತಾವರಣದಲ್ಲಿ ವಾಸಿಸುವವರು ಮತ್ತು ದೀರ್ಘಕಾಲದವರೆಗೆ ವ್ಯಾಯಾಮ ಮಾಡುವವರು ಸಾಕಷ್ಟು ನೀರು ಕುಡಿಯಬೇಕಾಗತ್ತದೆ.

ವಯಸ್ಸಾದ ಅಜ್ಜಂದಿರು, ನಡುವಯಸ್ಸಿನ ಪುರುಷರಿಗೆ ಅಮೆರಿಕದ ಕೃಷಿ ಇಲಾಖೆ ಸಲಹೆಯಲ್ಲಿ, ರಾಷ್ಟ್ರೀಯ ವಿಜ್ಞಾನ, ಇಂಜಿನಿಯರಿಂಗ್ ಮತ್ತು ಮೆಡಿಸಿನ್ ಅಕಾಡೆಮಿಗಳ ಶಿಫಾರಸು ತುಸು ಕಡಿಮೆ ಮಾಡಿದೆ. ಅಂದರೆ ಪುರುಷರು ಮತ್ತು ಮಹಿಳೆಯರು ಇಬ್ಬರೂ ಸುಮಾರು 2.7 ಲೀಟರ್ ನೀರು ಕುಡಿದರೆ ಉತ್ತಮ ಎಂದು ಸಲಹೆ ನೀಡಿದೆ. ನಮ್ಮ ದೇಹಕ್ಕೆ ಬೇಕಾಗುವ ದ್ರವ ಆಹಾರವನ್ನು ನೀರಿನ ರೂಪದಲ್ಲಿ ತೆಗೆದುಕೊಳ್ಳುವ ಅಗತ್ಯವಿಲ್ಲ ಎನ್ನುತ್ತದೆ ಕೃಷಿ ಇಲಾಖೆ ಶಿಫಾರಸು. ಸಾಮಾನ್ಯವಾಗಿ, ಜನರು ತಮ್ಮ ದೈನಂದಿನ ನೀರಿನ ಸೇವನೆಯ 20 ಪ್ರತಿಶತವನ್ನು ಆಹಾರದ ರೂಪದಲ್ಲಿ ಸೇವಿಸುತ್ತಾರೆ.

2007 ರ ಶಿಫಾರಸಿನ ಅನ್ವಯ, ನಮ್ಮ ದೇಹವು ರಸ, ಹಾಲು ಮತ್ತು ಕೆಫೀನ್ ಹೊಂದಿರುವ ಪಾನೀಯಗಳಿಂದ ಅಗತ್ಯವಿರುವ ದ್ರವವನ್ನು ಪಡೆಯಬಹುದು ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ಅತಿಯಾಗಿ ನೀರು ಕುಡಿಯುವುದರಿಂದಲೂ ಅಪಾಯಗಳಿವೆ. ಕೊಬ್ಬು ಮುಕ್ತ ಹಾಲಿನಂತಹ ಕಡಿಮೆ ಕ್ಯಾಲೋರಿ ಅಥವಾ ಯಾವುದೇ ಕ್ಯಾಲೋರಿ ಪಾನೀಯಗಳನ್ನು ಸೇವಿಸುವುದು ದೇಹಾರೋಗ್ಯಕ್ಕೆ ಉತ್ತಮ.

ನೀರು ಕುಡಿಯುವ ಪ್ರಯೋಜನಗಳು:

ನೀರು ಕುಡಿಯುವುದರಿಂದ ದೇಹದ ಉಷ್ಣತೆ ನಿಯಂತ್ರಣಕ್ಕೆ ಬರುತ್ತದೆ.

ಜೀವಕೋಶಗಳು ಮತ್ತು ಬೆನ್ನುಮೂಳೆಯು ಆರೋಗ್ಯಕರವಾಗಿರುತ್ತವೆ.

ಮೂತ್ರ, ಬೆವರು ಮುಂತಾದ ತ್ಯಾಜ್ಯಗಳು ದೇಹದಿಂದ ಹೊರಹೋಗುತ್ತವೆ.

ರಕ್ತವನ್ನು ಸುಲಲಿತವಾಗಿ ಪಂಪ್ ಮಾಡಲು ಹೃದಯಕ್ಕೆ ಸಹಾಯವಾಗುತ್ತೆ.

ಸಾಕಷ್ಟು ನೀರು ಕುಡಿಯದಿರುವುದು ಕೆಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಇದು ಹೀಗೆಯೇ ಮುಂದುವರಿದರೆ ಕಿಡ್ನಿಯಲ್ಲಿ ಕಲ್ಲುಗಳು ಬೆಳೆಯುವ ಸಾಧ್ಯತೆ ಇರುತ್ತದೆ. ನಿಮ್ಮ ದೇಹ ನಿರ್ಜಲೀಕರಣ ಅನುಭವಿಸಬೇಕಾಗುತ್ತದೆ, ಬಾಯಿ ಒಣಗುವುದು, ಮೂತ್ರ ಮಾಡುವಾಗ ಸಮಸ್ಯೆ, ಮೂತ್ರ ಕಪ್ಪಾಗುವುದು ಸೇರಿದಂತೆ ಅನೇಕ ಸಮಸ್ಯೆಗಳು ಕಾಣಿಸಬಹುದು. ಹಾಗಾಗಿ ನಿಯಮಿತವಾಗಿ ದೇಹಕ್ಕೆ ಸಾಕಾಗುವಷ್ಟು ನೀರು ಕುಡಿಯಬೇಕು.

1. ನೀರಿನ ಬಾಟಲಿ ಸದಾ ನಿಮ್ಮೊಂದಿಗೆ ತೆಗೆದುಕೊಳ್ಳುವುದು ಉತ್ತಮ. ನೀವು ಎಲ್ಲಿಗಾದರೂ ಹೊರಗೆ ಹೋದರೆ ನಿಮ್ಮೊಂದಿಗೆ ದೊಡ್ಡ ನೀರಿನ ಬಾಟಲಿಯನ್ನು ಒಯ್ಯಿರಿ. ಸ್ವಲ್ಪ ದೂರವಾದರೂ ಸರಿ ನೀರು ತೆಗೆದುಕೊಂಡು ಹೋಗುವುದನ್ನು ಮರೆಯಬೇಡಿ. ದೊಡ್ಡ ನೀರಿನ ಬಾಟಲಿಯಲ್ಲಿ ಸಾಕಷ್ಟು ನೀರು ಲಭ್ಯ ಇರುವಂತೆ ನೋಡಿಕೊಳ್ಳಿ. ನಿಮಗೆ ಬಾಯಾರಿಕೆಯಾದಾಗ ನೀರು ಕುಡಿಯುತ್ತಿರಿ.

2. ಊಟದ ಸಮಯದಲ್ಲಿ ನೀರು ಕುಡಿಯಿರಿ. ಅನೇಕ ಜನರು ಊಟದ ಸಮಯದಲ್ಲಿ ನೀರು ಕುಡಿಯುವುದಿಲ್ಲ. ಮಧ್ಯೆ ತಂಪು ಪಾನೀಯಗಳ ಬದಲು ನೀರು ಕುಡಿಯುವುದು ಉತ್ತಮ.

ಇದನ್ನು ಓದಿ: Skipping Health Benefits: ಹೊಟ್ಟೆಯ ಸುತ್ತಲಿನ ಕೊಬ್ಬು ಕರಿಗಿಸಿಕೊಳ್ಳಬೇಕೆ?.. ಪ್ರತಿದಿನ 'ಸ್ಕಿಪ್ಪಿಂಗ್' ಮಾಡುವುದು ಸೂಕ್ತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.