ಹೈದರಾಬಾದ್: ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಕೋವಿಡ್-19 ಲಸಿಕೆಯನ್ನು ಭಾರತದಲ್ಲಿ ಸಹ ಬಳಸಲಾಗುತ್ತಿದೆ. ಇದನ್ನು ಚಿಂಪಾಂಜಿ ಪೂಪ್‌ನಿಂದ ಪ್ರತ್ಯೇಕಿಸಲಾಗಿರುವ ಅಡೆನೊ ವೈರಸ್‌ನಿಂದ ತಯಾರಿಸಲಾಗುತ್ತಿದ್ದು, ಇದನ್ನು ತಳೀಯವಾಗಿ ಬದಲಾಯಿಸಲಾಗಿದೆ. ಆದ್ದರಿಂದ ಅದು ಮಾನವರಲ್ಲಿ ಬೆಳೆಯಲು ಅಸಾಧ್ಯವಾಗಿದೆ.
ಈಗ ಈ ಕೋವಿಡ್ -19 ಲಸಿಕೆಯನ್ನು ಅಸ್ಟ್ರಾಜೆನೆಕಾ ಎಂದು ಕರೆಯಲಾಗುತ್ತಿದೆ. ಇದನ್ನು ಮೊದಲು ಎಝೆಡ್ಡಿ1222 ಎಂದು ಕರೆಯಲಾಗುತ್ತಿತ್ತು.
ಎಝೆಡ್ಡಿ1222ಅನ್ನು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ವ್ಯಾಕ್ಸಿಟೆಕ್ ಆವಿಷ್ಕರಿಸಿದೆ. ಇದನ್ನು ಚಿಂಪಾಂಜಿಗಳಲ್ಲಿ ಶೀತಕ್ಕೆ ಕಾರಣವಾಗುವ ವೈರಸ್ ಪಡೆದು ಅದನ್ನು ದುರ್ಬಲಗೊಳಿಸಿ, ಅದಕ್ಕೆ ಸಾರ್ಸ್ ಸಿಒವಿ-2 ಎಂಬ ಕೊರೊನಾ ಸೋಂಕಿನಲ್ಲಿರುವ ಮುಳ್ಳಿನಂತಹ ವಂಶವಾಹಿ ವಸ್ತುವನ್ನು ಸೇರಿಸಿ ತಯಾರಿಸಲಾಗಿದೆ.
ಈ ಲಸಿಕೆಯನ್ನು ರೋಗಿಗಳಿಗೆ ನೀಡಿದಾಗ, ಅದು ರೋಗಿಯ ದೇಹದ ರಕ್ಷಣಾ ವ್ಯವಸ್ಥೆಗೆ ಕೊರೋನಾ ಆಗಮನದ ಸೂಚನೆ ನೀಡಿ ಅದರ ವಿರುದ್ಧ ಹೋರಾಡುವಂತೆ ಸೂಚನೆ ನೀಡುತ್ತದೆ.
ಲಸಿಕೆಯನ್ನು 70ಕ್ಕೂ ಹೆಚ್ಚು ದೇಶಗಳಲ್ಲಿ ಷರತ್ತುಬದ್ಧ ಮಾರ್ಕೆಟಿಂಗ್ ದೃಢೀಕರಣ ಅಥವಾ ತುರ್ತು ಬಳಕೆಗೆ ಅವಕಾಶ ನೀಡಲಾಗಿದೆ.
ವಿಶ್ವದ ಅತಿದೊಡ್ಡ ಲಸಿಕೆ ತಯಾರಕರಾದ ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಭಾರತದಲ್ಲಿ 'ಕೋವಿಶೀಲ್ಡ್' ಹೆಸರಿನ ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಕೋವಿಡ್-19 ಲಸಿಕೆಯ ಆವೃತ್ತಿಯನ್ನು ತಯಾರಿಸುತ್ತಿದೆ.
ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತದ್ದಂತೆ ಭಾರತವು ಕೋವಿಡ್ -19 ವಿರುದ್ಧ ವ್ಯಾಕ್ಸಿನೇಷನ್ ಪ್ರಯತ್ನಗಳನ್ನು ಚುರುಕುಗೊಳಿಸುತ್ತಿದೆ.