ಬೆಂಗಳೂರು: ಆಮ್ಲಾ ಅಥವಾ ನೆಲ್ಲಿಕಾಯಿ ಭಾರತೀಯ ಗೂಸ್ಬೆರಿ ಎಂದು ಪರಿಚಿತವಾಗಿದೆ. ಅನೇಕ ಆರೋಗ್ಯ ಪ್ರಯೋಜನವನ್ನು ಹೊಂದಿರುವ ಈ ನೆಲ್ಲಿಕಾಯಿಯನ್ನು ಭಾರತೀಯರು ಅನೇಕ ಪ್ರಕಾರದಲ್ಲಿ ವಿವಿಧ ಚಿಕಿತ್ಸೆಗಳಲ್ಲಿ ಬಳಕೆ ಮಾಡುತ್ತಾರೆ. ಇದು ತನ್ನ ವಿಶಿಷ್ಟ ರುಚಿಯಿಂದ ಪರಿಚಿತವಾಗಿದೆ. ಹುಳಿ, ಕಹಿ, ಸಿಹಿ ಮಿಶ್ರಣದ ಈ ನೆಲ್ಲಿಕಾಯಿಯನ್ನು ಸೌಂದರ್ಯ ವರ್ಧಕವಾಗಿಯೂ ಕೂಡ ಬಳಕೆ ಮಾಡಲಾಗುತ್ತದೆ.
ಆಯುರ್ವೇದಿಕ್ ಮೆಡಿಸಿನ್ ಮತ್ತು ಹೆಚ್ಚಿನ ಪೋಷಕಾಂಶ.. ಡಾ ನರೇಶ್ ಗುಪ್ತಾ ಪ್ರಕಾರ, ಆಮ್ಲಾ ಎಂಬುದು ಸಾಂಪ್ರದಾಯಿಕ ಆಯುರ್ವೇದ ಚಿಕಿತ್ಸೆಯಲ್ಲಿ ಇದರ ಬಳಕೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದೆ. ಅಧಿಕ ಪೋಷಕಾಂಶ ಗುಣದ ನೆಲ್ಲಿಕಾಯಿಯನ್ನು ಸೂಪರ್ ಹಣ್ಣು ಎಂದು ಕರೆಯಲಾಗಿದೆ. ಇದು ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಇದ್ದು, ಪ್ರತಿರಕ್ಷಣಾ ವ್ಯವಸ್ಥೆ ಹೊಂದಿದೆ. ಜೊತೆಗೆ ಇದು ದೇಹದ ರ್ಯಾಡಿಕಲ್ ಮತ್ತು ಆಕ್ಸಿಡೆಂಟಿವ್ ಒತ್ತಡದ ವಿರುದ್ಧ ಹೋರಾಡುತ್ತದೆ. ದಿನಕ್ಕೆ ಒಂದು ನೆಲ್ಲಿಕಾಯಿಯನ್ನು ತಿನ್ನುವುದರಿಂದ ಕೆಮ್ಮು, ಜ್ವರ ಸೇರಿದಂತೆ ಅನೇಕ ಅನಾರೋಗ್ಯದ ವಿರುದ್ಧ ಹೋರಾಡಬಹುದಾಗಿದೆ.
ರೋಗ ನಿರೋಧಕ ವ್ಯವಸ್ಥೆ: ಆಮ್ಲಾ ದೇಹದ ರೋಗ ನಿರೋಧಕ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ. ಇದು ಸೋಂಕು ಮತ್ತು ರೋಗದ ವಿರುದ್ಧ ಹೋರಾಡುತ್ತದೆ. ಇದು ಬಿಳಿ ರಕ್ತ ಕಣಗಳ ಅಭಿವೃದ್ಧಿ ಹೆಚ್ಚಿಸುತ್ತದೆ. ದೇಹದ ರಕ್ಷಣೆಯನ್ನು ಹೆಚ್ಚಿಸುತ್ತದೆ. ನೆಲ್ಲಿಕಾಯಿ ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿದೆ. ಇದು ಚಯಾಪಚಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಅನೇಕ ಕಾಲೋಚಿತ ಮತ್ತು ಬ್ಯಾಕ್ಟೀರಿಯಾದ ಸೋಂಕನ್ನು ತಡೆಯುತ್ತದೆ.
ಜೀರ್ಣಕ್ರಿಯೆಗೆ ಸಹಕಾರಿ: ಡಾ ಸುಶ್ಮಾ ಸಂಘ್ವಿ ಹೇಳುವಂತೆ, ಆಮ್ಲ ದೇಹದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದು ಸಾಧಾರಣ ಲ್ಯಾಕ್ಸಟಿವ್ ಆಗಿ ಕಾರ್ಯ ನಿರ್ವಹಿಸುತ್ತದೆ. ಇದು ಹೊಟ್ಟೆ ಉಬ್ಬರವನ್ನು ನಿಯಂತ್ರಿಸುತ್ತದೆ. ಮಲಬದ್ಧತೆ ಮತ್ತು ಆಮ್ಲತೆಯನ್ನು ನಿವಾರಿಸಿ, ಉತ್ತಮವಾಗಿ ಜೀರ್ಣಕ್ರಿಯೆ ನಡೆಯುವಂತೆ ನೋಡಿಕೊಳ್ಳುತ್ತದೆ. ಆಮ್ಲಾ ಜೀರ್ಣಕಾರಿ ಕಿಣ್ವಗಳ ಸ್ರವಿಸುವಿಕೆಯನ್ನು ಹೆಚ್ಚಿಸುತ್ತದೆ. ಇದು ಪೋಷಕಾಂಶವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.
ಚರ್ಮ ಮತ್ತು ತ್ವಚೆಯ ಕಾಳಜಿ: ಆಮ್ಲಾದಲ್ಲಿನ ಅಂಶಗಳನ್ನು ತ್ವಚೆ ಮತ್ತು ಕೂದಲಿನ ಆರೈಕೆಗೂ ಕೂಡ ಬಳಕೆ ಮಾಡಲಾಗುತ್ತದೆ. ಇದು ಕೊಲಜಾನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದರಿಂದ ಚರ್ಮದ ಬಿಗಿತನ ಹೆಚ್ಚಿಸಿ, ಇದು ಸುಕ್ಕು ನಿವಾರಣೆ ಮಾಡುತ್ತದೆ. ರೋಗ ನಿರೋಧಕ ಶಕ್ತಿ ಹೊಂದಿರುವ ಇದು ಸೂರ್ಯನ ಮತ್ತು ಮಾಲಿನ್ಯದಿಂದ ಆಗುವ ಆಮ್ಲದಿಂದ ಚರ್ಮವನ್ನು ರಕ್ಷಿಸುತ್ತದೆ. ಅಲ್ಲದೇ, ಕೂದಲಿನ ಆರೈಕೆಗೆ ಬೇಕಾಗುವ ಫೋಲಿಕಲ್ಸ್ ಅನ್ನು ಬಲಗೊಳಿಸುತ್ತದೆ. ಇದರಿಂದ ಕೂದಲು ಉದುರುವಿಕೆ ಕಡಿಮೆಯಾಗಿ ಕೂದಲ ಬೆಳವಣಿಗೆ ಆಗುತ್ತದೆ.
ಆಮ್ಲಾ ರಕ್ತವನ್ನು ಶುದ್ಧೀಕರಿಸುವಲ್ಲಿ ಸಹಾಯ ಮಾಡುತ್ತದೆ. ಆದ್ದರಿಂದ ಇದರ ಸೇವನೆಯು ಮೊಡವೆಗಳಂತಹ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ. ಜೊತೆಗೆ ಮೈಬಣ್ಣವನ್ನು ಸುಧಾರಿಸುತ್ತದೆ. ಇದರಲ್ಲಿರುವ ವಿಟಮಿನ್ ಸಿ ಚರ್ಮದಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳಲು ಮತ್ತು ಹಾನಿಗೊಳಗಾದ ಚರ್ಮದ ಕೋಶಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಬೆಳಗಿನ ಉಪಹಾರದ ಜೊತೆ ಜೊತೆಗೆ ಎಳನೀರು ಕುಡಿಯುವುದರಿಂದಾಗುವ ಉಪಯೋಗಗಳೆಷ್ಟು ಗೊತ್ತಾ?