ETV Bharat / sukhibhava

ಸೆಕ್ಸ್​ನಿಂದ ದೂರವಿದ್ದೀರಾ? ಆರೋಗ್ಯದ ಮೇಲಾಗುವ ಪರಿಣಾಮಗಳೇನು ಗೊತ್ತೇ?

ಲೈಂಗಿಕ ಕ್ರಿಯೆಯು ಮನುಷ್ಯ ಆರೋಗ್ಯವಾಗಿರಲು ಏಕೈಕ ಮಾರ್ಗವಾಗಿದೆ ಎಂದರ್ಥವೇ ಅಲ್ಲ. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಆರೋಗ್ಯಕರ ಆಹಾರ ಮತ್ತು ಜೀವನಶೈಲಿ ಅತ್ಯಗತ್ಯ. ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ ಲೈಂಗಿಕ ಬಯಕೆ ಹೊಂದಿರುತ್ತಾನೆ. ಹಾಗೆಯೇ ಸೆಕ್ಸ್ ದೇಹದ ವಾಂಛೆಯನ್ನಷ್ಟೇ ತೀರಿಸುತ್ತೆ ಅನ್ನೋದು ಕೂಡಾ ತಪ್ಪು. ಸೆಕ್ಸ್​ನಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಅನೇಕ ಸಕಾರಾತ್ಮಕ ಪರಿಣಾಮಗಳುಂಟಾಗುತ್ತವೆ ಅನ್ನೋದು ಅನೇಕ ವೈಜ್ಞಾನಿಕ ಅಧ್ಯಯನಗಳಲ್ಲಿ ಸಾಬೀತಾಗಿದೆ.

what happens if you stop having sex  does lack of sex affect physical health  effects of lack of sex  regular sex is healthy  sexual health tips  how sex is good for health  ಲೈಂಗಿಕ ಕ್ರಿಯೆ ನಿಲ್ಲಿಸುವುದರಿಂದ ಆಗುವ ಪರಿಣಾಮಗಳೇನು  ಲೈಂಗಿಕ ಕ್ರಿಯೆ ನಿಲ್ಲಿಸುವುದರಿಂದ ಆರೋಗ್ಯದ ಮೇಲೆ ಬೀರುವ ಪರಿಣಾಮಗಳು  ಲೈಂಗಿಕ ಕ್ರಿಯೆ ಬಗ್ಗೆ ಉಂಆಗುವ ಲಾಭಗಳು  ಪ್ರತಿದಿನ ಸೆಕ್ಸ್​ ಬಗ್ಗೆ ನಿಮ್ಮ ಅಭಿಪ್ರಾಯ
ಇದರಿಂದ ನಿಮ್ಮ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರಬಹುದು ಗೊತ್ತಾ
author img

By

Published : May 17, 2022, 8:58 AM IST

ಮೊದಮೊದಲು ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ತೋರಿಸುವ ದಂಪತಿ ಕ್ರಮೇಣ ನಿಯಮಿತವಾಗಿಯೂ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ನಿರಾಸಕ್ತಿ ತೋರುತ್ತಾರೆ. ಹೀಗೆ ವಿರಾಮ ಅಥವಾ ನಿರಾಸಕ್ತಿ ತೆಗೆದುಕೊಳ್ಳಲು ಹಲವು ಕಾರಣಗಳಿವೆ. ಯಾವುದೇ ಕಾರಣವಿರಲಿ, ಲೈಂಗಿಕತೆಯಲ್ಲಿ ದೀರ್ಘಕಾಲದ ವಿರಾಮವು ದೈಹಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ನಿಯಮಿತವಾದ ಲೈಂಗಿಕತೆಯು ನಿಮಗೆ ಸಂತೋಷ ನೀಡುವುದು ಮಾತ್ರವಲ್ಲದೆ, ಆರೋಗ್ಯವಾಗಿರಿಸುತ್ತದೆ.

1. ಹೃದಯಾಘಾತದ ಅಪಾಯ ಕಡಿಮೆ: ಉತ್ತಮ ಲೈಂಗಿಕ ಜೀವನ ಹೃದಯದ ಆರೋಗ್ಯ ಕಾಪಾಡುತ್ತದೆ. ಸೆಕ್ಸ್ ಈಸ್ಟ್ರೋಜನ್ ಹಾಗೂ ಟೆಸ್ಟೋಸ್ಟೆರೋನ್ ಹಾರ್ಮೋನ್ ಮಟ್ಟವನ್ನು ಸಮತೋಲದಲ್ಲಿಡಲು ನೆರವಾಗುತ್ತದೆ. ಇವೆರಡಲ್ಲಿ ಒಂದು ಹಾರ್ಮೋನ್ ಕಡಿಮೆಯಾದ್ರೂ ಹೃದಯ ಕಾಯಿಲೆಗಳು ಕಾಣಿಸಿಕೊಳ್ಳುವ ಅಪಾಯವಿದೆ. ಹೀಗಾಗಿ ವಾರದಲ್ಲಿ ಕನಿಷ್ಠ ಒಂದೆರಡು ಬಾರಿ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ವ್ಯಕ್ತಿ ಹೃದಯ ಸಂಬಂಧಿ ಸಮಸ್ಯೆಗಳಿಗೆ ತುತ್ತಾಗುವ ಸಾಧ್ಯತೆ ಇತರರಿಗಿಂತ ಕಡಿಮೆ.

​2. ​ಒತ್ತಡದ ಮಟ್ಟ ಹೆಚ್ಚುವುದು: ಲೈಂಗಿಕ ಚಟುವಟಿಕೆಯು ದೇಹದಲ್ಲಿ ಎಂಡಾರ್ಫಿನ್ ಮತ್ತು ಆಕ್ಸಿಟೋಸಿನ್ ಬಿಡುಗಡೆ ಹೆಚ್ಚಿಸುತ್ತದೆ. ಇವು ಕೇವಲ ಹಾರ್ಮೋನುಗಳು ಮಾತ್ರವಲ್ಲದೆ ಒತ್ತಡ, ಮನಸ್ಥಿತಿ ಮತ್ತು ನಿದ್ರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದರೆ ಸಂಭೋಗಿಸದಿರುವುದು ದೇಹದಲ್ಲಿ ಎಂಡಾರ್ಫಿನ್ ಮತ್ತು ಆಕ್ಸಿಟೋಸಿನ್ ಬಿಡುಗಡೆಯನ್ನು ಕಡಿಮೆ ಮಾಡುವುದು. ಇದು ನಿಮ್ಮ ಮಾನಸಿಕ ಒತ್ತಡದ ಮಟ್ಟವನ್ನು ಹೆಚ್ಚಿಸುತ್ತದೆ. ನೀವು ದೈನದಿಂದ ಜೀವನದಲ್ಲಿ ಕಿರಿಕಿರಿ ಅನುಭವಿಸಬಹುದು ಮತ್ತು ನಿದ್ರೆಯ ಸಮಸ್ಯೆಗಳನ್ನು ಎದುರಿಸಬಹುದು.

3. ಜ್ಞಾಪಕಶಕ್ತಿಯ ಸಮಸ್ಯೆಗಳು: ಲೈಂಗಿಕತೆಯ ಕೊರತೆಯಿಂದಾಗಿ ನಿಮ್ಮ ಜ್ಞಾಪಕಶಕ್ತಿ ಕಡಿಮೆಯಾಗುವ ಸಾಧ್ಯತೆಗಳು ಹೆಚ್ಚು. ಕೆಲ ಅಧ್ಯಯನಗಳು ಲೈಂಗಿಕ ಕ್ರಿಯೆ ನಿಲ್ಲಿಸಿದಾಗ ಜ್ಞಾಪಕಶಕ್ತಿ ಸಮಸ್ಯೆಗಳಿಗೆ ತುತ್ತಾಗುವ ಸಾಧ್ಯತೆಯಿದೆ ಎಂದು ಬಹಿರಂಗಪಡಿಸಿದೆ. ನಿಯಮಿತ ಲೈಂಗಿಕ ಸಂಭೋಗವು ಜ್ಞಾಪಕಶಕ್ತಿ ಸುಧಾರಿಸಲು ಅನುಕೂಲವಾಗಿದೆ. ವಿಶೇಷವಾಗಿ 50 ರಿಂದ 90ರ ನಡುವಿನ ವಯಸ್ಸಿನವರಿಗೆ ಇದು ಸೂಕ್ತ.

ಇದನ್ನೂ ಓದಿ: ಮರಳಿ ಪಡೆಯಬೇಕೆ ಕನ್ಯತ್ವ?: ಇಲ್ಲಿದೆ ಸೂಕ್ತ ಶಸ್ತ್ರಚಿಕಿತ್ಸೆ

4. ಲೈಂಗಿಕ ಆಸಕ್ತಿ: ಲೈಂಕಿಕ ಕ್ರಿಯೆಯಿಂದ ದೂರ ಉಳಿಯುವುದರಿಂದ ಲೈಂಗಿಕತೆಯ ಮೇಲಿನ ಆಸಕ್ತಿ ಸಂಪೂರ್ಣವಾಗಿ ಕಳೆದುಹೋಗುವ ಸಂಭವವಿದೆ. ನಿಯಮಿತ ಲೈಂಗಿಕತೆಯು ಕಾಮಾಸಕ್ತಿ ಅಥವಾ ಲೈಂಗಿಕ ಉತ್ಸಾಹ ಹೆಚ್ಚಿಸುತ್ತದೆ.

5. ​ರೋಗ ನಿರೋಧಕ ಶಕ್ತಿ ದುರ್ಬಲ: ಲೈಂಗಿಕ ಕ್ರಿಯೆ ರೋಗನಿರೋಧಕ ಶಕ್ತಿಯೊಂದಿಗೂ ಸಂಬಂಧ ಹೊಂದಿದೆ. ವಿಶೇಷವಾಗಿ ಈ ಕ್ರಿಯೆ ನಡೆಸುವುದರಿಂದ ದೇಹದಲ್ಲಿ ಇಮ್ಯೂನೊಗ್ಲಾಬ್ಯುಲಿನ್ ಎ ಪ್ರಮಾಣವನ್ನು ಹೆಚ್ಚಿಸಬಹುದು. ಇಮ್ಯುನೊಗ್ಲಾಬ್ಯುಲಿನ್ ಎ ಪ್ರಮಾಣ ಹೆಚ್ಚುವುದರಿಂದ ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ನೆಗಡಿ-ಕೆಮ್ಮಿನಂತಹ ವೈರಲ್ ಫೀವರ್​ ವಿರುದ್ಧವೂ ಹೋರಾಡಲು ಸಹಾಯ ಮಾಡುತ್ತದೆ. ಸಂಭೋಗವನ್ನು ನಿಲ್ಲಿಸಿದಾಗ ದೇಹದಲ್ಲಿನ ಇಮ್ಯುನೊಗ್ಲಾಬ್ಯುಲಿನ್ ಎ ಪ್ರಮಾಣ ಕಡಿಮೆಯಾಗಬಹುದು.

6. ಯೋನಿಯ ಆರೋಗ್ಯ: ನೀವು ಸ್ವಲ್ಪ ಸಮಯದವರೆಗೆ ನಿಯಮಿತವಾಗಿ ಲೈಂಗಿಕ ಕ್ರಿಯೆ ನಡೆಸಿದ ನಂತರ ನಿಮ್ಮ ಯೋನಿಯಲ್ಲಿ ಕೆಲವು ಅನಿರೀಕ್ಷಿತ ದೈಹಿಕ ಬದಲಾವಣೆಗಳಾಗಬಹುದು. ಯೋನಿ ಗೋಡೆಗಳು ಬಿಗಿಯಾಗಬಹುದು, ಅದು ಸ್ವತಃ ಕೆಟ್ಟದ್ದಲ್ಲ. ಆದರೆ ದೀರ್ಘ ವಿರಾಮದ ನಂತರ ನೀವು ಮತ್ತೆ ಸಂಭೋಗಕ್ಕೆ ಬಂದಾಗ ಈ ಕಠಿಣ ಸ್ನಾಯುಗಳಿಂದಾಗಿ ನೀವು ಯೋನಿಯಲ್ಲಿ ನೋವು ಅಥವಾ ರಕ್ತಸ್ರಾವ ಅನುಭವಿಸಬಹುದು. ಪೆಲ್ವಿಕ್ ಫ್ಲೋರ್ ಅಭ್ಯಾಸ ಮತ್ತು ಹಸ್ತಮೈಥುನ ಮಾಡಿಕೊಳ್ಳುವುದರಿಂದ ಇದು ಸಂಭವಿಸುವ ಸಾಧ್ಯತೆ ಕಡಿಮೆ.

ಇದನ್ನೂ ಓದಿ: ಲೈಂಗಿಕ ಸುಖ ಅನುಭವಿಸಲು ಸಾಧ್ಯವಾಗುತ್ತಿಲ್ಲವೇ?.. ಅದಕ್ಕೆ ಇದೇ ಕಾರಣ..

7. ಹೆಚ್ಚಿದ ನೋವುಗಳು: ಸಂಭೋಗದ ಸಮಯದಲ್ಲಿ ಎಂಡಾರ್ಫಿನ್ ಮತ್ತು ಇತರ ಹಾರ್ಮೋನ್​ಗಳು ತಲೆ, ಬೆನ್ನು ಮತ್ತು ಕಾಲು ನೋವು ನಿವಾರಿಸಲು ಸಹಾಯ ಮಾಡುತ್ತದೆ. ಸಂಧಿವಾತ ನೋವು ಮತ್ತು ಮುಟ್ಟಿನ ಸಮಸ್ಯೆಗಳಿಂದಲೂ ಮುಕ್ತಿ ಸಿಗಬಹುದು.

8. ಪ್ರಾಸ್ಟೇಟ್ ಕ್ಯಾನ್ಸರ್​ ಸಾಧ್ಯತೆ: ಕೆಲವು ಅಧ್ಯಯನಗಳು ಹೆಚ್ಚು ಲೈಂಗಿಕವಾಗಿ ಸಕ್ರಿಯವಾಗಿರುವ ಪುರುಷರಿಗೆ ಪ್ರಾಸ್ಟೇಟ್ ಕ್ಯಾನ್ಸರ್‌ನ ಅಪಾಯ ಕಡಿಮೆ ಎಂದು ತೋರಿಸಿವೆ. 30,000 ಪುರುಷರ ಮೇಲೆ ನಡೆಸಿದ ಅಧ್ಯಯನವು ತಿಂಗಳಿಗೆ 4-7 ಬಾರಿ ಸ್ಖಲನ ಮಾಡುವ ಪುರುಷರಿಗೆ ಹೋಲಿಸಿದರೆ ಸರಾಸರಿ 21 ಬಾರಿ ಸ್ಖಲನ ಮಾಡುವ ಪುರುಷರಿಗೆ ಪ್ರಾಸ್ಟೇಟ್ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆ ಎಂದು ಹೇಳಿದೆ.

ಗಮನಿಸಿ..!

ಹಾಗಂತ ಸಂಭೋಗವು ಆರೋಗ್ಯಕರವಾಗಿರಲು ಏಕೈಕ ಮಾರ್ಗವಾಗಿದೆ ಎಂದರ್ಥವೇ ಅಲ್ಲ. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಆರೋಗ್ಯಕರ ಆಹಾರ ಮತ್ತು ಜೀವನಶೈಲಿ ಅತ್ಯಗತ್ಯ. ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ ಲೈಂಗಿಕ ಬಯಕೆ ಹೊಂದಿರುತ್ತಾನೆ. ಹಾಗೆಯೇ ಸೆಕ್ಸ್ ದೇಹದ ವಾಂಛೆಯನ್ನಷ್ಟೇ ತೀರಿಸುತ್ತೆ ಅನ್ನೋದು ಕೂಡಾ ತಪ್ಪು. ಸೆಕ್ಸ್​ನಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಅನೇಕ ಸಕಾರಾತ್ಮಕ ಪರಿಣಾಮಗಳುಂಟಾಗುತ್ತವೆ ಅನ್ನೋದು ಅನೇಕ ವೈಜ್ಞಾನಿಕ ಅಧ್ಯಯನಗಳಲ್ಲಿ ಸಾಬೀತಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.