ನವದೆಹಲಿ: ಹೀಟ್‌ವೇವ್ ಎಂದರೆ ಅಸಹಜವಾಗಿರು ತಾಪಮಾನದ ಅವಧಿಯಾಗಿದೆ. ಭಾರತದ ವಾಯುವ್ಯ ಭಾಗಗಳಲ್ಲಿ ಬೇಸಿಗೆಯಲ್ಲಿ ಸಂಭವಿಸುವ ಸಾಮಾನ್ಯ ಗರಿಷ್ಠ ತಾಪಮಾನಕ್ಕಿಂತ ಹೆಚ್ಚಿನ ತಾಪಮಾನವನ್ನು ಬಿಸಿಗಾಳಿ ಎಂದು ಕರೆಯಲಾಗುತ್ತದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. ಬಿಸಿಗಾಳಿ ಸಾಮಾನ್ಯವಾಗಿ ಮಾರ್ಚ್ ಮತ್ತು ಜೂನ್ ನಡುವೆ ಸಂಭವಿಸುತ್ತವೆ, ಮತ್ತು ಕೆಲವು ಅಪರೂಪದ ಸಂದರ್ಭಗಳಲ್ಲಿ ಜುಲೈವರೆಗೂ ಇದರ ಪ್ರಭಾವ ಇರುತ್ತೆ.
ಮಹಾರಾಷ್ಟ್ರ, ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಬಿಸಿಗಾಳಿಯಿಂದಾಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಉತ್ತರದ ರಾಜ್ಯಗಳಾದ ಉತ್ತರ ಪ್ರದೇಶ, ಹರಿಯಾಣ, ಪಂಜಾಬ್ ಮತ್ತು ರಾಜಸ್ಥಾನದ ಮೇಲೆ ಸಾಮಾನ್ಯವಾಗಿ ಮೇ ಮತ್ತು ಜೂನ್ ತಿಂಗಳಲ್ಲಿ ಬಿಸಿಗಾಳಿ ಪರಿಣಾಮ ಬೀರುತ್ತವೆ.
ಈ ಬಗ್ಗೆ ಡಾ.ಶರ್ವರಿ ದಬಾಡೆ ದುವಾ ಮಾತನಾಡಿ, "ತಾಪಮಾನ ಮತ್ತು ಪರಿಸರ ಬದಲಾವಣೆಗಳಲ್ಲಿ ಸ್ಥಿರವಾದ ಏರಿಕೆಯು ಕಳೆದ ಕೆಲವು ವರ್ಷಗಳಿಂದ ತುಂಬಾ ಬಿಸಿ ಮತ್ತು ಆರ್ದ್ರ ಬೇಸಿಗೆಗೆ ಕಾರಣವಾಗಿದೆ. ಬೆವರಿನ ರೂಪದಲ್ಲಿ ಶಾಖವನ್ನು ವಿಸರ್ಜಿಸುವ ಮೂಲಕ ತಾಪಮಾನ ಕಾಪಾಡಿಕೊಳ್ಳುವ ಸಾಮರ್ಥ್ಯವನ್ನು ನಮ್ಮ ದೇಹ ಹೊಂದಿದೆ. ಆದರೂ, ವಿಪರೀತ ಶಾಖ ಮತ್ತು ತೇವಾಂಶವು ಈ ಹೊಂದಾಣಿಕೆಯ ಮೇಲೆ ಪರಿಣಾಮ ಬೀರುತ್ತದೆ" ಎಂದು ಹೇಳಿದರು.
"ಅಧಿಕ ರಕ್ತದೊತ್ತಡ, ಹೃದಯ ವೈಫಲ್ಯ, ಬೊಜ್ಜು, ಮಧುಮೇಹ ಮತ್ತು ಮೂತ್ರಪಿಂಡದ ಕಾಯಿಲೆ ಹೊಂದಿರುವವರಲ್ಲಿ ಶಾಖದಿಂದ ಪಾರ್ಶ್ವವಾಯುವಿಗೆ ಕಾರಣವಾಗಬಹುದು. ಮಕ್ಕಳು ಮತ್ತು ವೃದ್ಧರು ಹೆಚ್ಚು ಪರಿಣಾಮ ಬೀರುತ್ತಾರೆ. ಪ್ರಜ್ಞೆ ಕಳೆದುಕೊಳ್ಳುವುದು, ಎದೆ ನೋವು, ಮೂತ್ರವಿಸರ್ಜನೆ ಕಡಿಮೆಯಾಗುವುದು ಮತ್ತು ತೀವ್ರ ಆಯಾಸ ಉಂಟಾದರೆ ತಕ್ಷಣ ಆಸ್ಪತ್ರೆಗೆ ತರಳಬೇಕು" ಎಂದು ಅವರು ಸಲಹೆ ನೀಡಿದ್ದಾರೆ.
ಲೋಕ ನಾಯಕ ಜೈ ಪ್ರಕಾಶ್ ನಾರಾಯಣ್ ಆಸ್ಪತ್ರೆಯ ನಿರ್ದೇಶಕ ಡಾ.ಸುರೇಶ್ ಕುಮಾರ್ ಮಾತನಾಡಿ, "ಇತ್ತೀಚಿನ ದಿನಗಳಲ್ಲಿ ತಾಪಮಾನವು 40 ಡಿಗ್ರಿಗಳನ್ನು ತಲುಪುತ್ತದೆ. ದೇಹದಲ್ಲಿ ನೀರಿನ ಕೊರತೆ ಇದ್ದರೆ, ಅದನ್ನು ನಿರ್ಜಲೀಕರಣ ಎಂದು ಕರೆಯಲಾಗುತ್ತದೆ. ಅಂತಹ ಸಂದರ್ಭದಲ್ಲಿ ಎಳನೀರು, ಹಣ್ಣಿನ ರಸ, ಲಸ್ಸಿ ಮತ್ತು ಹೆಚ್ಚಾಗಿ ನೀರು ಕುಡಿಯಬೇಕು. ದೇಹದಲ್ಲಿ ನೀರಿನ ಕೊರತೆಯಿಂದಾಗಿ, ಬೆವರು ನಿಲ್ಲುತ್ತದೆ ಮತ್ತು ದೇಹದಲ್ಲಿ ಸೋಡಿಯಂ, ಪೊಟ್ಯಾಸಿಯಮ್ ಇತ್ಯಾದಿಗಳ ಕೊರತೆ ಉಂಟಾಗುತ್ತದೆ, ಇದು ಮೆದುಳು ಮತ್ತು ಹೃದಯದ ಮೇಲೆ ಪರಿಣಾಮ ಬೀರುತ್ತದೆ" ಎಂದು ತಿಳಿಸಿದರು.
ನೀವು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಇಂತಿವೆ:
- ಮಧ್ಯಾಹ್ನ 12.00 ರಿಂದ 3.00 ರ ನಡುವೆ ಹೊರಗೆ ಹೋಗುವುದನ್ನು ಕಡಿಮೆ ಮಾಡಬೇಕು
- ಬಾಯಾರಿಕೆಯಾಗದಿದ್ದರೂ ಸಹ, ಸಾಧ್ಯವಾದಷ್ಟು ಆಗಾಗ್ಗೆ ನೀರು ಕುಡಿಯಬೇಕು.
- ಹಗುರವಾದ, ತಿಳಿ ಬಣ್ಣದ, ಸಡಿಲವಾದ ಮತ್ತು ರಂಧ್ರಯುಕ್ತ ಹತ್ತಿ ಬಟ್ಟೆಗಳನ್ನು ಧರಿಸಿ. ಬಿಸಿಲಿನಲ್ಲಿ ಹೊರಗೆ ಹೋಗುವಾಗ ರಕ್ಷಣಾತ್ಮಕ ಕನ್ನಡಕಗಳು, ಛತ್ರಿ / ಟೋಪಿ, ಬೂಟುಗಳು ಅಥವಾ ಚಪ್ಪಲಿಗಳನ್ನು ಬಳಸಬೇಕು.
- ಹೊರಗಿನ ತಾಪಮಾನವು ಹೆಚ್ಚಿದ್ದಾಗ ಶ್ರಮದಾಯಕ ಚಟುವಟಿಕೆಗಳನ್ನು ಮಾಡಬಾರದು.
- ಪ್ರಯಾಣ ಮಾಡುವಾಗ, ನಿಮ್ಮೊಂದಿಗೆ ನೀರಿನ ಬಾಟಲಿಯನ್ನು ತೆಗೆದುಕೊಂಡು ಹೋಗಬೇಕು.
- ದೇಹವನ್ನು ನಿರ್ಜಲೀಕರಣಗೊಳಿಸುವ ಆಲ್ಕೋಹಾಲ್, ಚಹಾ, ಕಾಫಿ ಮತ್ತು ಕಾರ್ಬೊನೇಟೆಡ್ ತಂಪು ಪಾನೀಯಗಳನ್ನು ಸೇವಿಸಬಾರದು.
- ಹೆಚ್ಚಿನ ಪ್ರೋಟೀನ್ ಹೊಂದಿರುವ ಆಹಾರವನ್ನು ಮತ್ತು ಹಳಸಿದ ಆಹಾರವನ್ನು ತಿನ್ನಬಾರದು.
- ಮಕ್ಕಳು ಅಥವಾ ಸಾಕುಪ್ರಾಣಿಗಳನ್ನು ಪಾರ್ಕ್ ಮಾಡಿದ ವಾಹನಗಳಲ್ಲಿ ಬಿಡಬಾರದು.
- ನಿಮಗೆ ಮೂರ್ಛೆ ಅಥವಾ ಅಸ್ವಸ್ಥರಾದರೇ ತಕ್ಷಣ ವೈದ್ಯರನ್ನು ಭೇಟಿ ಮಾಡಬೇಕು.
- ORS, ಮನೆಯಲ್ಲಿ ತಯಾರಿಸಿದ ಪಾನೀಯಗಳಾದ ಲಸ್ಸಿ, ತೋರಣಿ (ಅಕ್ಕಿ ನೀರು), ನಿಂಬೆ ರಸ, ಮಜ್ಜಿಗೆಯನ್ನು ಹೆಚ್ಚು ಸೇವಿಸಬೇಕು ಇದು ದೇಹವನ್ನು ಪುನರ್ಜಲೀಕರಣಗೊಳಿಸಲು ಸಹಾಯ ಮಾಡುತ್ತದೆ.
- ಪ್ರಾಣಿಗಳನ್ನು ನೆರಳಿನಲ್ಲಿ ಇರಿಸಿ ಮತ್ತು ಅವುಗಳಿಗೆ ಕುಡಿಯಲು ಸಾಕಷ್ಟು ನೀರನ್ನು ಕೊಡಬೇಕು.
- ನಿಮ್ಮ ಮನೆಯನ್ನು ತಂಪಾಗಿರಿಸಿಕೊಳ್ಳಲು ಪರದೆಗಳು, ಶಟರ್ ಅಥವಾ ಸನ್ ಶೇಡ್ ಗಳನ್ನು ಬಳಸಿ, ರಾತ್ರಿಯಲ್ಲಿ ಕಿಟಕಿಗಳನ್ನು ತೆರೆಯಬೇಕು.
- ಆಗಾಗ್ಗೆ ತಣ್ಣೀರಿನಲ್ಲಿ ಸ್ನಾನ ಮಾಡಬೇಕು.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ವಿಪರೀತ ತಾಪಮಾನ ಮತ್ತು ಪರಿಣಾಮವಾಗಿ ವಾತಾವರಣದ ಪರಿಸ್ಥಿತಿಗಳು ಜನರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ. ಏಕೆಂದರೆ ಅವು ಶರೀರದಲ್ಲಿ ಒತ್ತಡವನ್ನು ಉಂಟುಮಾಡುತ್ತವೆ ಮತ್ತು ಕೆಲವೊಮ್ಮೆ ಸಾವಿಗೂ ಕಾರಣವಾಗುತ್ತವೆ. ನಿರ್ಜಲೀಕರಣ, ಬಳಲಿಕೆ ಮತ್ತು ಹೀಟ್ ಸ್ಟ್ರೋಕ್ ಬಿಸಿಗಾಳಿಯ ಆರೋಗ್ಯದ ಪರಿಣಾಮಗಳಾಗಿವೆ.
ರೋಗಲಕ್ಷಣಗಳು:
- ಹೀಟ್ ಕ್ರ್ಯಾಪ್: ಎಡೆರ್ನಾ (ಊತ) ಮತ್ತು ಸಿಂಕೋಪ್ (ಮೂರ್ಛೆ ಹೋಗುವುದು) ಕಡಿಮೆ ಜ್ವರವು ಸಾಮಾನ್ಯವಾಗಿ 39 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಉಂಟಾಗುತ್ತದೆ.
- ತಾಪಮಾನದ ಬಳಲಿಕೆ: ಆಯಾಸ, ತಲೆತಿರುಗುವಿಕೆ, ತಲೆನೋವು, ವಾಕರಿಕೆ, ವಾಂತಿ, ಸ್ನಾಯು ಸೆಳೆತ ಮತ್ತು ಬೆವರುವಿಕೆಯಾಗಿದೆ.
- ಹೀಟ್ ಸ್ಟ್ರೋಕ್: ದೇಹದ ತಾಪಮಾನವು 40 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚಾದರೆ ಬುದ್ಧಿಭ್ರಮಣೆ, ಸೆಳೆತ ಅಥವಾ ಕೋಮಾ ಹೋಗುವ ಸಾಧ್ಯತೆ ಇರುತ್ತದೆ. ಇದು ಮಾರಣಾಂತಿಕ ಸ್ಥಿತಿಯಾಗಿದೆ.
ಇದನ್ನೂ ಓದಿ:ಬೇಸಿಗೆಯ ಡಯಟ್ನಲ್ಲಿ ಈ ಆಹಾರ ಸೇವಿಸಿ ತಂಪಾಗಿರಿ