ವಾಷಿಂಗ್ಟನ್(ಅಮೆರಿಕ): ನಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಳ್ಳುವುದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಅರಿಜೋನ್ ಯುನಿವರ್ಸಿಟಿ ದುಃಖದ ಕುರಿತು ತನಿಖೆ ನಡೆಸಿದೆ. ದುಃಖಗಳು ಮಾನಸಿಕ ಕಾರ್ಯಚಟುವಟಿಕೆ ಮೇಲೆ ಪರಿಣಾಮ ಬೀರುವ ಜೊತೆಗೆ ರಕ್ತದೊತ್ತಡಕ್ಕೂ ಕಾರಣವಾಗುತ್ತದೆ ಎಂದು ಫಲಿತಾಂಶ ತಿಳಿಸಿದೆ.
ಇದೇ ಹೃದಯದ ಸಮಸ್ಯೆ ಅಪಾಯಕ್ಕೆ ಕಾರಣವಾಗುತ್ತದೆ ಎಂಬುದು ಫಲಿತಾಂಶವಾಗಿದೆ. ಸೈಕೋಸೊಮ್ಯಾಟಿಕ್ ಮೆಡಿಸಿನ್ ಜರ್ನಲ್ನಲ್ಲಿ ಈ ಅಧ್ಯಯನ ಪ್ರಕಟಿಸಲಾಗಿದೆ. ರಕ್ತದೊತ್ತಡದ ತೀವ್ರತೆ ಮತ್ತು ಎತ್ತರದ ಸಿಸ್ಟೊಲಿಕ್ ರಕ್ತದೊತ್ತಡ ಪ್ರತಿಕ್ರಿಯೆಯ ನಡುವಿನ ಸಂಬಂಧವನ್ನು ತೋರಿಸುತ್ತದೆ.
ಪ್ರೀತಿಪಾತ್ರರ ಸಾವಿನ ಸುದ್ದಿಗಳು ಮನಸಿನ ಗೆ ಆಘಾತ ಮೂಡಿಸುತ್ತದೆ. ಇದುವೇ ಈ ಅಧ್ಯಯನಕ್ಕೆ ಪ್ರಮುಖ ಪ್ರೇರಣೆ ಆಗಿದೆ ಎಂದಿದ್ದಾರೆ ಅಧ್ಯಯನ ಹಿರಿಯ ಲೇಖಕ ಮೇರಿ - ಫ್ರಾನ್ಸಸ್ ಒ ಕೊನೊರ್ ತಿಳಿಸಿದ್ದಾರೆ. ಪ್ರೀತಿಪಾತ್ರರ ಸಾವಿನ ನಂತರ ಸಾವಿನ ಅಪಾಯ ಹೆಚ್ಚುವುದು ರೋಗಶಾಸ್ತ್ರದ ಅಧ್ಯಯನದ ದಾಖಲೆಯಾಗಿದೆ. ಇದರಲ್ಲಿ ರಕ್ತದೊತ್ತಡವೂ ಹೆಚ್ಚಿನ ಪಾತ್ರವನ್ನು ಹೊಂದಿರುವುದರ ಸಂಬಂಧ ಒ ಕೊನೂರ್ ಮತ್ತು ಆತನ ಸಹೋದ್ಯೋಗಿಗಳು ಅಧ್ಯಯನ ನಡೆಸಿದ್ದಾರೆ. ಈ ಅಧ್ಯಯನಕ್ಕೆ ಕಳೆದ ವರ್ಷ ತಮ್ಮ ಆಪ್ತರನ್ನು ಕಳೆದುಕೊಂಡ ಶೇ 59ರಷ್ಟು ಭಾಗಿದಾರರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ.
ಪ್ರೀತಿ ಪಾತ್ರರನ್ನು ಕಳೆದುಕೊಂಡ ವರ್ಷದೊಳಗೆ ಉಂಟಾಗುವ ದುಃಖದಿಂದ ಹ್ರದ್ರೋಗದ ಮೇಲೆ ಯಾವ ರೀತಿ ಪರಿಣಾಮವನ್ನು ನಾವು ಗಮನಿಸಲಾಗಿದೆ ಎಂದು ಅಧ್ಯಯನ ಪ್ರಮುಖ ಲೇಖಕ ರೊಮನ್ ಪಲಿಟ್ಸ್ಕೆ ತಿಳಿಸಿದ್ದಾರೆ. ದುಃಖಿತರನ್ನು ಸಂದರ್ಶನಕ್ಕೆ ಒಳಪಡಿಸಲಾಗಿದೆ. ಜೊತೆಗೆ ದುಃಖ ಮರುಸ್ಥಾಪನೆ ಎಂದು ಕರೆಯುವ ಪ್ರಕ್ರಿಯೆಯ ಮೂಲಕ ಪ್ರತ್ಯೇಕತೆ ಮತ್ತು ಬಾಂಧವ್ಯದ ಭಾವನೆಗಳ ಮೇಲೆ ಕೇಂದ್ರೀಕರಿಸಲು ಕೇಳಲಾಯಿತು.
ದುಃಖವನ್ನು ಅವರು ಮರುಕಳಿಸಿದ ಬಳಿಕ ಭಾಗಿದಾರರ ಸಿಸ್ಟೊಲಿಕ್ ರಕ್ತದೊತ್ತಡವನ್ನು ಗಮನಿಸಲಾಗಿದೆ. ಇದು ಹೃದಯ ಬಡಿಯುವಾಗ ಹೃತ್ಕರ್ಣಗಳನ್ನು ಹೆಚ್ಚಿಸುತ್ತದೆ. ಈ ಬೇಸ್ಲೈನ್ ಮಟ್ಟ, ಸಿಸ್ಟೊಲಿಕ್ ರಕ್ತದೊತ್ತಡದಲ್ಲಿ 21.1 ಹೆಚ್ಚಳ ಕಂಡು ಬಂದಿದೆ. ಇದು ಸುಧಾರಿತ ವ್ಯಾಯಾಮಕ್ಕಿಂತ ಹೆಚ್ಚಿನ ಮಟ್ಟದಲ್ಲಿದೆ ಎಂದು ಅಂದಾಜಿಸಲಾಗಿದೆ.
ಅಧ್ಯಯನದಲ್ಲಿ ಭಾಗಿಯಾದ 59 ಜನರು ತಮ್ಮ ದುಃಖ ಮರುಕಳಿಸುವಾಗ ಹೆಚ್ಚಿನ ಮಟ್ಟದ ದುಃಖದ ಲಕ್ಷಣಗಳನ್ನು ಅನುಭವಿಸಿದ್ದು, ರಕ್ತದೊತ್ತಡ ಹೆಚ್ಚಳಕ್ಕೆ ಕಾರಣ ಎಂದು ಹೇಳಿದ್ದಾರೆ. ಇದರ ಅರ್ಥ ಇದು ಪ್ರೀತಿಪಾತ್ರರ ಸಾವು ಹೃದಯ ಮಾತ್ರವಲ್ಲ, ಭಾವನಾತ್ಮಕ ಪ್ರತಿಕ್ರಿಯೆಯನ್ನು ಹೊಂದಿದ್ದು, ಹೃದಯದ ಮೇಲೆ ಪರಿಣಾಮ ಬೀರುತ್ತದೆ ಎಂದಿದ್ದಾರೆ.
ಈ ಅಧ್ಯಯನವೂ ವೈದ್ಯರಿಗೆ ಸಹಾಯವಾಗುತ್ತದೆ. ಪ್ರೀತಿ ಪಾತ್ರರ ಸಾವಿನ ನಂತರ ಜನರು ಹೆಚ್ಚಿನ ರಕ್ತದೊತ್ತಡ ಮತ್ತು ಇತರ ಹೃದಯ ಸಂಬಂಧಿ ಸಮಸ್ಯೆ ಅಪಾಯವನ್ನು ಹೊಂದುತ್ತಾರೆ ಎಂದು ಅಧ್ಯಯನದಲ್ಲಿ ತೋರಿಸಿದೆ. ದುಃಖಿತರಿಗೆ ನಿಯಮಿತ ವೈದ್ಯಕೀಯ ತಪಾಸಣೆ ಜೊತೆಗೆ ಅವರನ್ನು ಪ್ರೋತ್ಸಾಹಿಸಲು ಮನಶಾಸ್ತ್ರಜ್ಞ ಮತ್ತು ಥೆರಪಿಸ್ಟ್ ಪಾತ್ರ ಮುಖ್ಯವಾಗುತ್ತದೆ. ನಮ್ಮ ಪ್ರೀತಿಪಾತ್ರರ ಸಾವಿನ ಬಳಿಕ ನಮ್ಮ ಆರೋಗ್ಯವನ್ನು ನಾವು ನಿರ್ಲಕ್ಷ್ಯಿಸುತ್ತೇವೆ ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ.
ಇದನ್ನೂ ಓದಿ: ಜಗತ್ತಿನಾದ್ಯಂತ ಮಾನಸಿಕ, ದೈಹಿಕ, ಭಾವನಾತ್ಮಕ ನಿಂದನೆಯಿಂದ ಮಕ್ಕಳನ್ನು ರಕ್ಷಿಸಬೇಕಿದೆ!