ETV Bharat / sukhibhava

ಸ್ಮಾರ್ಟ್​ವಾಚ್​ಗಳಿಂದಲೂ ಹೃದಯ ವೈಫಲ್ಯದ ಅಪಾಯ ಪತ್ತೆ ಸಾಧ್ಯತೆ: ಅಧ್ಯಯನ - ಅನಿಯಮಿತ ಹೃದಯ ಬಡಿತದ ಅಭಿವೃದ್ಧಿ

ಧರಿಸಬಹುದಾದ ಸಾಧನಗಳ ಸೆನ್ಸಾರ್​ಗಳು ಚರ್ಮಕ್ಕೆ ಅಂಟಿಕೊಂಡಿದ್ದು, ಇವು ಹೆಚ್ಚಿನ ಬಡಿತವನ್ನು ದಾಖಲಿಸಿದಾಗ ಭವಿಷ್ಯದ ಅಪಾಯವನ್ನು ಪತ್ತೆ ಮಾಡಬಹುದು ಎಂದು ಅಧ್ಯಯನ ತಿಳಿಸಿದೆ.

Heart attack risk detected by smartwatches too; Study

author img

By

Published : May 11, 2023, 12:30 PM IST

ವಾಷಿಂಗ್ಟನ್​​: ಸ್ಮಾರ್ಟ್​​ವಾಚ್​ನಂತಹ ಧರಿಸಬಹುದಾದ ಸಾಧನಗಳಿಂದ ಹೃದಯ ವೈಫಲ್ಯ ಮತ್ತು ಅನಿಯಮಿತ ಹೃದಯ ಬಡಿತದ ಅಭಿವೃದ್ಧಿ ಅಪಾಯವನ್ನು ನಂತರದ ಜೀವನದಲ್ಲಿ ಪತ್ತೆ ಮಾಡಬಹುದು ಎಂದು ಹೊಸ ಅಧ್ಯಯನ ತಿಳಿಸಿದೆ. ಯುರೋಪಿಯನ್​ ಹಾರ್ಟ್​ ಜರ್ನಲ್​ನಲ್ಲಿ ಈ ಕುರಿತ ಅಧ್ಯಯನ ಪ್ರಕಟವಾಗಿದೆ. ಈ ಸಂಬಂಧ 83 ಸಾವಿರ ಜನರ ಡಿಜಿಟಲ್ ಹೆಲ್ತ್​​ ಪರೀಕ್ಷೆ ನಡೆಸಲಾಗಿದೆ. 15 ನಿಮಿಷದ ಇಸಿಜಿ ಪರೀಕ್ಷೆಗೆ ಒಳಗಾದ ಭಾಗಿದಾರರ ಸ್ಮಾರ್ಟ್​​ಫೋನ್​ ಮತ್ತು ಮೊಬೈಲ್​ ಸಾಧನಗಳಿಗೆ ಹೋಲಿಕೆ ಮಾಡಿ ಅಧ್ಯಯನ ನಡೆಸಲಾಗಿದೆ.

ಇಸಿಜಿ ದಾಖಲೆಯಲ್ಲಿ ಹೆಚ್ಚುವರಿ ಹೃದಯ ಬಡಿತವನ್ನು ಸಂಶೋಧಕರು ಪತ್ತೆ ಮಾಡಿದ್ದು, ಇದು ಹೃದಯ ವೈಪಲ್ಯ ಮತ್ತು ಅನಿಯಮಿತ ಹೃದಯ ಬಡಿತದೊಂದಿಗೆ ಸಂಬಂಧ ಹೊಂದಿದೆ. ಹೆಚ್ಚಿನ ಹೃದಯ ಬಡಿತ ಹೊಂದಿರುವವರ ಕಿರು ದಾಖಲಾತಿಯು ಮುಂದಿನ 10 ವರ್ಷದಲ್ಲಿ ಅವರಲ್ಲಿ ಹೃದಯ ವೈಫಲ್ಯ ಅಥವಾ ಅನಿಯಮಿತ ಹೃದಯ ಬಡಿತ ಸಮಸ್ಯೆ ಹೊಂದುವ ಸಾಧ್ಯತೆ ಬಗ್ಗೆ ತಿಳಿಸುತ್ತದೆ. 50 ರಿಂದ 70 ವರ್ಷದವರ ಇಸಿಜಿ ದಾಖಲಾಗಿ ವಿಶ್ಲೇಷಿಸಿ ಈ ಅಧ್ಯಯನ ನಡೆಸಲಾಗಿದೆ. ಈ ವೇಳೆ ಅವರಿಗೆ ಯಾವುದೇ ಹೃದಯ ಸಂಬಂಧಿ ಸಮಸ್ಯೆ ಕಂಡುಬಂದಿಲ್ಲ.

ಹೃದಯ ವೈಫಲ್ಯ: ಹೃದಯಕ್ಕೆ ಸರಿಯಾಗಿ ಪಂಪ್​ ಮಾಡದಿದ್ದಾಗ ಹೃದಯ ವೈಫಲ್ಯಗೊಳ್ಳುತ್ತದೆ. ಇದಕ್ಕೆ ಪದೇ ಪದೇ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಈ ಹೃದಯ ಬಡಿತ ಹೆಚ್ಚಾದಾಗ ತಲೆ ಸುತ್ತುವಿಕೆ, ಉಸಿರಾಟ ಸಮಸ್ಯೆ, ಆಯಾಸಗಳು ಕಾಣಿಸಿಕೊಳ್ಳುವುದರ ಜೊತೆಗೆ ಇದು ಪಾರ್ಶ್ವವಾಯುವಿನ ಅಪಾಯ ಕೂಡ ಹೊಂದಿದೆ.

ಈ ಸಂಬಂಧ ತಿಳಿಸಿರುವ ಪ್ರಮುಖ ಲೇಖಕರಾದ ಡಾ.ಮೆಷೆಲ್​ ಒರಿನಿ, ಇಸಿಜಿಯಿಂದ ಗ್ರಾಹಕ ದರ್ಜೆಯ ಧರಿಸಬಹುದಾದ ಸಾಧನಗಳು ಹೃದಯ ವೈಫಲ್ಯ ಸಮಸ್ಯೆಯನ್ನು ಪತ್ತೆ ಮಾಡಿ, ತಡೆಗಟ್ಟಲು ಸಹಾಯ ಮಾಡುತ್ತದೆ. ಮುಂದಿನ ಹಂತದಲ್ಲಿ ಧರಿಸಬಹುದಾದ ಸಾಧನಗಳ ಜನರನ್ಉನು ಹೇಗೆ ಪರೀಕ್ಷೆಗೆ ಒಳಪಡಿಸುವುದು ಉತ್ತಮ ಎಂಬುದಾಗಿದೆ ಎಂದಿದ್ದಾರೆ.

ತಂತ್ರಜ್ಞಾನದ ಬಳಕೆ: ಈ ರೀತಿಯ ಪರೀಕ್ಷೆಗಳನ್ನು ಕೃತಕ ಬುದ್ಧಿಮತ್ತೆ ಮತ್ತು ಇತರೆ ಕಂಪ್ಯೂಟರ್​​ ಸಾಧನಗಳ ಸಾಮರ್ಥ್ಯ ಬಳಕೆ ಮಾಡುವ ಮೂಲಕ ತಕ್ಷಣಕ್ಕೆ ಪತ್ತೆ ಮಾಡಬಹುದಾಗಿದೆ. ಇಸಿಜಿ ಹೆಚ್ಚಿನ ಅಪಾಯ ತೋರಿಸುವಂತೆ, ಇವುಗಳ ಬಳಕೆ ಮಾಡಬಹುದು. ಈ ವಿಶ್ಲೇಷಣೆಯನ್ನು ಹೆಚ್ಚು ನಿಖರವಾಗಿ ಬಳಕೆ ಮಾಡುವ ಮೂಲಕ ಜನರ ಅಪಾಯ ಊಹಿಸಬಹುದು. ಈ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡಬಹುದು ಎಂದಿದ್ದಾರೆ.

ಈ ಕುರಿತು ತಿಳಿಸಿರುವ ಹಿರಿಯ ಲೇಖಕರಾದ ಪ್ರೊ.ಡಾ.ಲ್ಯಾಮ್ಬೀಸ್​, ಹೃದಯ ವೈಪಲ್ಯ ಮತ್ತು ಅನಿಮಯಿತ ಹೃದಯ ಬಡಿತವನ್ನು ಆರಂಭಿಕ ಹಂತದಲ್ಲಿ ಪತ್ತೆ ಮಾಡುವುದರಿಂದ ಹೆಚ್ಚಿನ ಅಪಾಯ ಹೊಂದಿರುವ ಪ್ರಕರಣದಲ್ಲಿ ಸಮಸ್ಯೆ ತಡೆಯುವುದರ ಜೊತೆಗೆ ಅವರಿಗೆ ಬೇಗನೇ ಚಿಕಿತ್ಸೆಯನ್ನು ಆರಂಭಿಸಬಹುದು. ಅಲ್ಲದೇ, ಸುಧಾರಿತ ವ್ಯಾಯಾಮ ಮತ್ತು ಡಯಟ್​ನ ಜೀವನ ಶೈಲಿಯ ಅಭ್ಯಾಸದ ಮಹತ್ವವನ್ನು ತಿಳಿಸಲು ಸಾಧ್ಯ ಎಂದಿದ್ದಾರೆ.

ಫಲಿತಾಂಶ: ಇಸಿಜಿಯ ಸೆನ್ಸಾರ್​ ಚರ್ಮಕ್ಕೆ ಅಂಟಿಕೊಂಡಾಗ ಅದು ಹೃದಯದ ಪ್ರತಿ ಬಡಿತದಲ್ಲಿನ ಎಲೆಕ್ಟ್ರಾನಿಕ್​ ಸಿಗ್ನಲ್​ ಪತ್ತೆ ಮಾಡುತ್ತದೆ. ಕ್ಲಿನಿಕ್​ ಪರೀಕ್ಷೆಯಲ್ಲಿ ಕನಿಷ್ಟ 10 ಸೆನ್ಸಾರ್​ಗಳನ್ನು ನಮ್ಮ ದೇಹಕ್ಕೆ ಅಳವಡಿಸಲಾಗುತ್ತದೆ. ಈ ಮೂಲಕ ವೈದ್ಯರು ಸಮಸ್ಯೆಗಳ ಸುಳಿವು ಪತ್ತೆ ಮಾಡುತ್ತಾರೆ. ಗ್ರಾಹಕ ಶ್ರೇಣಿಯ ಧರಿಸಬಹುದಾದ ಸಾಧನಗಳಲ್ಲಿನ ಎರಡು ಸೆನ್ಸಾರ್​ಗಳನ್ನು ಅಳವಡಿಕೆ ಮಾಡಲಾಗಿರುತ್ತದೆ. ಇದು ಏಕ ಸಾಧನ ಕಡಿಮೆ ನಿಖರವಾಗಿಯೂ ಫಲಿತಾಂಶ ತೋರಬಹುದು.

ಹೊಸ ಪತ್ರಿಕೆಗೆ ಸಂಶೋಧಕರ ತಂಡ, ಮೆಷಿನ್​ ಲರ್ನಿಂಗ್​ ಮತ್ತು ಆಟೋಮೆಟೆಡ್​ ಕಂಪ್ಯೂಟರ್​ ಟೂಲ್​ಗಳನ್ನು ಹೆಚ್ಚಿನ ಹೃದಯ ಬಡಿತ ದಾಖಲಾತಿಗೆ ಪತ್ತೆ ಮಾಡಿದ್ದಾರೆ. ಈ ಹೆಚ್ಚಿನ ಬಡಿತದ ಪರೀಕ್ಷೆ ನಡೆಸಿದೆ. ಸಂಶೋಧಕರ ತಂಡ ಬ್ರಿಟನ್​ನ 54,016 ಭಾಗಿದಾರರ ಆರೋಗ್ಯವನ್ನು ಸರಾಸರಿ 11.5 ವರ್ಷ ಅವರ ಇಸಿಜಿ ಬಳಿಕ ಪತ್ತೆ ಮಾಡಿದೆ. ಎರಡನೇ ತಂಡದ 29,324 ಮಂದು ಭಾಗಿದಾರರನ್ನು 3.5 ವರ್ಷ ಟ್ರಾಕ್​ ಮಾಡಿದೆ.

ಅವರ ವಯಸ್ಸು ಮತ್ತು ಔಷಧಿ ಬಳಕೆಯ ಸಾಮರ್ಥ್ಯದ ಅಂಶದ ಮೇಲೆ ಹೃದಯ ಕೆಳಗಿನ ಕವಾಟದಲ್ಲಿ ಹೆಚ್ಚಿನ ಬಡಿತವೂ ಭವಿಷ್ಯದಲ್ಲಿ ಹೃದಯ ವೈಫಲ್ಯದೊಂದಿಗೆ ಸಂಬಂಧ ಹೊಂದಿದೆ ಎಂದಿದ್ದಾರೆ. ಮೇಲಿನ ಕವಾಟದ ಹೆಚ್ಚಿನ ಬಡುತವೂ ಹೃತ್ಕರ್ಣದ ಕಂಪನವನ್ನು ಹೊಂದಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಹೃದಯ ಬಡಿತ ನಿಂತರೂ ಪ್ರಜ್ಞೆ ಜಾಗೃತಿ ಕುರಿತು ಹೀಗೊಂದು ಅಧ್ಯಯನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.