ETV Bharat / sukhibhava

ಆರೋಗ್ಯಯುತ ಕೂದಲಿಗೆ ಸರಿಯಾದ ಕಾಳಜಿ ಜೊತೆಗೆ ಪೋಷಕಾಂಶವೂ ಅಗತ್ಯ

ಕೂದಲಿನ ಆರೈಕೆಯಲ್ಲಿ ಮಾಡುವ ತಪ್ಪುಗಳಿಂದಾಗಿ ಅದರ ಸೌಂದರ್ಯ ಹಾಳಾಗುತ್ತದೆ. ಇದರಿಂದ ಅದಕ್ಕೆ ಸರಿಯಾದ ಕಾಳಜಿ ಅವಶ್ಯಕವಾಗಿದೆ

author img

By

Published : Mar 1, 2023, 12:55 PM IST

healthy-hair-requires-proper-care-and-nutrition

ಹೈದ್ರಾಬಾದ್​: ಕೂದಲುಗಳು ಸದೃಢವಾಗಿ, ಸುಂದರವಾಗಿ ಇರಬೇಕು ಎಂಬುದು ಎಲ್ಲರ ಆಶಯ. ಅದರಲ್ಲೂ ಈ ಬಗ್ಗೆ ಮಹಿಳೆಯರಿಗೆ ಹೆಚ್ಚಿನ ಕಾಳಜಿ. ಆದರೆ, ಕೆಲವು ವೇಳೆ ಕೂದಲಿ ಆರೈಕೆಗಾಗಿ ಎಂದು ಬಳಕೆ ಮಾಡುವ ರಾಸಾಯನಿಕ ಉತ್ಪನ್ನಗಳು ಕೂದಲಿನ ಬುಡವನ್ನು ಮತ್ತಷ್ಟು ದುರ್ಬಲವನ್ನಾಗಿ ಮಾಡುತ್ತದೆ. ಸರಿಯಾದ ಕಾಳಜಿ ವಹಿಸದಿರುವುದು ಮತ್ತಿತ್ತರ ಕಾರಣಗಳಿಂದಲೂ ಕೂದಲ ಮತ್ತಷ್ಟು ದುರ್ಬಲವಾಗುತ್ತದೆ. ಕೂದಲಿನ ಹಾನಿಗೆ ಮತ್ತೊಂದು ಪ್ರಮುಖ ಕಾರಣ ಎಂದರೆ ಬುಡದಲ್ಲಿನ ಅಧಿಕ ಎಣ್ಣೆ ಅಂಶ ಅಥವಾ ಶುಷ್ಕತೆ ಸಮಸ್ಯೆ ಆಗಿದೆ.

ಕೂದಲಿನ ಹಾನಿಗೆ ಕಾರಣವಾದ ಅಂಶ: ಕೂದಲಿನ ಅಂದ ಹಾಳಾಗಲು ಬುಡದ ಶುಷ್ಕತೆ ಜೊತೆಗೆ ಅಧಿಕವಾಗಿ ನೈಸರ್ಗಿಕ ಎಣ್ಣೆ ಬಳಕೆ ಸೇರಿದಂತೆ ಅನೇಕ ಪ್ರಮುಖ ಕಾರಣಗಳಿವೆ ಎಂದು ಡರ್ಮಾಟಾಲಾಜಿಸ್ಟ್​ ಡಾ. ವಿಪಿನ್​ ಸಚ್​ದೇವ್​ ತಿಳಿಸುತ್ತಾರೆ. ನೀರು ಸೇರಿದಂತೆ ಪೋಷಕಾಂಶದ ಕೊರತೆಗಳು ಕೂಡ ಕೂದಲಿನಲ್ಲಿ ಆರೈಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಮೇಥೋಗ್ರಂಥಿಗಳ ಸ್ರವಿಸುವಿಕೆ ಕಡಿಮೆ ಅಥವಾ ಹೆಚ್ಚಾಗುವಿಕೆ. ಹವಾಮಾನ ಅಥವಾ ಅಧಿಕ ಮಾಲಿನ್ಯ, ಹಾನಿಕಾರಕ ಸೂರ್ಯನ ಕಿರಣಗಳು ಕೂಡ ಪರಿಣಾಮ ಬೀರುತ್ತದೆ. ಕೂದಲಿನ ಶುಚಿತ್ವ ಮತ್ತು ಕಾಳಜಿಯಲ್ಲಿನ ಕೊರತೆ, ರಾಸಾಯನಿಕ ಪದಾರ್ಥಗಳ ಬಳಕೆ ಕೂಡ ಕೂದಲನ್ನು ದುರ್ಬಲಗೊಳಿಸುತ್ತದೆ.

ರಾಸಾಯನಿಕ ಪದಾರ್ಥಗಳ ಬಳಕೆ: ರಾಸಾಯನಿಕ ಶಾಂಪೂ, ಕಂಡಿಷನರ್​, ಹೇರ್​ ಕಲರ್​, ಸೆರಂ, ಜೆಲ್​ ಸ್ಪ್ರೇ ಮುಂತಾದವುಗಳ ಬಳಕೆ ಜೊತೆಗೆ ಪದೇ ಪದೇ ಕೂದಲಿಗೆ ರಾಸಾಯನಿಕ ಚಿಕಿತ್ಸೆ ಪಡೆಯುವುದರಿಂದ ಕೂದಲಿನ ಮೇಲ್ಪದರವು ಹಾನಿಯಾಗುತ್ತದೆ. ಇದರಿಂದ ಕೂದಲು ತೆಳುವಾಗಿ, ದುರ್ಬಲಗೊಂಡು ಉದುರುತ್ತದೆ. ಈ ಚಿಕಿತ್ಸೆಗಳು ಕೂದಲಿನ ಚರ್ಮಕ್ಕೆ ಕೂಡ ಹಾನಿ ಉಂಟು ಮಾಡಿ, ಶುಷ್ಕತೆ ಸೇರಿದಂತೆ ಇತರೆ ಸಮಸ್ಯೆಗೆ ಕಾರಣವಾಗುತ್ತದೆ.

ಸರಿಯಾದ ಕಾಳಜಿ ವಹಿಸದ ಕಾರಣ ಬುಡದಲ್ಲಿ ರಿಂಗ್​ವಾರ್ಮ್​, ಸ್ಜಿಮಾ, ಸೆಬೊರ್ಹೆಕ್ ಡರ್ಮಟೈಟಿಸ್, ನೆತ್ತಿಯ ಅಟೊಪಿಕ್ ಡರ್ಮಟೈಟಿಸ್, ಟಿನಿಯಾ ಕ್ಯಾಪಿಟಿಸ್ ನಂತಹ ಸಮಸ್ಯೆ ಕಾಡುತ್ತದೆ. ಜೊತೆಗೆ ಸಾಮಾನ್ಯ ಫಂಗಲ್​ ಸೋಂಕುಗಳು ಕೂಡ ಕೂದಲಿನ ಹಾನಿಗೆ ಕಾರಣವಾಗುತ್ತದೆ. ಮತ್ತೊಂದು ಕಡೆ, ದೇಹಕ್ಕೆ ಸರಿಯಾದ ಪೋಷಕಾಂಶ ಮತ್ತು ನೀರಿದ ಕೊರತೆ, ಸರಿಯಾದ ಶುಚಿತ್ವ ಮಾಡದೇ ಇರುವುದು ಕೂಡ ಇದರ ಹಾನಿಗೆ ಕಾರಣವಾಗುತ್ತದೆ.

ಪೋಷಕಾಂಶದ ಅಗತ್ಯತೆ: ಕೂದಲು ಮತ್ತು ಚರ್ಮ ಆರೋಗ್ಯಕರವಾಗಿ, ಸುಂದರವಾಗಿರಬೇಕು ಎಂದರೆ ಸರಿಯಾದ ಪೋಷಕಾಂಶಗಳನ್ನು ಸೇವಿಸುವುದು ಅವಶ್ಯ. ಎಲ್ಲಾ ಋತುಮಾನದಲ್ಲೂ ಕೂಡ ಅಗತ್ಯವಾದಷ್ಟು ನೀರನ್ನು ಸೇವಿಸುವ ಮೂಲಕ ನಿರ್ಜಲೀಕರಣ ಸಮಸ್ಯೆ ಸೇರಿದಂತೆ ಇತರೆ ಅನಾರೋಗ್ಯ ಮುಕ್ತಿ ಹಾಡಬಹುದು. ಇದರ ಹೊರತಾಗಿ ನಿಮ್ಮ ಕೂದಲಿನ ಆರೋಗ್ಯ ಕಾಪಾಡಲು ಈ ಸಲಹೆ ಪಾಲಿಸಿ.

ಅಗತ್ಯ ಪ್ರಮಾಣದ ಹಣ್ಣು, ತರಕಾರಿ, ಬೆಳೆಗಳು ಸೇವಿಸುವ ಮೂಲಕ ಪೋಷಕಾಂಶವನ್ನು ಕಾಪಾಡಬಹುದು.

ನೀರಿನ ಹೊರತಾಗಿ ಹಣ್ಣಿನ ರಸ, ಮೊಸರು, ಮಜ್ಜಿಗೆ, ಲಸ್ಸಿ ಮತ್ತು ಎಳನೀರನ್ನು ಎಲ್ಲಾ ಋತುಮಾನದಲ್ಲಿ ಸೇವಿಸಬಹುದು. ಇದು ದೇಹದಲ್ಲಿ ನೀರಿನ ಕೊರತೆ ಕಾಡದಂತೆ ಮಾಡುವುದರ ಕೊತೆಗೆ ಪೋಷಕಾಂಶ ನೀಡುತ್ತದೆ.

ಕೂದಲನ್ನು ಕಾಲ ಕಾಲಕ್ಕೆ ತಕ್ಕಂತೆ ಶುಚಿ ಮಾಡಬೇಕು. ಅಧಿಕ ಮಾಲಿನ್ಯ, ಶಾಖಗಳು ಕೂದಲಿನಲ್ಲಿ ಬೆವರು ಉತ್ಪತ್ತಿಯಾಗುವಂತೆ ಮಾಡಿ ಅದು ಕೂದಲಿನ ಬುಡದಲ್ಲಿ ಶೇಖರಣೆಯಾಗುವಂತೆ ಮಾಡುತ್ತದೆ. ಈ ಹಿನ್ನಲೆ ಕೂದಲನ್ನು ಅಗತ್ಯಕ್ಕೆ ಅನುಸಾರ ಶುಚಿಗೊಳಿಸಬೇಕು. ಈ ವೇಳೆ ಕಡಿಮೆ ರಾಸಾಯನಿಕ ಶಾಂಪೂ ಬಳಕೆ ಸೂಕ್ತ.

ಹೆಲ್ಮೆಟ್​ ಅಥವಾ ಇನ್ನಿತರೆ ಮೂಲಕ ಕೂದಲನ್ನು ಅಧಿಕ ಸಮಯ ಮುಚ್ಚಿದ್ದರೆ, ಕೆಲವು ಕಾಲ ಕೂದಲನ್ನು ಗಾಳಿಗೆ ಹಾರಿ ಬಿಡಿ. ಇದರಿಂದ ಕೂದಲಿನ ಬುಡಕ್ಕೆ ಗಾಳಿ ಸರಾಗವಾಗಿ ಸಾಗಿ, ಬೆವರು ಒಣಗಲು ಸಹಾಯ ಮಾಡುತ್ತದೆ. ಇದರಿಂದ ಕೊಳೆ ಸಂಗ್ರಹವಾಗುವುದಿಲ್ಲ.

ಕೂದಲಿಗೆ ರಾಸಾಯನಿಕ ಬಳಕೆ ಮಾಡುತ್ತಿದ್ದರೆ, ಎಷ್ಟು ಪ್ರಮಾಣದ ಬಳಕೆ ಮಾಡಲಾಗುತ್ತಿದೆ ಎಂಬುದನ್ನು ತಿಳಿದು, ಅದಕ್ಕೆ ಸಂಬಂಧಿಸಿದ ಮುನ್ನೆಚ್ಚರಿಕೆ ಬಳಸಬೇಕು.

ವಾರಕ್ಕೆ ಎರಡು ಬಾರಿ ತಲೆಗೆ ಎಣ್ಣೆ ಹಾಕಿ, ಹಗುರವಾಗಿ ಕೈಗಳಿಂದ ಮಸಾಜ್​ ಮಾಡಿ. ಇದರಿಂದ ರಕ್ತದ ಸಂಚಾರ ಸುಗುಮವಾಗಿ ಕೂದಲಿಗೆ ಅಗತ್ಯವಾದ ಮಾಶ್ಚರೈಸರ್​ ಲಭ್ಯವಾಗುತ್ತದೆ.

ಶುಷ್ಕ ಕೂದಲ ನೈಸರ್ಗಿಕವಾಗಿ ಉದುರುತ್ತದೆ. ಈ ಹಿನ್ನಲೆ ಅಧಿಕವಾಗಿ ಹೇರ್​ ಡ್ರೈಯರ್​ ಬಳಕೆ ಬೇಡ

ಕೂದಲನ್ನು ಬಿಸಿನೀರಿನ ಬದಲಾಗಿ ಬೆಚ್ಚಗಿನ ನೀರಿನಲ್ಲಿ ತೊಳೆಯುವುದರಿಂದ ಬುಡಕ್ಕೆ ಹಾನಿಯಾಗುವುದಿಲ್ಲ.

ನಿಮ್ಮ ಕೂದಲು ಯಾವ ರೀತಿಯಲ್ಲಿದೆ (ಡ್ರೈ, ಆಯಿಲ್​ ಅಥವಾ ನಾರ್ಮಲ್​) ಎಂದು ತಿಳಿದು ಅದಕ್ಕೆ ತಕ್ಕಂತೆ ಮೊಟ್ಟೆ, ಮುಲ್ತಾನಿ ಮಿಟ್ಟಿ, ಹೆನ್ನಾ, ಸೀಗೆಕಾಯಿ, ಬೇವು ಸೇರಿದಂತೆ ಇತರೆ ಹೇರ್​ ಪ್ಯಾಕ್​ ಹಾಕಬೇಕು.

ಇದನ್ನೂ ಓದಿ: ಬೇಸಿಗೆಯಲ್ಲಿ ಕಾಡುವ ಒಣ ತುಟಿ ಸಮಸ್ಯೆ; ಇಲ್ಲಿದೆ ಪರಿಹಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.