ETV Bharat / sukhibhava

ಉತ್ತಮ ಆರೋಗ್ಯಕ್ಕಾಗಿ ವಾರದ ಆಹಾರ ಕ್ರಮ ಹೇಗಿರಬೇಕು? ಇಲ್ಲಿವೆ ಟಿಪ್ಸ್​ - ಬೀನ್ಸ್ ಮತ್ತು ಮಸೂರ

ಇಡೀ ವಾರದಲ್ಲಿ ನೀವು ಎಂಥ ಆಹಾರ ಸೇವಿಸಬೇಕು ಹಾಗೂ ಆಹಾರ ಎಷ್ಟು ವೈವಿಧ್ಯಮಯವಾಗಿರಬೇಕು ಎಂಬುದನ್ನು ತಿಳಿಯುವುದು ಬಹಳ ಮುಖ್ಯ. ಯಾವೆಲ್ಲ ಆಹಾರಗಳು ಆರೋಗ್ಯಕ್ಕೆ ಉತ್ತಮ ಎಂಬ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

Healthy foods that should be consumed
Healthy foods that should be consumed
author img

By

Published : Feb 26, 2023, 7:26 PM IST

ಮುಂಬೈ : ವಾರಾಂತ್ಯದಲ್ಲಿ ನಿಮ್ಮ ಬಿಡುವಿನ ದಿನವನ್ನು ನೀವು ಆನಂದಿಸಲು ಬಯಸುವಿರಾದರೆ ನೀವು ವಾರವಿಡೀ ಫಿಟ್ ಮತ್ತು ಆರೋಗ್ಯವಂತರಾಗಿರಬೇಕು. ನಿಮ್ಮ ಊಟದ ತಟ್ಟೆಯಲ್ಲಿ ಧಾನ್ಯಗಳು, ಮೀನು, ಬೀನ್ಸ್ ಮತ್ತು ಕಾಳುಗಳು ತುಂಬಿರಬೇಕು. ಆಹಾರ ಹೀಗೆ ವೈವಿಧ್ಯಮಯವಾಗಿದ್ದರೆ ನೀವು ಅನಾರೋಗ್ಯಕ್ಕೆ ಒಳಗಾಗುವುದಿಲ್ಲ. ವಾರವಿಡೀ ಎಂಥ ಆಹಾರ ಸೇವಿಸಬೇಕೆಂದು ತಿಳಿಯಲು ಬಯಸುವಿರಾದರೆ ನಿಮಗಾಗಿ ಇಲ್ಲಿವೆ ಒಂದಿಷ್ಟು ಟಿಪ್ಸ್​. ಇವನ್ನು ಫಾಲೋ ಮಾಡಿ, ಆರೋಗ್ಯವಂತರಾಗಿರಿ.

ವಾರವಿಡೀ ನೀವು ಸೇವಿಸಬೇಕಾದ ಕೆಲವು ಆಹಾರಗಳ ಪಟ್ಟಿ ಇಲ್ಲಿದೆ.

ಕಡು ಹಸಿರು ತರಕಾರಿಗಳು : ವಾರದಲ್ಲಿ ಕನಿಷ್ಠ ಮೂರರಿಂದ ನಾಲ್ಕು ಬಾರಿ ಕಡು ಹಸಿರು ತರಕಾರಿಗಳನ್ನು ಸೇವಿಸಿ. ಕೋಸುಗಡ್ಡೆ, ಪೆಪ್ಪರ್, ಬ್ರಸೆಲ್ಸ್ ಮೊಗ್ಗುಗಳು ಮತ್ತು ಎಲೆಗಳ ಸೊಪ್ಪಿನ ಎಲೆಗಳು ಮತ್ತು ಪಾಲಕ ಮುಂತಾದವುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು.

ಧಾನ್ಯಗಳು : ದಿನಕ್ಕೆ ಕನಿಷ್ಠ ಎರಡು ಅಥವಾ ಮೂರು ಬಾರಿ ಧಾನ್ಯಗಳನ್ನು ಸೇವಿಸಿ. ಗೋಧಿ ಹಿಟ್ಟು, ರೈ, ಓಟ್ ಮೀಲ್, ಬಾರ್ಲಿ, ಜೋಳ, ಕ್ವಿನೋವಾ ಅಥವಾ ಮಲ್ಟಿಗ್ರೇನ್ ಸೇವಿಸುವ ಬಗ್ಗೆ ಪ್ರಯತ್ನಿಸಿ. ಫೈಬರ್​ನ ಉತ್ತಮ ಆಗರವಾದ ಈ ಆಹಾರಗಳು ಪ್ರತಿ ಬಾರಿ ಸೇವಿಸಿದಾಗ ನಿಮಗೆ 3 ರಿಂದ 4 ಗ್ರಾಂ ಫೈಬರ್ ನೀಡುತ್ತವೆ.

ಬೀನ್ಸ್ ಮತ್ತು ಮಸೂರ (ಚನ್ನಂಗಿ) : ಕನಿಷ್ಠ ವಾರಕ್ಕೊಮ್ಮೆ ಹುರುಳಿ ಆಧಾರಿತ ಊಟ ಸೇವಿಸಲು ಪ್ರಯತ್ನಿಸಿ. ಬೀನ್ಸ್ ಮತ್ತು ಮಸೂರ ಸೇರಿದಂತೆ ದ್ವಿದಳ ಧಾನ್ಯಗಳನ್ನು ಸೂಪ್‌ಗಳು ಮತ್ತು ಸಲಾಡ್‌ಗಳಿಗೆ ಸೇರಿಸಲು ಪ್ರಯತ್ನಿಸಿ ಅಥವಾ ಅವುಗಳನ್ನು ನೇರವಾಗಿ ತಿನ್ನಿರಿ.

ಮೀನು : ವಾರಕ್ಕೆ ಎರಡರಿಂದ ಮೂರು ಬಾರಿ ಮೀನುಗಳನ್ನು ತಿನ್ನುವುದು ಆರೋಗ್ಯಕರ. ಪ್ರತಿಬಾರಿ ಸೇವನೆಯ ಸಂದರ್ಭದಲ್ಲಿ 3 ರಿಂದ 4 ಔನ್ಸ್ ಬೇಯಿಸಿದ ಮೀನುಗಳನ್ನು ಸೇವಿಸಬಹುದು. ಸಾಂದರ್ಭಿಕವಾಗಿ ಸಾಲ್ಮನ್, ಹೆರಿಂಗ್ ಮತ್ತು ಬ್ಲೂಫಿಶ್ ಸೇವನೆಯೊಂದಿಗೆ ನೀವು ಸ್ಥಳೀಯ ಮೀನುಗಳನ್ನು ಸಹ ಸೇವಿಸಬಹುದು.

ಬೆರ್ರಿ ಹಣ್ಣುಗಳು : ಪ್ರತಿದಿನ ನಿಮ್ಮ ಆಹಾರದಲ್ಲಿ ಎರಡರಿಂದ ನಾಲ್ಕು ಬಾರಿ ಹಣ್ಣುಗಳನ್ನು ಸೇರಿಸಿ. ರಾಸ್ಪ್ ಬೆರ್ರಿಸ್, ಬೆರ್ರಿ ಹಣ್ಣುಗಳು, ಬ್ಲ್ಯಾಕ್ ಬೆರ್ರಿಗಳು ಮತ್ತು ಸ್ಟ್ರಾಬೆರಿಗಳಂತಹ ಹಣ್ಣುಗಳನ್ನು ತಿನ್ನಲು ಪ್ರಯತ್ನಿಸಿ.

ಅಗಸೆಬೀಜ ಮತ್ತು ಇತರ ಬೀಜಗಳು : ಪ್ರತಿದಿನ ಆಹಾರದಲ್ಲಿ 1 ರಿಂದ 2 ಟೇಬಲ್ ಸ್ಪೂನ್ ಅಗಸೆಬೀಜ ಅಥವಾ ಇತರ ಬೀಜಗಳನ್ನು ಸೇವಿಸಿ ಅಥವಾ ನಿಮ್ಮ ದೈನಂದಿನ ಆಹಾರದಲ್ಲಿ ಕಾಲು ಕಪ್​ ನಷ್ಟು ಮಧ್ಯಮ ಪ್ರಮಾಣದ ಬೀಜಗಳನ್ನು ಸೇರಿಸಿ.

ಸಾವಯವ ಮೊಸರು : 19 ಮತ್ತು 50 ವರ್ಷ ಮಧ್ಯದ ಪುರುಷರು ಮತ್ತು ಮಹಿಳೆಯರಿಗೆ ದಿನಕ್ಕೆ 1000 ಮಿಲಿಗ್ರಾಂ ಕ್ಯಾಲ್ಸಿಯಂ ಮತ್ತು 50 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದರೆ 1200 ಮಿಲಿಗ್ರಾಂ ಕ್ಯಾಲ್ಸಿಯಂ ಅಗತ್ಯವಿದೆ. ದಿನಕ್ಕೆ ಮೂರರಿಂದ ನಾಲ್ಕು ಬಾರಿ ಕ್ಯಾಲ್ಸಿಯಂ ಭರಿತ ಆಹಾರಗಳಾದ ಕೊಬ್ಬು ರಹಿತ ಅಥವಾ ಕಡಿಮೆ ಕೊಬ್ಬಿನ ಡೈರಿ ಉತ್ಪನ್ನಗಳನ್ನು ಸೇವಿಸಿ. ಸಾವಯವ ಉತ್ಪನ್ನಗಳನ್ನು ಆಹಾರದಲ್ಲಿ ಸೇರಿಸಿ.

ಎಲ್ಲಕ್ಕಿಂತ ಮುಖ್ಯವಾಗಿ, ಪ್ರತಿದಿನ 8-12 ಕಪ್ ನೀರು ಕುಡಿಯಲು ಮರೆಯಬೇಡಿ. ನೆನಪಿಡಿ ಆಹಾರವನ್ನು ಆನಂದಿಸಬೇಕು ಮತ್ತು ಅದನ್ನು ಸಾಧಿಸಲು ಶಿಸ್ತು ಅನುಸರಿಸುವುದು ಅಷ್ಟೇ ಮುಖ್ಯ.

ಇದನ್ನೂ ಓದಿ : ಆಹಾರದ ರುಚಿಗೆ ಮಾತ್ರವಲ್ಲ, ಸಕ್ಕರೆಯಿಂದ ಇತರ ಹಲವು ಪ್ರಯೋಜನಗಳೂ ಉಂಟು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.