ETV Bharat / sukhibhava

ಜೇನುತುಪ್ಪದ ಪ್ರಯೋಜನಗಳೇನು ಗೊತ್ತೇ?: ಚಿಕ್ಕ ಮಕ್ಕಳು, ಸಕ್ಕರೆ ಕಾಯಿಲೆ ಇರುವವರು ಇದನ್ನು ಸೇವಿಸಬಹುದೇ? - ತ್ವಚೆಯ ಆರೈಕೆಗೆ ಜೇನು

Health Benefits Of Honey: ಪ್ರತಿದಿನ ನಿಯಮಿತ ಪ್ರಮಾಣದಲ್ಲಿ ಜೇನುತುಪ್ಪ ಬಳಸುವುದರಿಂದ ನಮ್ಮ ದೇಹಕ್ಕೆ ಏನು ಪ್ರಯೋಜನ? ಎಂಬ ಮಾಹಿತಿ ಇಲ್ಲಿದೆ ನೋಡಿ.

Honey
ಜೇನುತುಪ್ಪ
author img

By ETV Bharat Karnataka Team

Published : Aug 25, 2023, 10:23 AM IST

ಜೇನು ತುಪ್ಪವನ್ನು ಎಂದೂ ಕೆಡದ ಆಹಾರ ಎಂದು ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ನಿತ್ಯ ನಿಯಮಿತವಾಗಿ ಜೇನುತುಪ್ಪ ಸೇವಿಸುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ ಎಂದು ತಜ್ಞರು ಹೇಳುತ್ತಾರೆ.

ಜೇನುತುಪ್ಪದ ಪ್ರಯೋಜನಗಳು : ಮನುಷ್ಯನ ಆರೋಗ್ಯಕ್ಕೆ ಉಪಯುಕ್ತವಾದ ಆಹಾರ ಪದಾರ್ಥಗಳಲ್ಲಿ ಇದು ಕೂಡ ಒಂದು. ಜೇನುತುಪ್ಪವನ್ನು ಅನೇಕ ರೋಗಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ನಮ್ಮ ದೇಶದ ಪುರಾತನ ಮತ್ತು ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯಾದ ಆಯುರ್ವೇದದಲ್ಲಿ ಜೇನುತುಪ್ಪವನ್ನು ಮುಖ್ಯ ಮೂಲಿಕೆಯಾಗಿ ಬಳಸಲಾಗುತ್ತದೆ.

ಶಕ್ತಿಯುತ ಆಹಾರ : ಜೇನುತುಪ್ಪವು ಅನೇಕ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತದೆ. ಇದು ನಿಯಾಸಿನ್, ಕಬ್ಬಿಣ, ಮೆಗ್ನೀಸಿಯಮ್, ಮ್ಯಾಂಗನೀಸ್, ರಂಜಕ, ಪೊಟ್ಯಾಸಿಯಮ್, ಸತು ಮುಂತಾದ ಖನಿಜಗಳನ್ನು ಹೊಂದಿದೆ. ಅಷ್ಟೇ ಅಲ್ಲದೆ, ಜೇನುತುಪ್ಪದಲ್ಲಿ ಕಾರ್ಬೋಹೈಡ್ರೇಟ್‌ ಸಹ ಸಮೃದ್ಧವಾಗಿದೆ. ಅದಕ್ಕಾಗಿಯೇ ಇದನ್ನು ಶಕ್ತಿಯುತ ಆಹಾರ ಎಂದು ಪರಿಗಣಿಸಲಾಗಿದೆ.

ಜೀರ್ಣಕ್ರಿಯೆ ಸಮಸ್ಯೆಗೆ ಉಪಕಾರಿ : ಜೇನುತುಪ್ಪವು ಹೆಚ್ಚಿನ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಕೆಮ್ಮು ಮತ್ತು ನೋಯುತ್ತಿರುವ ಗಂಟಲಿಗೆ ಪರಿಹಾರ ನೀಡುತ್ತದೆ. ಇದರಲ್ಲಿರುವ ಪ್ರೋಬಯಾಟಿಕ್ ಗುಣಗಳು ಜೀರ್ಣಾಂಗ ವ್ಯವಸ್ಥೆಗೆ ಸಹಾಯ ಮಾಡುತ್ತವೆ. ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೂಡ ಉಪಯುಕ್ತವಾಗಿದೆ.

ತ್ವಚೆಯ ಆರೈಕೆಗೆ ಜೇನು : ಜೇನುತುಪ್ಪವು ಚರ್ಮ ಸಂಬಂಧಿ ಕಾಯಿಲೆಗಳನ್ನು ತಡೆಯುತ್ತದೆ. ಚರ್ಮವನ್ನು ರಕ್ಷಿಸುತ್ತದೆ. ಜೊತೆಗೆ, ತಲೆಹೊಟ್ಟು ಮತ್ತು ನೆತ್ತಿಯ ತುರಿಕೆಗೆ ಉತ್ತಮ ಪರಿಹಾರ ನೀಡುತ್ತದೆ. ಅನೇಕ ಅಧ್ಯಯನಗಳ ವರದಿ ಪ್ರಕಾರ, ಜೇನುತುಪ್ಪ ತಿನ್ನುವುದರಿಂದ ಮಕ್ಕಳಿಗೆ ಉತ್ತಮ ನಿದ್ರೆ ಮಾಡುವಂತೆ ಮಾಡಲು ಸಹಾಯ ಮಾಡುತ್ತದೆ ಎಂದು ತಿಳಿದು ಬಂದಿದೆ. ಜೊತೆಗೆ, ಇದು ಒಣ ಕೆಮ್ಮನ್ನು ಸಹ ಕಡಿಮೆ ಮಾಡುತ್ತದೆ.

ಸುಟ್ಟ ಗಾಯಗಳನ್ನು ಗುಣಪಡಿಸುತ್ತದೆ : ಭಾರತದಲ್ಲಿ ಮಾತ್ರವಲ್ಲದೇ, ಈಜಿಪ್ಟ್ ನಂತಹ ಪ್ರಾಚೀನ ನಾಗರಿಕತೆ ಹೊಂದಿರುವ ಅನೇಕ ದೇಶಗಳಲ್ಲಿ ಸಾವಿರಾರು ವರ್ಷಗಳಿಂದ ಜೇನುತುಪ್ಪವನ್ನು ಬಳಸಲಾಗುತ್ತಿದೆ. ಈಜಿಪ್ಟ್‌ನಲ್ಲಿ ಚರ್ಮದ ಆರೈಕೆ, ಕಣ್ಣಿನ ಕಾಯಿಲೆಗಳು ಮತ್ತು ಗಾಯಗಳು ಹಾಗೂ ಸುಟ್ಟಗಾಯಗಳ ನೈಸರ್ಗಿಕ ಚಿಕಿತ್ಸೆಗಾಗಿ ಜೇನುತುಪ್ಪವನ್ನು ಮೂಲಿಕೆಯಾಗಿ ಬಳಸಲಾಗುತ್ತಿತ್ತು.

ಬಿಳಿ ರಕ್ತ ಕಣಗಳ ಸಂಖ್ಯೆ ನಿಯಂತ್ರಿಸುತ್ತದೆ : ಜೇನುತುಪ್ಪವನ್ನು ದೈನಂದಿನ ಸೇವನೆ ಮಾಡುವುದರಿಂದ ರಕ್ತದಲ್ಲಿನ ಆಮ್ಲಜನಕದ ಮಟ್ಟವನ್ನು ಹೆಚ್ಚಿಸುತ್ತದೆ. ಇದರಿಂದ ದೇಹವು ಆರೋಗ್ಯಕರವಾಗಿರುತ್ತದೆ. ಕೀಮೋಥೆರಪಿ ರೋಗಿಗಳಲ್ಲಿ ಜೇನುತುಪ್ಪದ ಸೇವನೆಯು ಕಡಿಮೆ ಬಿಳಿ ರಕ್ತ ಕಣಗಳ ಸಂಖ್ಯೆಯನ್ನು ನಿಯಂತ್ರಿಸುತ್ತದೆ ಎಂದು ಹಲವಾರು ಅಧ್ಯಯನಗಳಿಂದ ಸಾಬೀತಾಗಿದೆ. ಹೊಟ್ಟೆ ಉಬ್ಬುವುದು, ಗ್ಯಾಸ್ ಮತ್ತು ಮಲಬದ್ಧತೆಯನ್ನು ಸಹ ನಿಯಂತ್ರಿಸುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.

ಇದನ್ನೂ ಓದಿ : ಒಟ್ಟಾರೆ ಆರೋಗ್ಯಕ್ಕೆ ಜೇನುತುಪ್ಪದ ಉಪಯೋಗವೇನು? ಇಲ್ಲಿದೆ ಮಾಹಿತಿ..

ಯಾರು ಜೇನುತುಪ್ಪ ಬಳಸಬಾರದು : ಜೇನುತುಪ್ಪದಿಂದ ಅನೇಕ ಪ್ರಯೋಜನಗಳಿದ್ದರೂ ಕೆಲವು ಸಂದರ್ಭಗಳಲ್ಲಿ ಮುನ್ನೆಚ್ಚರಿಕೆ ವಹಿಸುವುದು ಕಡ್ಡಾಯ ಎಂದು ವೈದ್ಯರು ಹೇಳುತ್ತಾರೆ. ಜೇನುತುಪ್ಪವನ್ನು 12 ತಿಂಗಳೊಳಗಿನ ಮಕ್ಕಳಿಗೆ ನೀಡಬಾರದು. ಮಧುಮೇಹ ರೋಗಿಗಳು ಇದರಿಂದ ದೂರವಿರುವುದು ಉತ್ತಮ ಎನ್ನುತ್ತಾರೆ ವೈದ್ಯರು. ಸಾಮಾನ್ಯವಾಗಿ ಸಕ್ಕರೆಯಂತೆ ಜೇನುತುಪ್ಪವು ಮಧುಮೇಹ ರೋಗಿಗಳಿಗೆ ಅಪಾಯಕಾರಿ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ. ಆದರೆ, ಕೆಲವೊಮ್ಮೆ ಜೇನುತುಪ್ಪವನ್ನು ತೆಗೆದುಕೊಳ್ಳಲು ಬಯಸುವವರು ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಬೆರೆಸಿ ಕುಡಿಯಬಹುದು. ಜೊತೆಗೆ, ಬೇಸಿಗೆ ಸಂದರ್ಭದಲ್ಲಿ ನಿಂಬೆ ರಸದೊಂದಿಗೆ ಜೇನು ಬೆರೆಯಿಸಿ ಕುಡಿಯುವುದು ಆರೋಗ್ಯಕರ.

ಇದನ್ನೂ ಓದಿ : ನೀವು ಬಾಯಿ ಚಪ್ಪರಿಸಿಕೊಂಡು ಜೇನು ಸವಿಯುತ್ತೀರಾ?... ಅದರಲ್ಲೆಲ್ಲ ಕಲಬೆರಕೆ ಇದೆ ಹುಷಾರ್​!!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.