ETV Bharat / sukhibhava

ನಾಳೆಯಿಂದ ವ್ಯಾಲಂಟೈನ್​ ವೀಕ್ ಪ್ರಾರಂಭ.. ಪ್ರೇಮಿಗಳಿಗೆ ವ್ಯಾಲಂಟೈನ್ಸ್​ ಡೇ ಸಂಭ್ರಮ

ಪ್ರಪಂಚದಾದ್ಯಂತ ರೋಸ್ ಡೇಯೊಂದಿಗೆ ವ್ಯಾಲೆಂಟೈನ್ಸ್ ವೀಕ್ ಪ್ರಾರಂಭವಾಗುತ್ತಿದೆ.. ವರ್ಣರಂಜಿತ ಗುಲಾಬಿಗಳೂ ಪ್ರೇಮಿಗಳ ರಂಜಿಸಲು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.. ಹ್ಯಾಪಿ ರೋಸ್​ ಡೇ...

author img

By

Published : Feb 6, 2023, 7:40 PM IST

Happy Rose Day
ಹ್ಯಾಪಿ ರೋಸ್​ ಡೇ

ಫೆಬ್ರವರಿ ತಿಂಗಳು ಬಂತೆಂದರೆ ಪ್ರೇಮಿಗಳಿಗೆ ವ್ಯಾಲಂಟೈನ್ಸ್​ ಡೇ ಸಂಭ್ರಮ. ಈ ವ್ಯಾಲೆಂಟೈನ್ಸ್​ ಡೇ ಎನ್ನುವುದು ಪಾಶ್ಚಿಮಾತ್ಯ ಸಂಸ್ಕೃತಿಯಾದರೂ, ಭಾರತದ ಮೂಲೆ ಮೂಲೆಯಲ್ಲೂ ಆಚರಿಸಲ್ಪಡುತ್ತದೆ. ಪ್ರೀತಿಸುವ ಪ್ರತಿಯೊಬ್ಬರಿಗೂ ಈ ದಿನ ವಿಶೇಷ. ಪ್ರೇಮಿಗಳ ದಿನವೆಂದರೆ ಕೇವಲ ಜೋಡಿ ಜೀವಗಳಿಗೆ ಮಾತ್ರವಲ್ಲ. ಈಗಾಗಲೇ ಜೋಡಿಯಾದ ಜೀವಗಳಿಗೂ ವಿಶೇಷವಾಗಿರುತ್ತದೆ.

ಹೊಸ ಪ್ರೀತಿ ಬಯಸಿ, ಪ್ರೇಮನಿವೇದನೆ ಮಾಡುವ ಮನಸ್ಸುಗಳಿಗೆ, ಈಗಾಗಲೇ ಜೋಡಿಯಾಗಿ ಹಲವು ಪ್ರೇಮಿಗಳ ದಿನಗಳನ್ನು ಆಚರಿಸಿಕೊಂಡರೂ ಮತ್ತೆ ಹೊಸದಾಗಿ ಆಚರಿಸಿಕೊಳ್ಳಲು, ನವಜೋಡಿಗಳಿಗೆ, ಸಿಗದ ಪ್ರೇಮಿಗಾಗಿ ಹಂಬಲಿಸುವ ಏಕಾಂಗಿ ಮನಸುಗಳಿಗೆ, ಕಳೆದುಹೋದ ಹಳೇ ಪ್ರೇಮಕ್ಕಾಗಿ ಕೊರಗುತ್ತಿರುವ ಹೃದಯಗಳಿಗೆ ಎಲ್ಲರಿಗೂ ಫೆಬ್ರವರಿ 14 ವ್ಯಾಲೆಂಟೈನ್ಸ್​ ಡೇ ಎಂದರೆ ಏನೋ ಪುಳಕ. ಅದರಲ್ಲೂ ಹದಿಹರೆಯದ ಮನಸ್ಸುಗಳಂತೂ ತಳಮಳ, ಪುಳಕಗಳೊಂದಿಗೆ ವ್ಯಾಲಂಟೈನ್ಸ್​ ಡೇಗೆ ತಯಾರಾಗುತ್ತಿವೆ.

ವ್ಯಾಲಂಟೈನ್ಸ್​ ಡೇ ಫೆಬ್ರುವರಿ 14ನೇ ತಾರೀಕಿಗಾದರೂ, ಒಂದು ವಾರ ಮೊದಲೇ ಅಂದರೆ ನಾಳೆಯಿಂದಲೇ ಪ್ರೇಮಿಗಳ ದಿನ ಸಂಭ್ರಮ ಪ್ರಾರಂಭವಾಗುತ್ತದೆ. ನಾಳೆಯಿಂದ ಪ್ರಾರಂಭಿಸಿ ವಾರದ ಒಂದೊಂದು ದಿನವನ್ನೂ ಪ್ರೇಮಿಗಳು ವಿಶೇಷವಾಗಿ ಆಚರಿಸಿಕೊಳ್ಳುತ್ತಾರೆ. ಸುಮಾರು ಏಳು ದಿನಗಳ ಕಾಲ ಆಚರಿಸುವ ಈ ಆಚರಣೆಯಲ್ಲಿ ಫೆ. 7ರಂದು ರೋಸ್​ ಡೇ, ಫೆ. 8ರಂದು ಪ್ರೊಪೋಸ್​ ಡೇ, ಫೆ. 9ರಂದು ಚಾಕೋಲೇಟ್​ ಡೇ, ಫೆ. 10ರಂದು ಟೆಡ್ಡಿ ಡೇ, ಫೆ. 11ರಂದು ಪ್ರಾಮಿಸ್​ ಡೇ, ಫೆ. 12ರಂದು ಹಗ್​ ಡೇ, ಫೆ. 13ರಂದು ಕಿಸ್​ ಡೇ ಹಾಗೂ ಕೊನೆಯದಾಗಿ ಫೆ. 14ರಂದು ಪ್ರೇಮಿಗಳ ದಿನ ಎಂದು ವಿಧವಿಧವಾಗಿ ಆಚರಿಸಲಾಗುತ್ತದೆ.

ಮೊದಲ ದಿನವನ್ನು ರೋಸ್​ ಡೇ ಎಂದು ಆಚರಿಸಲಾಗುತ್ತದೆ. ನಾಳೆಯಿಂದ ಪ್ರಾರಂಭವಾಗುವ ವ್ಯಾಲಂಟೈನ್ಸ್​ ಡೇ ವೀಕ್​ ಅನ್ನು ಆಚರಿಸಲು ಕಾತುರದಿಂದ ಕಾಯುತ್ತಿರುವ ಎಲ್ಲಾ ಜೋಡಿ ಹೃದಯಗಳು, ಜೋಡಿಗಾಗಿ ಕಾಯುತ್ತಿರುವ ಹೃದಯಗಳು, ಜೋಡಿಯಾಗಲು ಕಾಯುತ್ತಿರುವ ಹೃದಯಗಳು, ಏಕಾಂಗಿ ಹೃದಯಗಳು ಎಲ್ಲವೂ ನಾಳೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಉತ್ಸುಕರಾಗಿದ್ದಾರೆ. ಈಗಾಗಲೇ ಜೋಡಿಯಾಗಿರುವ ಹೃದಯಗಳು ವ್ಯಾಲಂಟೈನ್ಸ್​ ವಾರದ ಒಂದೊಂದು ದಿನವನ್ನು ವೈವಿಧ್ಯಮಯವಾಗಿ ಆಚರಿಸುತ್ತವೆ.

ಮೊದಲ ದಿನ ರೋಸ್​ ಡೇ: ಪ್ರೀತಿಯ ಸಂಕೇತವಾಗಿರುವ ರೆಡ್​ ರೋಸ್​ ನೀಡಿ ಪ್ರೇಮ ನಿವೇದನೆ ಮಾಡಿಕೊಳ್ಳುವ ವಿಶೇಷ ದಿನ. ನಾಳೆ ವ್ಯಾಲಂಟೈನ್ಸ್​ ವೀಕ್​ನ ಮೊದಲ ದಿನ ರೋಸ್​ ಡೇ. ಈ ದಿನಕ್ಕೆ ವಿಶೇಷ ಕೆಂಪು ಗುಲಾಬಿ. ಈ ಕೆಂಪು ಗುಲಾಬಿಯೊಂದನ್ನು ಮಾತ್ರ ಕೊಡುವುದು ಬದಲು, ಅದರೊಂದಿಗೆ ಒಂದಷ್ಟು ಮನಸ್ಸಿನ ಭಾವನೆಗಳನ್ನೂ ರವಾನಿಸಿದರೆ ಇನ್ನೂ ಚಂದವಾಗಿರುತ್ತದೆ. ಮನಸ್ಸಿನ ಭಾವನೆಗಳನ್ನು ಸಾಮಾನ್ಯ ಸಾಲುಗಳಲ್ಲಿ ಹೇಳುವ ಬದಲು, ಕವಿತೆಗಳ ರೂಪದಲ್ಲಿ ಬರೆದರೆ ಇಷ್ಟದ ಹುಡುಗಿ ಅಥವಾ ಹುಡುಗನ ಮನಸ್ಸನ್ನು ಸುಲಭವಾಗಿ ಗೆಲ್ಲಬಹುದು.

ಆದರೆ, ರೊಮ್ಯಾಂಟಿಕ್​ ಕವನ ಮತ್ತು ಕವಿತೆಗಳ ಮೂಲಕ ಇನ್ನೊಬ್ಬರ ಹೃದಯವನ್ನು ಗೆಲ್ಲುವುದು ಸುಲಭದ ಮಾತಲ್ಲ. ಈ ರೀತಿ ಕವಿತೆಗಳನ್ನು ಬರೆದು ಪ್ರಾರಂಭವಾಗುವ ಪತ್ರ ಸಂಭಾಷಣೆ ಮತ್ತಷ್ಟು ಮಂದುವರಿಯುವಂತೆ ಮಾಡುವ ಸಾಧ್ಯತೆಗಳು ಜಾಸ್ತಿ. ಕೆಲವರು ತಮ್ಮ ಸ್ವಂತ ಕವಿತೆಗಳನ್ನು ಬರೆದರೆ, ಇನ್ನೂ ಕೆಲವರು ಈಗಾಗಲೇ ಕವಿಗಳು ಬರೆದು ಪ್ರಸಿದ್ಧಿಯಾಗಿರುವ ಕವನಗಳಲ್ಲಿ, ತಮ್ಮ ಮನಸ್ಸಿನ ಭಾವನೆಗಳಿಗೆ ಹೊಂದುವ ಕವನಗಳನ್ನು ಆಯ್ದು ಪತ್ರದಲ್ಲಿ ಅಚ್ಚೊತ್ತುತ್ತಾರೆ.

ನಮ್ಮ ದೇಶ ಹಾಗೂ ಜಗತ್ತಿನಲ್ಲಿ ಅದೆಷ್ಟೋ ಪ್ರೇಮಕವಿಗಳಿದ್ದಾರೆ. ಪ್ರೇಮಕವಿತೆಗಳಿಗಾಗಿಯೇ ಪ್ರಸಿದ್ಧಿ ಪಡೆದವರಿದ್ದಾರೆ. ಅವರ ಕವಿತೆಗಳ ಮೂಲಕವೇ ಈ ರೋಸ್​ಡೇಗೆ ನೀವು ನಿಮ್ಮ ಪ್ರೀತಿಯನ್ನು ತುಂಬಾ ರೊಮ್ಯಾಂಟಿಕ್​ ರೀತಿಯಲ್ಲಿ ವ್ಯಕ್ತಪಡಿಸಬಹುದು. ನಮ್ಮ ಕನ್ನಡದ ಕಂಪು ಬೀರಿದ, ಮೈಸೂರು ಮಲ್ಲಿಗೆಯ ಪ್ರೇಮ ಕವಿ ಕೆ ಎಸ್​ ನರಸಿಂಹಸ್ವಾಮಿ ಅವರ ಕವಿತೆಗಳ ಸಾಲುಗಳೇ ಸಾಕು. ಅವರಷ್ಟೇ ಅಲ್ಲ ದ.ರಾ ಬೇಂದ್ರೆ, ಬಿ. ಆರ್​ ಲಕ್ಷ್ಮಣ ರಾವ್​, ಸುಬ್ರಾಯ ಚೊಕ್ಕಾಡಿ ಅವರ ಕವನಗಳ ಸಾಲುಗಳು, ನಮ್ಮ ಸಿನಿಮಾ ಕ್ಷೇತ್ರಕ್ಕೆ ಬಂದರೆ, ಹಂಸಲೇಖ, ಚಿ ಉದಯಶಂಕರ್​, ಕೆ. ಕಲ್ಯಾಣ್​, ಜಯಂತ್​ ಕಾಯ್ಕಿಣಿ ಅವರ ಅದೆಷ್ಟೋ ಪ್ರೇಮಗೀತೆಗಳ ಸಾಲುಗಳು ಪ್ರೇಮಿಗಳ ಕನಸುಗಳಿಗೆ ರಾಯಭಾರಿ.

ಎರಡನೇ ದಿನ ಪ್ರೊಪೋಸ್​ ಡೇ: ಇದನ್ನು ಅತ್ಯಂತ ರೊಮ್ಯಾಂಟಿಕ್​ ದಿನ ಎಂದು ಪರಿಗಣಿಸಲಾಗುತ್ತದೆ. ತಮಗಿಷ್ಟ ಆದವರಿಗೆ ವಿಭಿನ್ನವಾಗಿ ತಮ್ಮ ಮನದಾಳದ ಪ್ರೀತಿಯನ್ನು ನಿವೇದನೆ ಮಾಡುವ ದಿನ.

ಮೂರನೇ ದಿನ ಚಾಕೋಲೇಟ್​ ಡೇ: ಪ್ರಿಯತಮೆಗೆ ಅಥವಾ ಪ್ರಿಯತಮನಿಗೆ ಚಾಕೋಲೇಟ್​ ಗಿಫ್ಟ್​ ನೀಡುವುದು. ಪ್ರೇಮ ನಿವೇದನೆಯ ನಂತರ ಬಾಯಿ ಹಿಸಿ ಮಾಡಿಕೊಳ್ಳಲೆಂದೇ ಈ ದಿನ. ತಮ್ಮೆ ಪ್ರೇಮಿಗೆ ಇಷ್ಟವಾದ ಚಾಕೋಲೇಟ್​ ಆಯ್ಕೆ ಮಾಡಿ, ಉಡುಗೊರೆಯಾಗಿ ನೀಡಿ. ಸಂಬಂಧವನ್ನು ಮತ್ತಷ್ಟು ಸಿಹಿಯಾಗಿಸುವುದೇ ಈ ದಿನ. ಅದರೆ ಭಾವನೆಗಳು, ನೆನಪುಗಳ ಜೊತೆ ಜೀವಿಸುವ ವ್ಯಕ್ತಿಗಳಿಗಂತೂ, ತಮ್ಮ ಜೊತೆಗಾರರು ನೀಡಿದ ಚಾಕೊಲೇಟ್​ ಎಷ್ಟು ಇಷ್ಟವಾಗಿರುತ್ತದೋ ಅಷ್ಟೇ ಆ ಚಾಕೋಲೇಟ್​ ಕವರ್​ ಅನ್ನು ಜೋಪಾನವಾಗಿಡುವುದೂ ಇಷ್ಟವಾಗಿರುತ್ತದೆ.

ನಾಲ್ಕನೇ ದಿನ ಟೆಡ್ಡಿ ಡೇ: ಹೆಚ್ಚಾಗಿ ಹುಡುಗಿಯರು ಟೆಡ್ಡಿ ಇಷ್ಟಪಡುತ್ತಾರೆ. ಹಾಗಾಗಿ ನಾಲ್ಕನೇ ದಿನ ಟೆಡ್ಡಿ ಡೇಗೆ ತಮ್ಮ ಗೆಳತಿಗೆ ಇಷ್ಟವಾಗುವಂತಹ, ಅಥವಾ ಗೆಳತಿಯನ್ನು ಇನ್ನಷ್ಟು ಮೆಚ್ಚಿಸಲು ಸ್ಪೆಶಲ್​ ಆಗಿರುವ ಟೆಡ್ಡಿ ಗಿಫ್ಟ್​​ ಮಾಡುತ್ತಾರೆ.

ಐದನೇ ದಿನ ಪ್ರಾಮಿಸ್​ ಡೇ: ಪ್ರೀತಿ ಒಂದೆಡೆಯಾದರೆ, ನಮ್ಮ ಪಾರ್ಟನರ್​​ಗಳಿಗೆ ನಾವು ಮಾಡುವ ಪ್ರಾಮಿಸ್​ಗಳು ಕೂಡ ಅಷ್ಟೇ ಮುಖ್ಯ. ಪ್ರೀತಿಯನ್ನು ಇದೇ ರೀತಿ ಕಾಪಾಡಿಕೊಳ್ಳಲು ಸುಂದರವಾದ, ಮಹತ್ವವಾದ ಪ್ರಾಮಿಸ್​ ಮಾಡುವ, ಅಥವಾ ಜೊತೆಗಾರರಿಗೆ ಹೀಗೆಯೇ ಜೀವನ ಪೂರ್ತಿ ಜೊತೆಯಾಗಿರುವ ಎಂದು ಪ್ರಾಮಿಸ್​ ಮಾಡುವ ದಿನ.

ಆರನೇ ದಿನ ಹಗ್​ ಡೇ: ಈಗಾಗಲೇ ಪ್ರೀತಿಯ ಬಾನಂಚಲಿ ತೇಲಾಡುತ್ತಿರುವ ಜೀವಗಳಿಗೆ, ಹೊಸದಾಗಿ ಪ್ರೀತಿಯ ಅಂಬಾರಿ ಏರಿರುವ ಜೋಡಿಗಳಿಗೆ ಈ ಅಪ್ಪುಗೆಯ ದಿನ ಇನ್ನಷ್ಟು ವಿಶೇಷ. ಅದು ಮೊದಲ ಅಪ್ಪುಗೆ​ ಆಗಿದ್ದರಂತೂ ಪ್ರೇಮಿಗಳು ಆಕಾಶದಲ್ಲಿ ತೇಲಾಡುವ ದಿನ. ಕಾತರ, ಪುಳಕಗಳಿಂದಲೇ ಮಾಡುವ ಮೊದಲ ಹಗ್ ಅನ್ನು ತಮ್ಮ ಜೀವನದ ಉದ್ದಕ್ಕೂ ಸುಂದರವಾದ ನೆನಪುಗಳೆಂಬಂತೆ ಕಾಪಾಡಿಕೊಳ್ಳುತ್ತಾರೆ. ಈಗಾಗಲೇ ಒಂದೇ ದೋಣಿಯಲ್ಲಿ ಸಾಗುತ್ತಿರುವ ಜೋಡಿಯಾಗಿದ್ದರೆ, ಜೊತೆಗಾರನ ಅಪ್ಪುಗೆ ಮನಸ್ಸಿನಾಳದ ನೋವುಗಳಿಗೆ ಒಂದು ಸಾಂತ್ವನ. ಇನಿಯನೇ ಆಗಿದ್ದರು ಆ ಅಪ್ಪುಗೆ ನೊಂದ ಮನಸ್ಸಿಗೆ ಬೆಚ್ಚನೆಯ ಭಾವವನ್ನು ಮೂಡಿಸಬಹುದು.

ಏಳನೇ ದಿನ ಕಿಸ್​ ಡೇ: ಪ್ರೇಮಿಗಳಿಗೆ ಮೊದಲ ಮುತ್ತು ಎಂದರೆ ಸಾಗರದಾಳದ ಮುತ್ತಿಗಿಂತಲೂ ಹೆಚ್ಚು ಎಂದರೆ ತಪ್ಪಾಗಲಾರದು. ಆ ಮೊದಲು ಮುತ್ತಿಗಾಗಿ ಈ ದಿನಕ್ಕಾಗಿಯೇ ಕಾಯೋ ಹೃದಯಗಳೂ ಇರುತ್ತವೆ. ಇನಿಯ ಗೆಳತಿಯ ಹಣೆಗಿಡುವ ಮುತ್ತು, ಏನೇ ಆದರೂ, ಯಾವುದೇ ಘಟ್ಟದಲ್ಲಾದರೂ, ಜೀವನ ಉದ್ದಕ್ಕೂ, ನೋವು, ದುಃಖ, ಖುಷಿಯಲ್ಲೂ ಜೊತೆಗಿರುವೆ ಎನ್ನುವ ಭರವಸೆಯ ಸಂಕೇತ. ಒಂದು ಮುತ್ತು ಬೆಚ್ಚನೆಯ ಭಾವವನ್ನು ನೀಡುವುದರ ಜೊತೆಗೆ ಪ್ರೇಮದ ಇನ್ನೊಂದು ಮಜಲನ್ನೂ ಪರಿಚಯಿಸಬಹುದು.

ಕೊನೇಯದಾಗಿ ಪ್ರೇಮಿಗಳ ದಿನ: ಏಳು ದಿನಗಳ ಒಟ್ಟು ಭಾವವೇ ಇದು, ಪ್ರೇಮಿಗಳ ದಿನ. ಈ ದಿನವನ್ನು ಪ್ರೇಮದ ಸಂತ ಎಂದೇ ಕರೆಯಲ್ಪಟ್ಟ 3ನೇ ಶತಮಾನದ ರೋಮ್​ ಸಂತನ ನೆನಪಿಗಾಗಿ ಈ ದಿನವನ್ನು ಪ್ರೇಮಿಗಳ ದಿನವೆಂದು ಆಚರಿಸಲಾಗುತ್ತದೆ. ಒಂಟಿಯಿಂದ ಜಂಟಿಯಾಗ ಬಯಸುವ ಬಹುತೇಕರು ಮನಮೆಚ್ಚಿದ ಹುಡುಗಿಗೆ ಇದೇ ದಿನ ಪ್ರೇಮ ನಿವೇದನೆ ಮಾಡಿಕೊಳ್ಳಬೇಕು ಎಂದು ಕನಸು ಕಾಣುತ್ತಾರೆ. ಈಗಾಗಲೇ ಪ್ರೀತಿ ಮಾಡುತ್ತಿರುವವರು, ಇಬ್ಬರೂ ಸೇರಿ ಈ ದಿನವನ್ನು ವಿಶೇಷವಾಗಿ, ಅದ್ಧೂರಿಯಾಗಿ ಆಚರಿಸಿ, ಬೆಸ್ಟ್​ ಮೊಮೆಂಟ್​ ಆಗಿಸಿಕೊಳ್ಳುತ್ತಾರೆ.

ಇದನ್ನೂ ಓದಿ: ಡೇಟಿಂಗ್​ ಮಾಡಲು ಮತ್ತು ಸಂಬಂಧ ಮುರಿಯಲು ಈ ಅಂಶಗಳು ಪ್ರಮುಖ ಕಾರಣ ಇವುಗಳಂತೆ..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.