ಕೂದಲು ಉದುರುವ ಸಮಸ್ಯೆ ಬಹುತೇಕರನ್ನು ಕಾಡುವ ಸಮಸ್ಯೆ. ಸಣ್ಣವರಿಂದ ದೊಡ್ಡವರವರೆಗೆ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಕೂದಲು ಉದುರುವ ಸಮಸ್ಯೆಗೆ ಜೀವನ ಶೈಲಿ, ಆಹಾರದ ಶೈಲಿ ಕಾರಣವಾಗುತ್ತದೆ. ಪರಿಸರ ಸೇರಿದಂತೆ ಮುಂಜಾಗ್ರತೆಯಲ್ಲಿ ಮಾಡುವ ಕೆಲವು ತಪ್ಪುಗಳಿಂದ ಕೂದಲು ದುರ್ಬಲವಾಗುತ್ತದೆ. ಇಂತಹ ಸಮಸ್ಯೆಗಳ ಹೊರತಾಗಿ ಅನೇಕ ಮುನ್ನೆಚ್ಚರಿಕೆ ಕ್ರಮವನ್ನು ಅನುಸರಿಸುವ ಮೂಲಕ ಈ ಕೂದಲು ಉದುರುವಿಕೆ ತಡೆಗಟ್ಟಬಹುದಾಗಿದೆ.
ದುರ್ಬಲತೆಗೆ ಕಾರಣ: ತಲೆ ಸ್ನಾನ ಮಾಡಿದ ಬಳಿಕ ಮಾಡುವ ಕೆಲವು ತಪ್ಪುಗಳು ಕೂಡ ಕೂದಲು ದುರ್ಬಲವಾಗುವುದಕ್ಕೆ ಕಾರಣವಾಗಿದೆ. ತಲೆ ಸ್ನಾನದ ಬಳಿಕ ತಕ್ಷಣಕ್ಕೆ ಹಸಿ ಕೂದಲಿನಲ್ಲೇ ಮಲಗಬೇಡಿ. ಜೊತೆಗೆ ಹಸಿ ಕೂದಲು ಬಾಚಬಾರದು. ಕೂದಲನ್ನು ಚೆನ್ನಾಗಿ ಒಣಗಿಸಿ, ಈ ಒಣಗುವ ಪ್ರಕ್ರಿಯೆ ನೈಸರ್ಗಿಕವಾಗಿರುವಂತೆ ನೋಡಿಕೊಳ್ಳಿ.
ಹೇರ್ ಮಾಸ್ಕ್: ಕೂದಲಿಗೆ ಉತ್ತಮ ಪೋಷಕಾಂಶ ಮತ್ತು ಮಾಶ್ಚರೈಸರ್ ನೀಡುವಲ್ಲಿ ಹೇರ್ ಮಾಸ್ಕ್ ಪ್ರಮುಖ ಪಾತ್ರವಹಿಸುತ್ತದೆ. ತಲೆ ಸ್ನಾನ ಮಾಡುವ ಕೆಲವು ಗಂಟೆಗಳಿಗೆ ಮುನ್ನ ಆರೋಗ್ಯಕರ, ನೈಸರ್ಗಿಕ ಹೇರ್ ಮಾಸ್ಕ್ ಅನ್ನು ಹಚ್ಚುವುದರಿಂದ ಕೂದಲನ್ನು ಬಲಶಾಲಿಯಾಗಿಸಬಹುದು. ಕೂದಲಿಗೆ ಯಾವುದೇ ರೀತಿಯ ಹಾನಿ ಮಾಡುವುದಿಲ್ಲ ಎಂದರೆ, ಈ ಮಾಸ್ಕ್ ಅನ್ನು ರಾತ್ರಿ ಇಡೀ ಬಿಡಬಹುದು.
ಬಾಚುವ ವಿಧಾನ: ಕೂದಲು ತೆಳ್ಳಗಿದ್ದಾಗ ಅದನ್ನು ಬಾಚುವುದೇ ಮುಜುಗರದ ಸಂಗತಿಯಾಗುತ್ತದೆ. ಇದನ್ನು ತಪ್ಪಿಸಬೇಕು ಎಂದರೆ, ಕೂದಲು ಬಾಚುವ ವಿಧಾನ ತಿಳಿಯಬೇಕು. ಹಸಿ ಕೂದಲನ್ನು ಎಂದಿಗೂ ಬಾಚಬಾರದು. ಜೊತೆಗೆ ಕೂದಲನ್ನು ಮೇಲಿನಿಂದ ಕೆಳಗೆ ಬದಲಾಗಿ ಕೆಳಗಿನಿಂದ ಮೇಲೆ ಅಂದರೆ, ಕೆಳಗೆ ಮೊದಲು ಸಿಕ್ಕು ಬಿಡಿಸಿ, ಬಳಿಕ ಮೇಲಿನಿಂದ ಬಾಚಬೇಕು. ಮಲಗುವ ಮುನ್ನ ತಲೆ ಕೂದಲನ್ನು ಬಾಚುವುದರಿಂದ ಸಿಕ್ಕು ಸಮಸ್ಯೆಗೆ ಪರಿಹಾರ ಕಾಣಬಹುದು. ಇದು ಕೂದಲು ಉದುರುವ ಸಮಸ್ಯೆಯನ್ನು ಕೂಡ ಕಡಿಮೆ ಮಾಡುತ್ತದೆ.
ಸ್ಲೀಪ್ ಕ್ಯಾಪ್ ಬೇಡ: ಮಲಗುವ ಮುನ್ನ ಅನೇಕರು ಕೂದಲು ಸಿಕ್ಕು ಆಗುವುದನ್ನು ತಪ್ಪಿಸಲು ಬಿಗಿಯಾಗಿ ಕಟ್ಟುತ್ತಾರೆ. ಇದರಿಂದ ರಕ್ತ ಪರಿಚಲನೆ ಸಮಸ್ಯೆ ಅಥವಾ ಬುಡದಲ್ಲಿ ಬಿಗುವಿನಿಂದಾಗಿ ಕೂದಲು ಉದುರುವ ಸಮಸ್ಯೆಗೆ ಕಾರಣವಾಗುತ್ತದೆ. ಇದನ್ನು ತಪ್ಪಿಸಲು ಮಲಗುವಾಗ ಕೂದಲನ್ನು ಸಡಿಲವಾಗಿ ಕಟ್ಟಬೇಕು. ಅಥವಾ ಹಾಗೇ ಬಿಡಬಹುದು. ಇನ್ನೂ ದೀರ್ಘಕಾಲ ಕೂದಲನ್ನು ಹೆಲ್ಮೆಟ್ ಅಥವಾ ಬಟ್ಟೆಗಳಿಂದ ಕಟ್ಟಿದ್ದರೆ, ಅದನ್ನು ಕೆಲ ಹೊತ್ತು ಗಾಳಿಗೆ ಹಾರಾಡಲು ಬಿಡಬೇಕು. ಇದರಿಂದ ಕೂದಲಿಗೆ ಗಾಳಿ ಸರಾಗವಾಗಿ ಚಲಿಸಿ, ಒಳಗೆ ಶೇಖರವಾಗಿರು ಬೆವರು ಒಣಗಲು ಸಹಾಯವಾಗುತ್ತದೆ.
ದಿಂಬಿನ ಆಯ್ಕೆ: ಮಲಗುವಾಗ ದಿಂಬಿಲ್ಲದೇ ಮಲಗುವುದು ಅಸಾಧ್ಯ. ಕಾಟನ್ ಮತ್ತು ನೈಲಾನ್ ದಿಬ್ಬಿನ ಕವರ್ ಅನ್ನು ಸಾಮಾನ್ಯವಾಗಿ ಬಳಸುತ್ತೇವೆ. ಆದರೆ, ಇದು ಕೂಡ ಸಮಸ್ಯೆಗೆ ಕಾರಣವಾಗುತ್ತದೆ. ಇವು ನೈಸರ್ಗಿಕ ಎಣ್ಣೆ ಮತ್ತು ಮಾಶ್ಚರೈಸರ್ ಅನ್ನು ಚರ್ಮಕ್ಕೆ ಬಿಡದಂತೆ ಹೀರಿಕೊಳ್ಳುತ್ತದೆ. ಇದರಿಂದಾಗಿ ಕೂದಲು ಶುಷ್ಕತೆ ಕಾಡಿ, ಉದುರುತ್ತವೆ. ಈ ಸಮಸ್ಯೆಗೆ ಪರಿಹಾರ ಕಾಣಬೇಕು ಎಂದರೆ, ಸಿಲ್ಕ್ ಅಥವಾ ಸ್ಯಾಟಿನ್ ದಿಬ್ಬಿನ ಕವರ್ ಬಳಕೆ ಮಾಡಬಹುದಾಗಿದೆ. ಇದರಿಂದ ಯಾವುದೇ ರೀತಿಯ ಸಮಸ್ಯೆ ಉಂಟಾಗುವುದಿಲ್ಲ.
ಇದನ್ನೂ ಓದಿ: ಹೆಚ್ಚಿದ ಬೇಸಿಗೆಯ ಬಿಸಿ: ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿದರೆ ಈ ಸಮಸ್ಯೆಗಳು ದೂರ..