ETV Bharat / sukhibhava

ಕೂದಲು ಉದುರುವ ಸಮಸ್ಯೆಯೇ? ಹೆಚ್ಚು ಖರ್ಚಿಲ್ಲ, ಮನೆಯಲ್ಲೇ ಇದೆ ಪರಿಹಾರ! - ಮತ್ತಷ್ಟು ಕೂದಲು ಉದುರುವಂತೆ ಮಾಡುತ್ತದೆ

ಬಹುತೇಕರನ್ನು ಕಾಡುವ ಕೂದಲು ಉದುರುವ ಸಮಸ್ಯೆಗೆ ಹೆಚ್ಚು ಖರ್ಚಿಲ್ಲದೇ ಮನೆಯಲ್ಲೇ ಪರಿಹಾರ ಕಂಡುಕೊಳ್ಳಬಹುದು.

hair loss  problem is bothering you, there is a solution for it

author img

By

Published : Mar 17, 2023, 11:25 AM IST

ನುಣುಪಾದ, ಹೊಳೆಯುವ ಕೂದಲು ಬೇಕು ಎನ್ನುವುದು ಪ್ರತಿಯೊಬ್ಬ ಹುಡುಗಿಯ ಕನಸು. ಈ ನಡುವೆ ಅವರಿಗೆ ಸಮಸ್ಯೆಯಾಗಿ ಕಾಡುವುದು ಕೂದಲು ಉದುರುವ ಸಮಸ್ಯೆ. ಇದೇ ಸಮಸ್ಯೆ ಅನೇಕರನ್ನು ಒತ್ತಡಕ್ಕೆ ಗುರಿ ಮಾಡಿ, ಮತ್ತಷ್ಟು ಕೂದಲು ಉದುರುವಂತೆ ಮಾಡುತ್ತದೆ. ಬಹುತೇಕರನ್ನು ಕಾಡುವ ಈ ಸಮಸ್ಯೆಗೆ ವಿಶೇಷ ಕಾಳಜಿಗಿಂತ, ದೈನಂದಿನ ಜೀವನದಲ್ಲಿ ಕೆಲವು ಸಿಂಪಲ್ ಮಾರ್ಪಡು ಮಾಡಿಕೊಳ್ಳುವುದು ಅವಶ್ಯಕ. ಮನೆಯಲ್ಲಿ ಸಿಗುವ ಪದಾರ್ಥಗಳಿಂದ ಸಮಸ್ಯೆಗೆ ಮುಕ್ತಿ ನೀಡಬಹುದು.

1. ಅನ್ನ ಮಾಡುವ ಮುನ್ನ ಅಕ್ಕಿಯನ್ನು ಚೆನ್ನಾಗಿ ತೊಳೆದ ನೀರನ್ನು ಚೆಲ್ಲುವ ಬದಲು, ಅದಕ್ಕೆ ಮತ್ತೆ ಮೂರು ಕಪ್​ ನೀರು ಸೇರಿಸಿ, ಒಂದು ಗಂಟೆ ಹಾಗೆಯೇ ಬಿಡಿ. ಅದನ್ನು ಸ್ಟ್ರೈ ಬಾಟಲ್​ಗೆ ತುಂಬಿಸಿ, ತಲೆ ಸ್ನಾನ ಮಾಡುವಾಗ ಕೂದಲಿಗೆ ಚೆನ್ನಾಗಿ ಸಂಪಡಿಸಿಕೊಳ್ಳಿ. ಒಂದೂವರೆ ತಾಸಿನ ಬಳಿಕ ತಣ್ಣೀರಿನಲ್ಲಿ ತಲೆ ಸ್ನಾನ ಮಾಡಿ. ಅಕ್ಕಿ ತೊಳೆದ ನೀರಿನಲ್ಲಿ ಅಮೋನಿಯಂ ಆ್ಯಸಿಡ್​, ನ್ಯೂಟ್ರಿಯೆಂಟ್ಸ್​, ಮಿನರಲ್ಸ್​ ಮತ್ತು ಆ್ಯಂಟಿ ಆಕ್ಸಿಡೆಂಟ್​ ಇರುತ್ತದೆ. ಇದು ಕೂದಲ ಬೆಳವಣಿಗೆಗೆ ಸಹಾಯಕ. ಇದರ ಜೊತೆಗೆ ಕೂದಲನ್ನು ಬಲಗೊಳಿಸಿ, ತುಂಡಾಗದಂತೆ ಕಾಪಾಡುತ್ತದೆ.

2. ಅರ್ಧ ಕಪ್​ ರೈಸ್​​ಗೆ ಆಮ್ಲ (ನೆಲ್ಲಿಕಾಯಿ) ಪೌಡರ್​ ಹಾಕಿ ಹತ್ತು ನಿಮಿಷ ನೆನೆಸಿಡಿ. ಅದನ್ನು ಚೆನ್ನಾಗಿ ಮಿಶ್ರಣ ಮಾಡಿ ತಲೆಗೆ ಹಚ್ಚಿಕೊಳ್ಳಿ. ಆಮ್ಲದಲ್ಲಿ ವಿಟಮಿನ್​ ಸಿ ಇದ್ದು, ಆರೋಗ್ಯಯುತ ಕೂದಲಿಗೆ ಅತ್ಯವಶ್ಯಕ. ಕೂದಲ ಬೆಳವಣಿಗೆಗೆ ಸಹಾಯ ಮಾಡುವ ಆಮ್ಲ, ಹೊಟ್ಟಿನ ಸಮಸ್ಯೆ ನಿವಾರಣೆಯನ್ನು ಮಾಡುತ್ತದೆ.

3. ಮೆಂತ್ಯೆ ಕಾಳು ಮತ್ತು ಮೊಸರಿನ ಪ್ಯಾಕ್​ ಕುರಿತು ಅನಾದಿ ಕಾಲದಿಂದಲೂ ಕೇಳಿರುತ್ತೇವೆ. ಇದಕ್ಕೆ ಸ್ವಲ್ಪ ಅಕ್ಕಿ ತೊಳೆದ ನೀರನ್ನು ಬೆರೆಸಿ ಅದನ್ನು ಕೂದಲ ಬುಡಕ್ಕೆ ಹಚ್ಚಿ. ಇದರಿಂದ ಕೂದಲು ತುಂಡಾಗುವ ಸಮಸ್ಯೆಗೆ ಗುಡ್​ಬೈ ಹೇಳಬಹುದು.

4. ಕೂದಲಿನ ಉತ್ತಮ ಬೆಳವಣಿಗೆಯಲ್ಲಿ ರಕ್ತದ ಪರಿಚಲನೆ ಕೂಡ ಬೇಕು. ತಲೆಗೆ ರೋಸ್​ಮೆರಿ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಸಾಜ್​ ಮಾಡಿ. ಇದರಿಂದ ಕೂದಲಿಗೆ ಮಾತ್ರ ಆರೈಕೆ ಸಿಗದೇ, ಮುಖದ ಮೇಲಿನ ಮೊಡವೆ ಸಮಸ್ಯೆಗೂ ಪರಿಹಾರ ಸಿಗುತ್ತದೆ. ರೋಸ್​ಮೆರಿ ಎಣ್ಣೆಯನ್ನು ಅಕ್ಕಿ ತೊಳೆದ ನೀರಿನೊಂದಿಗೆ ಬೆರೆಸಿ, ಕೂದಲಿನ ಬುಡಕ್ಕೆ ಹಚ್ಚಿ. ಕೂದಲನ್ನು ಕೆಮಿಕಲ್​ ಫ್ರಿ ಅಂದರೆ, ರಾಸಾಯನಿಕ ಮುಕ್ತ ಶ್ಯಾಂಪೂಗಳನ್ನು ಬಳಕೆ ಮಾಡುವುದರಿಂದ ಕೂಡ ಕೂದಲು ಉದುರುವ ಸಮಸ್ಯೆ ಗಣನೀಯವಾಗಿ ಕಡಿಮೆಯಾಗಲಿದೆ.

5. ಕೂದಲು ಉದುರುವ ಸಮಸ್ಯೆಯಲ್ಲಿ ಅನೇಕ ಮನೆ ಮದ್ದುಗಳನ್ನು ಬಳಕೆ ಮಾಡುವುದರ ಜೊತೆಗೆ ಜೀವನ ಶೈಲಿ ಕೂಡ ಪರಿಣಾಮ ಬೀರುತ್ತದೆ. ಅತಿ ಹೆಚ್ಚಿನ ಜಂಕ್​ ಫುಡ್, ಒತ್ತಡ, ದಣಿವು, ನಿದ್ರೆಯ ಕೊರತೆಗಳು ಕೂಡ ಪ್ರಮುಖ ಕಾರಣ. ಆರೋಗ್ಯಯುತ ಜೀವನ ಶೈಲಿ ಕಾಪಾಡಿಕೊಳ್ಳುವುದರ ಜೊತೆಗೆ ಕೂದಲಿನ ಸ್ವಚ್ಛತೆಗೂ ಕೂಡ ಗಮನಹರಿಸಿ.

ಇದನ್ನೂ ಓದಿ: ಮಿಲ್ಕಿ ಬ್ಯೂಟಿ ತಮನ್ನಾ ಸೌಂದರ್ಯದ ರಹಸ್ಯಗಳಿವು..!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.