ಹಬ್ಬ ಹರಿದಿನ ಎಂದರೆ ಅಲ್ಲಿ ಸಿಹಿ ಇರಲೇಬೇಕು. ತುಪ್ಪ ಇಲ್ಲದೇ ಯಾವುದೇ ಸಿಹಿಯನ್ನು ಮಾಡುವುದು ಅಸಾಧ್ಯ. ಇದೇ ಕಾರಣಕ್ಕೆ ಕೆಲವರು ಈ ಸಿಹಿ ಪದಾರ್ಥಗಳನ್ನು ತಿನ್ನಲು ಹಿಂದೇಟು ಹಾಕುತ್ತಾರೆ. ಕಾರಣ ಅನಗತ್ಯ ಬೊಜ್ಜಿಗೆ ಕಾಣವಾಗುತ್ತದೆ ಎಂಬುದು. ಆದರೆ, ಕೆಲವರು ತುಪ್ಪ ಹೃದಯದ ಆರೋಗ್ಯಕ್ಕೆ ಉತ್ತಮ ಎನ್ನುತ್ತಾರೆ. ಆದರೆ, ವೈದ್ಯಕೀಯ ತಜ್ಞರು ಈ ಬಗ್ಗೆ ಹೇಳುವುದೇನು ಗೊತ್ತಾ? ತುಪ್ಪ ಹಲವು ಪೋಷಕಾಂಶಗಳ ಸಮ್ಮಿಳತವಾಗಿದ್ದು, ಅನೇಕ ಆರೋಗ್ಯಕರ ಲಾಭವನ್ನು ಹೊಂದಿದೆ. ಇದೇ ಕಾರಣಕ್ಕೆ ಹಬ್ಬ ಹರಿದಿನದಲ್ಲಿ ಮಾತ್ರವಲ್ಲದೇ, ಯಾವುದೇ ಮುಜುಗರವಿಲ್ಲದೇ ದಿನನಿತ್ಯದ ಆಹಾರದಲ್ಲಿ ತುಪ್ಪವನ್ನು ಬೆರಸಿ ಸೇವಿಸಿ ಎಂದು ಸಲಹೆ ನೀಡುತ್ತಾರೆ.
ಹಲವು ಪೋಷಕಾಂಶ: ತುಪ್ಪದಲ್ಲಿ ಅನೇಕ ಪೋಷಕಾಂಶಗಳಿವೆ. ಇದರಲ್ಲಿ ಫ್ಯಾಟ್ ಕರಗಿಸುವ ಎ, ಇ, ಡಿ ಮತ್ತು ಕೆ ವಿಟಮಿನ್ ಇದ್ದು, ಒಮೆಗಾ-3, ಒಮೆಗಾ-6, ಲಿನೊಲೆಕ್ ನಂತಹ ಫ್ಯಾಟಿ ಆ್ಯಸಿಡ್, ಬ್ಯುಟೈರಿಕ್ ಆ್ಯಸಿಡ್ ಸೇರಿದಂತೆ ಹಲವಾಬರು ಉತ್ಕರ್ಷಣ ನಿರೋಧಕ ಅಂಶ ಇದ್ದು, ಇದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.
ನರ ಕಾರ್ಯಾಚರಣೆ: ದೇಹದಲ್ಲಿ ಒಮೆಗಾ-3 ಮತ್ತು ಒಮೆಗಾ-6 ಪ್ಯಾಟಿ ಆಸಿಡ್ ಮಟ್ಟ ಕಡಿಮೆಯಾದರೆ ಇದು ಡೆಮೆಟಿಯಾ ಮತ್ತು ಅಲ್ಜೈಮೆರಾದಂತಹ ಸಮಸ್ಯೆಗೆ ಕಾರಣವಾಗುತ್ತದೆ. ಇದರಿಂದ ನಿಮ್ಮನ್ನು ನೀವು ರಕ್ಷಣೆ ಮಾಡಬೇಕು ಎಂದು ಕೊಂಡರೆ, ನಿಮ್ಮ ಡಯಟ್ನಲ್ಲಿ ಈ ತುಪ್ಪವನ್ನು ಸೇರಿಸಿ. ತುಪ್ಪದಲ್ಲಿ ಫ್ಯಾಟಿ ಆಸಿಡ್ ದೊಡ್ಡ ಮಟ್ಟದಲ್ಲಿದ್ದು, ಇದು ದೇಹದ ನರ ವ್ಯವಸ್ಥೆ ಸೇರಿದಂತೆ ಇತರ ಆರೋಗ್ಯದ ಮೇಲೂ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಮಿದುಳು ಕ್ರಿಯಾಶೀಲವಾಗಿ ಕೆಲಸ ಮಾಡುವಂತೆ ಮಾಡುತ್ತದೆ. ಈ ಹಿನ್ನೆಲೆ ನಿತ್ಯದ ಆಹಾರದಲ್ಲಿ ತುಪ್ಪ ಅತ್ಯಗತ್ಯವಾಗಿದೆ.
ಉತ್ತಮ ಜೀರ್ಣಕ್ರಿಯೆ: ತುಪ್ಪದಿಂದ ದೇಹದ ಜೀರ್ಣಶಕ್ತಿ ಅಭಿವೃದ್ಧಿ ಹೊಂದುತ್ತದೆ ಎಂದು ತಜ್ಞರು ತಿಳಿಸುತ್ತದೆ. ತುಪ್ಪ ಕೆಲವು ಆಮ್ಲಗಳನ್ನು ಬಿಡುಗಡೆ ಮಾಡುತ್ತದೆ. ಉದು ತೆಗೆದುಕೊಂಡ ಆಹಾರಗಳು ಸುಲಭವಾಗಿ ಜೀರ್ಣವಾಗುತ್ತದೆ. ಜೀರ್ಣಾಂಗವ್ಯೂಹದ ವ್ಯವಸ್ಥೆಗೆ ಸಹಕಾರಿ ಮಾಡುತ್ತದೆ. ಈ ಹಿನ್ನೆಲೆ ತುಪ್ಪವನ್ನು ಸೇವನೆ ಮಾಡುವುದು ಆರೋಗ್ಯಕ್ಕೆ ಉತ್ತಮವಲ್ಲ ಎಂಬ ನಂಬಿಕೆಯಿಂದ ಹೊರಬರಬೇಕು
ಒಡೆದ ತುಟಿಗೆ ಮದ್ದು: ಆರೋಗ್ಯದ ವಿಚಾರದಲ್ಲಿ ಮಾತ್ರವಲ್ಲ ಸೌಂದರ್ಯದ ವಿಚಾರದಲ್ಲೂ ತುಪ್ಪ ಸಹಾಯಕಾರಿಯಾಗಿದೆ. ಇದು ನೈಸರ್ಗಿಕ ಮಶ್ಚರೈಸರ್ ರೀತಿ ಕೆಲಸ ಮಾಡುತ್ತದೆ. ಚಳಿಗಾಲದಲ್ಲಿ ಅನೇಕ ಜನರಿಗೆ ತುಟಿ ಒಡೆಯುವ ಸಮಸ್ಯೆ ಸಾಮಾನ್ಯ. ತುಪ್ಪವನ್ನು ಒಡೆದ ತುಟಿಗೆ ಹಚ್ಚಿ ಮಸಾಜ್ ಮಾಡುವುದರಿ ಬಿರುಕು ಬೇಗ ಹೋಗುತ್ತದೆ. ಇದರಿಂದಾಗಿ ಎಷ್ಟೇ ಗಾಢಾ ಚಳಿ ಇದ್ದರೂ ನಿಮ್ಮ ತುಟಿ ಕಾಂತಿಯುತ ಹಾಗೂ ಮೃದುವಾಗಿರುತ್ತದೆ.
ತುಪ್ಪ ಆರೋಗ್ಯಕ್ಕೆ ಒಳ್ಳೆಯದು ನಿಜ ಆದರೆ, ಅಧಿಕ ತುಪ್ಪ ಸೇವನೆ ಕೂಡ ಒಳ್ಳೆಯದಲ್ಲ. ಹಾಗಾಗಿ ದಿನಕ್ಕೆ ಒಂದು ಟೀ ಸ್ಪೂನ್ನಷ್ಟು ತುಪ್ಪ ಸೇವಿಸುವುದು ಸಾಕು. ಇದರಿಂದಾಗಿ ಯಾವುದೇ ಆರೋಗ್ಯದ ಸಮಸ್ಯೆ ಎದುರಿಸುವುದಿಲ್ಲ. ಜೊತೆಗೆ ಎಲ್ಲಾ ರೀತಿಯ ಪ್ರಯೋಜನವನ್ನು ಪಡೆಯಬಹುದು. ಹೃದಯದ ಸಮಸ್ಯೆ, ಡಯಾಬೀಟಿಸ್ ಮುಂತಾದ ಸಮಸ್ಯೆಗಳಿಂದ ಬಳಲುತ್ತಿರುವವರು ತುಪ್ಪ ಸೇವಿಸುವುದು ಉತ್ತಮ. ಅವರ ಸಮಸ್ಯೆಗೆ ಅನುಗುಣವಾದ ಮಟ್ಟದಲ್ಲಿ ಅವರು ತುಪ್ಪ ಸೇವನೆ ಮಾಡಬೇಕು. ಇದಕ್ಕೆ ಮುನ್ನ ವೈದ್ಯರ ಸಲಹೆ ಅವಶ್ಯ. ಶುದ್ಧ ತುಪ್ಪ ಸೇವನೆಗೆ ಹೆಚ್ಚಿನ ಆದ್ಯತೆ ನೀಡಿ.
ಇದನ್ನೂ ಓದಿ: ಡಯಟ್ನಲ್ಲಿ ಕಡಿಮೆ ಮಟ್ಟದ ಕೊಬ್ಬು ಸೇವನೆಗೆ ಉತ್ತಮವಾದ ಪ್ಲಾನ್ ಮಾಡುವುದು ಅತ್ಯವಶ್ಯಕ