ಚರ್ಮ ರೋಗ ತಜ್ಞ ಕಾಯಾ ಕ್ಲಿನಿಕ್ಸ್ ಇಂಡಿಯಾದ ವೈದ್ಯಕೀಯ ಮುಖ್ಯಸ್ಥ ಡಾ. ಸುಶಾಂತ್ ಶೆಟ್ಟಿ ಹೇಳುವ ಪ್ರಕಾರ, “ಸೂಕ್ಷ್ಮ ಚರ್ಮ ಹೊಂದಿರುವವರಿಗೆ ಇದು ಆನುವಂಶಿಕವಾಗಿ ಅಥವಾ ಹಾಗೆಯೇ ಕಾಲಾಂತರದಲ್ಲಿ ಬರಬಹುದು. ಸೂರ್ಯನ ಬೆಳಕು, ಟ್ಯೂಬ್‌ಲೈಟ್‌ಗಳು, ಮೈಕ್ರೊವೇವ್ ಮತ್ತು ಮೊಬೈಲ್ ಫೋನ್‌ಗಳಿಂದ ಹೊರಹೊಮ್ಮುವ ವಿಕಿರಣಗಳಿಂದ ಸೇರಿದಂತೆ ಗೋಚರ ಅಥವಾ ಅದೃಶ್ಯ ಬೆಳಕಿನ ವಿಕಿರಣಗಳಿಂದ ಇದು ಬರುತ್ತದೆ. ಈ ವಿಕಿರಣಗಳಿಂದ ಕಿರಿಕಿರಿಯಾಗದಂತೆ ಚರ್ಮವನ್ನು ರಕ್ಷಿಸುವ ಸಲುವಾಗಿ, ಚರ್ಮವು ಬಣ್ಣವನ್ನು ಹೊಂದುತ್ತದೆ. ಎಪಿಡರ್ಮಲ್ ಪದರದಲ್ಲಿ ಸಂಗ್ರಹವಾಗುತ್ತದೆ, ಇದು ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತದೆ. ಹೀಗಾಗಿ ನಸುಕಂದು ಮಚ್ಚೆಗಳನ್ನು ರೂಪಿಸುತ್ತದೆ.”
ಸೂರ್ಯನ ಬೆಳಕು, ಹಾರ್ಮೋನುಗಳ ಸಮಸ್ಯೆ ಮತ್ತು ಚರ್ಮದ ಪ್ರಕಾರದಂತಹ ಕೆಲವು ಅಂಶಗಗಳು ಈ ಕಲೆಗಳನ್ನು ರೂಪಿಸುತ್ತವೆ. ಫ್ರೀಕಲ್ಸ್ ಕೆಲವು ಜನರಿಗೆ ಅಷ್ಟು ದೊಡ್ಡ ಸಮಸ್ಯೆಯಾಗುವುದಿಲ್ಲ, ಆದಾಗ್ಯೂ, ಕೆಲವರು ಅದನ್ನು ತೆಗೆಯಲು ಬಹಳ ಪ್ರಯತ್ನ ಪಡುತ್ತಾರೆ. ಡಾ. ಶೆಟ್ಟಿ ಅವರು ಸೂಚಿಸಿದ ಕೆಲವು ವಿಧಾನಗಳು ಇಲ್ಲಿವೆ:
ಸನ್‌ಸ್ಕ್ರೀನ್ ಮತ್ತು ಕವರ್-ಅಪ್:
ಕೆಲವು ಜನರು ಸೂಕ್ಷ್ಮ ಚರ್ಮದೊಂದಿಗೆ ಜನಿಸಿರುತ್ತಾರೆ. ಅಂತಹವರು ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ, ನಸುಕಂದು ಮಚ್ಚೆಗಳನ್ನು ತಡೆಗಟ್ಟಲು ಉತ್ತಮ ಮಾರ್ಗವೆಂದರೆ ಉತ್ತಮ ಸನ್‌ಸ್ಕ್ರೀನ್ ಬಳಸಿ (ನೀವು 35-40 ಎಸ್‌ಪಿಎಫ್ ಸನ್‌ಸ್ಕ್ರೀನ್ ಬಳಸಬಹುದು), ಸ್ಕಾರ್ಫ್‌ನಿಂದ ಮುಖವನ್ನು ಮುಚ್ಚಿ ಮತ್ತು ನೀವು ಹೊರಬಂದಾಗ ಛತ್ರಿ ಬಳಸಿ. ಬೆಳಕು ಮತ್ತು ವಿಕಿರಣ ಎರಡನ್ನೂ ನಿರ್ಬಂಧಿಸಲು ಇದು ನಿಮಗೆ ಸಹಾಯ ಮಾಡುತ್ತದೆ. ಇವು ನಿಮ್ಮಲಿರುವ ಕಲೆಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ.
ಔಷಧೀಯ ಕ್ರೀಮ್‌ಗಳನ್ನು ಬಳಸಿ:
ಚರ್ಮದಲ್ಲಿನ ಕಪ್ಪಾದ ಕಲೆಯನ್ನು ತೆಗೆಯಲು ಕೆಲವು ಔಷಧೀಯ ಕ್ರೀಮ್‌ಗಳು ಲಭ್ಯವಿದೆ. ಆದರೆ ಇವುಗಳು ಹೆಚ್ಚು ಉಪಯುಕ್ತವಲ್ಲ. ಈ ಕ್ರೀಮ್ಗಳ ಬದಲು ಹಾಲಿನ ಕೆನೆಯನ್ನು ಹಚ್ಚುವುದರಿಂದ ನಮ್ಮ ಚರ್ಮಕ್ಕೆ ಹೊಳಪು ಬರುತ್ತದೆ. ಇವೆರಡರ ಹೊಳಪು ಒಂದೇ ರೀತಿ ಇರುತ್ತದೆ. ಈ ಕ್ರೀಮ್‌ಗಳನ್ನು ಅಥವಾ ಹಾಲಿನ ಕೆನೆಯನ್ನು ಹಚ್ಚುವುದರಿಂದ ಕೆಲವರಿಗೆ ಕಲೆ ಹೋಗುತ್ತದೆ. ಸೂಕ್ಷ್ನ ಚರ್ಮ ಹೊಂದಿರುವವರಿಗೆ ಇದು ಹೋಗುವುದು ಕಡಿಮೆ.
ಇಲೆಕ್ಟ್ರಿಕ್ ಬರ್ನಿಂಗ್:
ಈ ಕಲೆಯೂ ಎಪಿಡರ್ಮಿಸ್ನಲ್ಲಿ ಸಂಗ್ರಹವಾಗಿರುತ್ತದೆ. ಈ ಪದರವನ್ನು ವೈದ್ಯಕೀಯ ಉಪಕರಣವನ್ನು ಬಳಸಿ ಸುಡಲಾಗುತ್ತದೆ. ಇದನ್ನು ರೇಡಿಯೊ ಫ್ರೀಕ್ವೆನ್ಸಿಗೆ ಬದಲಾಯಿಸಲಾಗುತ್ತದೆ. ಇದರಿಂದ ಚರ್ಮದಲ್ಲಿನ ಕಲೆಯೂ ಸಾಯುತ್ತದೆ. ಇದು ಯಾವುದೇ ರೀತಿ ನೋವನ್ನು ನೀಡುವುದಿಲ್ಲ. ಸುಮಾರು ಶೇ.60ರಷ್ಟು ಕಲೆ ಹೋಗುತ್ತದೆ.
ಕೆಮಿಕಲ್ ಬರ್ನಿಂಗ್:
ಚರ್ಮದ ಮೇಲಿನ ಕಲೆಯನ್ನು ತೆಗೆಯಲು ಟ್ರೈಕ್ಲೋರೊಆಸೆಟಿಕ್ ಎಂಬ ರಾಸಾಯಿನಿಕ ಆಮ್ಲವನ್ನು ಬಳಸಲಾಗುತ್ತದೆ. ಇದು ಎಲೆಕ್ಟ್ರಿಕ್ ಬರ್ನ್‌ನಂತೆಯೇ ಕಾರ್ಯನಿರ್ವಹಿಸುತ್ತದೆ. ಇದು ಶೇ. 30-50ರಷ್ಟು ಕಲೆಯನ್ನು ಹೋಗಿಸುತ್ತದೆ.
ಕ್ಯೂ-ಸ್ವಿಚ್ ಲೇಸರ್:
ವರ್ಣದ್ರವ್ಯದ ಚರ್ಮವನ್ನು ಸುಡಲು ಇದನ್ನು ಬಳಸಲಾಗುತ್ತದೆ. ಆದರೆ ಅದಕ್ಕಾಗಿ ಲೇಸರ್ ಕಿರಣವನ್ನು ಬಳಸಲಾಗುತ್ತದೆ. ಇದು ಶೇ.50 ರಷ್ಟು ಕಲೆಯನ್ನು ತೆಗೆಯುತ್ತದೆ.
ನೈಸರ್ಗಿಕ ಪರಿಹಾರಗಳು:
ನೀವು ಪ್ರತಿನಿತ್ಯ ಬಳಸುವ ಪಪ್ಪಾಯಿ, ನಿಂಬೆ, ಟೊಮೆಟೊ ಇತ್ಯಾದಿಗಳನ್ನು ಕಲೆಗಳ ಮೇಲೆ ಅನ್ವಯಿಸುವುದರಿಂದ ಕಲೆ ಕ್ರಮೇಣವಾಗಿ ಹೋಗುತ್ತದೆ. ಏಕೆಂದರೆ ಇವೆಲ್ಲವೂ ಕೆಲವು ಆಮ್ಲಗಳನ್ನು ಹೊಂದಿರುತ್ತವೆ.ನೀವು ಇವನ್ನು ಚರ್ಮದ ಪ್ರಕಾರಕ್ಕೆ ಅನುಗುಣವಾಗಿ ಬಳಸದಿದ್ದರೆ ನಿಮ್ಮ ಚರ್ಮದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.
ಆದ್ದರಿಂದ ಯಾವುದೇ ರೀತಿಯ ಚಿಕಿತ್ಸೆಯನ್ನು ಪಡೆಯುವ ಮೊದಲು ನೈಸರ್ಗಿಕವಾದ ಮನೆಮದ್ದುಗಳನ್ನು ಬಳಸಿ ಎಂದು ತಜ್ಞರು ಸೂಚಿಸುತ್ತಾರೆ.