ETV Bharat / sukhibhava

ಮಾರಣಾಂತಿಕ ಮಲೇರಿಯಾ ತಡೆಗಟ್ಟುವಿಕೆಗಾಗಿ 'ಜೀನ್ ಡ್ರೈವ್' ಪ್ರಯೋಗ - Malaria prevention

ಮಲೇರಿಯಾ ಸೊಳ್ಳೆಗಳಿಂದ ಉಂಟಾಗುವ ರೋಗವಾಗಿದ್ದು, ಇದನ್ನು ತಡೆಗಟ್ಟಲು ದಶಕಗಳಿಂದಲೂ ಪ್ರಯೋಗಗಳು ಸಾಗಿವೆ. ಈ ಪರೀಕ್ಷೆಗಳಲ್ಲಿ ಜೀನ್​ ಡ್ರೈವ್​ ಎಂಬ ಹೊಸದಾದ ವಿಧಾನವೊಂದು ಪರಿಣಾಮಕಾರಿಯಾಗಿದ್ದು, ಅದರಿಂದ ಕಾಯಿಲೆ ಹರಡುವ ಪ್ರಮಾಣವನ್ನು ತಡೆಗಟ್ಟಬಹುದಾಗಿದೆ.

gene-drive-for-prevention-of-malaria
ಮಾರಣಾಂತಿಕ ಮಲೇರಿಯಾ
author img

By

Published : May 28, 2022, 10:37 PM IST

ಮಲೇರಿಯಾ, ಆದಿ ಕಾಲದಿಂದಲೂ ಸೊಳ್ಳೆಗಳಿಂದ ಹರಡುವ ಮಾರಣಾಂತಿಕ ಕಾಯಿಲೆಗಳಲ್ಲಿ ಒಂದಾಗಿದೆ. ರೋಗದ ವಿರುದ್ಧ ಹೋರಾಡಲು ಸಂಶೋಧಕರು ದಶಕಗಳಿಂದ ಶ್ರಮಿಸುತ್ತಿದ್ದರೂ, ಅದರ ಹರಡುವಿಕೆ ಸಂಪೂರ್ಣವಾಗಿ ತಡೆಯಲು ಸಾಧ್ಯವಾಗಿಲ್ಲ.

ಪ್ರತಿ 2 ನಿಮಿಷಕ್ಕೊಂದು ಜೀವ ಮಲೇರಿಯಾ ಕಾರಣದಿಂದಾಗಿ ಸಾವನ್ನಪ್ಪುವುದು ಇತ್ತೀಚೆಗೆ ಕಡಿಮೆಯಾಗಿದ್ದರೂ, ರೋಗದ ಹರಡುವ ತೀವ್ರತೆಯನ್ನು ಕಡಿಮೆ ಮಾಡುವ ಮತ್ತು ಸಾವುಗಳನ್ನು ತಡೆಯುವ ಬಗ್ಗೆ ಸಂಶೋಧನೆಗಳು ನಡೆಯುತ್ತಲೇ ಇವೆ. ಇದೇ ರೀತಿಯಾಗಿ ಜೀನ್ ಡ್ರೈವ್ ಎಂಬ ಇತ್ತೀಚಿನ ಜೆನೆಟಿಕ್ ಮಾರ್ಪಾಡು ತಂತ್ರಜ್ಞಾನವು ಮಲೇರಿಯಾ ಹರಡುವುದನ್ನು ತಡೆಯುವ ಏಕೈಕ ಮಾರ್ಗವಾಗಿದೆ.

ಜೀನ್ ಡ್ರೈವ್ ಎಂದರೇನು?: ಜೀನ್​ ಡ್ರೈವ್​ ಎಂದರೆ ತಳೀಯವಾಗಿ ಮಾರ್ಪಡಿಸಿದ ಜೀನ್‌ಗಳು ಅಥವಾ ಹೊಸ ಜೀನ್‌ಗಳನ್ನು ಜೀವಕೋಶಗಳಿಗೆ ತುಂಬುವುದಾಗಿದೆ. ಜೀನ್ ಡ್ರೈವ್ ತಂತ್ರಜ್ಞಾನ ಸ್ವಲ್ಪ ಹೆಚ್ಚು ಮುಂದುವರಿದ ಮತ್ತು ಪರಿಣಾಮಕಾರಿಯಾದ ಅಂಶವಾಗಿದೆ.

ಹೆಣ್ಣು ಸೊಳ್ಳೆ ಅನಾಫಿಲಿಸ್​ನ ಕಡಿತ
ಹೆಣ್ಣು ಸೊಳ್ಳೆ ಅನಾಫಿಲಿಸ್​ನ ಕಡಿತ

ಇದು ಅನುವಂಶಿಕ ಮಾರ್ಪಾಡು ವಿಧಾನವಾಗಿದ್ದು, ಅನುವಂಶಿಕವಾಗಿ ಮನುಷ್ಯನಲ್ಲಿ ಶಕ್ತಿಯನ್ನು ವೃದ್ಧಿಸುವ ಸಾಮಾನ್ಯ ದರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಇದು ವ್ಯಾಪಿಸುವಂತೆ ರೂಪಿಸಲಾಗಿದೆ. ಈ ವಿಧಾನದಿಂದ ನಿರ್ದಿಷ್ಟ ಜೀನ್ ಅನ್ನು ಬದಲಿಸಿ, ಅದರ ಜಾಗೆಯಲ್ಲಿ ಹೊಸ ಜೀನ್​ ಅನ್ನು ಉತ್ಪತ್ತಿ ಮಾಡುವುದಾಗಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ನೈಸರ್ಗಿಕ ಜೀನೋಮ್ನದ ಪ್ರತಿರೂಪವಾಗಿದೆ.

ಇದು ಹೇಗೆ ಕೆಲಸ ಮಾಡುತ್ತದೆ?: ಜೀನ್ ಡ್ರೈವ್ ಅನ್ನು ಜೀವಿಯ ಜೀನೋಮ್‌ಗೆ ಸೇರಿಸಿದ ಬಳಿಕ, ಜೀವಿಯ ಸಂತತಿಯು ಒಂದು ಕ್ರೋಮೋಸೋಮ್‌ನಲ್ಲಿ ಡ್ರೈವ್ ಅನ್ನು ಮತ್ತು ಇನ್ನೊಂದು ಪೋಷಕರಿಂದ ಸಾಮಾನ್ಯ ಜೀನ್ ಅನ್ನು ಆನುವಂಶಿಕವಾಗಿ ಪಡೆಯುತ್ತದೆ. ಇದು ಅದರ ನೈಸರ್ಗಿಕ ರೂಪವನ್ನು ಪತ್ತೆ ಮಾಡುತ್ತದೆ. ಕಿಣ್ವದ ಸಹಾಯದಿಂದ ಡಿಎನ್ಎ ಸರಪಳಿಯಿಂದ ತೆಗೆದುಹಾಕುತ್ತದೆ.

ನಂತರ ಜೀನ್​ ಡ್ರೈವ್ 'ಎ' ಆಗಿ (ಪೋಷಕರಿಂದ ಪಡೆಯುವ ಜೀನ್​) ಮಾರ್ಪಡುವ ಮೂಲಕ 'ಬಿ' ಕ್ರೋಮೋಸೋಮ್(ಜೀನ್​ ಡ್ರೈವ್​ ಸೃಷ್ಟಿಸಿದ ಜೀನ್​) ಸ್ವತಃ ದುರಸ್ತಿಗೆ ಒಳಪಡುತ್ತದೆ. ಇದರ ಪರಿಣಾಮವಾಗಿ ಹುಟ್ಟಲಿರುವ ಜೀವಿಯ ಜೀನ್ ಡ್ರೈವ್ ಪ್ರಮಾಣಿತ ಆನುವಂಶಿಕ ಮಾರ್ಪಾಡುಗಳಲ್ಲಿ ನಿಖರವಾಗಿ ಆ ಭ್ರೂಣವು 'ಎ' ಆಗಿರುತ್ತದೆ. ಇದು 'ಬಿ' ಜೀನ್​ಗಿಂತ ಅರ್ಧದಷ್ಟು ಜೀನ್‌ಗಳನ್ನು ಹೀರಿಕೊಳ್ಳುವುದರಿಂದ ಸಂತತಿಯು ಕಸಿ ಮಾಡಿದ ಜೀನ್‌ಗಳನ್ನು ಪಡೆಯುವ ಸಾಧ್ಯತೆ ಕೇವಲ 50 ಪ್ರತಿಶತದಷ್ಟು ಮಾತ್ರ ಇರುತ್ತದೆ.

ಹೆಣ್ಣು ಸೊಳ್ಳೆಯಾದ ಅನಾಫಿಲಿಸ್
ಹೆಣ್ಣು ಸೊಳ್ಳೆಯಾದ ಅನಾಫಿಲಿಸ್

ಮಲೇರಿಯಾ ತಡೆಗಟ್ಟುವಲ್ಲಿ ಜೀನ್ ಡ್ರೈವ್​​ ಪಾತ್ರ: ಹೆಣ್ಣು ಅನಾಫಿಲಿಸ್ ಸೊಳ್ಳೆಗಳು ಮಲೇರಿಯಾವನ್ನು ಉಂಟುಮಾಡುವ ಪರಾವಲಂಬಿಗಳ ಪ್ರಮುಖ ವಾಹಕಗಳಾಗಿವೆ. ಆದ್ದರಿಂದ, ಅವುಗಳ ಜನನವನ್ನೇ ನಿಯಂತ್ರಿಸಿದಲ್ಲಿ ರೋಗ ಹರಡುವುದನ್ನು ತಡೆಯುವ ಮೂಲ ವಿಧಾನವಾಗಿದೆ. ಹೆಣ್ಣು ಸೊಳ್ಳೆಗಳು ಹುಟ್ಟುವುದನ್ನು ತಡೆಯಲು ವಿಜ್ಞಾನಿಗಳು ಜೀನ್ ಡ್ರೈವ್ ಅನ್ನು ಅಭಿವೃದ್ಧಿಪಡಿಸಿದ್ದಾರೆ.

ಇದು ಎರಡು ರೀತಿಯಲ್ಲಿ ಕೆಲಸ ಮಾಡುತ್ತದೆ. ಒಂದು, ಹೆಣ್ಣು ಸೊಳ್ಳೆಗಳು ಮಾತ್ರ ಮಾನವ ರಕ್ತವನ್ನು ಹೀರುತ್ತವೆ. ಅವುಗಳಿಲ್ಲದೇ, ಪರಾವಲಂಬಿಯಾದ ಮಲೇರಿಯಾ ಮಾನವ ದೇಹವನ್ನು ಪ್ರವೇಶಿಸಲು ಯಾವುದೇ ಮಾರ್ಗವಿಲ್ಲ. ಎರಡನೆಯದಾಗಿ, ಹೆಣ್ಣು ಸೊಳ್ಳೆಗಳಿಲ್ಲದೇ ಸಂತಾನೋತ್ಪತ್ತಿ ಇರುವುದಿಲ್ಲ. ಸೊಳ್ಳೆಗಳನ್ನು ಹೊರತುಪಡಿಸಿ ಹಲವಾರು ಇತರ ಪರಾವಲಂಬಿಗಳನ್ನು ನಿಯಂತ್ರಿಸಲು ಜೀನ್ ಡ್ರೈವ್ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ.

ಇದರಿಂದಲೂ ಇದೆ ಸಮಸ್ಯೆ: ಪ್ರಸ್ತುತವಾಗಿ ಜೀನ್ ಡ್ರೈವ್ ತಂತ್ರಜ್ಞಾನವು ಪ್ರಯೋಗಾಲಯದಲ್ಲಿ ಪರೀಕ್ಷಾ ಹಂತದಲ್ಲಿದೆ. ಹೆಚ್ಚಿನ ಪರೀಕ್ಷೆಯ ಬಳಿಕ ಇದು ಜೀವಿಗಳ ಮೇಲೆ ಪ್ರಯೋಗ ಮಾಡಲು ಶೀಘ್ರದಲ್ಲೇ ಅನುಮತಿ ಸಿಗುತ್ತದೆ ಎಂದು ಸಂಶೋಧಕರು ಆಶಿಸಿದ್ದಾರೆ. ಆದಾಗ್ಯೂ, ಇಂತಹ ತಾಂತ್ರಿಕ ಆವಿಷ್ಕಾರವು ಭವಿಷ್ಯದಲ್ಲಿ ಮತ್ತಷ್ಟು ಹಾನಿಕಾರಕ ರೂಪಾಂತರಗಳ ಉತ್ಪತ್ತಿಗೆ ಕಾರಣವಾಗಬಹುದು ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಮೊದಲು ಪ್ರತಿರಕ್ಷಣಾ ವ್ಯವಸ್ಥೆಯನ್ನು ಕಂಡುಹಿಡಿದ ನಂತರವೇ ಜೀನ್ ಡ್ರೈವ್ ಅನ್ನು ಬಿಡುಗಡೆ ಮಾಡಬೇಕು ಎಂದು ಸಂಶೋಧಕರು ಸೂಚಿಸುತ್ತಾರೆ.

ಮಲೇರಿಯಾದಿಂದುಂಟಾದ ದುಷ್ಪರಿಣಾಮಗಳು

93 ಸಾವಿರ ಕೋಟಿ - ಮಲೇರಿಯಾದಿಂದಾಗಿ ಆಫ್ರಿಕಾದ ಮೇಲೆ ಸರಾಸರಿ ವಾರ್ಷಿಕ ಆರ್ಥಿಕ ಹೊರೆ

6.27 ಲಕ್ಷ - ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿಸಿದಂತೆ 2020 ರಲ್ಲಿ ಮಲೇರಿಯಾದಿಂದ ಸಾವನ್ನಪ್ಪಿದವರ ಸಂಖ್ಯೆ

24.1 ಕೋಟಿ - 2020 ರಲ್ಲಿ ವಿಶ್ವಾದ್ಯಂತ ದಾಖಲಾದ ಮಲೇರಿಯಾ ಪ್ರಕರಣಗಳ ಸಂಖ್ಯೆ

ಓದಿ: ಮಗು ಆಯ್ತು ಅಂತ ನೀವೇನಾದರೂ ಗರ್ಭಕೋಶ ಆಪರೇಷನ್ ಮಾಡಿಸಿದ್ದೀರಾ? ಹಾಗಾದರೆ ಪರಿಣಾಮದ ಬಗ್ಗೆ ಜಾಗ್ರತೆ ಇರಲಿ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.