ETV Bharat / sukhibhava

ನೀವು ಕಾಂತಿಯುತ ತ್ವಚೆ ಪಡೆಯಬೇಕೇ?: ಇಲ್ಲಿದೆ ನೋಡಿ ಆರೋಗ್ಯಕರ ಆಹಾರ ಸಲಹೆಗಳು - tips for improves hair quality

ಚಳಿಗಾಲದಲ್ಲಿ ಆರೋಗ್ಯಕರ ಚರ್ಮ ಪಡೆಯಲು ಇಲ್ಲಿದೆ ಉಪಯುಕ್ತ ಸಲಹೆಗಳು.

ಕಾಂತಿಯುತ ತ್ವಚೆ
ಕಾಂತಿಯುತ ತ್ವಚೆ
author img

By

Published : Jan 16, 2022, 12:50 PM IST

ನೀವು ಸೇವಿಸುವ ಆಹಾರ ನಿಮ್ಮ ಆರೋಗ್ಯವನ್ನು ಸುರಕ್ಷಿತವಾಗಿರಿಸುವುದರ ಜತೆಗೆ ಚರ್ಮದ ಆರೋಗ್ಯವನ್ನೂ ಸುಧಾರಿಸುತ್ತದೆ. ಹೀಗಿರುವಾಗ ನಿತ್ಯ ಯಾವ ರೀತಿಯ ಆಹಾರ ಸೇವಿಸಬೇಕು. ನಿಮ್ಮ ಚರ್ಮದ ಕಾಂತಿಯನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳಿ.

ಆರೋಗ್ಯಕರ ಆಹಾರ ಪದ್ದತಿ ನಿಮ್ಮ ದೇಹದ ತೂಕವನ್ನು ನಿಯಂತ್ರಣದಲ್ಲಿಡಲು ಮಾತ್ರವಲ್ಲದೇ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪ್ರಯೋಜನಕಾರಿಯಾಗಿದೆ. ಇದು ನಿಮ್ಮ ಚರ್ಮವನ್ನು ಪುನರ್ಯೌವನಗೊಳಿಸುತ್ತದೆ. ಜೊತೆಗೆ ನಿಮ್ಮ ಕೂದಲಿನ ಗುಣಮಟ್ಟವನ್ನು ಸುಧಾರಿಸಿ, ಹೊಳೆಯುವ ಚರ್ಮವನ್ನು ಮತ್ತು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ. ಇದಲ್ಲದೇ, ಚಳಿಗಾಲದಲ್ಲಿ ಚರ್ಮವನ್ನು ಮೃದುಗೊಳಿಸಲು, ಸುಕ್ಕು ನಿಯಂತ್ರಿಸಲು ಹಾಗೂ ಉಗುರುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಚಳಿಗಾಲದಲ್ಲಿ ನಿಮ್ಮ ಚರ್ಮವು ಒಣಗಬಹುದು. ಹಾಗಾಗಿ, ನೀವು ಕೆಲವು ಸೂಪರ್‌ಫುಡ್‌ಗಳು ತಿನ್ನುವುದರ ಮೂಲಕ ಚರ್ಮದ ಆರೋಗ್ಯವನ್ನು ರಕ್ಷಿಸಿಕೊಳ್ಳಬಹುದು. ಯಾವ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸುವುದು ಸೂಕ್ತ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ನೀರು: ಇದು ನಮ್ಮ ದೈನಂದಿನ ಆಹಾರದ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ನೀರು ನಮ್ಮ ದೇಹ ಮತ್ತು ಚರ್ಮಕ್ಕೆ ಅಗತ್ಯವಾದ ಜಲಸಂಚಯನವನ್ನು ನೀಡುತ್ತದೆ. ಸಾಕಷ್ಟು ನೀರನ್ನು ಸೇವಿಸುವುದರಿಂದ ಚರ್ಮವು ಮೃದು ಮತ್ತು ನಯವಾಗಿರುತ್ತದೆ. ಕಡಿಮೆ ನೀರು ಕುಡಿಯುವುದರಿಂದ ನೀವು ನಿರ್ಜಲೀಕರಣಗೊಳ್ಳುತ್ತೀರಿ, ಅದು ಆಯಾಸವನ್ನು ಹೆಚ್ಚಿಸುತ್ತದೆ. ಹಾಗಾಗಿ ಅಧಿಕ ನೀರು ಕುಡಿಯುವುದರಿಂದ ಉತ್ತಮ ಆರೋಗ್ಯದ ಜೊತೆಗೆ ನಿಮ್ಮ ಚರ್ಮದ ಹೊಳಪು ಮತ್ತು ಕಾಂತಿ ಹೆಚ್ಚಿಸಿಕೊಳ್ಳಲು ಸಹಾಯಕ.

ನೀರು

ಕೊಬ್ಬಿನಾಮ್ಲಗಳು: ವಾಲ್​ನಟ್ಸ್, ಅಗಸೆ ಬೀಜಗಳು ಮತ್ತು ಸಾಲ್ಮನ್ ಮತ್ತು ಮೀನುಗಳಲ್ಲಿ ಹೆಚ್ಚು ಒಮೆಗಾ -3 ಕೊಬ್ಬಿನಾಮ್ಲಗಳು ಇದೆ. ಒಮೆಗಾ -3 ಕೊಬ್ಬಿನಾಮ್ಲ ಸಮೃದ್ಧವಾಗಿರುವ ಆಹಾರವು ನಿಮಗೆ ಆರೋಗ್ಯಕರ ಚರ್ಮ ಮತ್ತು ಕೂದಲನ್ನು ನೀಡುತ್ತದೆ. ಈ ಒಮೆಗಾ 3 ಕೊಬ್ಬನ್ನು ನಮ್ಮ ದೇಹ ಉತ್ಪತ್ತಿ ಮಾಡುವುದಿಲ್ಲ. ಈ ಕೊಬ್ಬು ಏನಿದ್ದರೂ ಆಹಾರ ಮುಖಾಂತರವೇ ನಮ್ಮ ದೇಹವನ್ನು ಸೇರಬೇಕು.

ಕ್ಯಾರೆಟ್: ಕ್ಯಾರೆಟ್‌ನಲ್ಲಿ ಬೀಟಾ-ಕ್ಯಾರೋಟಿನ್ ಮತ್ತು ಲೈಕೋಪೀನ್ ಸಮೃದ್ಧವಾಗಿದೆ. ಇದು ಸೂರ್ಯನ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ. ಚಳಿಗಾಲದಲ್ಲಿ ಸೂರ್ಯನು ಹೆಚ್ಚು ಪ್ರಕಾಶಮಾನವಾಗಿಲ್ಲದಿದ್ದರೂ, UV ಕಿರಣಗಳು ನಮ್ಮ ಸುತ್ತಲೂ ಇರುತ್ತವೆ. ಕ್ಯಾರೆಟ್‌ಗಳು ವಿಟಮಿನ್ ಎ, ಪೊಟ್ಯಾಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳಿಂದ ಕೂಡಿದೆ, ಇದನ್ನು ಸೇವಿಸುವುದರಿಂದ ಒಣ ಚರ್ಮದ ಸಮಸ್ಯೆಯಿಂದ ದೂರ ಉಳಿಯಬಹುದು.

ಸಿಟ್ರಸ್ ಹಣ್ಣುಗಳು: ರಸಭರಿತವಾದ ಮತ್ತು ತಾಜಾ ಸಿಟ್ರಸ್ ಹಣ್ಣುಗಳಾದ ಕಿತ್ತಳೆ, ದ್ರಾಕ್ಷಿ, ಸೇರಿದಂತೆ ಇತರೆ ಹಣ್ಣುಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ಅನೇಕ ಉಪಯೋಗಗಳಿವೆ. ಈ ವಿಟಮಿನ್ ಸಿ ಭರಿತ ಹಣ್ಣುಗಳು ಚಳಿಗಾಲದ ಅತ್ಯುತ್ತಮ ಸೂಪರ್‌ಫುಡ್. ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಫೈಬರ್ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಸಿಹಿ ಗೆಣಸು
ಸಿಹಿ ಗೆಣಸು

ಸಿಹಿ ಆಲೂಗಡ್ಡೆಗಳು/ಸಿಹಿ ಗೆಣಸು: ಸಿಹಿ ಗೆಣಸುಗಳು ನಾರಿನಂಶದಿಂದ ತುಂಬಿರುತ್ತವೆ. ಇದನ್ನು ಸೇವಿಸುವುದರಿಂದ ಹೊಟ್ಟೆ ದೀರ್ಘಕಾಲದವರೆಗೆ ತುಂಬಿರುವಂತಹ ಅನುಭವವಾಗುತ್ತದೆ. ಸಿಹಿ ಗೆಣಸುಗಳಲ್ಲಿ ಕಂಡುಬರುವ ಹೆಚ್ಚಿನ ಮಟ್ಟದ ಬೀಟಾ-ಕ್ಯಾರೋಟಿನ್ ಚರ್ಮವನ್ನು ಪೋಷಿಸುವುದು ಮಾತ್ರವಲ್ಲದೆ, ಒಳಗಿನಿಂದ ಹೊಳೆಯುವಂತೆ ಮಾಡುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಸಣ್ಣ ಕಾಯಿಲೆಗಳಿಂದ ದೇಹವನ್ನು ರಕ್ಷಿಸಲು ಸಿಹಿ ಆಲೂಗಡ್ಡೆಗಳು ಅವಶ್ಯಕ.

ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅನೇಕರು ಮನೆಯಿಂದಲೇ ಕೆಲಸ ಮಾಡುತ್ತಾರೆ. ಕಡಿಮೆ ದೈಹಿಕ ಚಟುವಟಿಕೆ ಇರುವುದರಿಂದ ಬಹಳಷ್ಟು ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಕೀಲುಗಳ ಸಮಸ್ಯೆಗಳು, ತೂಕ ಹೆಚ್ಚಾಗುವುದು, ವಿಟಮಿನ್ ಡಿ ಕೊರತೆ, ಮಲಬದ್ಧತೆ ಇವು ಸ್ವಯಂ-ಕ್ವಾರಂಟೈನ್ ಸಮಯದಲ್ಲಿ ಜನರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಗಳು. ಹಾಗಾಗಿ, ಪೌಷ್ಟಿಕಾಂಶ ಭರಿತ ಆಹಾರ ಸೇವಿಸುವುದರಿಂದ ಈ ಎಲ್ಲಾ ಸಮಸ್ಯೆಗಳನ್ನು ನಿಭಾಯಿಕೊಳ್ಳಬಹುದು. ಮತ್ತು ಉತ್ತಮ ರೋಗ ನಿರೋಧಕ ಶಕ್ತಿ, ಉತ್ತಮ ಚರ್ಮವನ್ನು ಹೊಂದಲು ಸಹ ಸಹಕಾರಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.