ಹಳೆಯ ಕಟ್ಟುಪಾಡುಗಳನ್ನೆಲ್ಲ ಮುರಿದಿರುವ ಭಾರತೀಯ ಮಹಿಳೆ ಇಂದು ರಾಜಕೀಯ, ವ್ಯಾಪಾರ, ಶಿಕ್ಷಣ, ಕ್ರೀಡೆ, ಮನರಂಜನೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾಳೆ. ದೇಶದ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲೂ ಆಕೆಯ ಕೊಡುಗೆ ನಿರ್ಣಾಯಕವಾಗಿದೆ. ಇಷ್ಟೆಲ್ಲ ಅಭಿವೃದ್ಧಿ ಹೊಂದಿದರೂ ಹಣಕಾಸಿನ ನಿರ್ವಹಣೆ ವಿಚಾರದಲ್ಲಿ ಮಾತ್ರ ಆಕೆ ಅಂತರ ಕಾಯ್ದುಕೊಂಡಿದ್ದಾಳೆ. ಖಾತೆಯಲ್ಲಿ ಹಣ ನಿರ್ವಹಣೆಯಲ್ಲಿ ಶೇ 77ರಷ್ಟು ಮಹಿಳೆಯರು ಮುಂದಿದ್ದರೂ, ಹಣಕಾಸಿನ ಉತ್ಪನ್ನಗಳು ಸೇವೆಗಳ ಬಳಕೆಯಲ್ಲಿ ಆಕೆ ಸವಾಲುಗಳನ್ನು ಎದುರಿಸುತ್ತಲೇ ಇದ್ದಾರೆ. ಈ ಹಿನ್ನೆಲೆ ಮಹಿಳೆ ಹಣದ ಅವಶ್ಯಕತೆ ಮತ್ತು ಹಣಕಾಸಿನ ನಿರ್ವಹಣೆ ಬಗ್ಗೆ ಅರ್ಥೈಸಿಕೊಳ್ಳಬೇಕಿದೆ.
ಮಹಿಳೆಯರು ಎದುರಿಸುತ್ತಿರುವ ಆರ್ಥಿಕ ಸವಾಲುಗಳು: ವೀಬಾಕ್ಸ್ ಇಂಡಿಯಾ ಸ್ಕಿಲ್ಸ್ 2023ರ ವರದಿ ಅನುಸಾರ, ಉದ್ಯೋಗಸ್ಥ ಮಹಿಳೆಯರ ಸಂಖ್ಯೆಯಲ್ಲಿ ಏರಿಕೆ ಕಂಡಿದ್ದು, ಶೇ 52.8 ರಷ್ಟು ಮಹಿಳೆಯರು ಉದ್ಯೋಗದಲ್ಲಿ ತೊಡಗಿದ್ದಾರೆ. ಇದರಿಂದ ಅವರು ಆರ್ಥಿಕ ಒತ್ತಡ ನಿವಾರಿಸಲು ಸಹಾಕಾರಿಯಾಗಿದೆ. ಆದರೂ ವೇತನ ಅಸಮಾನತೆಯನ್ನು ಆಕೆ ಅನುಭವಿಸುತ್ತಿದ್ದಾಳೆ. ಮಹಿಳೆಯರು ಕುಟುಂಬದ ಜವಾಬ್ದಾರಿ ಹಿನ್ನಲೆ ಮಧ್ಯದಲ್ಲೇ ವೃತ್ತಿ ಜೀವನ ತೊರೆಯುತ್ತಾಳೆ. ಇದರಿಂದಾಗಿ ನಿವೃತ್ತಿ ಯೋಜನೆ ವೇಳೆ ಆಕೆ ಹೆಚ್ಚುವರಿ ಆರ್ಥಿಕ ಸವಾಲುಗಳನ್ನು ಎದುರಿಸುವಂತೆ ಆಗುತ್ತದೆ. ಈ ಆರ್ಥಿಕ ನಡುವಳಿಕೆಗಳು ಲಿಂಗ ನಿಯಮಗಳು, ಶಿಕ್ಷಣ ಮಟ್ಟಗಳು ಮತ್ತು ಮಾಹಿತಿ ಪ್ರವೇಶವನ್ನು ಒಳಗೊಂಡಂತೆ ವಿವಿಧ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಂಶಗಳಿಂದ ಪ್ರಭಾವಿತವಾಗಿದೆ.
ಕಟ್ಟುಪಾಡುಗಳ ಮುರಿಯುವಿಕೆ: ಆರ್ಥಿಕ ಸೇವೆ ಉದ್ಯಮ ಲಿಂಗ ಸಮಾನತೆ ಪೋಷಿಸುವ ಮತ್ತು ಅಳೆಯುವ ವೇಗವರ್ಧಕ ಮತ್ತು ಮಾಪಕ ಎರಡೂ ಆಗಿರಬಹುದು. ಆರ್ಥಿಕತೆಯ ಇಕ್ವಿಟಿಯು ಸ್ಥಿರವಾದ ಆದಾಯದ ಮೂಲದೊಂದಿಗೆ ಮಹಿಳೆಯರನ್ನು ಸಬಲೀಕರಣಗೊಳಿಸುವುದರೊಂದಿಗೆ ಪ್ರಾರಂಭವಾಗುತ್ತದೆ. ಆರ್ಥಿಕ ಸೇವಾ ಉದ್ಯಮವೂ ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಮೂಲಕ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಈ ಮೂಲಕ ಅವರಿಗೆ ಅಗತ್ಯವಿರುವ ಆರ್ಥಿಕತೆ ಉತ್ಪನ್ನಗಳ ಸೌಲಭ್ಯ ನೀಡುತ್ತದೆ.
ಆರ್ಥಿಕ ಯೋಜನೆಯ ತಲುಪಲು ಸುಧಾರಿತ ಯೋಜನೆ ಸಾಧನ ಮತ್ತು ಸೇವೆಗಳನ್ನು ಅನುಸರಿಸುವುದು ಮುಖ್ಯ. ಸಣ್ಣ ವಿಮೆಯಂತಹ ಸೂಕ್ತ ಹಣಕಾಸು ಉತ್ಪನ್ನಗಳ ಅಭಿವೃದ್ಧಿಯನ್ನು ಪ್ರೋತ್ಸಾಹಿಸುವ ಜೊತೆಗೆ ನಿಯಂತ್ರಕ ಚೌಕಟ್ಟುಗಳ ಅವಶ್ಯಕತೆ ಇದೆ. ಮಹಿಳೆಯರ ಅಗತ್ಯತೆಗಳನ್ನು ಅರ್ಥೈಸಿಕೊಳ್ಳುವುದರ ಜೊತೆಗೆ ಬ್ಯಾಂಕಿಂಗ್ ಮತ್ತು ವಿಮೆಯನ್ನು ಏಜೆಟ್ ಬೇಸ್ನಲ್ಲಿ ವಿಸ್ತರಿಸಬೇಕಿದೆ.
ಹಣಕಾಸು ಉತ್ಪನ್ನಗಳು ಮತ್ತು ಸೇವೆಗಳನ್ನು ನಿರ್ಮಿಸುವುದು ಕೂಡ ಪ್ರಮುಖ ಹಂತವಾಗಿದೆ. ಉದಾಹರಣೆಗೆ, ಸ್ವಯಂ ಉದ್ಯೋಗಿ ಮಹಿಳಾ ವಿಭಾಗವು ವಿಶಿಷ್ಟವಾದ ಹಣಕಾಸಿನ ಅವಶ್ಯಕತೆಗಳನ್ನು ಹೊಂದಿರುತ್ತಾರೆ. ಸಾಂಪ್ರದಾಯಿಕ ಉದ್ಯೋಗಿಗಳಿಗಿಂತ ಭಿನ್ನವಾಗಿ, ಉದ್ಯೋಗ ಪ್ರಾಯೋಜಿತ ವಿಮೆ ಮತ್ತು ನಿವೃತ್ತಿ ಪ್ರಯೋಜನಗಳಿಗೆ ಪ್ರವೇಶವನ್ನು ಹೊಂದಿರುವುದಿಲ್ಲ.
ಇದೇ ವೇಳೆ ಗೃಹಿಣಿ ಮನೆಗೆ ನೀಡುತ್ತಿರುವ ಕೊಡುಗೆಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಆಕೆ ಆರ್ಥಿಕತೆ ಮೌಲ್ಯಗಳಿಗೆ ಗಮನಾರ್ಹ ಕೊಡಗೆ ನೀಡುತ್ತಿರುತ್ತಾಳೆ. ಕುಟುಂಬ ಸದಸ್ಯರ ಉಪಚರಿಕೆ, ಸಬಲೀಕರಣದಲ್ಲಿ ಆಕೆಯದು ನಿರ್ಣಾಯಕ ಪಾತ್ರ. ಆರ್ಥಿಕತೆ ನಿರ್ವಹಣೆ ಅರಿವಿನ ಅಂತರವನ್ನು ಪರಿಹರಿಸುವುದು ಕೂಡ ನಾಲ್ಕನೇ ಪ್ರಮುಖ ಅಂಶವಾಗಿದೆ.
ಮೂಲಸೌಕರ್ಯವನ್ನು ಹೆಚ್ಚಿಸುವತ್ತ ಗಮನ ಹರಿಸುವುದು ಕೊನೆಯ ಹಂತವಾಗಿದೆ. ಹಣಕಾಸಿನ ಮೂಲಸೌಕರ್ಯ ಮತ್ತು ಉತ್ಪನ್ನಗಳ ವ್ಯಾಪ್ತಿಯನ್ನು ಬಲಪಡಿಸುವಲ್ಲಿ ಸರ್ಕಾರವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಹಣಕಾಸು ಸೇವೆಗಳ ವ್ಯಾಪ್ತಿಯಲ್ಲಿರುವ ಖಾಸಗಿ ಕಂಪನಿಗಳು ಮಹಿಳೆಯರನ್ನು ತಲುಪಲು ಅವರೊಂದಿಗೆ ಸಂಪರ್ಕವನ್ನು ಸಾಧಿಸಲು ಸಂಘಟಿತ ಪ್ರಯತ್ನವನ್ನು ಮಾಡಬೇಕು.
ಇದನ್ನೂ ಓದಿ: ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ಅವಕಾಶವಂತೆ: ಅಂದ್ರೆ? ಅಧ್ಯಯನ ಹೀಗೆ ಹೇಳುತ್ತದೆ!