ETV Bharat / sukhibhava

ಬ್ರಿಟನ್: ಇದೇ ಮೊದಲ ಬಾರಿಗೆ ಮನುಷ್ಯರಲ್ಲಿ ಅಪರೂಪದ ಹಂದಿಜ್ವರ ತಳಿ ಪತ್ತೆ

author img

By ETV Bharat Karnataka Team

Published : Nov 28, 2023, 12:28 PM IST

UK detects first human case of rare Swine Flu: ಎಚ್​1ಎನ್​1, ಎಚ್​1ಎನ್​2, ಎಚ್​3ಎನ್​2 ಎಂಬುದೆಲ್ಲ ಹಂದಿ ಜ್ವರ ಇನ್ಫುಯೆಂಜಾದ ಪ್ರಮುಖ ಉಪತಳಿಗಳು. ಈ ವೈರಸ್​ಗಳು ಹಂದಿಗಳಲ್ಲಿ ಕಂಡುಬರುತ್ತವೆ. ಆದರೆ ಅಪರೂಪವೆಂಬಂತೆ ಬ್ರಿಟನ್‌ನಲ್ಲಿ ಮನುಷ್ಯರಲ್ಲಿ ಪತ್ತೆಯಾಗಿದೆ.

first human case of rare influenza A Found in UK

ಲಂಡನ್​​: ಬ್ರಿಟನ್​ನಲ್ಲಿ ಹಂದಿಗಳಲ್ಲಿ ಪ್ರಸರಣವಾಗುತ್ತಿರುವ ಹಂದಿ ಜ್ವರದ ರೀತಿಯಲ್ಲೇ ಇದೇ ಮೊದಲ ಬಾರಿಗೆ ಮಾನವನ ಅಪರೂಪದ ಇನ್ಫುಯೆಂಜಾ ಎ (ಎಚ್​1ಎನ್​2) ಪ್ರಕರಣ ಗೋಚರಿಸಿದೆ ಎಂದು ಬ್ರಿಟನ್​ ಆರೋಗ್ಯ ರಕ್ಷಣಾ ದಳ (ಯುಕೆಎಚ್​ಎಸ್​ಎ) ತಿಳಿಸಿದೆ.

ಯುಕೆಯಲ್ಲಿ ದಾಖಲಾಗಿರುವ ಮೊದಲ ಮಾನವ ಜ್ವರದ ತಳಿ ಇದು ಎಂದು ಯುಕೆಎಚ್​ಎಸ್​ಎ ಹೇಳಿಕೆ ಬಿಡುಗಡೆ ಮಾಡಿದೆ. ಮಾನವನ ಆರೋಗ್ಯದ ಮೇಲೆ ಇದು ಒಡ್ಡುವ ಅಪಾಯ ಮತ್ತು ಈ ರೋಗಕಾರಕಗಳ ಗುಣಲಕ್ಷಣಗಳ ಕುರಿತು ಸೂಕ್ಷ್ಮ ಅಧ್ಯಯನ ನಡೆಸಲು ಸಂಸ್ಥೆ ಮುಂದಾಗಿದೆ.

2005ರಲ್ಲಿ ಜಾಗತಿಕವಾಗಿ ಎಚ್​1ಎನ್​2ನ ತಳಿಯ ಇನ್ಫುಯೆಂಜಾದ 50 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಯಾವುದೇ ಆನುವಂಶಿಕ ತಳಿಯಿಲ್ಲ. ಇನ್ಫುಯೆಂಜಾ ಎ(ಎಚ್​1ಎನ್​2) ಈ ಹಿಂದೆ ಯುಕೆಯಲ್ಲಿ ಮನುಷ್ಯರಲ್ಲಿ ಕಂಡುಬಂದಿತ್ತು.

ಹಂದಿ ಇನ್ಫುಯೆಂಜಾ ವೈರಸ್‌ನೊಂದಿಗೆ ಮಾನವ ಸೋಂಕು ಕೂಡ ಸಾಂದರ್ಭಿಕವಾಗಿ ಪತ್ತೆಯಾಗುತ್ತದೆ. ಈ ಮೊದಲಿನ ಮಾಹಿತಿ ಅನುಸಾರ, ಯುಕೆಯಲ್ಲಿ ಪತ್ತೆಯಾದ ಸೋಂಕು (1ಬಿ.1.1) ಜಗತ್ತಿನ ಬೇರೆಡೆ ಕಂಡುಬಂದ ಮಾನವನ ಪ್ರಕರಣಕ್ಕಿಂತ (ಎಚ್​1ಎನ್​2) ಭಿನ್ನ. ಇದು ಬ್ರಿಟನ್​ನ ಹಂದಿ ಜ್ವರದ ವೈರಸ್​ ಲಕ್ಷಣ ಹೊಂದಿದೆ.

ಸೋಂಕಿನ ಮೂಲ ಪತ್ತೆಗೆ ಕ್ರಮ: ಎಚ್​1ಎನ್​2 ಗೋಚರಿಸಿದ ರೋಗಿಗಳು ಉಸಿರಾಟ ಸಮಸ್ಯೆ ಎದುರಿಸುತ್ತಿದ್ದಾರೆ. ರೋಗಿಗಳ ಮೇಲೆ ಯುಕೆಎಚ್​ಎಸ್​ಎ ಅಡಿಯ ರಾಷ್ಟ್ರೀಯ ಜ್ವರ ಕಣ್ಗಾವಲು ಮತ್ತು ರಾಯಲ್​ ಕಾಲೇಜ್​ ಆಫ್​ ಜನರಲ್​ ಪ್ರಾಕ್ಟಿಷನರಿ ಕಣ್ಗಾವಲಿರಿಸಿದೆ. ಈ ಸೋಂಕು ಹೊಂದಿರುವ ರೋಗಿಗಳಲ್ಲಿ ಸೌಮ್ಯ ಸ್ವಭಾವದ ಅನಾರೋಗ್ಯ ಕಂಡುಬಂದಿದ್ದು, ಅವರು ಸಂಪೂರ್ಣ ಚೇತರಿಕೆ ದರ ಹೊಂದಿದ್ದಾರೆ. ಸೋಂಕಿನ ಮೂಲ ಇನ್ನೂ ಪತ್ತೆಯಾಗಿಲ್ಲ. ಹೀಗಾಗಿ, ಇನ್ನೂ ತನಿಖೆ ಮುಂದುವರೆಸಲಾಗಿದೆ.

ದೈನಂದಿನ ಜ್ವರದ ಕಣ್ಗಾವಲು ಮತ್ತು ಜಿನೋಮ್​ ಸಿಕ್ವೆನ್ಸಿಂಗ್​​ನಿಂದ ಈ ವೈರಸ್​ ಪತ್ತೆಯಾಗಿದೆ. ಸೋಂಕಿನ ಸಂಪರ್ಕ ಮತ್ತು ಯಾವುದರಿಂದ ಪ್ರಸರಣವಾಗಿದೆ ಎಂಬುದರ ಪತ್ತೆಗೆ ಸಂಶೋಧನೆ ಆರಂಭಿಸಲಾಗಿದೆ ಎಂದು ಯುಕೆಎಚ್​ಎಸ್​ಎ ಇನ್ಸಿಡೆಂಟ್​​ ಡೈರೆಕ್ಟರ್​​ ಮೀರಾ ಚಂದ್​ ತಿಳಿಸಿದ್ದಾರೆ.

ಜನರಲ್ಲಿ ಉಸಿರಾಟ ಸಮಸ್ಯೆ ಲಕ್ಷಣಗಳು ಕಂಡುಬಂದ ರೋಗಿಗಳ ಸಂಪರ್ಕವನ್ನು ತಪ್ಪಿಸುವುದು ಅಗತ್ಯವೆಂದು ಇದೇ ವೇಳೆ ಯುಕೆಎಚ್​ಎಸ್​ಎ ಜನರಿಗೆ ಸಲಹೆ ನೀಡಿದೆ.

2009ರಲ್ಲಿ ಮಾನವ ಸಂಬಂಧ ಇನ್ಫುಯೆಂಜಾ ಪ್ರಕರಣ ಸಾಂಕ್ರಾಮಿಕತೆ ಉದ್ಬವಿಸಿತ್ತು. ಇದನ್ನು ಸ್ವೈನ್​ ಫ್ಲೂ/ ಹಂದಿ ಜ್ವರ ಎಂದು ಕರೆಯಲಾಗಿತ್ತು.(ಐಎಎನ್​ಎಸ್​)

ಇದನ್ನೂ ಓದಿ: ಬಿಹಾರದಲ್ಲಿ ನಿಗೂಢ ಕಾಯಿಲೆ: ತನಿಖೆಗೆ ವಿಶ್ವ ಆರೋಗ್ಯ ಸಂಸ್ಥೆಯ ತಂಡ ಆಗಮನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.