ETV Bharat / sukhibhava

EXPLAINER: ಮಂಕಿಫಾಕ್ಸ್​ ಅಂದ್ರೇನು? ಅದು ಹರಡುವ ಬಗೆ, ಚಿಕಿತ್ಸಾ ವಿಧಾನದ ಬಗ್ಗೆ ಇಲ್ಲಿದೆ ಮಾಹಿತಿ

author img

By

Published : May 22, 2022, 7:38 PM IST

Updated : Jun 16, 2022, 11:24 AM IST

ಆಫ್ರಿಕಾ ರಾಷ್ಟ್ರಗಳಲ್ಲಿ ಕಾಣಿಸಿಕೊಂಡ ಮಂಕಿಫಾಕ್ಸ್​ ರೋಗ ಇದೀಗ ಇತರೆ ರಾಷ್ಟ್ರಗಳಲ್ಲೂ ಗೋಚರವಾಗಿದೆ. ಇದು ಆತಂಕದ ವಿಚಾರವಾಗಿದ್ದು, ಈ ರೋಗ ಹರಡುವ ವಾಹಕ ಮತ್ತು ಚಿಕಿತ್ಸಾ ವಿಧಾನದ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

explainer-what-is-monkeypox
ಮಂಕಿಫಾಕ್ಸ್​ ಸೋಂಕು ನಿಜಕ್ಕೂ ಮಾರಕವೇ

ಯುರೋಪ್​ ಮತ್ತು ಅಮೆರಿಕದ ಆರೋಗ್ಯ ಅಧಿಕಾರಿಗಳು ಮಂಕಿಪಾಕ್ಸ್ ಸೋಂಕನ್ನ ಪತ್ತೆ ಮಾಡಿದ್ದಾರೆ. ಇದು ಆಫ್ರಿಕಾದ ದೇಶಗಳಲ್ಲಿ ಅಪರೂಪವಾಗಿ ಕಂಡುಬರುವ ರೋಗವಾಗಿದೆ. ಇದು ಹೆಚ್ಚಾಗಿ ಯುವಕರಲ್ಲಿ ಕಂಡುಬರುತ್ತದೆ. ಆಫ್ರಿಕಾ ಪ್ರವಾಸ ಮಾಡಿದ ವಿವಿಧ ರಾಷ್ಟ್ರಗಳ ಜನರಲ್ಲೂ ಈ ರೋಗ ಪತ್ತೆಯಾಗಿದೆ. ಆದಾಗ್ಯೂ ಈ ಸೋಂಕಿನ ಅಪಾಯದ ತೀವ್ರತೆಯು ಸಾಮಾನ್ಯ ಜನರಿಗೆ ಕಡಿಮೆ ಎಂದು ಹೇಳಲಾಗ್ತಿದೆ.

ಮಂಕಿಪಾಕ್ಸ್ ಎಂದರೇನು?.. ಮಂಕಿಪಾಕ್ಸ್ ಎಂಬುದು ಕೋತಿಗಳಿಂದ ಹರಡುವ ವೈರಸ್ ಆಗಿದೆ. ಈ ರೋಗದ ಹೆಚ್ಚಿನ ಮಾನವ ಪ್ರಕರಣಗಳು ಮಧ್ಯ ಮತ್ತು ಪಶ್ಚಿಮ ಆಫ್ರಿಕಾದಲ್ಲಿ ದಾಖಲಾಗಿವೆ. 1958 ರಲ್ಲಿ ವಿಜ್ಞಾನಿಗಳು ಈ ರೋಗವನ್ನು ಮೊದಲ ಬಾರಿಗೆ ಗುರುತಿಸಿದರು. ಸಂಶೋಧನೆಯ ವೇಳೆ ಕೋತಿಗಳಲ್ಲಿ ಪಾಕ್ಸ್ ತರಹದ ಕಾಯಿಲೆ ಪತ್ತೆಯಾಗಿತ್ತು. ಇದನ್ನು ಮಂಕಿಪಾಕ್ಸ್ ಎಂದು ಕರೆಯಲಾಗಿದೆ. ಇದು ಮಾನವನಿಗೆ ಮೊದಲ ಬಾರಿಗೆ 1970 ರಲ್ಲಿ ಕಾಂಗೋದ 9 ವರ್ಷದ ಹುಡುಗನಲ್ಲಿ ಕಂಡು ಬಂದಿತ್ತು.

ರೋಗಲಕ್ಷಣಗಳು ಮತ್ತು ಅದರ ಚಿಕಿತ್ಸೆ ಹೇಗೆ?.. ಮಂಕಿಪಾಕ್ಸ್ ಸಿಡುಬು ರೋಗದ ಮಾದರಿಯಾಗಿದೆ. ಇದು ಸೌಮ್ಯ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ. ಹೆಚ್ಚಿನ ರೋಗಿಗಳು ಜ್ವರ, ದೇಹದಲ್ಲಿ ನೋವು, ಶೀತ ಮತ್ತು ಆಯಾಸವನ್ನು ಅನುಭವಿಸುತ್ತಾರೆ. ಹೆಚ್ಚು ಗಂಭೀರವಾದ ಕಾಯಿಲೆ ಇರುವ ಜನರು ಮುಖ ಮತ್ತು ಕೈಗಳ ಮೇಲೆ ದದ್ದು ಮತ್ತು ಗಾಯಗಳನ್ನು ಹೊಂದಿರುತ್ತಾರೆ.

ಈ ರೋಗ ಸೋಕಿದ ಮೇಲೆ ದೇಹದ ಇತರ ಭಾಗಗಳಿಗೆ ವ್ಯಾಪಿಸಬಹುದು. ಸುಮಾರು 5 ದಿನಗಳಿಂದ 3 ವಾರಗಳವರೆಗೆ ಈ ರೋಗದ ಕಾಲಾವಧಿಯು ಇರುತ್ತದೆ. ಹೆಚ್ಚಿನ ಜನರು ಆಸ್ಪತ್ರೆಗೆ ದಾಖಲಾಗದೆ ಎರಡರಿಂದ ನಾಲ್ಕು ವಾರಗಳಲ್ಲಿ ಚೇತರಿಸಿಕೊಳ್ಳುತ್ತಾರೆ. ಮಂಕಿಪಾಕ್ಸ್ 10 ಜನರಲ್ಲಿ ಒಬ್ಬರಿಗೆ ಮಾರಕವಾಗಬಹುದು ಮತ್ತು ಮಕ್ಕಳಲ್ಲಿ ಹೆಚ್ಚು ತೀವ್ರವಾಗಿರುತ್ತದೆ ಎಂದು ಅಂದಾಜಿಸಲಾಗಿದೆ.

ಮಂಕಿಪಾಕ್ಸ್​ ವೈರಸ್‌ಗೆ ತುತ್ತಾದ ಜನರಿಗೆ ಸಾಮಾನ್ಯವಾಗಿ ಸಿಡುಬು ರೋಗಕ್ಕೆ ಹಾಕುವ ಲಸಿಕೆಯನ್ನೇ ನೀಡಲಾಗುತ್ತದೆ. ಇದು ಮಂಕಿಪಾಕ್ಸ್ ವಿರುದ್ಧವೂ ಪರಿಣಾಮಕಾರಿ ಎಂದು ಹೇಳಲಾಗಿದೆ. ಆ್ಯಂಟಿವೈರಲ್ ಔಷಧಗಳನ್ನೂ ಅಭಿವೃದ್ಧಿಪಡಿಸಲಾಗುತ್ತಿದೆ. ಯುರೋಪಿಯನ್ ಸೆಂಟರ್ ಫಾರ್ ಡಿಸೀಸ್ ಪ್ರಿವೆನ್ಶನ್ ಆ್ಯಂಡ್ ಕಂಟ್ರೋಲ್ ಎಲ್ಲಾ ಶಂಕಿತ ಪ್ರಕರಣಗಳನ್ನು ಪ್ರತ್ಯೇಕಿಸಿ ಮತ್ತು ಹೆಚ್ಚಿನ ಅಪಾಯದ ರೋಗಿಗಳಿಗೆ ಸಿಡುಬು ಲಸಿಕೆಯನ್ನು ನೀಡುವಂತೆ ಶಿಫಾರಸು ಮಾಡಿದೆ.

ಮಂಕಿಪಾಕ್ಸ್ ಪ್ರಕರಣಗಳೆಷ್ಟಿವೆ? ವಿಶ್ವ ಆರೋಗ್ಯ ಸಂಸ್ಥೆಯು ಪ್ರತಿ ವರ್ಷ ಆಫ್ರಿಕನ್ ದೇಶಗಳಲ್ಲಿ ಸಾವಿರಾರು ಮಂಕಿಪಾಕ್ಸ್ ಸೋಂಕುಗಳನ್ನು ಗುರುತು ಮಾಡಿದೆ. ಹೆಚ್ಚಿನವು ಕಾಂಗೋ ರಾಷ್ಟ್ರದಲ್ಲೇ ಗೋಚರವಾಗಿವೆ. ಇಲ್ಲಿ ವರ್ಷಕ್ಕೆ ಸುಮಾರು 6 ಸಾವಿರ ಪ್ರಕರಣಗಳು ದಾಖಲಾಗುತ್ತವೆ. ನೈಜೀರಿಯಾದಲ್ಲಿ ವರ್ಷಕ್ಕೆ ಸುಮಾರು 3 ಸಾವಿರ ಕೇಸ್​ಗಳು ಕಂಡುಬರುತ್ತವೆ.

ಮಂಕಿಪಾಕ್ಸ್‌ನ ಪ್ರಕರಣಗಳು ಅಮೆರಿಕ ಮತ್ತು ಬ್ರಿಟನ್ ಸೇರಿದಂತೆ ಆಫ್ರಿಕಾದ ಹಲವು ದೇಶಗಳಲ್ಲಿ ಕಂಡುಬಂದಿವೆ. ಈ ಸೋಂಕು ಸಹಜವಾಗಿ ಆಫ್ರಿಕಾಕ್ಕೆ ಪ್ರಯಾಣ ಬೆಳೆಸಿದಾಗ, ಆ ಪ್ರದೇಶಗಳಲ್ಲಿನ ಪ್ರಾಣಿಗಳ ಸಂಪರ್ಕ ಬೆಳೆಸಿಕೊಂಡಾಗ ಇದು ಕಾಣಿಸಿಕೊಳ್ಳುತ್ತದೆ. 2003 ರಲ್ಲಿ ಅಮೆರಿಕದ 6 ರಾಜ್ಯಗಳ 47 ಜನರಲ್ಲಿ ಈ ಸೋಂಕು ದೃಢಪಟ್ಟಿತ್ತು. ಘಾನಾದಿಂದ ಆಮದು ಮಾಡಿಕೊಂಡ ಸಣ್ಣ ಸಸ್ತನಿಗಳ ಬಳಿ ಇರಿಸಲಾಗಿದ್ದ ಸಾಕುಪ್ರಾಣಿ ಪ್ರೈರೀ ನಾಯಿಗಳಿಂದ ಅವರು ವೈರಸ್ ಸೋಂಕಿತರಾಗಿದ್ದರು.

ಇತರೆ ರಾಷ್ಟ್ರಗಳಲ್ಲಿ ಮಂಕಿಫಾಕ್ಸ್​ ಪತ್ತೆ.. ಆಫ್ರಿಕಾಕ್ಕೆ ಪ್ರಯಾಣಿಸದ ಜನರಲ್ಲೂ ಮಂಕಿಪಾಕ್ಸ್ ಹರಡುತ್ತಿರುವುದನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಯುರೋಪ್‌, ಬ್ರಿಟನ್, ಇಟಲಿ, ಪೋರ್ಚುಗಲ್, ಸ್ಪೇನ್ ಮತ್ತು ಸ್ವೀಡನ್‌ನಲ್ಲಿ ಸೋಂಕುಗಳು ವರದಿಯಾಗಿವೆ. ಸಲಿಂಗಿಗಳಲ್ಲಿ ಈ ಪ್ರಕರಣಗಳು ಹೆಚ್ಚು ಎಂಬುದು ಗೊತ್ತಾಗಿದೆ.

ಬ್ರಿಟನ್‌ನ ಹೆಲ್ತ್ ಸೆಕ್ಯುರಿಟಿ ಏಜೆನ್ಸಿ ಪ್ರಕಾರ ಎಲ್ಲಾ ಪ್ರಕರಣಗಳು ಇದೇ ಮಾದರಿಯಲ್ಲಿ ಹರಡಿದ್ದವು ಎಂದು ಹೇಳಲಾಗದು. ಇದರ ಪ್ರಸರಣವು ಬಹು ಸರಪಳಿಯಿಂದ ಕೂಡಿದೆ ಎಂದು ಹೇಳಿದೆ. ಪೋರ್ಚುಗಲ್‌ನಲ್ಲಿ ಪತ್ತೆಯಾದ ಸೋಂಕುಗಳನ್ನು ಲೈಂಗಿಕ ಆರೋಗ್ಯ ಚಿಕಿತ್ಸಾಲಯದಲ್ಲಿ ಕಂಡುಹಿಡಿಯಲಾಯಿತು. ಅಲ್ಲಿ ಪುರುಷರು ತಮ್ಮ ಜನನಾಂಗದ ಮೇಲೆ ಆದ ಗಾಯಕ್ಕೆ ಚಿಕಿತ್ಸೆ ಕೇಳಿದಾಗ ಇದು ಮಂಕಿಪಾಕ್ಸ್​ ಎಂಬುದನ್ನು ಪತ್ತೆ ಮಾಡಲಾಗಿದೆ.

ಅಮೆರಿಕದ ಅಧಿಕಾರಿಗಳು ಇತ್ತೀಚೆಗೆ ಕೆನಡಾಕ್ಕೆ ಪ್ರಯಾಣಿಸಿದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಪ್ರಕರಣವನ್ನು ವರದಿ ಪತ್ತೆ ಮಾಡಿದ್ದಾರೆ. ಇದಲ್ಲದೇ ಸಂಭಾವ್ಯ ಸೋಂಕುಗಳ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.

ಇದು ಲೈಂಗಿಕತೆಯಿಂದ ಹರಡುತ್ತದೆಯೇ?.. ಮಂಕಿಪಾಕ್ಸ್​ ಸೋಂಕು ಲೈಂಗಿಕತೆಯಿಂದಲೂ ಹರಡುವ ಸಾಧ್ಯತೆ ಹೆಚ್ಚಿದೆ ಎಂಬುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಆದರೆ, ಇದಕ್ಕೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಮಂಕಿಪಾಕ್ಸ್ ಲೈಂಗಿಕ ಕ್ರಿಯೆಯ ಮೂಲಕವೂ ಹರಡುತ್ತದೆ ಎಂಬುದಕ್ಕೆ ಯಾವುದೇ ನಿಖರ ದಾಖಲೆಗಳಿಲ್ಲ. ಆದರೆ ಇದು ಸೋಂಕಿತ ಜನರೊಂದಿಗೆ ನಿಕಟ ಸಂಪರ್ಕ, ಅವರ ದೇಹದ ದ್ರವಗಳು ಮತ್ತು ಅವರ ಬಟ್ಟೆ ಅಥವಾ ಬೆಡ್‌ಶೀಟ್‌ಗಳ ಬಳಕೆಯಿಂದ ಹರಡುತ್ತದೆ.

ಲಂಡನ್‌ನ ಇಂಪಿರಿಯಲ್ ಕಾಲೇಜ್‌ನ ವೈರಾಲಜಿಸ್ಟ್ ಮೈಕೆಲ್ ಸ್ಕಿನ್ನರ್, ಇಂಗ್ಲೆಂಡ್​ನಲ್ಲಿ ಕೆಲವರು ಹೇಗೆ ಸೋಂಕಿಗೆ ಒಳಗಾಗಿದ್ದಾರೆ ಎಂಬುದನ್ನು ನಿರ್ಧರಿಸಲು ಈ ವಿಧಾನವನ್ನು ಅಧ್ಯಯನ ಮಾಡಿದ್ದು, ಈ ಲೈಂಗಿಕ ಕ್ರಿಯೆಯ ಮೂಲಕವೂ ಹರಡುತ್ತದೆ ಎಂಬುದನ್ನು ಕಂಡುಕೊಂಡಿದ್ದಾರೆ.

ಓದಿ: ತೂಕ ಇಳಿಸಿಕೊಳ್ಳಬೇಕಾ ಹಾಗಾದರೆ ಈ 7 ನೈಸರ್ಗಿಕ ಮಾರ್ಗಗಳನ್ನು ಅನುಸರಿಸಿ!

Last Updated : Jun 16, 2022, 11:24 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.