ETV Bharat / sukhibhava

ದಣಿದ ನಿಮ್ಮ ಕಣ್ಣುಗಳನ್ನು ಆರಾಮದಾಯಕವಾಗಿಸುವ ವ್ಯಾಯಾಮಗಳು ಇಲ್ಲಿವೆ.. - Batting Eyelashes

ವರ್ಕ್​ ಫ್ರಮ್​ ಹೋಮ್​ ಹಾಗೂ ಆನ್​ಲೈನ್​ ತರಗತಿಗಳು ಆರಂಭವಾದ ಬಳಿಕ ಮಕ್ಕಳು ಹಾಗೂ ವಯಸ್ಕರು ಆನ್​​ಲೈನ್​ನಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಸಮಯ ದುಪ್ಪಟ್ಟಾಗಿದೆ. ಕೆಲಸದ ಹೊರತಾಗಿ, ಮನರಂಜನೆ ಆನ್‌ಲೈನ್ ಗೇಮಿಂಗ್​ ಅಥವಾ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ನೆಚ್ಚಿನ ಪ್ರದರ್ಶನಗಳನ್ನು ವೀಕ್ಷಿಸಲು ಸಲುವಾಗಿ ಜನರು ಹೆಚ್ಚೆಚ್ಚು ಸಮಯ ಸಾಮಾಜಿಕ ಜಾಲತಾಣಗಳಲ್ಲೇ ಮುಳುಗಿದ್ದಾರೆ. ಇಂತಹ ಸನ್ನಿವೇಶದಲ್ಲಿ ಕಣ್ಣುಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಕೆಲವು ಕಣ್ಣಿನ ವ್ಯಾಯಾಮಗಳು ಪ್ರಯೋಜನಕಾರಿಯಾಗುತ್ತವೆ.

sukhibhava
ನಿಮ್ಮ ಕಣ್ಣುಗಳನ್ನು ದೊಡ್ಡದಾಗಿಸಿ
author img

By

Published : Jul 29, 2021, 8:09 PM IST

ಕೆಲಸದ ಹೊರೆ, ಆನ್‌ಲೈನ್ ತರಗತಿಗಳಿಂದ ಪ್ರತಿಯೊಬ್ಬರೂ ಒತ್ತಡದಲ್ಲಿದ್ದಾರೆ. ಹೀಗಾಗಿ ನಮ್ಮ ಕಣ್ಣುಗಳು ಆರೋಗ್ಯಕರ ಮತ್ತು ಸುಂದರವಾಗಿರಲು ಕೆಲವು ವ್ಯಾಯಾಮಗಳು ಇಲ್ಲಿವೆ, ನೀವೂ ಇವುಗಳನ್ನು ನಿಮ್ಮ ಕಚೇರಿ ಕುರ್ಚಿಯ ಮೇಲೆ ಕುಳಿತುಕೊಂಡು ಸಹ ಮಾಡಬಹುದು. ಒತ್ತಡದಿಂದ ಮತ್ತು ಅತಿಯಾಗಿ ಕೆಲಸ ಮಾಡುತ್ತಿರುವ ಕಣ್ಣುಗಳಿಗೆ ವಿಶ್ರಾಂತಿ ಒದಗಿಸುವ ವ್ಯಾಯಾಮಗಳು ಇಲ್ಲಿವೆ.

sukhibhava
ಕಣ್ಣುಗಳ ವ್ಯಾಯಾಮಗಳು

ಹತ್ತಿರದ ಮತ್ತು ದೂರದ ವಸ್ತುಗಳ ಮೇಲೆ ನೋಟವನ್ನು ಕೇಂದ್ರೀಕರಿಸಿ:

  • ಆರಾಮದಾಯಕವಾದ ಕುರ್ಚಿ ಅಥವಾ ಸ್ಥಳದಲ್ಲಿ ಕುಳಿತುಕೊಳ್ಳಿ ಮತ್ತು ನಿಮ್ಮ ಹೆಬ್ಬೆರಳನ್ನು ನಿಮ್ಮ ಕಣ್ಣುಗಳಿಂದ 10 ಇಂಚು ದೂರದಲ್ಲಿ ಇರಿಸಿ.
  • ನಂತರ ನಿಮ್ಮ ಹೆಬ್ಬೆರಳಿನ ಮೇಲೆ 10 ಸೆಕೆಂಡುಗಳ ಕಾಲ ನಿಮ್ಮ ಗಮನ ಕೇದ್ರೀಕರಿಸಿ.
  • ಈಗ 15 ಸೆಕೆಂಡುಗಳ ಕಾಲ ದೂರದಲ್ಲಿ ಕಾಣುವ ವಸ್ತುವಿನ ಮೇಲೆ ಗಮನಹರಿಸಿ
  • ನಂತರ ಮತ್ತೆ ನಿಮ್ಮ ಕಣ್ಣುಗಳ ದೃಷ್ಟಿಯನ್ನು ನಿಮ್ಮ ಹೆಬ್ಬೆರಳಿನ ಮೇಲೆ ಹರಿಸಿ
  • ಈ ವ್ಯಾಯಾಮವನ್ನು ದಿನದಲ್ಲಿ ಕನಿಷ್ಠ ಐದು ಬಾರಿ ಮಾಡಿ.

20-20 ನಿಯಮ:

ಕಂಪ್ಯೂಟರ್ ಅಥವಾ ಮೊಬೈಲ್​ನಲ್ಲಿನ ನಿರಂತರ ಕೆಲಸದಿಂದಾಗಿ ನಿಮ್ಮ ಕಣ್ಣುಗಳಲ್ಲಿ ನೋವು ಕಾಣಿಸಿಕೊಳ್ಳುತ್ತಿದ್ದರೆ ಈ ವ್ಯಾಯಾಮವು ನಿಮಗೆ ತುಂಬಾ ಪ್ರಯೋಜನಕಾರಿಯಾಗಿದೆ.

ಈ ವ್ಯಾಯಾಮಕ್ಕಾಗಿ, ಪ್ರತಿ 20 ನಿಮಿಷಗಳ ನಂತರ ನಿಮ್ಮ ಕಂಪ್ಯೂಟರ್ ಪರದೆಯಿಂದ 20 ಸೆಕೆಂಡುಗಳ ದೂರದಲ್ಲಿರುವ ಯಾವುದೇ ವಸ್ತುವನ್ನು ನೋಡಬೇಕು. ಪ್ರತೀ 20 ನಿಮಿಷಕ್ಕೊಮ್ಮೆ ಸ್ಕ್ರೀನ್​ ಮೇಲಿಂದ ನಿಮ್ಮ ದೃಷ್ಟಿಯನ್ನು ಬೇರೆಡೆ ತಿರುಗಿಸಬೇಕು. ಇದಕ್ಕಾಗಿ ನೀವು ನಿಮ್ಮ ಮೊಬೈಲ್ ಅಥವಾ ಟೈಮರ್ ಅನ್ನು ಸೆಟ್​ ಮಾಡಿಕೊಳ್ಳಬಹುದು.

ಈ ವ್ಯಾಯಾಮವು ಕಣ್ಣಿನ ಸ್ನಾಯುಗಳನ್ನು ಸಡಿಲಗೊಳಿಸಲು ಸಹಾಯ ಮಾಡುತ್ತದೆ ಮತ್ತು ಕಣ್ಣಿನ ಒತ್ತಡವನ್ನು ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ.

Infinity ಚಿಹ್ನೆಯ ರೀತಿ ಕಣ್ಣನ್ನು ತಿರುಗಿಸಿ:

ಒಂದು ಸ್ಥಳದಲ್ಲಿ ಕುಳಿತುಕೊಳ್ಳಿ ನಿಮ್ಮ ಎಡ ಹೆಬ್ಬೆರಳನ್ನು ನಿಮ್ಮ ಮುಖದಿಂದ ದೂರವಿರಿಸಿ ಮತ್ತು ಅದರ ಮೇಲೆ ನೋಟ ಕೇಂದ್ರೀಕರಿಸಿ.ಈಗ ನಿಮ್ಮ ಹೆಬ್ಬೆರಳನ್ನು ಅನಂತ ಚಿಹ್ನೆಯ( infinity symbol) ರೂಪದಲ್ಲಿ ಸರಿಸಿ, ಈ ಚಲನೆಯ ಸಮಯದಲ್ಲಿ ನಿಮ್ಮ ಕಣ್ಣುಗಳ ದೃಷ್ಟಿಯನ್ನು ನಿಮ್ಮ ಹೆಬ್ಬೆರಳಿನ ಮೇಲೆ ಕೇಂದ್ರೀಕರಿಸಬೇಕು.ಮತ್ತು ಹೆಬ್ಬೆರಳನ್ನ ನೋಡುತ್ತಾ ನಿಮ್ಮ ಕಣ್ಣುಗಳಿಂದ ಅನಂತ ಚಿಹ್ನೆಯನ್ನು ರೂಪಿಸಬೇಕು. ಈ ವ್ಯಾಯಾಮವನ್ನು 5 ಬಾರಿ ಪ್ರದಕ್ಷಿಣಾಕಾರವಾಗಿ( clockwise direction ) ಮತ್ತು 5 ಬಾರಿ ವಿರೋಧ ಪ್ರದಕ್ಷಿಣಾಕಾರವಾಗಿ( anti-clockwise direction) ಮಾಡಿ.

ರೆಪ್ಪೆಗಳನ್ನು ಬಡಿಯುವುದು:

ನೀವು ಮಲಗಿರುವ ಕುಳಿತಿರುವ ಅಥವಾ ಯಾವುದೇ ಸ್ಥಳದಲ್ಲಿರಲಿ ,ಯಾವುದೇ ಸಮಯದಲ್ಲಿ ಬೇಕಾದರೂ ಈ ವ್ಯಾಯಾಮವನ್ನು ಮಾಡಬಹುದು.ಈ ವ್ಯಾಯಾಮದಲ್ಲಿ ನಿಮ್ಮ ಕಣ್ಣುರೆಪ್ಪೆಗಳನ್ನು ಸತತವಾಗಿ 15 ಬಾರಿ ತೆರೆಯಿರಿ ಮತ್ತು ಮುಚ್ಚಿ ನಂತರ 20 ಸೆಕೆಂಡುಗಳ ಕಾಲ ನಿಮ್ಮ ಕಣ್ಣುಗಳನ್ನು ಮುಚ್ಚಿ.ಇದು ಕಣ್ಣುಗಳ ಸುತ್ತ ರಕ್ತ ಪರಿಚಲನೆ ಹೆಚ್ಚಿಸಲು ಸಹಾಯ ಮಾಡುತ್ತದೆ ಮಾತ್ರವಲ್ಲದೇ ಕಣ್ಣುಗಳನ್ನು ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ.

ನಿಮ್ಮ ಕಣ್ಣುಗಳನ್ನು ದೊಡ್ಡದಾಗಿಸಿ:

ಮೊದಲ 5 ಸೆಕೆಂಡುಗಳ ಈ ವ್ಯಾಯಾಮದಲ್ಲಿ ನಿಮ್ಮ ಕಣ್ಣುಗಳನ್ನು ಪೂರ್ಣವಾಗಿ ಮುಚ್ಚಿ, ನಂತರ ನಿಮ್ಮ ಕಣ್ಣುಗಳನ್ನು ದೊಡ್ಡದಾಗಿ ಮಾಡಿ.ಈ ವ್ಯಾಯಾಮವು ನಿಮ್ಮ ಕಣ್ಣಿನ ಸ್ನಾಯುಗಳನ್ನು ಬಲಪಡಿಸುತ್ತದೆ.

ಎರಡೂ ಕೈಗಳನ್ನು ಉಜ್ಜಿಕೊಂಡು ಕಣ್ಣುಗಳ ಮೇಲೆ ಇರಿಸಿ:

ನಮ್ಮ ಬಾಲ್ಯದಿಂದಲೂ ನಾವು ಇದನ್ನು ಮಾಡುತ್ತಿದ್ದೇವೆ..ಕಾರಣ ಕೈಯನ್ನು ಉಜ್ಜಿದ ನಂತರ ಉತ್ಪತ್ತಿಯಾಗುವ ಶಾಖವು ಕಣ್ಣಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.

ಮಸಾಜ್​:

ನಿಮ್ಮ ಬೆರಳನ್ನು ಕಣ್ಣಿನ ಮೇಲೆ ಸೂಕ್ಷ್ಮವಾಗಿ ಇರಿಸಿ ಮತ್ತು ಅವುಗಳನ್ನು 4-5 ಸೆಕೆಂಡುಗಳ ಕಾಲ ಮಸಾಜ್ ಮಾಡಿ,ಇದು ಕಣ್ಣುಗಳ ವಿಶ್ರಾಂತಿಗೆ ಸಹಾಯ ಮಾಡುತ್ತದೆ ಮತ್ತು ಕಣ್ಣಿನ ಸ್ನಾಯುಗಳ ಸುತ್ತ ರಕ್ತ ಪರಿಚಲನೆ ಹೆಚ್ಚಿಸುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.