ETV Bharat / sukhibhava

ಅತಿಯಾದ ನೀಲಿಚಿತ್ರ ವೀಕ್ಷಣೆಯು ಲೈಂಗಿಕ ಆಕ್ರಮಣಕ್ಕೆ ಕಾರಣವೆಂದ ತಜ್ಞರು

author img

By

Published : Mar 26, 2021, 11:34 PM IST

Updated : Sep 16, 2022, 7:27 PM IST

ಆಕ್ರಮಣಕಾರಿ ಅಶ್ಲೀಲ ಚಿತ್ರಗಳು ಲೈಂಗಿಕ ಹಿಂಸೆ ಮತ್ತು ಅಪರಾಧವನ್ನು ಹೆಚ್ಚಿಸುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Excessive Pornography Linked To Sexual Aggression
ಅತಿಯಾದ ನೀಲಿಚಿತ್ರ ವೀಕ್ಷಣೆಯು ಲೈಂಗಿಕ ಆಕ್ರಮಣಕ್ಕೆ ಕಾರಣವೆಂದ ತಜ್ಞರು

ಅನೇಕ ಹಿಂಸಾತ್ಮಕ ಲೈಂಗಿಕ ಅಪರಾಧಗಳಿಗೆ ಅತಿಯಾದ ಅಶ್ಲೀಲತೆ(ದೃಶ್ಯ, ಬರಹ) ಕಾರಣ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ. ಕೆಲವು ರೀತಿಯ ಅಶ್ಲೀಲ ವಿಷಯಗಳು ಆಕ್ರಮಣಶೀಲತೆ ಮತ್ತು ಲೈಂಗಿಕ ಅಪರಾಧದ ಮೇಲೆ ಪ್ರಭಾವ ಬೀರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ತಜ್ಞರ ಪ್ರಕಾರ, ಅಶ್ಲೀಲ ಚಿತ್ರಗಳನ್ನು ನೋಡುವುದರಿಂದ ಇದು ಕೂಡ ಜೀವನದ ಒಂದು ವಿಧಾನ ಎಂದು ಯೋಚಿಸಲು ಕಾರಣವಾಗಬಹುದು. ವಾಸ್ತವದ ಗ್ರಹಿಕೆಯನ್ನು ವಿರೂಪಗೊಳಿಸುತ್ತದೆ. ಅತಿಯಾದ ಅಶ್ಲೀಲತೆಯು ರೋಗ ನಿರೋಧಕತೆಯನ್ನು ಉಂಟುಮಾಡಬಹುದು ಎಂದು ನವದೆಹಲಿಯ ಫೋರ್ಟಿಸ್ ಹೆಲ್ತ್‌ಕೇರ್‌ನ ಮಾನಸಿಕ ಆರೋಗ್ಯ ವಿಭಾಗದ ನಿರ್ದೇಶಕ ಸಮೀರ್ ಪಾರಿಖ್ ವ್ಯಾಖ್ಯಾನ ಮಾಡಿದ್ದಾರೆ.

ಅಶ್ಲೀಲತೆಯು ಸಾಕಷ್ಟು ಆಕ್ರಮಣಕಾರಿ ಪ್ರಚೋದನೆಗಳನ್ನು ಉಂಟುಮಾಡಬಹುದು. ಇದು ವ್ಯಕ್ತಿಯ ಲೈಂಗಿಕತೆಯನ್ನು ನೋಡುವ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂದು ಪಾರಿಖ್ ಹೇಳಿದ್ದಾರೆ. ನಂಬಿಕೆಗಳು, ವರ್ತನೆಗಳು ಮತ್ತು ನಡವಳಿಕೆಗಳ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಅದರಲ್ಲೂ ಕಿರಿಯ ವಯಸ್ಸಿನಲ್ಲಿಯೇ, ಈ ವೀಕ್ಷಣೆ ಹೆಚ್ಚಾದರೆ ಹೆಚ್ಚಿನ ಕೆಟ್ಟ ಪರಿಣಾಮಗಳು ಉಂಟಾಗುತ್ತವೆ ಎಂದು ತಜ್ಞರು ಹೇಳಿದ್ದಾರೆ.

ನವದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಏಮ್ಸ್) ನ ಮನೋವೈದ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ನಂದ ಕುಮಾರ್ ಅವರ ಪ್ರಕಾರ, ಲೈಂಗಿಕ ದೌರ್ಜನ್ಯವು ಅಶ್ಲೀಲತೆಯ ವಿಡಿಯೋಗೆ ಸಂಬಂಧಿಸಿದೆ. ಅದು ಅಶ್ಲೀಲತೆಯ ವಿಷಯವನ್ನು ಅವಲಂಬಿಸಿ ಆಕ್ರಮಣಶೀಲತೆ ಮತ್ತು ಲೈಂಗಿಕ ಅಪರಾಧಕ್ಕೆ ಕಾರಣವಾಗಲು ಪ್ರಭಾವ ಬೀರಬಹುದು. ಆಕ್ರಮಣಕಾರಿ ಅಶ್ಲೀಲ ಚಿತ್ರಗಳು ಲೈಂಗಿಕ ಹಿಂಸೆ ಮತ್ತು ಅಪರಾಧವನ್ನು ಹೆಚ್ಚಿಸುವ ಸಾಧ್ಯತೆಯಿದೆ ಎಂದಿದ್ದಾರೆ.

ಜರ್ನಲ್ ಆಫ್ ಕಮ್ಯುನಿಕೇಷನ್‌ನಲ್ಲಿ ಪ್ರಕಟವಾದ ಮೆಟಾ-ವಿಶ್ಲೇಷಣೆ ಪ್ರಕಾರ, ಅಶ್ಲೀಲತೆಗೆ ಹೆಚ್ಚು ಒಗ್ಗಿಕೊಂಡರೆ ದೈಹಿಕ ಮತ್ತು ಮೌಖಿಕ ಲೈಂಗಿಕ ಆಕ್ರಮಣಶೀಲತೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದೆ. ಅತಿಕ್ರಮಣ, ಕಿರುಕುಳ, ಹಿಂಸೆ ಮತ್ತು ಅಶ್ಲೀಲತೆಗೆ ಸಂಬಂಧಿಸಿದ ವೀಕ್ಷಣೆಗಳ ನಡುವೆ ಪರಸ್ಪರ ಸಂಬಂಧವಿದೆ ಎಂದು ಸೂಚಿಸುವ ಕೆಲವು ಪುರಾವೆಗಳಿವೆ ಎಂದು ಪಾರಿಖ್ ಹೇಳಿದ್ದಾರೆ. ಎಲ್ಲ ಅಪರಾಧಗಳು ಅಶ್ಲೀಲತೆಗೆ ಸಂಬಂಧಿಸಿವೆ ಎಂದು ಹೇಳುವುದು ಸರಿಯಾದ ಮಾರ್ಗವಲ್ಲ. ಇದಕ್ಕೆ ಹಲವು ಕಾರಣಗಳೂ ಇವೆ ಎಂದಿದ್ದಾರೆ. ಒಬ್ಬ ವ್ಯಕ್ತಿಯು ಅಶ್ಲೀಲ ಚಿತ್ರಗಳನ್ನು ನೋಡುವುದರಲ್ಲಿ ತೊಡಗಿಸಿಕೊಳ್ಳುವುದರಿಂದ ದಿನನಿತ್ಯದ ಕಾರ್ಯ, ನಿದ್ರೆ, ಕೆಲಸ, ಶೈಕ್ಷಣಿಕ ಮತ್ತು ಸಾಮಾಜಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂದು ಉಲ್ಲೇಖಿಸಿದ್ದಾರೆ.

ಈ ಚಟದಿಂದ ಮುಕ್ತವಾಗಲು ಇರುವ ಮಾರ್ಗಗಳೆಂದರೆ ತಮ್ಮನ್ನು ತಾವೇ ತಿದ್ದಿಕೊಂಡು ಮುನ್ನಡೆಯುವುದು, ಇಂತಹ ಸಂದರ್ಭದಲ್ಲಿ ಬೇರೆ ವಿಷಯಗಳ ಬಗ್ಗೆ ಆಲೋಚನೆ ಮಾಡುವುದು ಮತ್ತು ತಜ್ಞರ ಸಹಾಯವನ್ನು ತೆಗೆದುಕೊಳ್ಳುವುದು ಎಂದು ಹೇಳಿದ್ದಾರೆ.

ಅಶ್ಲೀಲ ವಿಷಯವನ್ನು ನಿಷೇಧಿಸುವುದರಿಂದ ಅನೇಕರಿಗೆ ಉಪಯೋಗವಾಗವುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಪಾರಿಖ್, ಅಶ್ಲೀಲತೆಯನ್ನು ನಿಷೇಧಿಸಿದರೆ ಜನರು ಒಂದು ದಾರಿ ಮುಚ್ಚಿದರೆ ಇನ್ನೊಂದನ್ನು ಕಂಡುಕೊಳ್ಳುತ್ತಾರೆ. ಈ ಹಿನ್ನೆಲೆ ನಾವು ಅವರಿಗೆ ಮಾಧ್ಯಮದ ಮೂಲಕ ಅರ್ಥ ಮಾಡಿಸಬಹುದು. ನಕಲಿ ಮತ್ತು ನೈಜತೆಯ ನಡುವಿನ ವ್ಯತ್ಯಾಸವನ್ನು ಅವರಿಗೆ ಅರ್ಥವಾಗುವಂತೆ ಮಾಡಿ, ಅವರ ಸುರಕ್ಷತೆಯ ಮಹತ್ವವನ್ನು ಅರ್ಥಮಾಡಿಕೊಳ್ಳಲು ಅನುವು ಮಾಡಿಕೊಡಬೇಕು. ಈ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕಾಗುತ್ತದೆ ಎಂದಿದ್ದಾರೆ.

ನಾವು ಲೈಂಗಿಕ ಶಿಕ್ಷಣದ ಬಗ್ಗೆ ಮಾತನಾಡಲು ಮುಂದಾದರೆ ಅಶ್ಲೀಲತೆಯು ವ್ಯಕ್ತಿಯ ಲೈಂಗಿಕ ನಡವಳಿಕೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಜನಸಾಮಾನ್ಯರಿಗೆ ಶಿಕ್ಷಣ ನೀಡುವಲ್ಲಿ ವಿವಿಧ ಅಂಶಗಳನ್ನು ಸೇರಿಸಿಕೊಳ್ಳಬಹುದು ಎಂದು ಪಾರಿಖ್ ಹೇಳಿದ್ದಾರೆ.

Last Updated : Sep 16, 2022, 7:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.