ETV Bharat / sukhibhava

ಕ್ರ್ಯಾನ್‌ಬೆರಿ ಸೇವಿಸುವುದರಿಂದ ಜ್ಞಾಪಕಶಕ್ತಿ ಹೆಚ್ಚಾಗಿ, ಬುದ್ಧಿಮಾಂದ್ಯತೆ ಕಡಿಮೆಯಾಗುತ್ತದೆ : ಅಧ್ಯಯನ - ಫ್ರಾಂಟಿಯರ್ಸ್ ಇನ್ ನ್ಯೂಟ್ರಿಷನ್‌ನಲ್ಲಿ ಪ್ರಕಟವಾದ ಅಧ್ಯಯನ

ಹೊಸ ಸಂಶೋಧನೆಯ ಪ್ರಕಾರ, ನಮ್ಮ ಆಹಾರದಲ್ಲಿ ವಿಶೇಷವಾಗಿ ಮಧ್ಯವಯಸ್ಸಿನಲ್ಲಿ ಕ್ರ್ಯಾನ್‌ಬೆರಿಗಳನ್ನು ಸೇರಿಸುವುದರಿಂದ ಮೆಮೊರಿ, ಮೆದುಳಿನ ಕಾರ್ಯ ಸುಧಾರಿಸಲು ಮತ್ತು 'ಕೆಟ್ಟ' ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ ಎಂದು ತಿಳಿದು ಬಂದಿದೆ..

ಕ್ರ್ಯಾನ್‌ಬೆರಿ
ಕ್ರ್ಯಾನ್‌ಬೆರಿ
author img

By

Published : May 20, 2022, 5:34 PM IST

ವಿಟಮಿನ್ C, ಫೈಬರ್ ಮತ್ತು ಆಂಟಿಆಕ್ಸಿಡೆಂಟ್​ಗಳಲ್ಲಿ ಸಮೃದ್ಧವಾಗಿರುವ ಕ್ರ್ಯಾನ್‌ಬೆರಿಗಳು ಉತ್ತರ ಅಮೆರಿಕಾದ ಸ್ಥಳೀಯ ಹಣ್ಣುಗಳಾಗಿವೆ. ಸಾಮಾನ್ಯವಾಗಿ ಒಣಗಿದ, ಸಾಸ್ ಅಥವಾ ಮಫಿನ್​ಗಳಲ್ಲಿ ಅಥವಾ ರಸವಾಗಿ, ಕ್ರ್ಯಾನ್​ಬೆರಿಗಳು ಲಭ್ಯವಿರಲಿವೆ. ಈ ಹಣ್ಣುಗಳು ನಮ್ಮ ದೇಹಕ್ಕೆ ಯಾವಾಗಲು ಒಳ್ಳೆಯದು. ಅದರಲ್ಲೂ ವಿಟಮಿನ್ ಸಿ ಅಂಶ ಹೆಚ್ಚಿರುವ ಹಣ್ಣುಗಳನ್ನು ಪ್ರತಿನಿತ್ಯ ಸೇವಿಸಿದರೆ ಅನೇಕ ಆರೋಗ್ಯ ಪ್ರಯೋಜನಗಳು ದೊರೆಯುತ್ತದೆ. ಇದೇ ರೀತಿ ಕ್ರ್ಯಾನ್‌ಬೆರ್ರಿ ಹಣ್ಣುಗಳಿಂದಲೂ ಅನೇಕ ಆರೋಗ್ಯ ಪ್ರಯೋಜನಗಳಿವೆ.

ಫ್ರಾಂಟಿಯರ್ಸ್ ಇನ್ ನ್ಯೂಟ್ರಿಷನ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಕ್ರ್ಯಾನ್‌ಬೆರಿಗಳನ್ನು ಸೇವಿಸಿದ 50 ರಿಂದ 80 ವರ್ಷ ವಯಸ್ಸಿನವರಲ್ಲಿ ಸ್ಮರಣಾ ಶಕ್ತಿ, ನರಗಳ ಕಾರ್ಯನಿರ್ವಹಣೆ ಮತ್ತು ಮೆದುಳಿಗೆ ರಕ್ತ ಸಂಚರಿಸುವ ಕಾರ್ಯ ಗಮನಾರ್ಹವಾಗಿ ಸುಧಾರಿಸಿದೆ ಎಂದು ತೋರಿಸಿದೆ. ಇದಲ್ಲದೆ ಅಧ್ಯಯನದಲ್ಲಿ ಭಾಗವಹಿಸುವವರಲ್ಲಿ ಎಲ್‌ಡಿಎಲ್ ಅಥವಾ 'ಕೆಟ್ಟ' ಕೊಲೆಸ್ಟ್ರಾಲ್ ಮಟ್ಟದಲ್ಲಿ ತುಂಬಾ ಇಳಿಕೆಯಾಗಿರುವುದು ಕಂಡು ಬಂದಿದೆ.

ಕ್ರ್ಯಾನ್‌ಬೆರಿಗಳು ನರಗಳ ಆರೋಗ್ಯವನ್ನು ಸುಧಾರಿಸಬಹುದು ಮತ್ತು ಮೆದುಳಿನ ಪರ್ಫ್ಯೂಷನ್ ಹಾಗೂ ಸ್ಮರಣಾ ಶಕ್ತಿ ಸುಧಾರಣೆಗೆ ಭಾಗಶಃ ಕೊಡುಗೆ ನೀಡಬಹುದು ಎಂಬ ಕಲ್ಪನೆಯನ್ನು ಇದು ಬೆಂಬಲಿಸುತ್ತದೆ ಎಂದು ಯುಕೆ ಈಸ್ಟ್ ಆಂಗ್ಲಿಯಾ ವಿಶ್ವವಿದ್ಯಾಲಯದ ಸಂಶೋಧಕರು ಹೇಳಿದ್ದಾರೆ. ಈ ತಂಡದ ಪ್ರಕಾರ, ಮಾನವರಲ್ಲಿ ಸ್ಮರಣೆ ಮತ್ತು ಮೆದುಳಿನ ಆರೋಗ್ಯದ ಮೇಲೆ ಕ್ರ್ಯಾನ್‌ಬೆರಿಗಳ ದೀರ್ಘಕಾಲೀನ ಪ್ರಭಾವವನ್ನು ಪರೀಕ್ಷಿಸಲು ನಡೆಸಿದ ಮೊದಲ ಅಧ್ಯಯನ ಇದಾಗಿದೆ.

ಇದನ್ನೂ ಓದಿ: ಜಾಸ್ಮಿನ್​​​​​​​​​​​​​​​​​​ ಹೇರ್​​ ಆಯಿಲ್​​​​​​​​​​ ಚರ್ಮ ಮತ್ತು ಕೂದಲಿಗೆ ಹಿತಕರವೇ? ಆರೋಗ್ಯಕ್ಕೆ ಇದು ಎಷ್ಟು ಪ್ರಯೋಜನಕಾರಿ?

2050ರ ವೇಳೆಗೆ ಬುದ್ಧಿಮಾಂದ್ಯತೆಯು ಸುಮಾರು 152 ಮಿಲಿಯನ್ ಜನರ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ. ಇದಕ್ಕೆ ಯಾವುದೇ ಚಿಕಿತ್ಸೆ ಇಲ್ಲ. ಆದ್ದರಿಂದ ನಾವು ಆಹಾರದಲ್ಲಿ, ನಮ್ಮ ಜೀವನಶೈಲಿಯಲ್ಲಿ ಬದಲಾವಣೆ ಮಾಡುವುದು ಅಗತ್ಯವಾಗಿದೆ. ಹೀಗೆ ಮಾಡುವುದರಿಂದ ರೋಗದ ಅಪಾಯ ಮತ್ತು ಹೊರೆಯನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ ಎಂದು ಪ್ರಮುಖ ಸಂಶೋಧಕ ಡಾ. ಡೇವಿಡ್ ಹೇಳಿದ್ದಾರೆ.

ಕೆಂಪು, ನೀಲಿ ಅಥವಾ ನೇರಳೆ ಬಣ್ಣದಲ್ಲಿರುವ ಹಣ್ಣುಗಳು ಆಂಥೋಸಯಾನಿನ್‌ಗಳು ಮತ್ತು ಪ್ರೊಆಂಥೋಸಯಾನಿಡಿನ್‌ಗಳಲ್ಲಿ ಸಮೃದ್ಧವಾಗಿವೆ ಎಂದು ತಿಳಿದು ಬಂದಿದೆ. ಅಷ್ಟೇ ಅಲ್ಲ, ಕ್ರ್ಯಾನ್‌ಬೆರ್ರಿ ಹಣ್ಣಿನ ಜ್ಯೂಸ್‌ ಮೂತ್ರನಾಳದ ಸೋಂಕು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕ್ರ್ಯಾನ್‌ಬೆರ್ರಿಯಲ್ಲಿ ಪ್ರೋಆ್ಯಂಥೋಸೈಯಾನಿಡಿನ್ಸ್ ಆ್ಯಂಟಿಆಕ್ಸಿಡೆಂಟ್ ಹೆಚ್ಚಾಗಿರುವುದು ಇದಕ್ಕೆ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕ್ರ್ಯಾನ್‌ಬೆರ್ರಿಯಲ್ಲಿ ವಿಟಮಿನ್ ಸಿ ಅಂಶ ಹೆಚ್ಚಿರುತ್ತದೆ ಹಾಗೂ ರೋಗ ನಿರೋಧಕ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ. ಒಂದು ಕಪ್ ಕ್ರ್ಯಾನ್‌ಬೆರ್ರಿ ಜ್ಯೂಸ್‌ ಕುಡಿದರೆ ಸಾಕು ಒಂದು ದಿನಕ್ಕೆ ನಿಮ್ಮ ದೇಹಕ್ಕೆ ಅಗತ್ಯವಿರುವ ಶೇ.22ರಷ್ಟು ವಿಟಮಿನ್ ಸಿ ಅದರಲ್ಲಿರುತ್ತದೆ. ಜತೆಗೆ, ಹೆಚ್ಚು ಪೌಷ್ಠಿಕಾಂಶವನ್ನು ಒಳಗೊಂಡಿದೆ. ಹೀಗಾಗಿ, ಕ್ರ್ಯಾನ್‌ಬೆರ್ರಿ ಹಣ್ಣುಗಳನ್ನು ಹೆಚ್ಚು ಸೇವಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.