ETV Bharat / sukhibhava

ಪ್ರತಿನಿತ್ಯ ಮುಡಿಯಷ್ಟು ಒಣ ಹಣ್ಣು ಸೇವಿಸಿ; ಹೃದಯದ ಸಮಸ್ಯೆ ಕಡಿಮೆಯಾಗುತ್ತೆ

ಹೆಚ್ಚಿನ ಪೌಷ್ಠಿಕಾಂಶ ಸೇರಿದಂತೆ ಸಂಪದ್ಭರಿತವಾಗಿರುವ ಒಣ ಹಣ್ಣುಗಳ ಸೇವನೆ ಹೃದಯದ ಆರೋಗ್ಯಕ್ಕೆ ಹೆಚ್ಚಿನ ಪ್ರಯೋಜನ ನೀಡುತ್ತದೆ.

eat-plenty-of-dry-fruits-daily-heart-risk-is-reduced

author img

By

Published : Mar 23, 2023, 2:32 PM IST

ಹೃದಯದ ಆರೋಗ್ಯದ ಬಗ್ಗೆ ಸದಾ ಕಾಳಜಿವಹಿಸುವುದು ಅವಶ್ಯಕ. ಈ ಹೃದಯವನ್ನು ಆರೋಗ್ಯಯುತವಾಗಿ ನೋಡಿಕೊಳ್ಳುವುದು ಹೇಗೆ ಎಂಬ ಪ್ರಶ್ನೆ ಅನೇಕ ಬಾರಿ ಮೂಡುತ್ತದೆ. ಇದಕ್ಕೆ ಉತ್ತರ ಉತ್ತಮ ಆಹಾರ ಮತ್ತು ವ್ಯಾಯಮ. ಅದರಲ್ಲೂ ಒಣ ಹಣ್ಣಗಳು (Nuts) ಮತ್ತು ಬೀಜಗಳು (Seeds) ಹೃದಯದ ರೋಗಗಳನ್ನು ಶೇ 25ರಷ್ಟನ್ನು ಕಡಿಮೆ ಮಾಡುತ್ತದೆ ಎಂಬುದನ್ನು ಅಧ್ಯಯನ ತಿಳಿಸಿದೆ. ಈ ಒಣಹಣ್ಣುಗಳು ಮತ್ತು ಬೀಜಗಳು ಕೊಲೆಸ್ಟ್ರಾಲ್​ ಮಟ್ಟವನ್ನು ಕಡಿಮೆ ಮಾಡುತ್ತದೆ. ಒಣಹಣ್ಣುಗಳನ್ನು ತಿನ್ನುವುದರಿಂದ ಹಾರ್ಟ್​ ಅಟ್ಯಾಕ್​ ಆಗುವ ಅಪಾಯ ಕಡಿಮೆ.

ಸಾಮಾನ್ಯ ಜನರಲ್ಲಿ ಪರಿಣಾಮಕಾರಿ: ಈಗಾಗಲೇ ಹೆಚ್ಚಿನ ಕೊಲೆಸ್ಟ್ರಾಲ್​ ಹೊಂದಿರುವವರಲ್ಲಿ ಈ ಒಣ ಹಣ್ಣು ಮತ್ತು ಬೀಜಗಳ ಸೇವನೆ ಹೆಚ್ಚಿನ ಪರಿಣಾಮಕಾರಿಯಾಗುವುದಿಲ್ಲ. ಬದಲಾಗಿ ಸಾಮಾನ್ಯ ಜನರಲ್ಲಿ ಹೃದಯಾಘಾತ ತಡೆಯುವಲ್ಲಿ ಇವು ಸಹಕಾರಿಯಾಗುತ್ತದೆ ಎಂದು ಓಸ್ಲೊ ಯುನಿವರ್ಸಿಟಿಯ ರಿಸರ್ಚ್​ ಫೆಲೋ ಎರಿಕ್​ ಅರ್ನೆಸೆನ್​ ತಿಳಿಸಿದ್ದಾರೆ. ಈ ಅಧ್ಯಯನ ಸಂಬಂಧ ನಾರ್ವೆ ಮತ್ತು ಸ್ವೀಡನ್​ನ ಕರೋಲಿನ್​ಸ್ಕಾ ಸಂಸ್ಥೆಯು ಈ ಹಿಂದೆ ನಡೆಸಲಾದ 60 ಅಧ್ಯಯನಗಳನ್ನು ಮೆಟಾ ವಿಶ್ಲೇಷಣೆ ನಡೆಸಿದೆ. ಈ ಅಧ್ಯಯನ ಅನುಸಾರ ಒಣ ಹಣ್ಣುಗಳು ಹೃದಯದ ಆರೋಗಕ್ಕೆ ಉತ್ತಮವಾಗಿದೆ.

ಪ್ರತಿನಿತ್ಯ ಮುಷ್ಟಿಯಷ್ಟು ಅಥವಾ 30 ಗ್ರಾಂಗಳಷ್ಟು ಒಣಹಣ್ಣು- ಬೀಜಗಳ ಮಿಶ್ರಣ ಸೇವಿಸುವುದರಿಂದ ಹೃದಯ ಸಮಸ್ಯೆಯಿಂದ ಬಳಲುವ ಸಾಧ್ಯತೆಯನ್ನು ಶೇ 20 ರಿಂದ 25 ಪ್ರತಿಶತ ಕಡಿಮೆ ಮಾಡಬಹುದು. ಆದರೆ, ಅನೇಕ ಜನರು ಒಣ ಹಣ್ಣು ಮತ್ತು ಬೀಜಗಳನ್ನು ತಿನ್ನುವುದಿಲ್ಲ ಎನ್ನುತ್ತಾರೆ ಅರ್ನೆಸನ್​. ಫುಡ್​ ಅಂಡ್​ ನ್ಯೂಟ್ರಿಷಿಯನ್​ ರಿಸರ್ಚ್​ನಲ್ಲಿ ಪ್ರಕಟವಾದ ಈ ಸಂಶೋಧನಾ ಪತ್ರಿಕೆಯಲ್ಲಿ ಏನು ತಿನ್ನದೆ ಇರುವುದಕ್ಕಿಂತ ಬೀಜಗಳನ್ನು ತಿನ್ನುವುದು ಉತ್ತಮ. ಇದನ್ನೇ ವಿಜ್ಞಾನಿಗಳು ಕೂಡ ತಿಳಿಸಿದ್ದಾರೆ ಎಂದು ಸಂಶೋಧಕ ಸಹವರ್ತಿಯಾಗಿರುವ ಅರ್ನೆಸನ್​ ತಿಳಿಸಿದ್ದಾರೆ.

ಕೊಬ್ಬಿನ ಸಂಗ್ರಹವಾಗದಂತೆ ಕಾರ್ಯ: ಬಾದಾಮಿ, ಪಿಸ್ತಾ ಮತ್ತು ವಾಲ್​ನಟ್​​ಗಳು ಕೊಲೆಸ್ಟ್ರಾಲ್​ ಕಡಿಮೆ ಮಾಡುವಲ್ಲಿ ಪ್ರಮುಖವಾಗಿದೆ. ಕೆಲವು ನಿರ್ದಿಷ್ಟ ಬೀಜಗಳು ಇತರರ ಮೇಲೆ ಯಾವ ರಿತಿ ಪ್ರಭಾವ ಬೀರುತ್ತವೆ ಎಂಬುದನ್ನು ನಿರ್ಣಯ ಮಾಡಲು ಪುರಾವೆಗಳಿಲ್ಲ. ಬೀಜಗಳು ಕೊಲೆ ಸ್ಟ್ರಾಲ್​ ಮಟ್ಟಗಳ ಮೇಲೆ ಪ್ರಯೋಜನಕಾರಿಯಾಗಿದೆ. ಇದು ಹೃದಯ ನಾಳದಲ್ಲಿ ಸಂಗ್ರಹವಾಗುವ ಕೊಬ್ಬನ್ನು ತಡೆಯಲು ನೆರವಾಗುತ್ತದೆ. ಕರುಳಿನ ಚಯಾಪಚಯ, ಜೈವಿಕ ಕ್ರಿಯೆಯ ಚಯಾಪಚನಯದಲ್ಲಿ ಪ್ರಮುಖವಾಗಿದೆ ಎಂದಿದ್ದಾರೆ.

ಆದಾಗ್ಯೂ, ಒಣಹಣ್ಣುಗಳ ಸೇವನೆ ಸ್ಟ್ರೋಕ್​ ಮತ್ತು ಟೈಪ್​ 2 ಡಯಾಬೀಟಿಸ್​ ಅಪಾಯ ಕಡಿಮೆ ಮಾಡುತ್ತದೆ ಎಂಬುದಕ್ಕೆ ಯಾವುದೇ ಸ್ಪಷ್ಟನೆ ಇಲ್ಲ. ಇದರ ಬಗ್ಗೆ ಖಚಿತತೆ ಇಲ್ಲ. ರಕ್ತದೊತ್ತಡದಲ್ಲಿ ಈ ಒಣಹಣ್ಣುಗಳ ಪಾತ್ರ ಕಂಡು ಬರುವುದಿಲ್ಲ. ಈ ಒಣ ಹಣ್ಣುಗಳು ಪಾರ್ಶ್ವವಾಯು ಅಪಾಯದಲ್ಲಿ ಒಂದಾಗಿದೆ. ರಕ್ತದ ಸಕ್ಕರೆ ಮಟ್ಟ ನಿರ್ವಹಣೆಯಲ್ಲಿ ಒಣಹಣ್ಣುಗಳು ಉತ್ತಮ ಎನ್ನಲು ಸಾಧ್ಯವಿಲ್ಲ. ಇದು ಟೈಪ್​ 2 ಡಯಾಬೀಟಿಸ್​ ಅಪಾಯವನ್ನು ಹೊಂದಿರುತ್ತದೆ ಎಂದಿದ್ದಾರೆ ಅರ್ನೆಸನ್​.

ಇದನ್ನೂ ಓದಿ: ನಾವು ಧರಿಸುವ ಬಟ್ಟೆಗಳಿಂದಲೂ ಭೂಮಿಯ ಸಂರಕ್ಷಣೆ: ಹೇಗೆ ಗೊತ್ತೇ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.