ಚಳಿಗಾಲದ ವಾತಾವರಣದಲ್ಲಿನ ಆದ್ರತೆ ಮತ್ತು ಶೀತದ ಹವಾಮಾನದಿಂದ ಮನುಷ್ಯರ ತುಟಿ ಒಣಗುವುದು ಸಾಮಾನ್ಯ. ಆದರೆ, ಕೆಲವರಿಗೆ ಈ ಸಮಸ್ಯೆ ಬೇಸಿಗೆಯಲ್ಲೂ ಕಾಡುತ್ತದೆ. ಬೇಸಿಗೆಯಲ್ಲಿ ತುಟಿಯ ಅಂದಗೆಡುವುದಕ್ಕೆ ಹವಾಮಾನದ ಹೊರತಾಗಿ ಅನೇಕ ಕಾರಣಗಳಿವೆ. ಯಾವ ಕಾರಣಕ್ಕಾಗಿ ಈ ಸಮಯದಲ್ಲಿ ತುಟಿ ಬಿರಿಯುತ್ತದೆ. ಇದನ್ನು ತಡೆಯುವುದು ಹೇಗೆ? ನೋಡೋಣ.
ತಜ್ಞರ ಪ್ರಕಾರ, ಬೇಸಿಗೆಯಲ್ಲಿ ದೇಹ ನೈಸರ್ಗಿಕವಾಗಿ ನಿರ್ಜಲೀಕರಣಕ್ಕೆ ಒಳಗಾಗುತ್ತದೆ. ಏರುತ್ತಿರುವ ಬಿಸಿಲಿನಿಂದಾಗಿ ದೇಹದಲ್ಲಿ ನೀರಿನ ಕೊರತೆ ಉಂಟಾಗಿ ಚರ್ಮ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರ ಪರಿಣಾಮವಾಗಿ ಕೆಲವರಲ್ಲಿ ಬಿರಿದ ತುಟಿ ಸಮಸ್ಯೆ ಉಂಟಾಗುತ್ತದೆ.
ಬಿಸಿಲಿಗೆ ಹೆಚ್ಚು ಮೈಯೊಡ್ಡುವುದರಿಂದ ಸೂರ್ಯನ ನೇರಳಾತೀತ ಕಿರಣಗಳು ದೇಹವನ್ನು ಒಣಗುವಂತೆ ಮಾಡುತ್ತದೆ. ಅಲ್ಲದೇ, ಇದರಿಂದ ತುಟಿ ದಪ್ಪವಾಗುತ್ತದೆ. ವಾತಾವರಣದ ಹೊರತಾಗಿ ಕಡಿಮೆ ಗುಣಮಟ್ಟದ ಲಿಪ್ ಬಾಮ್ ಬಳಕೆ ಕೂಡ ಈ ಸಮಸ್ಯೆಗೆ ಕಾರಣ. ತುಟಿಗಳು ಒಣಗಿದಾಗ ಅದಕ್ಕೆ ಮೊಶ್ಚರೈಸರ್ ಆಗಿರಲಿ ಎಂದು ಪದೇ ಪದೇ ತುಟಿಗಳನ್ನು ಒದ್ದೆ ನಾಲಗೆಗೆ ಸವರುತ್ತಾರೆ. ಆದರೆ, ಇದು ಮತ್ತಷ್ಟು ತುಟಿ ಒಣಗುವಂತೆ ಮಾಡುತ್ತದೆ. ದೀರ್ಘಕಾಲ ಈ ರೀತಿ ಮಾಡುವುದರಿಂದ ಸೋಂಕಿನ ಸಮಸ್ಯೆಯೂ ಉಂಟಾಗಬಹುದು. ಬೇಸಿಗೆಯಲ್ಲಿ ನಿಮ್ಮ ದೇಹವನ್ನು ರಕ್ಷಿಸಲು ಸಾಕಷ್ಟು ಪ್ರಮಾಣದ ನೀರು ಕುಡಿಯಿರಿ. ಅತಿ ಹೆಚ್ಚು ನೀರು, ನೀರಿನಾಂಶವಿರುವ ಹಣ್ಣು ಮತ್ತು ತರಕಾರಿ ಸೇವಿಸುವುದರಿಂದ ದೇಹವನ್ನು ನಿರ್ಜಲೀಕರಣ ಸಮಸ್ಯೆಯಿಂದ ಕಾಪಾಡಬಹುದು.
ಕಡಿಮೆ ಗುಣಮಟ್ಟದ ಕೆಮಿಕಲ್ ಹೊಂದಿರುವ ಲಿಪ್ಬಾಮ್ಗಳ ಬದಲಾಗಿ, ಮನೆ ಮದ್ದುಗಳನ್ನು ಬಳಕೆ ಮಾಡಿ ತುಟಿಯ ಮೃದುತ್ವ ಕಾಪಾಡಬಹುದು. ಜೊಜೊಮೊ ಎಣ್ಣೆ, ಶಿಯಾ ಬಟರ್ ಸೇರಿದಂತೆ ಇನ್ನಿತರ ಅಡುಗೆ ಮನೆಯ ಸೌಂದರ್ಯವರ್ಧಕಗಳನ್ನು ಹಚ್ಚಿ, ಮಸಾಜ್ ಮಾಡಿ. ದೇಹದಲ್ಲಿ ವಿಟಮಿನ್ ಬಿ ಕೊರತೆಯಿಂದಲೂ ಬಿರಿದ ತುಟಿ ಸಮಸ್ಯೆ ಕಾಡುತ್ತದೆ. ಮೊಟ್ಟೆ, ಮಾಂಸ, ಲಿವರ್, ಹಸಿರು ತರಕಾರಿ, ಮೀನು, ಮೊಟ್ಟೆ ಹಾಗು ಚೀಸ್ ಮುಂತಾದ ವಿಟಮಿನ್ ಬಿ ಸಮೃದ್ಧ ಡಯಟ್ ಆಹಾರ ಸೇವನೆ ಮಾಡಿರಿ.
ಅತಿ ಹೆಚ್ಚು ಪ್ರಮಾಣದ ವಿಟಮಿನ್ ತೆಗೆದುಕೊಳ್ಳುವುದು ಕೂಡಾ ತುಟಿಯ ಅಂದಗೆಡುವುದಕ್ಕೆ ಕಾರಣ. ವಿಟಮಿನ್ ಎ ಅತಿ ಹೆಚ್ಚು ಪ್ರಮಾಣದಲ್ಲಿ ಪಡೆದರೆ ಅದು ಲಿವರ್ ಸೇರಿದಂತೆ ಚರ್ಮದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ವಿಟಮಿನ್ ಪೂರಕಗಳ ಬದಲಾಗಿ ಹಾಲು, ಮೊಸರು, ಕ್ಯಾರೆಟ್, ಸಿಹಿ ಆಲೂಗಡ್ಡೆ, ಮಾವಿನ ಹಣ್ಣು, ಸಪೋಟ, ಏಪ್ರಿಕೋಟ್ ಮುಂತಾದವುಗಳನ್ನು ಸೇವಿಸುವುದು ಉತ್ತಮ. ಒಂದು ಟೀ ಸ್ಪೂನ್ ಜೀರಿಗೆಯನ್ನು ಒಂದು ಕಪ್ ನೀರಿನಲ್ಲಿ ಕುದಿಸಿ, ಆರಿಸಿ ನಂತರ ಕುಡಿಯಿರಿ. ಇದು ಕ್ರಮೇಣವಾಗಿ ನಿಮ್ಮ ಆರೋಗ್ಯ ಮತ್ತು ತುಟಿ ಸಮಸ್ಯೆಗೆ ಮುಕ್ತಿ ನೀಡುತ್ತದೆ.
ಬೇಸಿಗೆಯಲ್ಲಿನ ಆರ್ದ್ರತೆ ಕೂಡ ತುಟಿಯ ತ್ವಚೆ ಮೇಲೆ ಪರಿಣಾಮ ಬೀರುತ್ತದೆ. ಗಾಳಿ ಮತ್ತು ಬೆಳಕಿಲ್ಲದ ಸಣ್ಣ ಕೋಣೆಯಲ್ಲಿ ಇರುವುದರಿಂದ ಹ್ಯುಮಿಡಿಟಿ ಹೆಚ್ಚಾಗುತ್ತದೆ. ಈ ಹಿನ್ನೆಲೆಯಲ್ಲಿ ಹೆಚ್ಚು ಗಾಳಿಯಾಡುವ ಪ್ರದೇಶದಲ್ಲಿ ಇರುವಂತೆ ನೋಡಿಕೊಳ್ಳಬೇಕು. ಲೋಳೆ ರಸ, ತೆಂಗಿನ ಎಣ್ಣೆ, ಸೌತೆಕಾಯಿ ಮತ್ತು ಜೇನು ತುಪ್ಪ - ಸಕ್ಕರೆಯ ಸ್ಕರ್ಬ್ ಅನ್ನು ತುಟಿಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ಇದಾದ ಬಳಿಕ ತುಟಿಗೆ ಮಾಶ್ಚರೈಸರ್ ಹಚ್ಚಿ.
ಇದನ್ನೂ ಓದಿ: ಸಾಕಷ್ಟು ನೀರು ಕುಡಿಯುರಿ.. ಇಲ್ಲದಿದ್ದರೆ ಸಮಸ್ಯೆಗಳು ಎದುರಾಗುತ್ತವೆ..