ETV Bharat / sukhibhava

ಟೀ ಪ್ರಿಯರಿಗೆ ಟೈಪ್​ 2 ಡಯಾಬಿಟೀಸ್​ ದೂರ.. ವರದಿ - ಈಟಿವಿ ಭಾರತ್​ ಕನ್ನಡ

ಬ್ಲಾಕ್​, ಗ್ರೀನ್​ ಮತ್ತು ಊಲಾಂಗ್​ ಟೀ ಟೈಪ್​ 2 ಡಯಾಬಿಟೀಸ್ ಆಗುವ ಅಪಾಯವನ್ನು ಕಡಿಮೆ ಮಾಡುತ್ತೆ ಎಂದು ಸಂಶೋಧನೆ ತಿಳಿಸಿದೆ.

drinking-tea-may-reduce-risk-of-type-2-diabetes-study
ಟೀ ಪ್ರಿಯರಿಗೆ ಟೈಪ್​ 2 ಡಯಾಬಿಟೀಸ್​ ದೂರ.. ವರದಿ
author img

By

Published : Sep 19, 2022, 7:00 PM IST

ನವದೆಹಲಿ: ಬ್ಯಾಕ್​, ಗ್ರೀನ್​ ಮತ್ತು ಊಲಾಂಗ್​ ಟೀ ಕುಡಿಯುವವರಿಗೆ ಟೈಪ್​ 2 ಡಯಾಬಿಟೀಸ್​ ಆಗುವ ಅಪಾಯ ಕಡಿಮೆ ಇರುತ್ತದೆ ಎಂಬುದು ಸಂಶೋಧನೆಯಲ್ಲಿ ಕಂಡು ಬಂದಿದೆ. ಈ ಸಂಶೋಧನೆಗೆ ಎಂಟು ದೇಶದ ಒಂದು ಮಿಲಿಯನ್​ಗಿಂತಲೂ ಹೆಚ್ಚು ಜನರನ್ನು ಬಳಸಿಕೊಳ್ಳಲಾಗಿದೆ. ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಯುರೋಪಿಯನ್ ಅಸೋಸಿಯೇಷನ್ ಫಾರ್ ದಿ ಸ್ಟಡಿ ಆಫ್ ಡಯಾಬಿಟಿಸ್ (EASD) ಸಂಸ್ಥೆ ಈ ಸಂಶೋಧನೆ ಪ್ರಸ್ತುತ ಪಡಿಸಿದೆ.

ದಿನಕ್ಕೆ ಕನಿಷ್ಠ ನಾಲ್ಕು ಕಪ್ ಚಹಾ ಕುಡಿಯುವುದು ಸರಾಸರಿ 10 ವರ್ಷಗಳ ಅವಧಿಯಲ್ಲಿ ಟೈಪ್​ 2 ಡಯಾಬಿಟೀಸ್​ನ 17 ಪ್ರತಿಶತ ಅಪಾಯ ಕಡಿಮೆ ಆಗಲಿದೆ ಎಂದು ಸೂಚಿಸಿದೆ. ಊಲಾಂಗ್ ಚಹಾವು ಸಾಂಪ್ರದಾಯಿಕ ಚೀನೀ ಚಹಾವಾಗಿದ್ದು, ಗ್ರೀನ್​ ಮತ್ತು ಬ್ಲಾಕ್​ ಟೀ ತಯಾರಿಸಲು ಬಳಸುವ ಅದೇ ಸಸ್ಯದಿಂದ ತಯಾರಿಸಲಾಗುತ್ತದೆ.

ಈ ಮೂರು ಚಹಾಗಳಲ್ಲಿ ಹೆಚ್ಚಿನ ವ್ಯತ್ಯಾಸ ಕಂಡು ಬರುವುದಿಲ್ಲ. ಕಪ್ಪು ಅಥವಾ ಬ್ಲಾಕ್​ ಟೀಯ ಎಲೆಗಳನ್ನು ಹೆಚ್ಚು ಅಂದರೆ ಕಪ್ಪಾಗುವವರೆಗೆ ಆಕ್ಸಿಡೈಸ್ ಮಾಡಲಾಗುತ್ತದೆ. ಗ್ರೀನ್​ ಟೀ ಕಡಿಮೆ ಪ್ರಮಾಣದಲ್ಲಿ ಆಕ್ಸಿಡೈಸ್ ಮಾಡಲಾಗುತ್ತದೆ ಮತ್ತು ಊಲಾಂಗ್ ಚಹಾವನ್ನು ಭಾಗಶಃ ಆಕ್ಸಿಡೀಕರಣಗೊಳ್ಳುತ್ತದೆ. ಹೀಗಾಗಿ ಮೂರು ಚಹಾವು ಟೈಪ್​ 2 ಡಯಾಬಿಟೀಸ್​ ಆಗುವ ಅಪಾಯ ಕಡಿಮೆ ಮಾಡುತ್ತದೆ.

ಇದನ್ನೂ ಓದಿ : ನಿಮಗೆ ತುಂಬಾ ಆಯಾಸವೇ?: ಪೌಷ್ಟಿಕಾಂಶಯುಕ್ತ ಆಹಾರ ಇದಕ್ಕೆ ಮದ್ದು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.