ETV Bharat / sukhibhava

ದೈನಂದಿನ ಚಟುವಟಿಕೆ ಜೊತೆ ಯೋಗಾಭ್ಯಾಸ.. ಹೃದಯ ಸಂಬಂಧಿ ಕಾಯಿಲೆಯಲ್ಲಿ ಸುಧಾರಣೆ

ಯೋಗ ಹಾಗೂ ದೈನಂದಿನ ಚಟುವಟಿಕೆಯಿಂದಾಗಿ ಹೃದಯ ಸಂಬಂಧಿ ಅಪಾಯವನ್ನು ಕಡಿಮೆ ಮಾಡಬಹುದಾ ಎಂಬ ಗುರಿಯೊಂದಿಗೆ ಈ ​ ಅಧ್ಯಯನವನ್ನು ನಡೆಸಲಾಗಿದೆ ಎಂದು ಕೆನಡಾದ ಲಾವಲ್​ ಯುನಿವರ್ಸಿಟಿ ಸಿಬ್ಬಂದಿ ತಿಳಿಸಿದ್ದಾರೆ

ದೈನಂದಿನ ಚಟುವಟಿಕೆ ಜೊತೆ ಯೋಗ ಅಭ್ಯಾಸದಿಂದ ಹೃದಯ ಸಂಬಂಧಿ ಕಾಯಿಲೆಯಲ್ಲಿ ಸುಧಾರಣೆ
doing-yoga-with-daily-activity-improves-cardiovascular-disease
author img

By

Published : Dec 9, 2022, 1:05 PM IST

ವಾಷಿಂಗ್ಟನ್​: ಹೃದಯದ ರಕ್ತನಾಳ ಆರೋಗ್ಯದ ಸುಧಾರಣೆಯಲ್ಲಿ ಯೋಗ ಬಹು ಮುಖ್ಯ ಪಾತ್ರವಹಿಸುತ್ತದೆ ಎಂಬುದು ಸಂಶೋಧನೆಯಿಂದ ಬಯಲಾಗಿದೆ. ಈ ಸಂಬಂಧ ಮೂರು ತಿಂಗಳ ಅಧ್ಯಯನ ನಡೆಸಿದ ಕೆನಡಿಯನ್​ ಜರ್ನಲ್​, 10 ವರ್ಷಗಳ ಕಾಲ ಇದ್ದ ಹೃದಯ ಸಂಬಂಧಿ ಅಪಾಯವನ್ನು ಈ ಯೋಗ ನಿವಾರಣೆ ಮಾಡಿದೆ ಎಂದು ತಿಳಿಸಿದೆ. ಯೋಗದಲ್ಲಿನ ಸ್ಟ್ರೈಚಿಂಗ್​ಗಳು ಭಾರೀ ಪರಿಣಾಮಕಾರಿಯಾಗಿದೆ ಎಂದು ಅಧ್ಯಯನ ತಿಳಿಸಿದೆ.

ಯೋಗ ಆಧ್ಯಾತ್ಮಿಕ ಮತ್ತು ವ್ಯಾಯಾಮವಾಗಿ ಇಂದು ಪ್ರಪಂಚಾದ್ಯಂತ ಲಕ್ಷಾಂತರ ಜನರು ಅಭ್ಯಾಸ ಮಾಡುತ್ತಾರೆ. ಜಾಗತಿಕವಾಗಿ ಸ್ವೀಕೃತವಾದ ವ್ಯಾಯಾಮದಲ್ಲಿ ಯೋಗ ಒಂದಾಗಿದೆ. ಜೀವನಶೈಲಿಯ ಸಕಾರಾತ್ಮಕ ಬದಲಾವಣೆ ಜೊತೆಗೆ ಹೃದಯ ಸಂಬಂಧಿ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಇದು ಕಾರಣವಾಗಿದೆ. ಯೋಗದಲ್ಲಿ ಸ್ಟ್ರೇಚ್​ ಮಾಡುವಂತಹ ದೈಹಿಕ ಚಟುವಟಿಕೆ ಇತರೆ ದೈಹಿಕ ಚಟುವಟಿಕೆಗಳ ಅಭ್ಯಾಸದಲ್ಲಿ ಬಹಳ ಸಾಮ್ಯತೆ ಇದ್ದರೂ ಇದು ವಿಭಿನ್ನತೆ ಹೊಂದಿದೆ.

ಯೋಗ ಹಾಗೂ ದೈನಂದಿನ ಚಟುವಟಿಕೆಯಿಂದಾಗಿ ಹೃದಯ ಸಂಬಂಧಿ ಅಪಾಯವನ್ನು ಕಡಿಮೆ ಮಾಡಬಹುದಾ ಎಂಬ ಗುರಿಯೊಂದಿಗೆ ಈ ​ ಅಧ್ಯಯನವನ್ನು ನಡೆಸಲಾಗಿದೆ ಎಂದು ಕೆನಡಾದ ಲಾವಲ್​ ಯುನಿವರ್ಸಿಟಿ ಸಿಬ್ಬಂದಿ ತಿಳಿಸಿದ್ದಾರೆ.

ದೈನಂದಿನ ಚಟುವಟಿಕೆ ಮೇಲೆ ಪರಿಣಾಮ: ದೈನಂದಿನ ಚಟುವಟಿಕೆ ಮತ್ತು ಯೋಗ ಕೆಲವು ಪರಿಣಾಮ ಹೊಂದಿದೆ. ಯೋಗದ ಬಗೆ, ಕಾಂಪೊನೆಟ್​, ಫ್ರಕ್ವೆನ್ಸಿ, ಸಮಯ ಮತ್ತು ಆಳತೆ ಭಿನ್ನವಾಗಿದೆ. ಹೃದಯರಕ್ತನಾಳದ ಅಪಾಯದ ಅಂಶಗಳನ್ನು ಗುರುತಿಸಲು ನಾವು ಕಠಿಣವಾದ ವೈಜ್ಞಾನಿಕ ವಿಧಾನವನ್ನು ಅನ್ವಯಿಸಲು ಪ್ರಯತ್ನಿಸಿದ್ದೆವು. ಯೋಗವು ಅಪಾಯದಲ್ಲಿರುವ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ. ಪ್ರಾಥಮಿಕ ತಡೆಗಟ್ಟುವ ಕಾರ್ಯಕ್ರಮದಂತಹ ಆರೋಗ್ಯದ ವ್ಯವಸ್ಥೆಯಲ್ಲಿ ಅದನ್ನು ಅನ್ವಯಿಸಬಹುದು.

ಈ ಹಿಂದೆ ಅಧಿಕ ರಕ್ತದೊತ್ತಡ ಮತ್ತು ಮೆಟಾಬೊಲಿಕ್​ ಸಿಂಡ್ರೋಮ್​ ಹೊಂದಿರುವವರ ಚಟುವಟಿಕೆಗಾಗಿ ನಾವು 60 ಮಂದಿ ವೈಯಕ್ತಿಕ ಯೋಗ ತರಬೇತಿ ಕಾರ್ಯಕ್ರಮವನ್ನು ಆರಂಭಿಸಿದೆವು. ಮೂರು ತಿಂಗಳೊಳಗೆ ಸ್ಪರ್ಧಿಗಳನ್ನು 2 ಗುಂಪುಗಳಾಗಿ ವಿಂಗಡಿಸಿದೆವು. ಅದರಲ್ಲಿ 15 ನಿಮಿಷ ಯೋಗ ಅಥವಾ ಏರೋಬಿಕ್ಸ್​ನಂತ ಚಟುವಟಿಕೆಯನ್ನು ದಿನಕ್ಕೆ 5 ಬಾರಿ ನೀಡಲಾಯಿತು.

ಮೂರು ತಿಂಗಳ ಬಳಿಕ ಅವರಲ್ಲಿ ರಕ್ತದೊತ್ತಡ ಕಡಿಮೆಯಾಯಿತು. ಯೋಗ ಕೂಡ ಹೃದಯ ಸಂಬಂಧಿ ರೋಗ ಅಪಾಯ ಕಡಿಮೆ ಮಾಡಿತು. ಅಧಿಕ ರಕ್ತದೊತ್ತಡ ಇರುವ ರೋಗಿಗಳಿಗೆ ಇದು ಪರಿಣಾಮಕಾರಿಯಾಗಿ ತೋರಿತು. ಅನೇಕ ಅಧ್ಯಯನಗಳಲ್ಲಿ ಅಧಿಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆ ಒತ್ತಡ ನಿವಾರಣೆಗೆ ದೈನಂದಿನ ಚಟುವಟಿಕೆ ಅಭ್ಯಾಸ ಅಗತ್ಯವಾಗಿದೆ. ಅದರಲ್ಲಿ ಯೋಗದ ಜೊತೆ ಏರೋಬಿಕ್​ನಂತಹ ಮಸಲ್​ ಸ್ಟ್ರೇಚ್​ ಪ್ರಾಕ್ಟ್ರೀಸ್​ ಹೆಚ್ಚು ಲಾಭಕರವಾಗಿರಲಿದೆ ಎಂಬುದು ಅಧ್ಯಯನ ತಿಳಿಸಿದೆ.

ಇದನ್ನೂ ಓದಿ: ರಕ್ತದ ಗುಂಪಿನಿಂದ ವೈರಲ್ ಕಾಯಿಲೆಗೆ ತುತ್ತಾಗುವ ಅಪಾಯ ಊಹಿಸಬಹುದು: ಅಧ್ಯಯನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.