ETV Bharat / sukhibhava

Rainy Season Diseases: ಮಳೆಗಾಲದ ಈ ರೋಗಗಳ ಬಗ್ಗೆ ಬೇಡ ನಿರ್ಲಕ್ಷ್ಯ; ಆರೋಗ್ಯದ ಮುನ್ನೆಚ್ಚರಿಕೆ ಸದಾ ಅಗತ್ಯ

author img

By

Published : Jul 29, 2023, 12:13 PM IST

ಮಳೆಗಾಲದಲ್ಲಿ ಡೆಂಗ್ಯೂ, ಮಲೇರಿಯಾ, ಗುನ್ಯಾ ಸೇರಿದಂತೆ ಚರ್ಮ ರೋಗ, ಉಸಿರಾಟ ಸಮಸ್ಯೆ ಹೆಚ್ಚು ಜನರನ್ನು ಕಾಡುತ್ತದೆ.

do-not-neglect-rainy-season-diseases-it-threats-life

ಬೆಂಗಳೂರು: ಮಳೆಗಾಲದಲ್ಲಿ ಋತುಮಾನದ ರೋಗಗಳು ಅಪಾಯವನ್ನು ತಂದೊಡ್ಡಬಹುದು ಎಂದು ಡಾ ಎಂ. ವಿ ರಾವ್​ ತಿಳಿಸಿದ್ದಾರೆ. ಮಳೆಗಾಲದ ರೋಗಗಳು ಮಾರಣಾಂತಿಕವೂ ಆಗುವ ಹಿನ್ನೆಲೆ ಚಿಕಿತ್ಸೆ ಮತ್ತು ಮುನ್ನೆಚ್ಚರಿಕೆ ಅಗತ್ಯ. ಅದರಲ್ಲೂ ಸೊಳ್ಳೆ ಸಂಬಂಧಿತ ರೋಗಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಸೊಳ್ಳೆಗಳಿಂದ ಡೆಂಗ್ಯೂ, ಮಲೇರಿಯಾ ಮತ್ತು ಚಿಕೂನ್​ಗುನ್ಯಾ ಸೇರಿದಂತೆ ಉಸಿರಾಟದ ಸಮಸ್ಯೆ ಹಾಗೂ ಚರ್ಮ ಸಂಬಂಧಿ ಸಮಸ್ಯೆಗಳು ಕಾಡಬಹುದು. ಇದರ ಹೊರತಾಗಿ ಈ ಸಮಯದಲ್ಲಿ ಕಲುಷಿತ ನೀರು ಸೇವನೆಯಿಂದಾಗಿ ಅತಿಸಾರದ ಸಮಸ್ಯೆ ಕೂಡ ಕಾಡಬಹುದು. ಈ ಹಿನ್ನೆಲೆ ಸೋಂಕು ಬಂದಾಕ್ಷಣ ಅದಕ್ಕೆ ಚಿಕಿತ್ಸೆ ನಡೆಸುವುದರಿಂದ ಆರೋಗ್ಯ ಸಮಸ್ಯೆ ಕಡಿಮೆ ಮಾಡಬಹುದು ಎಂದಿದ್ದಾರೆ.

ಮಳೆಯಾಗುತ್ತಿದ್ದಂತೆ ಸೊಳ್ಳೆಗಳು ನಿಂತ ನೀರಿನಲ್ಲಿ ಸಂತಾನೋತ್ಪತ್ತಿ ಆರಂಭಿಸಲು ಮುಂದಾಗುತ್ತವೆ. ಮಳೆ ಹೆಚ್ಚಾದಂತೆ ಈ ಸೊಳ್ಳೆಗಳು ರೋಗವನ್ನು ಹರಡುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಡೆಂಗ್ಯೂ, ಮಲೇರಿಯಾ ಮತ್ತು ಗುನ್ಯಾ ಪ್ರಕರಣಗಳು ವರದಿಯಾಗುತ್ತಿವೆ. ಪ್ರತಿ ಎರಡು ಮತ್ತು ಮೂರು ವರ್ಷಕ್ಕೆ ಒಮ್ಮೆ ಈ ಡೆಂಗ್ಯೂ ರೋಗಗಳು ಉಲ್ಬಣವಾಗುತ್ತವೆ. ಇದರ ಜೊತೆಗೆ ಮಲೇರಿಯಾ ಮತ್ತು ಚಿಕೂನ್​ಗುನ್ಯಾ ಜ್ವರ ಕೂಡ ಹೆಚ್ಚಾಗುತ್ತದೆ.

ಸೊಳ್ಳೆ ಸಂತಾನೋತ್ಪತ್ತಿ ಸಮಯ: ಪ್ರತಿ ಋತುಮಾನದಲ್ಲಿ ಸೊಳ್ಳೆ ಆಧಾರಿತ ಸಮಸ್ಯೆ ಕಾಡುವುದು ಸಹಜ. ಇದರಿಂದ ಅನೇಕ ಮಂದಿ ಆಸ್ಪತ್ರೆಗೆ ದಾಖಲಾಗುತ್ತಾರೆ. ಇದು ಅನಾರೋಗ್ಯವೂ ನಿಮ್ಮ ಕೆಲಸ ಮತ್ತು ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತದೆ. ಸೋಂಕಿನ ಪತ್ತೆಯನ್ನು ಆರಂಭದಲ್ಲೇ ಗುರುತಿಸುವುದು ಅಗತ್ಯ. ಡೆಂಗ್ಯೂ ಮತ್ತು ಮಲೇರಿಯಾವನ್ನು ಆರಂಭದಲ್ಲೇ ರಾಪಿಡ್​ ಪರೀಕ್ಷೆ ಮೂಲಕ ಪತ್ತೆ ಮಾಡಬಹುದು. ಈ ಸಂಬಂದ ಸರ್ಕಾರಿ ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಣ್ಣ ಪ್ರಯೋಗಾಲಯಗಳಲ್ಲೂ ಕಿಟ್​ ಲಭ್ಯವಿದೆ. ಈ ಋತುಮಾನದಲ್ಲಿ ಜ್ವರ ಕಾಣಿಸಿಕೊಂಡರೆ ಮಲೇರಿಯಾ ಪರೀಕ್ಷೆಗೆ ಒಳಗಾಗುವುದು ಕೂಡ ಅವಶ್ಯವಾಗಿದೆ. ಆರಂಭದಲ್ಲೇ ಇದರ ಪತ್ತೆ ಮಾಡಿ, ಚಿಕಿತ್ಸೆ ಪಡೆಯುವುದರಿಂದ ವೆಚ್ಚವೂ ಕಡಿಮೆ ಆಗಿದೆ. ವಿಳಂಬ ಮಾಡಿದರೆ, ಇದು ಅಂಗಾಂಗಗಳಿಗೆ ಹಾನಿ ಮಾಡಿ, ಜೀವಕ್ಕೆ ಅಪಾಯವನ್ನು ತಂದೊಡ್ಡಬಹುದು. ಒಂದು ವೇಳೆ ಅತಿಸಾರ ಕಾಣಿಸಿಕೊಂಡರೆ ಇದು ಬೇರೆಯವರಿಗೆ ಹರಡುವ ಮುನ್ನ ತಡೆಯುವುದು ಸೂಕ್ತ. ಮಳೆಗಾಲದಲ್ಲಿ ಸಣ್ಣ ಮಕ್ಕಳು ಮತ್ತು ಹಿರಿಯರನ್ನು ಅತಿಯಾದ ತಂಡಿ ವಾತಾವರಣಕ್ಕೆ ತೆರೆದುಕೊಳ್ಳದಂತೆ ನೋಡಿಕೊಳ್ಳುವುದು ಅವಶ್ಯ.

ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು: ಸೊಳ್ಳೆ ಕಡಿತ ತಪ್ಪಿಸಬೇಕು. ಮಕ್ಕಳ ವಿಚಾರದಲ್ಲಿ ಜಾಗೃತೆ ಇರಲಿ. ಪೋಷಕರ ಜೊತೆ ಶಾಲೆಗಳು ಕೂಡ ಈ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು. ಶುದ್ಧ ಮತ್ತು ಶೋಧಿಸಿದ ನೀರಿನ ಬಳಕೆ ಮಾಡಿ. ಶಾಲಾ ಕೊಠಡಿಗಳಲ್ಲಿ ವಿಶೇಷ ಮುನ್ನೆಚ್ಚರಿಕೆ ವಹಿಸಬೇಕು. ಶಿಕ್ಷಕರು ಈ ಬಗ್ಗೆ ಎಚ್ಚರ ವಹಿಸಬೇಕು.

ಹಿಲೆಕ್ಸ್​ ಸೊಳ್ಳೆಗಳಿಂದ ಈ ಡೆಂಗ್ಯೂ ಬರುತ್ತದೆ. ಆದರೆ, ಈ ಸೊಳ್ಳೆ ಕಡಿತ ಹೆಚ್ಚು ನೋವಿನಿಂದ ಕೂಡಿರುವುದಿಲ್ಲ. ಇದಕ್ಕೆ ಮುನ್ನೆಚ್ಚರಿಕೆಯನ್ನು ವಹಿಸಿ, ನೆಟ್​, ಸೊಳ್ಳೆ ಕಾಯಿಲ್​ ಬಳಕೆ, ಅಥವಾ ಔಷಧ ಬಳಕೆ ಮಾಡಬೇಕು. ಮನೆಯ ಸುತ್ತಮುತ್ತ ಯಾವುದೇ ರೀತಿಯ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸಂಪ್​ ಮತ್ತು ನೀರಿನ ಟ್ಯಾಂಕ್​ಗಳನ್ನು ಮುಚ್ಚಬೇಕು. ಇದರಿಂದ ಸೊಳ್ಳೆ ಪ್ರವೇಶ ತಪ್ಪಿಸಬಹುದು. ನೀರಿನ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಶುಚಿಯಾದ ಫಿಲ್ಟರ್​ ವಾಟರ್​ ಸೇವಿಸಬೇಕು. ತಾಜಾ ಆಹಾರ ಸೇವಿಸಬೇಕು.

ಚರ್ಮದ ಸೋಂಕಿನ ಬಗ್ಗೆ ಬೇಡ ನಿರ್ಲಕ್ಷ್ಯ: ಮಳೆಗಾಲದಲ್ಲಿ ದೀರ್ಘ ಕಾಲದವರೆಗೆ ಪಾದಗಳು ನೀರಿನಲ್ಲಿ ನೆನೆಯುವುದರಿಂದ ಸೋಂಕು ಹೆಚ್ಚುವ ಸಾಧ್ಯತೆ ಇದೆ. ಮುಖ್ಯವಾಗಿ ರೈತರು ತಮ್ಮ ಕಾಲುಗಳನ್ನು ದೀರ್ಘಕಾಲ ಮಣ್ಣಿನಲ್ಲಿ ಇಡುವುದರಿದ ಕಾಲ್ಬೆರಳ ಸಂಧಿಗಳಲ್ಲಿ ಸೋಂಕು ಉಂಟಾಗುತ್ತದೆ. ಈ ಹಿನ್ನೆಲೆ ಆ್ಯಂಟಿ ಫಂಗಲ್​ ಕ್ರೀಮ್​ಗಳನ್ನು ಬಳಸಬೇಕು. ಮಧಮೇಹಿಗಳು ಈ ಬಗ್ಗೆ ವಿಶೇಷ ಎಚ್ಚರಿಕೆ ವಹಿಸಬೇಕು. ಚರ್ಮದ ರೋಗ ಮತ್ತು ಅಲರ್ಜಿ ಈ ಸಮಯದಲ್ಲಿ ಸಾಮಾನ್ಯ. ಜೊತೆಗೆ ಸಂಧೀವಾತವೂ ಹೆಚ್ಚುತ್ತದೆ.

ಶುದ್ಧ ನೀರು ಕುಡಿಯಿರಿ: ಅಧಿಕ ಮಳೆಯಿಂದಾಗಿ ನೀರು ಕಲುಷಿತಗೊಳ್ಳುತ್ತದೆ. ಕುಡಿಯುವ ನೀರಿನ ಪೈಪ್​ಗಳು ಪ್ರವಾಹದಿಂದ ಹಾನಿಯಾಗಬಹುದು. ಇದರಿಂದ ಕಲುಷಿತ ನೀರು ಕೂಡ ಅದರಲ್ಲಿ ಮಿಶ್ರಣವಾಗಬಹುದು. ಇದರಿಂದ ಅತಿಸಾರ ಅಥವಾ ಜಾಂಡೀಸ್​ ಆಗಬಹುದು. ಈ ಹಿನ್ನೆಲೆ ಕುದಿಸಿದ, ಶೋಧಿಸಿದ ನೀರುವ ಕುಡಿಯುವುದು ಉತ್ತಮ.

ಉಸಿರಾಟ ಸಮಸ್ಯೆ: ಕೆಲವು ಬ್ಯಾಕ್ಟೀರಿಯಾ ಮತ್ತು ವೈರಸ್​ಗಳು ಈ ಸಮಯದಲ್ಲಿ ಹೆಚ್ಚುತ್ತದೆ. ಬಹುತೇಕ ಜನರು ಶೀತ, ನ್ಯೂಮೋನಿಯಾ, ಬ್ರಾಂಕಾಯ್ಟಿಸ್​ ಮತ್ತು ಜ್ವರದಿಂದ ಬಳಲುವಂತೆ ಆಗುತ್ತದೆ. ಆರೋಗ್ಯ ಸಮಸ್ಯೆ ಹೊಂದಿರುವವರು ಈ ಸಮಯದಲ್ಲಿ ಹೆಚ್ಚಿನ ಜಾಗೃತಿ ವಹಿಸಬೇಕು. ಜ್ವರ, ಕೆಮ್ಮು, ಶೀನು ಅಥವಾ ತಲೆ ಸುತ್ತಿಗೆ ವೈದ್ಯಕೀಯ ಚಿಕಿತ್ಸೆ ಪಡೆಯುವುದು ಅಗತ್ಯ. ಅಸ್ತಮಾ ಕೂಡ ಈ ಋತುಮಾನದಲ್ಲಿ ಉಲ್ಬಣದೊಂಡು ಅನೇಕ ಮಂದಿಗೆ ಉಸಿರಾಟ ಸಮಸ್ಯೆ ಎದುರಾಗುತ್ತದೆ. ಈ ಹಿನ್ನೆಲೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯುವುದು ಅವಶ್ಯ.

ಇದನ್ನೂ ಓದಿ: Hepatitis: ಹೆಪಟೈಟಿಸ್​ ಸೋಂಕು: ಮಳೆಗಾಲದಲ್ಲಿ ಇರಲಿ ಎಚ್ಚರ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.