ಮಲಬದ್ಧತೆ ಸಮಸ್ಯೆ ನಿಮ್ಮ ಮುಖದಲ್ಲಿ ಮೊಡವೆ ಮೂಡಲು ಕಾರಣವಾಗುತ್ತದೆ. ಕಿರಿಕಿರಿ ಉಂಟು ಮಾಡುತ್ತದೆ. ಇದಕ್ಕೆ ಕಾರಣ ಉಬ್ಬರ. ಮುಖದ ಮೊಡವೆಗಳು ಆತ್ಮವಿಶ್ವಾಸದ ಕೊರತೆಗೆ ಕಾರಣವಾಗಬಹುದು. ಇದು ಕೆಲಸದ ಮೇಲೂ ಪರಿಣಾಮ ಬೀರಬಹುದು. ಕೆಟ್ಟ ಜೀರ್ಣಕ್ರಿಯೆ ದೈನಂದಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಅಹಾರಗಳ ಸಂಸ್ಕರೀಕರಣದಲ್ಲಿ ಜೀರ್ಣಕ್ರಿಯೆ ವ್ಯವಸ್ಥೆ ಪ್ರಮುಖವಾಗಿದೆ. ಇದು ಪೋಷಕಾಂಶ ಮತ್ತು ತ್ಯಾಜ್ಯವನ್ನು ಬೇರ್ಪಡಿಸುತ್ತದೆ. ನಮ್ಮ ಜೀರ್ಣಕ್ರಿಯೆ ಸರಿಯಾಗಿ ಕೆಲಸ ಮಾಡಿದಾಗ ಮಾತ್ರ ದೇಹಕ್ಕೆ ಅಗತ್ಯ ಶಕ್ತಿ ಮತ್ತು ಪೋಷಕಾಂಶ ಸಿಗುವುದು. ಆದಾಗ್ಯೂ, ನಮ್ಮ ಜೀರ್ಣಕ್ರಿಯೆ ಉತ್ತಮವಾಗಿ ಇಲ್ಲದೇ ಇದ್ದಲ್ಲಿ ಅನೇಕ ಬಾರಿ ಸಮಸ್ಯೆಗೆ ಕಾರಣವಾಗುತ್ತದೆ. ಜೀರ್ಣಕ್ರಿಯೆ ವ್ಯವಸ್ಥೆ ಸರಿಪಡಿಸಲು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕು.
ಪರಿಣಾಮವೇನು?: ಆರೋಗ್ಯಯುತ ಕರುಳು ದೇಹದ ಪ್ರತಿರಕ್ಷಣಾ ವ್ಯವಸ್ಥೆಗೆ ಕೊಡುಗೆ ನೀಡುತ್ತದೆ. ನಮ್ಮ ದೇಹದ ಪ್ರಮುಖ ಪ್ರತಿರಕ್ಷಣೆಗಳು ಹೊಟ್ಟೆಯಲ್ಲಿರುತ್ತದೆ. ಸಮತೋಲಿತ ಮತ್ತು ವೈವಿಧ್ಯ ಕರುಳಿನ ಮೈಕ್ರೊಬೈಮ್ ಮತ್ತು ಮೈಕ್ರೊ ಆರ್ಗನಿಸಮ್ ದೇಹದ ಪ್ರತಿರಕ್ಷಣಾ ವ್ಯವಸ್ಥೆ ಹೆಚ್ಚಿಸಿ ಮತ್ತು ಹಾನಿಕಾರಕ ಪ್ಯಾಥೊಜೆನ್ಸ್ ವಿರುದ್ಧ ರಕ್ಷಣೆ ನೀಡುತ್ತದೆ.
ದೈಹಿಕ ಆರೋಗ್ಯದ ಹೊರತಾಗಿ, ಕರುಳನ್ನು ಎರಡನೇ ಮಿದುಳು ಎಂದು ಕರೆಯಲಾಗುತ್ತದೆ. ಇದು ನಮ್ಮ ಜೀರ್ಣಕ್ರಿಯೆ ವ್ಯವಸ್ಥೆ ಮತ್ತು ಮಾನಸಿಕ ಯೋಗಕ್ಷೇಮದ ನಡುವೆ ಸಂಪರ್ಕ ಸಾಧಿಸುತ್ತದೆ. ಕರುಳಿನ ಸೂಕ್ಷ್ಮಜೀವಿಗಳ ಅಸಮತೋಲನ ನಮ್ಮ ಮೂಡ್, ಅರಿವು ಮತ್ತು ಮಾನಸಿಕ ಆರೋಗ್ಯದ ಸಮಸ್ಯೆಗೆ ಅಪಾಯ ಮಾಡುತ್ತದೆ. ನಮ್ಮ ಜೀರ್ಣದ ಆರೋಗ್ಯವನ್ನು ಕಾಪಾಡಲು ನಮ್ಮ ಮನಸ್ಸನ್ನು ಸಂತೋಷದಿಂದ ಇರಲು ನೋಡಿಕೊಳ್ಳಲು ಕರುಳಿನ ಆರೋಗ್ಯ ಕಾಪಾಡುವುದು ಅತಿ ಮುಖ್ಯ. ಹಾಗಾದ್ರೆ ಈ ಜೀರ್ಣಕ್ರಿಯೆ ವ್ಯವಸ್ಥೆಯನ್ನು ಹೇಗೆ ಕಾಪಾಡುವುದು ಎಂಬ ಮಾಹಿತಿ ಇಲ್ಲಿದೆ.

ಆರೋಗ್ಯಕರ ಆಹಾರ ಪದ್ಧತಿ ಇರಲಿ: ನಾವು ಸೇವಿಸುವ ಆಹಾರ ನಮ್ಮ ಜೀರ್ಣಕ್ರಿಯೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ತರಕಾರಿ, ಹಣ್ಣು, ಬೇಳೆ ಕಾಳು ಮತ್ತು ಪ್ರೋಟಿನ್, ಫೈಬರ್ ಮತ್ತು ಅಗತ್ಯ ಪೋಷಕಾಂಶಯುಕ್ತ ಆಹಾರವು ಅತಿ ಮುಖ್ಯ. ಫೈಬರ್ ಉಬ್ಬರವನ್ನು ಕಡಿಮೆ ಮಾಡಿ ಮಲಬದ್ಧತೆ ನಿವಾರಣೆ ಮಾಡುತ್ತದೆ. ಇದು ಕರುಳಿನ ಸೂಕ್ಷ್ಮಜೀವಿಗಳ ಬೆಳವಣಿಗೆಗೆ ಬೆಂಬಲಿಸುತ್ತದೆ.

ನಿಯಮಿತ ವ್ಯಾಯಾಮ: ದೈಹಿಕ ಚಟುವಟಿಕೆ ಹೃದ್ರೋಗ ಮತ್ತು ತೂಕದ ನಿರ್ವಹಣೆಗೆ ಮಾತ್ರ ಉಪಯೋಗವಾಗುವುದಿಲ್ಲ. ಇದು ಆರೋಗ್ಯಯುತ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ವ್ಯಾಯಾಮದಿಂದ ಸ್ನಾಯುಗಳ ಮೇಲೆ ಒತ್ತಡ ಹೆಚ್ಚಾಗಿ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ. ಇದು ಮಲಬದ್ಧತೆಯನ್ನು ನಿವಾರಣೆ ಮಾಡುತ್ತದೆ. ಕನಿಷ್ಟ 30 ನಿಮಿಷದ ವ್ಯಾಯಾಮವನ್ನು ವಾರದ ಎಲ್ಲಾ ದಿನ ಮಾಡುವುದೊಳಿತು.

ಒತ್ತಡ ನಿರ್ವಹಣೆ: ಒತ್ತಡವೂ ಜೀರ್ಣಕ್ರಿಯೆ ವ್ಯವಸ್ಥೆ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ದೀರ್ಘಕಾಲದ ಒತ್ತಡ ನೈಸರ್ಗಿಕ ಸಮತೋಲಿತ ಕರುಳಿನ ಮೇಲೆ ಪರಿಣಾಮ ಬೀರು, ಅಜೀರ್ಣ, ಉಬ್ಬರ ದಂತಹ ಸಮಸ್ಯೆಗೆ ಕಾರಣವಾಗುತ್ತದೆ. ಒತ್ತಡ ನಿರ್ವಹಣೆ ತಂತ್ರಗಳಾದ ಉಸಿರಾಟದ ವ್ಯಾಯಾಮ ಮತ್ತು ಧ್ಯಾನ್ಯ ಅಥವಾ ಇನ್ನಿತರ ಹವ್ಯಾಸಗಳನ್ನು ರೂಢಿಸಿಕೊಳ್ಳಬಹುದು.

ಉತ್ತಮ ನಿದ್ದೆಯ ರಾತ್ರಿ: ಗುಣಮಟ್ಟದ ನಿದ್ದೆಗಳು ಕೂಡ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಕಡಿಮೆ ನಿದ್ರೆಗಳಿಂದ ಕರುಳಿನ ಬ್ಯಾಕ್ಟೀರಿಯಾದ ಮೇಲೆ ಪರಿಣಾಮ ಬಿದ್ದು ಜೀರ್ಣಕ್ರಿಯೆ ಸಮಸ್ಯೆ ಕಾಡುತ್ತದೆ. ಹೀಗಾಗಿ ಪ್ರತಿಯೊಬ್ಬರೂ ರಾತ್ರಿ ಕನಿಷ್ಠ 7-9 ಗಂಟೆ ನಿದ್ದೆ ಮಾಡಲೇಬೇಕು.

ಧೂಮಪಾನ- ಆಲ್ಕೋಹಾಲ್: ಅಧಿಕ ಧೂಮಪಾನ ಮತ್ತು ಮದ್ಯ ಸೇವನೆ ಕೂಡ ಜೀರ್ಣಕ್ರಿಯೆ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ. ಧೂಮಪಾನದಿಂದ ಆ್ಯಸಿಡ್ ರೆಫ್ಲುಕ್ಸ್, ಹೊಟ್ಟೆ ಯುಕ್ಲೆರಸ್ ಮತ್ತು ಜೀರ್ಣಕ್ರಿಯೆ ಕ್ಯಾನ್ಸರ್ ಆಗುವ ಸಾಧ್ಯತೆ ಇದೆ. ಅಧಿಕ ಮದ್ಯ ಸೇವನೆ ಕೂಡ ಹೊಟ್ಟೆ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ.

ಪ್ರೊಬಯೊಟಿಕ್: ಪ್ರೊಬಯೊಟಿಕ್ ಕರಳಿನ ಸೂಕ್ಷ್ಮಜೀವಿಗಳಿಗೆ ಸಹಾಯ ಮಾಡುತ್ತದೆ. ಇದು ಆರೋಗ್ಯಯುತ ಸೂಕ್ಷ್ಮಜೀವಿ ನಿರ್ವಹಣೆ ಮಾಡಿ, ಜೀರ್ಣಕ್ರಿಯೆಗೆ ಸಹಾಯ ಆಡುತ್ತದೆ. ಯೋಗರ್ಟ್ನಂತಹ ಪ್ರಿಬಯೊಟಿಕ್ ಆಹಾರಗಳು ಇದಕ್ಕೆ ಸಹಾಯ ಮಾಡುತ್ತದೆ. ಇದರ ಹೊರತಾಗಿ ಕೆಲವು ಪರಿಹಾರಗಳು ಇಲ್ಲಿದೆ.
ಹೈಡ್ರೇಟ್ ಆಗಿರಿ: ಜೀರ್ಣಕ್ರಿಯೆ ಮತ್ತು ಮಲಬ್ಧತೆ ನಿವಾರಣೆಗೆ ನೀರು ಉತ್ತಮ ಪರಿಹಾರ. ಹೆಚ್ಚಿನ ದ್ರವಗಳು ದೇಹದ ವಿಷವನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ.
ಸರಿಯಾಗಿ ಜಗಿದು ತಿನ್ನಿ: ಆಹಾರವನ್ನು ಸರಿಯಾಗಿ ಜಗಿದು ತಿನ್ನಬೇಕು. ನಿಧಾನವಾಗಿ ಚೆನ್ನಾಗಿ ಆಹಾರ ಅಗೆದು ಸೇವಿಸುವುದು ಅವಶ್ಯ. ಇದು ಪೋಷಕಾಂಶವನ್ನು ಗ್ರಹಿಸಿ, ಹೊಟ್ಟೆ ತುಂಬಿದ ಅನುಭವ ಆಗುತ್ತದೆ.
ಸಂಸ್ಕರಿತ, ಸಕ್ಕರೆ ಪಾನೀಯಕ್ಕೆ ಮಿತಿ: ಇದರಲ್ಲಿ ಅನಾರೋಗ್ಯಕರ ಕೊಬ್ಬು, ಸಕ್ಕರೆ ಇರುತ್ತದೆ. ಇದು ಕೂಡ ಕರುಳು ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
ಇದನ್ನೂ ಓದಿ: ಕರುಳಿನ ಆರೋಗ್ಯ ಹೆಚ್ಚಿಸುತ್ತೆ ಬ್ರೊಕೊಲಿ..