ಮಧುಮೇಹ ಪ್ರಕರಣಗಳು ಇದೀಗ ಏರಿಕೆ ಕಾಣುತ್ತಿದೆ. ಆತಂಕಕಾರಿ ವಿಚಾರ ಎಂದರೆ, ಸಣ್ಣ ವಯಸ್ಸಿನ ಮಕ್ಕಳಲ್ಲಿ ಟೈಪ್ 1 ರೀತಿಯ ಮಧುಮೇಹ ಪ್ರಕರಣಗಳು ಹೆಚ್ಚುತ್ತಿದೆ. ಇದಕ್ಕೆ ಸ್ಪಷ್ಟ ಕಾರಣ ತಿಳಿದಿಲ್ಲವಾದರೂ, ಜಢ ಜೀವನಶೈಲಿ, ಆಹಾರ ಕ್ರಮ, ವ್ಯಾಯಾಮದಿಂದ ದೂರ ಇರುವುದು. ಅನೇಕ ಯುವ ಜನತೆಯನ್ನು ಕಾಡುತ್ತಿರುವ ಮಧುಮೇಹವೂ ಅನೇಕ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಈ ಹಿನ್ನೆಲೆ ಈ ಮಧುಮೇಹವನ್ನು ನಿಯಂತ್ರಣದಲ್ಲಿ ಇಡುವುದು ಮುಖ್ಯವಾಗುತ್ತದೆ. ಅದರಲ್ಲೂ ಆಹಾರ ಪದ್ಧತಿ ವಿಧಾನ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಬೇಕಿದೆ.
ಮಧುಮೇಹವೊಂದು ಎಚ್ಚರಿಕೆಯ ಗಂಟೆಯಾಗಿದೆ. ಸಂಸ್ಕರಿತ ಆಹಾರ ಮತ್ತು ವ್ಯಾಯಾಮ ಕಡಿಮೆಯಂತಹ ಜಢ ಜೀವನ ಶೈಲಿಯಿಂದಾಗಿ ಮಕ್ಕಳಲ್ಲಿ ಸ್ಥೂಲಕಾಯ ಮತ್ತು ಮಧುಮೇಹದಂತಹ ಅಪಾಯ ಹೆಚ್ಚಾಗುತ್ತಿದೆ. ಈ ಮಧುಮೇಹವೂ ಹೃದ್ರೋಗ ಸಮಸ್ಯೆಗಳಿಗೆ ದಾರಿ ಮಾಡಿಕೊಡುವ ಸಾಧ್ಯತೆ ಇದೆ ಎಂಬ ಕಳವಳ ತಜ್ಞರು ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಮಧುಮೇಹಿಗಳ ಆಹಾರದಲ್ಲಿ ಕೆಲವು ತರಕಾರಿಗಳು ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇಂತಹ ಕೆಲವು ವಸ್ತುಗಳನ್ನು ದೈನಂದಿನ ಆಹಾರದಲ್ಲಿ ಬಳಕೆ ಮಾಡುವುದು ಹೆಚ್ಚು ಉಪಯುಕ್ತವಾಗಲಿದೆ.
ಬೀನ್ಸ್: ಮಧುಮೇಹ ಹೊಂದಿರುವ ಜನರಿಗೆ ಬಲು ಬೇಗ ಹಸಿವು ಆಗುತ್ತದೆ. ರಿಫೈಂಡ್ ಸಾಮಗ್ರಿಗಳಿಂದ ಮಾಡಿದ ಯಾವುದೇ ಆಹಾರಗಳಯ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಊಟದಲ್ಲಿ ಬೀನ್ಸ್ ಅನ್ನು ಸೇವಿಸುವುದರಿಂದ ಅದರಲ್ಲಿನ ಫೈಬರ್ ಹೊಟ್ಟೆಯನ್ನು ತುಂಬಿಸಿದ ಅನುಭವ ನೀಡುತ್ತದೆ. ಇದರಿಂದ ಬೇಗ ಹಸಿವೆ ಉಂಟಾಗುವುದಿಲ್ಲ.
ಪಾಲಕ್: ಪಾಲಕ್ ಅನ್ನು ಯಾವುದೇ ಋತುಮಾನದಲ್ಲೂ ಲಭ್ಯವಾಗಿರುವ ಹಿನ್ನೆಲೆ ಅದನ್ನು ಬಳಕೆ ಮಾಡುವುದು ಸುಲಭವಾಗಿದೆ. ಇದರಲ್ಲಿ ಫೈಬರ್, ವಿಟಮಿನ್ ಮತ್ತು ಕ್ಲೋರೋಫಿಲ್, ಕ್ಯಾಲ್ಸಿಯಂ ಮತ್ತು ಜಿಂಕ್ ಹೆಚ್ಚಾಗಿರುತ್ತದೆ. ಪಾಲಕ್ ಸೊಪ್ಪು ನಿಮ್ಮ ದೇಹದ ಗ್ಲುಕೋಸ್ ಮಟ್ಟವನ್ನು ನಿಯಂತ್ರಣ ಮಾಡುತ್ತದೆ.
ಗೋಧಿ: ಮಧುಮೇಹಿಗಳಿಗೆ ಗೋಧಿ ಹಿಟ್ಟಿನ ಆಹಾರ ಮತ್ತು ಚಪಾತಿಯನ್ನು ಸೇವಿಸಲು ವೈದ್ಯರು ಸಲಹೆ ನೀಡುತ್ತದ್ದಾರೆ. ಅದರಲ್ಲಿ ಸಂಸ್ಕರಿಸಿದ ಹಿಟ್ಟಿನ ಉತ್ಪನ್ನಗಳನ್ನು ತಿನ್ನಬಾರದು. ಇವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತವೆ. ಹಾಗಾಗಿ ಚಪಾತಿ, ಪುಲ್ಕಾ, ಗೋಧಿ ಹಿಟ್ಟಿನ ರೊಟ್ಟಿಯನ್ನು ತಿನ್ನಬಹುದು.
ಇದರ ಜೊತೆಗೆ ಬೆಳಗಿನ ಹೊತ್ತು ಚಹಾ ಸೇವನೆ ಮಾಡುವಾಗ ಅದಕ್ಕೆ ಬೆಳ್ಳುಳ್ಳಿ ಮತ್ತು ದಾಲ್ಚಿನಿಯನ್ನು ಸೇರಿಸಿ ಸೇವಿಸುವುದು ಉತ್ತಮ. ಇದು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವ ಜೊತೆಗೆ ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ಅಲ್ಲದೇ, ಋತುಚಕ್ರದ ಸಮಯದಲ್ಲಿನ ತೊಂದರೆಯನ್ನು ಇದು ನಿವಾರಿಸುತ್ತದೆ. ಮಧುಮೇಹಿಗಳ ರಕ್ತದ ಸಕ್ಕರೆ ಮಟ್ಟ ನಿಯಂತ್ರದಲ್ಲಿರಿಸುತ್ತದೆ. ಬೆಳ್ಳುಳ್ಳಿಯನ್ನು ಬಳಕೆ ಮಾಡುವುದರಿಂದ ರಕ್ತದ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ರಕ್ತದ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.
ಆಹಾರದ ಜೊತೆಗೆ ನಿಯಮಿತ ವ್ಯಾಯಾಮ ಅಭ್ಯಾಸಗಳು ಕೂಡ ಮಧುಮೇಹ ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುತ್ತದೆ. ಹೆಚ್ಚಿನ ಕ್ರಿಯಾಶೀಲತೆಯಿಂದ ಕೂಡಿರುವುದು ಆರೋಗ್ಯಕ್ಕೆ ಪ್ರಯೋಜನವನ್ನು ನೀಡಲಿದೆ ಎಂದು ಸಲಹೆ ನೀಡಲಾಗಿದೆ.
ಇದನ್ನೂ ಓದಿ: Rising Alarm: ಕೋವಿಡ್ ಬಳಿಕ ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹ ಪ್ರಕರಣ; ವರದಿ