ETV Bharat / sukhibhava

ಹದಿಹರೆಯದವರಲ್ಲಿ ಕಾಡುವ ಖಿನ್ನತೆ; ಇದರ ಲಕ್ಷಣ ಪತ್ತೆ ಹೇಗೆ?

ತಜ್ಞರು ತಿಳಿಸುವಂತೆ, ಇದನ್ನು ಸರಿಯಾಗಿ ನಿರ್ವಹಣೆ ಮಾಡದಿದ್ದರೆ, ವೈಯಕ್ತಿಕ ಮತ್ತು ವೃತ್ತಿ ಜೀವನ ಎರಡರಲ್ಲೂ ಹಾನಿಗೆ ಒಳಗಾಗುತ್ತಾರೆ. ಈ ಹಿನ್ನೆಲೆಯಲ್ಲಿ ಪೋಷಕರು ಆರಂಭದಲ್ಲೇ ಈ ಕುರಿತು ಕಾಳಜಿ ವಹಿಸಬೇಕು.

depression-in-teenagers-how-to-detect-its-symptoms

author img

By

Published : Aug 21, 2023, 12:23 PM IST

ಹದಿಹರೆಯ ಎಂದರೆ ಅಲ್ಲಿ ಸ್ವಾತಂತ್ರ್ಯ ಬೇಡುವುದು ಸಹಜ. ಇವರಲ್ಲಿ ವೈಯಕ್ತಿಕ ಸಮಯ ನೀಡಿ ತಮ್ಮನ್ನು ತಾವು ಸಾಬೀತು ಪಡಸಿಬೇಕು ಎಂಬ ಹಂಬಲ ಇರುತ್ತದೆ. ಆದರೂ, ಈ ಸಮಯದಲ್ಲಿ ಅವರ ಮೇಲೆ ಸಮಾಜದ ಒತ್ತಡ, ಕೆಲವೊಮ್ಮೆ ಕುಟುಂಬದ ವಿರೋಧ, ಸವಾಲುಗಳನ್ನು ಎದುರಿಸುವ ಸಾಮರ್ಥ್ಯದ ಕೊರತೆ ಕಾಡುತ್ತದೆ.

ಅಧ್ಯಯನಗಳು ಹೇಳುವಂತೆ ಹದಿಹರೆಯದ ವಯಸ್ಸಿನ ಅನೆಕ ಮಕ್ಕಳು ಒತ್ತಡ ಮತ್ತು ಆತಂಕದಿಂದ ಬಳಲುತ್ತಿರುತ್ತಾರೆ. ತಜ್ಞರು ತಿಳಿಸುವಂತೆ, ಇದನ್ನು ಸರಿಯಾಗಿ ನಿರ್ವಹಣೆ ಮಾಡದಿದ್ದರೆ, ಅವರು ಎರಡು ವೈಯಕ್ತಿಕ ಮತ್ತು ವೃತ್ತಿ ಜೀವನ ಎರಡರಲ್ಲೂ ಹಾನಿಗೆ ಒಳಗಾಗುತ್ತಾರೆ. ಈ ಹಿನ್ನೆಲೆ ಪೋಷಕರು ಆರಂಭದಲ್ಲೇ ಈ ಕುರಿತು ಕಾಳಜಿ ಮಾಡಬೇಕು. ಅವರ ಚಿಂತೆಗೆ ಕಾರಣಗಳನ್ನು ಹುಡುಕಿ, ಅವುಗಳ ಪರಿಹಾರಕ್ಕೆ ಕೆಲಸ ಮಾಡಬೇಕು ಎಂದು ಸಲಹೆ ನೀಡುತ್ತಾರೆ. ಈ ನಿಟ್ಟಿನಲ್ಲಿ ಹದಿಹರೆಯದ ಮಕ್ಕಳು ಎದುರಿಸುವ ಸಮಸ್ಯೆ ಏನು? ಅದಕ್ಕೆ ಏನು ಪರಿಹಾರ ಎಂಬು ಕುರಿತ ಮಾಹಿತಿ ಇಲ್ಲಿದೆ.

ಖಿನ್ನತೆಗೆ ಕಾರಣ ಅನೇಕ: ಹದಿಹರೆಯದ ಮಕ್ಕಳು ದೊಡ್ಡವರಂತೆ ಆಲೋಚಿಸುವುದು. ಅವರು ಬೇಕು ಎಂಬುದಕ್ಕೆ ಹಠ ಹಿಡಿಯುವ ಮನೋಭಾವ ಹೊಂದಿರುತ್ತಾರೆ. ಒಂದು ವೇಳೆ ಆ ಕೆಲಸ ಆಗಿಲ್ಲ ಎಂದರೆ ಅವರು ಹೆಚ್ಚು ಬೇಸರಗೊಳ್ಳುತ್ತಾರೆ.

ಈ ವಯಸ್ಸಿನವರಲ್ಲಿ ಹೋಲಿಕೆ ಮನೋಭಾವ ಹೆಚ್ಚಿರುತ್ತದೆ. ಈ ಹಿನ್ನೆಲೆಯಲ್ಲಿ ಸೌಂದರ್ಯ, ಅಂದ ಚೆಂದ, ಚರ್ಮದ ಬಣ್ಣ, ದೇಹ ತೂಕ ಹೀಗೆ ಎಲ್ಲಾವುದನ್ನು ಹೋಲಿಕೆ ಮಾಡುತ್ತಾರೆ. ಇವರು ಹೆಚ್ಚು ಕೀಳರಿಮೆ ಮತ್ತು ಅಭದ್ರತೆ ಹೊಂದಿರುತ್ತಾರೆ. ಇದು ಕೂಡ ಅವರಲ್ಲಿ ಖಿನ್ನತೆಗೆ ಕಾರಣವಾಗುವ ಅಂಶವಾಗಬಹುದು.

ತಮ್ಮ ತಪ್ಪು ಅಥವಾ ಇನ್ನಿತರ ಕಾರಣಕ್ಕೆ ಅವರನ್ನು ಬೊಟ್ಟು ಮಾಡುವುದನ್ನು ಅವರು ಎಂದಿಗೂ ಸಹಿಸಿಕೊಳ್ಳುವುದಿಲ್ಲ. ಅನೇಕ ಅಧ್ಯಯನಗಳು ತಿಳಿಸುವಂತೆ ಹದಿಹರೆಯದವರು ಖಿನ್ನತೆಗೆ ಒಳಗಾಗುವುದಕ್ಕೆ ಪ್ರಮುಖ ಕಾರಣವೇ ಇವುಗಳಾಗಿವೆ. ಈ ಹಂತದಲ್ಲಿ ಅವರ ದೇಹ ಅನೇಕ ಬದಲಾವಣೆ ಕಾಣುತ್ತದೆ. ಪ್ರೌಡಾವಸ್ಥೆಯಲ್ಲಿ ಇವರ ಹಾರ್ಮೋನ್​ ಮಟ್ಟದಲ್ಲಿ ಬದಲಾವಣೆಗೆ ಒಳಗಾಗುತ್ತವೆ. ಈ ಪ್ರಕ್ರಿಯೆ ಅವರಲ್ಲಿ ಮಾನಸಿಕ ಸಮಸ್ಯೆಗೂ ಕಾರಣವಾಗುತ್ತದೆ.

ಕೆಲವರು ಬಾಲ್ಯದಿಂದಲೇ ತಮ್ಮ ಭವಿಷ್ಯದ ಗುರಿ, ವಿದ್ಯಾಭ್ಯಾಸ ಮತ್ತು ವೃತ್ತಿ ಬಗ್ಗೆ ಸ್ಪಷ್ಟ ನಿಲುವು ಹೊಂದಿರುತ್ತಾರೆ. ಆದರೆ ಕೆಲವರು ಈ ಬಗ್ಗೆ ಸ್ಪಷ್ಟ ಕಲ್ಪನೆ ಹೊಂದಿರದೇ ತೊಳಲಾಗುತ್ತಾರೆ. ತಜ್ಞರು ಹೇಳುವಂತೆ ಅವರು ಸೋಲನ್ನು ಒಪ್ಪಲು ಸಿದ್ದರಾಗಿರುವುದಿಲ್ಲ. ಈ ವಯಸ್ಸಿನಲ್ಲಿ ಅನೇಕ ಮಂದಿ ತಿಳಿದು ತಿಳಿಯದೇ ಪ್ರೀತಿಗೆ ಜಾರುತ್ತಾರೆ. ಅನೇಕ ಮಂದಿ ಹದಿ ವಯಸ್ಸಿನಲ್ಲೇ ಗರ್ಭಿಣಿ ಆಗುತ್ತಾರೆ. ಇದು ಕೂಡ ಮಾನಸಿಕವಾಗಿ ಅವರಲ್ಲಿ ಖಿನ್ನತೆಗೆ ಒಳಗಾಗುವಂತೆ ಮಾಡುತ್ತದೆ. ಇದನ್ನು ತಪ್ಪಿಸಲು ಅವರನ್ನು ಅವರ ಗುರಿಯತ್ತ ಹೆಚ್ಚು ಜಾಗೃತರನ್ನಾಗಿ ಮಾಡಬೇಕಿದೆ.

ಈ ವಯಸ್ಸಿನಲ್ಲಿ ಕೆಲವು ಯುವತಿಯರು ಪ್ರೀತಿ, ಅತ್ಯಾಚಾರದಂತಹ ಕೃತ್ಯಗಳಿಗೆ ಒಳಗಾಗುತ್ತಾರೆ. ತಜ್ಞರು ಹೇಳುವಂತೆ ಇಂತಹ ಹಾನಿಗಳಿಂದ ಅವರು ಹೊರ ಬರಲು ಅವರ ಪೋಷಕರು ಸಹಾಯ ಅಗತ್ಯವಾಗಿದೆ. ಸಾಮಾಜಿಕ ಮಾಧ್ಯಮಗಳು ಅಗತ್ಯಕ್ಕೆ ತಕ್ಕಂತೆ ಬಳಕೆ ಮಾಡುವುದರಿಂದ ಪ್ರಯೋಜನವಿದೆ. ಆದರೆ, ಯಥೇಚ್ಛ ಬಳಕೆ ಹಾನಿಯನ್ನು ಮಾಡುತ್ತದೆ. ಅನೇಕ ಅಧ್ಯಯನಗಳು ತಿಳಿಸುವಂತೆ ಹದಿಹರೆಯದವರ ನಿರೀಕ್ಷೆಗೆ ಮೀರಿದ ಮಟ್ಟದಲ್ಲಿ ಸಾಮಾಜಿಕ ಜಾಲತಾಣ ಬಳಕೆ ಮಾಡುವ ಜೊತೆಗೆ ತಮ್ಮ ಪೋಸ್ಟ್​​ಗೆ ಕಮೆಂಟ್​ ಮತ್ತು ಲೈಕ್​ಗೆ ಕಾಯುತ್ತಾರೆ. ಇದು ಸಿಗದೇ ಹೋದರು ಅವರಲ್ಲಿ ಖಿನ್ನತೆ ಮೂಡುತ್ತದೆ.

ಅವರ ಸಮಸ್ಯೆ ತಿಳಿಯಬಹುದು: ತಜ್ಞರು ಹೇಳುವಂತೆ ಅವರು, ಹದಿಹರೆಯದವರ ಒತ್ತಡ ಮತ್ತು ಆತಂಕ ದೈಹಿಕ ಮತ್ತು ಮಾನಸಿಕವಾಗಿ ಗಂಭೀರ ಅಪಾಯ ಮಾಡುತ್ತದೆ. ಈ ಹಿನ್ನೆಲೆ ಪೋಷಕರು ಇದನ್ನು ಪತ್ತೆ ಮಾಡುವುದು ಅತ್ಯವಶ್ಯಕವಾಗಿದೆ. ಇದರ ಕೆಲವು ಲಕ್ಷಣ ಹೀಗಿದೆ.

  • ಸುಖಾ ಸುಮ್ಮನೆ ಅಳುವುದು
  • ಜನರನ್ನು ಭೇಟಿಯಾಗದೇ ಒಬ್ಬಂಟಿಯಾಗಿರುವುದು. ಸದಾ ಯಾವುದಾದರೂ ಆಲೋಚನೆಯಲ್ಲಿ ಮುಳುಗುವುದು
  • ಅವರ ಮಾತುಗಳು ನಿರಾಶಾದಾಯಕ ಆಗಿರುವುದು
  • ಸಣ್ಣ ವಿಚಾರಕ್ಕೆ ಸಿಟ್ಟು ಮತ್ತು ಕಿರಿಕಿರಿಗೆ ಒಳಗಾಗಿ ಕಿರುಚುವುದು
  • ಹೆಚ್ಚಿನ ಸಮಯ ಮಲಗುವುದು ಅಥವಾ ನಿದ್ರಾಹೀನತೆ
  • ಸರಿಯಾಗಿ ಆಹಾರ ಸೇವನೆ ಮಾಡದಿರುವುದು
  • ಅಧ್ಯಯನದಲ್ಲಿ ಸರಿಯಾಗಿ ಏಕಾಗ್ರತೆ ಹೊಂದಿರದೇ ಇರುವುದು
  • ತೀರ್ಮಾನಕ್ಕೆ ಬರಲು ಸಾಧ್ಯವಾಗದೇ ಇರುವುದು. ತಮಗೆ ಹಾನಿ ಮಾಡಿಕೊಳ್ಳುವ ಅಂಶವನ್ನು ಯೋಚಿಸುವುದು
  • ಈ ರೀತಿಯ ನಕಾರಾತ್ಮಕ ಅಂಶಗಳು ಹೆಚ್ಚಿದ್ದರೆ, ಕೆಲವು ವೇಳೆ ಆತ್ಮಹತ್ಯೆ ಪ್ರಯತ್ನ ಮಾಡವುದು ಮಾಡಿದರೆ, ಅಂತಹ ಹದಿಹರೆಯದವರ ಮೇಲೆ ಒಂದು ಕಣ್ಣಿಡುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ.

ಎಚ್ಚೆತ್ತುಕೊಳ್ಳಿ: ಮಕ್ಕಳು ಖಿನ್ನತೆಯಿಂದ ಒದ್ದಾಡುತ್ತಿದ್ದಾರೆ ಅವರನ್ನು ಅದರಿಂದ ಹೊರತರಲು ಕೆಲವು ಕ್ರಮಕ್ಕೆ ಮುಂದಾಗುವುದು ಅಗತ್ಯವಾಗಿದೆ ಎಂದು ತಜ್ಞರು ತಿಳಿಸುತ್ತಾರೆ. ಮಕ್ಕಳು ಯಾವುದೆ ತಪ್ಪು ಮಾಡಿದಾಗ ಅದು ಹೇಗೆ ಆಯಿತು ಎಂದು ಗೊತ್ತಿದ್ದಾಗ ಅದರ ಪರಿಹಾರ ಕುರಿತು ಪೋಷಕರು ಯೋಚಿಸಬೇಕಿದೆ. ಜೊತೆಗೆ ಅದನ್ನು ಆರಾಮದಾಯಕವಾಗಿ ಮಕ್ಕಳ ಎದುರು ಪರಿಹರಿಸಬೇಕಿದೆ.

ಮಕ್ಕಳು ಮತ್ತು ಪೋಷಕರ ನಡುವೆ ಸ್ನೇಹದಾಯಕ ವಾತಾವರಣ ಕಾಣಬೇಕು. ಕೆಲಸದಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ, ಅವರಿಗಾಗಿ ಕೆಲವು ಸಮಯವನ್ನು ನೀಡಬೇಕು. ಅವರ ಜೊತೆಗೆ ವಿಷಯಗಳನ್ನು ಚರ್ಚಿಸಬೇಕಿದೆ.

ಹದಿಹರೆಯದ ಯುವತಿಯರ ದೈಹಿಕ ಬದಲಾವಣೆಯಗಳ ಕುರಿತು ತಾಯಿ ಮೊದಲೇ ತಿಳಿಸಿ ಹೇಳಬೇಕಿದೆ. ಅವರಿಗೆ ಅದನ್ನು ಸುಲಭವಾಗಿ ನಿರ್ವಹಿಸುವ ಸಂಬಂಧ ಪಾಠ ನೀಡಬೇಕಿದೆ.

ಸೂಚನೆ: (ಕೆಲವು ಸಮಸ್ಯೆಗಳಿಗೆ ಕೆಲವು ಚಿಕಿತ್ಸೆಗಳು ಕೂಡ ಕೆಲಸ ಮಾಡುತ್ತವೆ. ಈ ಹಿನ್ನಲೆ ತಜ್ಞರ ಸಮಲೋಚನೆಯಂತೆ ಅವುಗಳಿಗೆ ಒಳಗಾಗುವುದು ಉತ್ತಮ.)

ಇದನ್ನೂ ಓದಿ: Puberty: 7-8 ವರ್ಷಕ್ಕೆಲ್ಲ ಋತುಮತಿಯಾಗುವ ಹೆಣ್ಣು ಮಕ್ಕಳು; ಕೋವಿಡ್​ ಕೂಡ ಕಾರಣವಂತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.