ETV Bharat / sukhibhava

ಭಾರತದಲ್ಲೇ ವಿಕಸನಗೊಳ್ಳುತ್ತಿದೆ ಡೆಂಘೀ ವೈರಸ್​​; ಅಧ್ಯಯನದಲ್ಲಿ ಬಹಿರಂಗ

ಭಾರತದಲ್ಲಿ ಕಳೆದ ಹಲವು ದಶಕಗಳಿಂದ ಡೆಂಘೀ ವೈರಸ್​ ತಳಿಗಳು ಹೆಚ್ಚು ವಿಕಸನಗೊಳ್ಳುತ್ತಿದೆ. ಇದಕ್ಕೆ ಸೂಕ್ತ ಔಷಧ ಅಭಿವೃದ್ಧಿಪಡಿಸುವ ಅವಶ್ಯಕತೆ ಇದೆ.

dengue-virus-evolving-in-india-revealed-in-the-study
Dengue virus evolving in India; Revealed in the study
author img

By

Published : May 2, 2023, 1:48 PM IST

ನವದೆಹಲಿ: ಭಾರತದಲ್ಲಿ ಡೆಂಘೀ ಹೆಚ್ಚು ವಿಕಸನಗೊಂಡಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ತಂಡದ ವಿಜ್ಞಾನಿಗಳು ತಿಳಿಸಿದ್ದಾರೆ. ಇದೆ ವೇಳೆ ಅವರು ದೇಶದಲ್ಲಿ ಡೆಂಘೀ ವಿರುದ್ಧ ಲಸಿಕೆ ಅಭಿವೃದ್ಧಿ ಪಡಿಸುವ ಅವಶ್ಯಕತೆ ಇದೆ ಎಂದು ಒತ್ತಿ ಹೇಳಿದ್ದಾರೆ. ಪಿಎಲ್​ಒಎಸ್​ ಪ್ಯಾತೊಜೆನ್ಸ್​ ಎಂಬ ಜರ್ನಲ್​ನಲ್ಲಿ ಈ ಕುರಿತು ಪ್ರಕಟವಾಗಿದ್ದು, ಭಾರತದ ಉಪಖಂಡಗಳಲ್ಲಿ ಕಳೆದ ಕೆಲವು ದಶಕಗಳಿಂದ ಈ ವೈರಸ್​ ಹೇಗೆ ವಿಕಸನಗೊಂಡಿದೆ ಎಂದು ತಿಳಿಸಿದ್ದಾರೆ.

ಡೇಂಘಿ ಸೊಳ್ಳೆಗಳಿಂದ ಬರುವ ವೈರಸ್​ ಆಗಿದ್ದು, ಕಳೆದ 50 ದಶಕಗಳನ್ನು ಈ ಪ್ರಕರಣಗಳು ಹೆಚ್ಚಾಗಿದೆ. ಅದರಲ್ಲೂ ಆಗ್ನೇಯ ಏಷ್ಯಾದಲ್ಲಿ ಇದರ ಪ್ರಮಾಣ ಹೆಚ್ಚಿದೆ. ಆದಾಗ್ಯೂ ಭಾರತದಲ್ಲಿ ಈ ಡೇಂಘಿಗೆ ಯಾವುದೇ ಲಸಿಕೆಯನ್ನು ಕಂಡು ಹಿಡಿದಿಲ್ಲ. ಕೆಲವು ದೇಶಗಳಲ್ಲಿ ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಭಾರತದ ತಳಿಗಳು ಎಷ್ಟು ವಿಭಿನ್ನವಾಗಿದೆ ಎಂಬುದನ್ನು ನಾವು ಅರ್ಥೈಸಿಕೊಳ್ಳುತ್ತಿದ್ದೇವೆ. ಲಸಿಕೆ ಅಭಿವೃದ್ಧಿ ಮಾಡಿದ ರಾಷ್ಟ್ರಗಳಿಗೆ ಹೋಲಿಕೆ ಮಾಡಿದರೆ, ಭಾರತದಲ್ಲಿ ಇರುವ ಪ್ರಕರಣಗಳು ನೈಜ ತಳಿಗಿಂಗ ವಿಭಿನ್ನವಾಗಿದೆ ಎಂದು ಐಐಎಸ್ಸಿಯ ಸಹಾಯಕ ಪ್ರಾಧ್ಯಾಪಕ ರಾಹುಲ್​ ರಾಯ್​ ತಿಳಿಸಿದ್ದಾರೆ.

1956ರಿಂದ 2018ರವರೆಗೆ ಭಾರತದ ಡೆಂಘಿ ತಳಿಗಳಿಗೆ ತುತ್ತಾದ ರೋಗಿಗಳಿಂದ ದಾಖಲೆಗಳನ್ನು ಸಂಗ್ರಹಿಸಲಾಗಿದೆ. ಭಾರತದ ಡೆಂಘೀ ತಳಿಗಳ ಲಭ್ಯವಿರುವ 408 ಜೆನಟಿಕ್​ ಅನುಕ್ರಮಗಳನ್ನು ಅಧ್ಯಯನ ನಡೆಸಲಾಗಿದೆ. ಇದರಲ್ಲಿ ಸೆರೊಟೈಪ್​ನಲ್ಲಿ ನಾಲ್ಕು ಡೆಂಘೀ 1, 2, 3, 4 ಎಂದು ವರ್ಗಗಳನ್ನು ಮಾಡಲಾಗಿದೆ. ಇದಕ್ಕೆ ಕಂಪ್ಯೂಟಾಷ್ಯನಲ್​ ವಿಶ್ಲೇಷಣೆ ನಡೆಸಲಾಗಿದೆ. ಪ್ರತಿಯೊಂದು ಸಿರೊಟೈಪ್‌ಗಳು ತಮ್ಮ ಪೂರ್ವಜರ ಅನುಕ್ರಮದಿಂದ, ಪರಸ್ಪರ ಮತ್ತು ಇತರ ಜಾಗತಿಕ ಅನುಕ್ರಮಗಳಿಂದ ಎಷ್ಟು ವಿಕಸನಗೊಂಡಿವೆ ಎಂಬುದನ್ನು ತಂಡವು ಪರಿಶೀಲಿಸಿತು. ಅನುಕ್ರಮಗಳು ಬಹಳ ಸಂಕೀರ್ಣ ಶೈಲಿಯಲ್ಲಿ ಬದಲಾಗುತ್ತಿವೆ ಎಂದು ರಾಯ್ ಹೇಳಿದರು.

2012ವರೆಗೆ ಭಾರತದಲ್ಲಿ ಡೆಂಘೀ ತಳಿಗಳಲ್ಲಿ 1 ಮತ್ತು 3 ಹೆಚ್ಚು ಪ್ರಬಲವಾಗಿದೆ. ಇತ್ತೀಚಿನ ವರ್ಷದಲ್ಲಿ ಡೆಂಘೀ 2 ದೇಶಾದ್ಯಂತ ಹೆಚ್ಚು ಪ್ರಬಲವಾಗಿದೆ. ಡೆಂಘೀ 4 ಕಡಿಮೆ ಸಾಂಕ್ರಾಮಿಕ ಎಂದು ಪರಿಗಣಿಸಲಾಗಿದೆ. ದಕ್ಷಿಣ ಭಾರತದಲ್ಲಿ ಇದೀಗ ಈ ಪ್ರಕರಣಗಳು ಹೆಚ್ಚಾಗುತ್ತದೆ. ಯಾವುದೇ ಸಮಯದಲ್ಲಿ ಯಾವ ಒತ್ತಡವು ಪ್ರಬಲವಾಗಿದೆ ಎಂಬುದನ್ನು ಯಾವ ಅಂಶಗಳು ನಿರ್ಧರಿಸುತ್ತವೆ ಎಂಬುದನ್ನು ತಿಳಿಸಿದೆ.

ಜನರು ಮೊದಲು ಒಂದು ಸಿರೊಟೈಪ್‌ನಿಂದ ಸೋಂಕಿಗೆ ಒಳಗಾಗಬಹುದು. ಬಳಿಕ ವಿಭಿನ್ನ ಸಿರೊಟೈಪ್‌ನೊಂದಿಗೆ ದ್ವಿತೀಯಕ ಸೋಂಕು ಅಭಿವೃದ್ಧಿಪಡಿಸಬಹುದು. ಇದು ಹೆಚ್ಚು ತೀವ್ರವಾದ ರೋಗಲಕ್ಷಣಗಳಿಗೆ ಕಾರಣವಾಗುತ್ತದೆ ಎಂದು ತಂಡ ತಿಳಿಸಿದೆ. ದ್ವಿತೀಯ ಸ್ಟೀರಿಯೊಟೈಪ್​ ಮೊದಲ ರೀತಿಯಲ್ಲಿಯೆ ಇರಲಿದೆ ಎಂದು ವಿಜ್ಞಾನಿಗಳು ನಂಬಿದ್ದಾರೆ. ವೈರಸ್ ಪ್ರತಿ ಸಿರೊಟೈಪ್​​ನ ಹಲವಾರು ತಳಿಗಳು ಅಸ್ತಿತ್ವದಲ್ಲಿದೆ. ಪ್ರಾಥಮಿಕ ಸೋಂಕಿನ ನಂತರ ಮಾನವ ದೇಹದಲ್ಲಿ ಉತ್ಪತ್ತಿಯಾಗ ಪ್ರತಿಕಾಯಗಳು ಸುಮಾರು 2-3 ವರ್ಷಗಳವರೆಗೆ ಎಲ್ಲ ಸೆರೋಟೈಪ್​ಗಳಿಂದ ಸಂಪೂರ್ಣ ರಕ್ಷಣೆ ನೀಡುತ್ತದೆ. ಕಾಲಾ ನಂತರದಲ್ಲಿ, ಪ್ರತಿಕಾಯದ ಮಟ್ಟವು ಕುಸಿಯಲು ಪ್ರಾರಂಭವಾಗುತ್ತದೆ ಮತ್ತು ಅಡ್ಡ - ಸೆರೋಟೈಪ್ ರಕ್ಷಣೆ ಕಳೆದು ಹೋಗುತ್ತದೆ.

ಇದನ್ನೂ ಓದಿ: ಹವಾಮಾನ ಬದಲಾವಣೆ.. ಸೊಳ್ಳೆಗಳಿಂದ ಹರಡುವ ರೋಗಗಳ ಅಪಾಯದ ಬಗ್ಗೆ ತಜ್ಞರ ಎಚ್ಚರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.