ಬೆಂಗಳೂರು: ದೇಶದಲ್ಲಿ ಹೃದಯಾಘಾತಕ್ಕೆ ಒಳಗಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಈ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ. ಈ ಹೃದಯಾಘಾತವಾದ ವೇಳೆ ತಕ್ಷಣಕ್ಕೆ ಆರೈಕೆ ಸಿಗದೇ ಶೇ 55ರಷ್ಟು ಮಂದಿ ಸಾವನ್ನಪ್ಪುತ್ತಿದ್ದಾರೆ ಎಂದು ಹೊಸ ಅಧ್ಯಯನ ತಿಳಿಸಿದೆ. ಲ್ಯಾನ್ಸೆಟ್ ಜರ್ನಲ್ನಲ್ಲಿ ಪ್ರಕಟವಾಗಿರುವ ಮೊದಲ ಸಮುದಾಯದ ಆಧಾರಿತ ಅಧ್ಯಯನ ಇದಾಗಿದೆ. ಈ ಅಧ್ಯಯನ ಅನುಸಾರ ಭಾರತದಲ್ಲಿ ಶೇ 55ರಷ್ಟು ಮಂದಿ ಹೃದಯಘಾತದ ಸಾವಿಗೆ ಆರೈಕೆಯ ವಿಳಂಬವೇ ಕಾರಣ ಎಂದು ತಿಳಿಸಿದೆ.
ಈ ಕುರಿತು ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಮತ್ತು ನವದೆಹಲಿಯ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅಧ್ಯಯನ ನಡೆಸಿದೆ. ಈ ವೇಳೆ, ಕೆಲವು ಪ್ರಮಾಣದ ಹೃದಯಾಘಾತ ತುರ್ತು ಪರಿಸ್ಥಿತಿ ರೋಗಿಗಳು ತಕ್ಷಣಕ್ಕೆ ಆರೋಗ್ಯ ಸೌಲಭ್ಯ ಪಡೆಯುತ್ತಿದ್ದಾರೆ ಎಂದು ತಿಳಿಸಿದೆ.
ಕಳಪೆ ಫಲಿತಾಂಶ: ಹೃದಯದ ತುರ್ತು ಚಿಕಿತ್ಸೆಯಲ್ಲಿ ಸರಿಯಾದ ಸಮಯದ ಚಿಕಿತ್ಸೆ ಕೊರತೆಯು ಕಳಪೆ ಫಲಿತಾಂಶಕ್ಕೆ ಕಾರಣವಾಗಿದೆ. ಉತ್ತರ ಭಾರತದಲ್ಲಿನ ಸಮುದಾಯದಲ್ಲಿ ಹೃದಯ / ಪಾರ್ಶ್ವವಾಯು ತುರ್ತುಸ್ಥಿತಿಗಳ ಕಾರಣದಿಂದಾಗಿ ಮರಣ ಹೊಂದಿದವರಲ್ಲಿ ಸೂಕ್ತವಾದ ಆರೈಕೆಯನ್ನು ಪಡೆಯುವಲ್ಲಿ ವಿಳಂಬದ ಉಪಸ್ಥಿತಿಯನ್ನು ನಾವು ನಿರ್ಣಯಿಸಿದ್ದೇವೆ ಎಂದು ಏಮ್ಸ್ನ ಕರೆಸ್ಪಾಡೆಂಟ್ ಲೇಖಕ ಆನಂದ್ ಕೃಷ್ಣ ತಿಳಿಸಿದ್ದಾರೆ.
ಫಲಿತಾಂಶದಲ್ಲಿ ಶೇ 10.8 ರಷ್ಟು ರೋಗಿಗಳು ಮಾತ್ರ ಒಂದು ಗಂಟೆಯೊಳಗೆ ಸರಿಯಾದ ಆರೋಗ್ಯ ಸೌಲಭ್ಯ ಪಡೆಯುತ್ತಿದ್ದಾರೆ. ವಿಳಂಬ ಪ್ರದರ್ಶನದಿಂದ ಅದಕ್ಕೆ ಬೇಕಾದ ಅಂದರೆ ಮಯೋಕಾರ್ಡಿಯಲ್ ಸೌಲಭ್ಯದಂತಹ ಸೂಕ್ತ ಚಿಕಿತ್ಸೆ ನೀಡುವಲ್ಲಿ ವಿಫಲವಾಗುತ್ತದೆ. ತಡವಾಗಿ ಮಯೋ ಕಾರ್ಡಿಯಲ್ ಇನ್ಫ್ರಾಕ್ಷನ್ ಚಿಕಿತ್ಸೆಯನ್ನು ನೀಡುವುದು ಸಾವಿನ ಅಪಾಯವನ್ನು ಶೇ 30ರಷ್ಟು ಹೆಚ್ಚಿಸುತ್ತದೆ ಎಂದು ಅಧ್ಯಯನ ತೋರಿಸಿದೆ. ಅಸ್ವಸ್ಥೆಯ ತೀವ್ರತೆಯನ್ನು ಪತ್ತೆ ಮಾಡದೇ ಇರುವುದು, ಆರ್ಥಿಕ ಸಮಸ್ಯೆಗಳು ವಿಳಂಬ ಆರೈಕೆಯಲ್ಲಿನ ಪ್ರಮುಖ ಕಾರಣಗಳಾಗಿವೆ ಎಂದು ಕೃಷ್ಣನ್ ತಿಳಿಸಿದ್ದಾರೆ.
ಹರಿಯಾಣ ಸಮುದಾಯದಲ್ಲಿ ಅಧ್ಯಯನ: ಈ ಅಧ್ಯಯನವನ್ನು ಹರಿಯಾಣದ ಫಾರಿದಾಬಾದ್ ಜಿಲ್ಲೆಯ ಮೂರರಲ್ಲಿ ಎರಡು ಸಮುದಾಯದಲ್ಲಿ ಮಾಡಲಾಗಿದೆ. ಅಧ್ಯಯನ ತಂಡವು 30ರಿಂದ 69ವರ್ಷವರು ಹೃದಾಯಾಘಾತದಿಂದ ಸಾವನ್ನಪ್ಪಿದವರ ಸಾಮಾಜಿಕ ಅಡಿಟ್ ನಡೆಸುವ ಮೂಲಕ ಅಧ್ಯಯನ ನಡೆಸಿದೆ.
ಇದರಲ್ಲಿ ಅರ್ಧದಷ್ಟು ಮಂದಿ ತಮ್ಮ ಅಸ್ವಸ್ಥತೆ ಸಂಬಂಧ ಅವರು ಆರೋಗ್ಯ ಸೌಲಭ್ಯವನ್ನು ಪಡೆದಿಲ್ಲ. ಮತ್ತು ಆಸ್ಪತ್ರೆಗೆ ಭೇಟಿ ನೀಡಿಲ್ಲ. ಇವರೆಲ್ಲ ಹೃದಯಾಘಾತ ಅಥವಾಸ್ಟ್ರೋಕ್ ಗುಣಲಕ್ಷಣ ಕಾಣಿಸಿದ ಒಂದು ಗಂಟೆಯೊಳಗೆ ಆಸ್ಪತ್ರೆಗೆ ಭೇಟಿ ನೀಡುವಲ್ಲಿ ವಿಫಲರಾಗಿದ್ದಾರೆ.
ಇನ್ನು ಸೌಲಭ್ಯ ಮತ್ತು ಕುಟುಂಬದ ಜೊತೆಗೆ ವಾಸಿಸುವ ಅಧಿಕ ಆದಾಯದ ರೋಗಿಗಳು ಗಂಟೆಯೊಳಗೆ ಆರೋಗ್ಯ ಸೌಲಭ್ಯ ಪಡೆಯುವ ಮೂಲಕ ಸ್ಟ್ರೋಕ್ಗೆ ಒಳಗಾಗುವುದನ್ನು ತಪ್ಪಿಸುತ್ತಾರೆ.
ಅಧ್ಯಯನವೂ ಆಸ್ಪತ್ರೆ ಸೌಲಭ್ಯಗಳು ಕೈಗೆಟುಕುವ ದರ ಮತ್ತು ಲಭ್ಯತೆಯ ಪ್ರಮುಖ ಅಂಶವಾಗಿದ್ದ, ಸಾವಿನ ತಡೆಗಟ್ಟುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಜೊತೆಗೆ ಉತ್ತಮ ವಿಮೆ ಕವರೆಜ್ ಪತ್ತೆ ಮತ್ತು ಸುಸಜ್ಜಿತ ಸಾಧನ ಹೊಂದಿರುವ ಆಂಬ್ಯುಲೆನ್ಸ್ಗಳ ಲಭ್ಯತೆ ಕೂಡ ಹೃದಯಾಘಾತ ಅಥವಾ ಮಿದುಳಿನ ಆಘಾತ ಪ್ರಮುಖವಾಗುತ್ತದೆ.
ಇದನ್ನೂ ಓದಿ: ಮಹಿಳೆಯರಲ್ಲಿನ ಹೃದಯಾಘಾತಕ್ಕೆ ಕಾರಣವಾಗುವ ಹೊಸ ವಂಶವಾಹಿ ಪತ್ತೆ