ನವದೆಹಲಿ: ಅಧಿಕ ಆದಾಯದ ದೇಶಗಳಿಗೆ ಹೋಲಿಕೆ ಮಾಡಿದಾಗ ಕಡಿಮೆ ಅಥವಾ ಕಡಿಮೆ - ಮಧ್ಯಮ ಆದಾಯದ ದೇಶಗಳಲ್ಲಿ ಆಸ್ಪತ್ರೆಗೆ ದಾಖಲಾದ ಯಕೃತ್ತಿನ ಕಾಯಿಲೆಯ ರೋಗಿಗಳ ಸಾವಿನ ಅಪಾಯ ಹೆಚ್ಚಿದೆ ಎಂದು ಹೊಸ ಸಂಶೋಧನೆ ತಿಳಿಸಿದೆ. ಭಾರತ ಸೇರಿದಂತೆ 25 ದೇಶಗಳ ದತ್ತಾಂಶಗಳನ್ನು ವಿಶ್ಲೇಷಿಸಿ ಈ ಅಧ್ಯಯನ ನಡೆಸಲಾಗಿದೆ. ಲ್ಯಾನ್ಸೆಟ್ ಗ್ಯಾಸ್ಟೊ ಎಟರ್ನೊಲಾಜಿ ಮತ್ತು ಹೆಪಟೊಲೊಜಿ ಜರ್ನಲ್ನಲ್ಲಿ ಈ ಅಧ್ಯಯನ ಪ್ರಕಟಿಸಲಾಗಿದೆ. ಕಡಿಮೆ ಆಧಾಯದ ದೇಶಗಳಲ್ಲಿ ಈ ರೋಗದ ಪತ್ತೆ ಮತ್ತು ಚಿಕಿತ್ಸೆಗಳ ಸೌಲಭ್ಯ ನಿಗದಿತವಾಗಿದ್ದು, ಈ ಹಿನ್ನಲೆ ಅಪಾಯ ಹೆಚ್ಚಿದೆ ಎಂದು ತಿಳಿಸಿದೆ.
ವ್ಯಕ್ತಿಯ ಯಕೃತ್ನಲ್ಲಿ ದೀರ್ಘಕಾಲದ ಉರಿಯೂತ ಅನುಭವಿಸಿದಾಗ ಯಕೃತ್ತಿನ ರೋಗ ಸಂಭವಿಸುತ್ತದೆ. ಅನೇಕ ವೇಳೆ ಸ್ಥೂಲಕಾಯ, ಅಧಿಕ ಆಲ್ಕೋಹಾಲ್ ಬಳಕೆ, ಹೆಪಟೈಟಿಸ್ ವೈರಸ್ ಅಥವಾ ಇದರ ಸಂಯೋಜನೆಗಳು ಯಕೃತ್ತಿನ ರೋಗಕ್ಕೆ ಕಾರಣವಾಗುತ್ತದೆ. ಈ ಊರಿಯುತಗಳು ಯಕೃತ್ ಸಿರೋಸಿಸ್ಗೆ ಕಾರಣವಾಗುತ್ತದೆ. ಈ ವೇಳೆ, ಇದು ಯಕೃತ್ ಕಾರ್ಯಾಚರಣೆಗೆ ಅಡ್ಡಿ ಮಾಡಿ, ಕಡೆಗೆ ಯಕೃತ್ ವೈಫಲ್ಯ ಉಂಟಾಗುತ್ತದೆ.
2 ಮಿಲಿಯನ್ಗೂ ಅಧಿಕ ಸಾವು: ಜಗತ್ತಿನ ವಿವಿಧ ರೋಗಿಗಳ ಸಾವಿನ ಸಂಖ್ಯೆಯಲ್ಲಿ ಯಕೃತ್ ರೋಗವೂ ಒಂದಾಗಿದೆ. ಪ್ರತಿ ವರ್ಷ ಈ ರೋಗದಿಂದ 2 ಮಿಲಿಯನ್ ಜನರು ಸಾವನ್ನಪ್ಪುತ್ತಿದ್ದಾರೆ. ಭವಿಷ್ಯದಲ್ಲಿ ಇದರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸಂಶೋಧನೆ ತಿಳಿಸಿದೆ. ದೇಹದ ಕಾರ್ಯಾಚರಣೆ ಮಾಡಲು ಅನೇಕ ಅಂಶಗಳಿಂದ ಅಂಗಾಂಗಳ ನಡುವೆ ಸಂಪರ್ಕ ಕಲ್ಪಿಸುವಲ್ಲಿ ಯಕೃತ್ ಪಾತ್ರ ಪ್ರಮುಖವಾಗಿದೆ ಎಂದು ಅಮೆರಿಕದ ವರ್ಜಿನಿಯಾ ಕಾಮನ್ವೆಲ್ತ್ ಯುನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್ ಪ್ರೋ ಜಸ್ಮೋಹನ್ ಬಜಾಜ್ ತಿಳಿಸಿದ್ದಾರೆ.
ಯಕೃತ್ ಮೇಲೆ ಉಂಟಾಗುವ ಪರಿಣಾಮಗಳು ಇತರ ಅಂಗಾಂಗ ಮತ್ತು ದೇಹದ ಕಾರ್ಯ ನಿರ್ವಹಣೆ ವ್ಯವಸ್ಥೆ ಮೇಲೆ ಪ್ರಭಾವ ಬೀರುತ್ತದೆ. ಇದು ದೇಹದ ರೋಗ ನಿರೋಧಕ ವ್ಯವಸ್ಥೆ, ಹೃದಯ ಸಮಸ್ಯೆ, ಮೆದುಳು, ಕರುಳು ಮತ್ತು ಕಿಡ್ನಿಯ ಮೇಲೂ ಪರಿಣಾಮ ಬೀರುತ್ತದೆ ಎಂದಿದ್ದಾರೆ.
ಬಜಾಜ್ ಮತ್ತು ನವದೆಹಲಿಯ ಇನ್ಸಿಟಿಟ್ಯೂಟ್ ಫಾರ್ ಲಿವರ್ ಅಂಡ್ ಬೈಲರಿ ಸೈನ್ಸ್ನ ಪ್ರೋ ಅಶೋಕ್ ಕೆ ಚೌಧರಿ ಮತ್ತು ಅವರ ಸಹೋದ್ಯೋಗಿಗಳು, ಸಿರೋಸಿಸ್‌ನಿಂದ ಸಾವಿನ ಅಪಾಯವು ದೇಶಗಳಲ್ಲಿ ಹೇಗೆ ಬದಲಾಗುತ್ತದೆ. ಇದರ ಹಿಂದೆ ಯಾವ ಆಧಾರವಾಗಿರುವ ಅಂಶವಿದೆ ಎಂಬುದರ ಕುರಿತು ತನಿಖೆ ನಡೆಸಿದ್ದಾರೆ.
25 ದೇಶಗಳ ಅಧ್ಯಯನ: ಜಗತ್ತಿನ ಉತ್ತರ ಅಥವಾ ನಿರ್ಧಿಷ್ಟ ಪ್ರದೇಶಗಳ ಮೇಲೆ ಬಹುತೇಕ ಸಿರೋಸಿಸ್ ಸಂಶೋಧನೆ ಗಮನ ಕೇಂದ್ರಿಕರಿಸಿದೆ. ಈ ವೇಳೆ ಸಾರ್ವಜನಿಕ ಆರೋಗ್ಯ ಮೂಲಗಳ ನಡುವೆ ವ್ಯತ್ಯಾಸ ಗಮನಿಸಿಲ್ಲ. ಜಾಗತಿಕ ದೃಷ್ಟಿಕೋನದಿಂದ ಸಿರೋಸಿಸ್ ಮರಣದಲ್ಲಿನ ಅಸಮತೋಲನವನ್ನು ವಿಶ್ಲೇಷಿಸುವ ಅಧ್ಯಯನ ಇದಾಗಿದೆ. ಈ ಸಂಶೋಧನೆಯಲ್ಲಿ ಸರಿ ಸುಮಾರು ಆರು ಖಂಡಗಳ 25 ದೇಶಗಳ 90 ವೈದ್ಯಕೀಯ ಕೇಂದ್ರ 4 ಸಾವಿರ ರೋಗಿಗಳ ದತ್ತಾಂಶವನ್ನು ವಿಶ್ಲೇಷಣೆ ಮಾಡಲಾಗಿದೆ.
ಹೆಚ್ಚಿನ ಆದಾಯ ಹೊಂದಿರುವ ದೇಶಗಳಿಗೆ ಹೋಲಿಕೆ ಮಾಡಿದಾಗ ಕಡಿಮೆ ಆದಾಯ ಹೊಂದಿರುವ ದೇಶಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾದ 30 ದಿನಗಳಲ್ಲೇ ಸಿರೋಸಿಸ್‌ನಿಂದ ಸಾವನ್ನಪ್ಪುವ ರೋಗಿಗಳ ಸಂಖ್ಯೆ ದುಪ್ಪಟ್ಟಿದೆ. ಈ ಫಲಿತಾಂಶ ಆಘಾತಕಾರಿಯಾಗಿದೆ. ಸಿರೋಸಿಸ್ ಮರಣದಲ್ಲಿ ಇಷ್ಟು ಮಟ್ಟದ ಅಸಮಾನತೆಯನ್ನು ನಾವು ನಿರೀಕ್ಷಿಸಿರಲಿಲ್ಲ, ಆದರೆ ಯಕೃತ್ ಸಮಸ್ಯೆ ಕುರಿತ ಜಾಗತಿಕವಾಗಿ ಒಂದೇ ರೀತಿಯ ಸಾವಿನ ಪ್ರಮಾಣವಿಲ್ಲ ಎಂದಿದ್ದಾರೆ. ವೈದ್ಯಕೀಯ ಲಭ್ಯತೆಗಳು ಕೂಡ ಜಾಗತಿಕವಾಗಿ ಈ ಸಾವಿನ ಸಂಖ್ಯೆಯಲ್ಲಿ ಕೊಡುಗೆ ನೀಡಿದೆ.
ಕಡಿಮೆ ಆದಾಯದ ದೇಶಗಳಲ್ಲಿ ಜನರು ಈ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದಗ ಪತ್ತೆ, ಔಷಧ, ಚಿಕಿತ್ಸೆ, ಐಸಿಯು ಕೇರ್ ಮತ್ತು ಲಿವರ್ ಟ್ರಾನ್ಸ್ಪ್ಲಾಟ್ ಅನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಅಲ್ಲದೇ, ಕಡಿಮೆ ಆದಾಯದ ದೇಶದಲ್ಲಿ ಈ ರೋಗ ಹೊಂದಿರುವ ರೋಗಿಗಳು ಅಂತಿಮ ಹಂತದಲ್ಲಿ ಆಸ್ಪತ್ರೆಗೆ ದಾಖಲಾಗುತ್ತಾರೆ. ಜೀರ್ಣಾಂಗವ್ಯೂಹದ ಸ್ರವಿಸುವಿಕೆ, ಹೆಪಟೈಟಿಸ್ ಬಿ ಸೋಂಕುನ್ನು ಸರಿಯಾದ ಚಿಕಿತ್ಸೆ ಮೂಲಕ ಸಕಾಲಕ್ಕೆ ತಡೆಗಟ್ಟಬಹುದಾಗಿದೆ.
ಇದನ್ನೂ ಓದಿ: ಲಿವರ್ ಸಿರೋಸಿಸ್: ಕೊನೆಯ ಹಂತದ ಯಕೃತ್ ಸಮಸ್ಯೆಗೆ ಕಾರಣವೇನು?