ಲಂಡನ್: ಇಂದು ಹೃದಯಾಘಾತದ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಹೃದಯಾಘಾತ ಯಾವಾಗ, ಯಾರಿಗೆ ಸಂಭವಿಸುತ್ತದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಆದರೆ, ಈ ಸಂಬಂಧ ಇತ್ತೀಚೆಗೆ ನಡೆದ ಅಧ್ಯಯನದಲ್ಲಿ ಅಚ್ಚರಿಯ ಮಾಹಿತಿಯೊಂದು ಹೊರಬಿದ್ದಿದೆ. ಅದರ ಅನುಸಾರ ಈ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿ ಸೋಮವಾರ ಸಂಭವಿಸುತ್ತಿರುವುದು. ಶೇ. 13ರಷ್ಟು ಹೃದಯಾಘಾತ ಪ್ರಕರಣಗಳು ಉಳಿದ ದಿನಗಳಿಗಿಂತ ಕೆಲಸದ ವಾರದ ಮೊದಲ ದಿನವೇ ಸಂಭವಿಸುತ್ತಿವೆ.
ಬ್ರಿಟನ್ನ ಮ್ಯಾಂಚೆಸ್ಟರ್ ಸಮ್ಮೇಳನದಲ್ಲಿ ಬ್ರಿಟಿಷ್ ಕಾರ್ಡಿಯೊವಸ್ಕ್ಯೂಲರ್ ಸೊಸೈಟಿ ಈ ಅಧ್ಯಯನ ವರದಿ ಮಂಡಿಸಿದೆ. ಈ ವೇಳೆ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಶೇ 13ರಷ್ಟು ಹೃದಯಾಘಾತ ಪ್ರಕರಣ ಸೋಮವಾರ ವರದಿ ಆಗುತ್ತಿದೆ ಎಂದು ತಿಳಿಸಿದೆ.
ಬೆಲ್ಫಾಸ್ ಹೆಲ್ತ್ ಮತ್ತು ಸೋಶಿಯಲ್ ಕೇರ್ ಟ್ರಸ್ಟ್ ವೈದ್ಯರು ಹಾಗೂ ಐರ್ಲೆಂಡ್ನ ರಾಯಲ್ ಕಾಲೇಜ್ ಆಫ್ ಸರ್ಜನ್ ಈ ಸಂಬಂಧ ವಿಶ್ಲೇಷಣೆ ನಡೆಸಿದೆ. ಇದಕ್ಕಾಗಿ ಐರ್ಲೆಂಡ್ ದ್ವೀಪಗಳ 10,528 ಭಾಗಿದಾರರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. 2013 ಮತ್ತು 2018ರಲ್ಲಿ ಆಸ್ಪತ್ರೆಗೆ ದಾಖಲಾದ ರೋಗಿಗಳನ್ನು ಗಂಭೀರವಾದ ಹೃದಯಾಘಾತ ಎಸ್ಟಿ- ಸೆಗ್ಮೆಂಟ್ ಎಲೆವೆಷನ್ ಮಯೊಕಾರ್ಡಿಯಲ್ ಇನ್ಫ್ರಾಕ್ಷನ್ (ಎಸ್ಟಿಇಎಂಐ) ಆಗಿದೆ.
ಎಸ್ಟಿಇಎಂಐ ಹೃದಯದ ಪರಿಧಮನಿ ಮತ್ತು ಅಪಧಮನಿ ಸಂಪೂರ್ಣವಾಗಿ ಮುಚ್ಚಿರುವುದರಿಂದ ಉಂಟಾಗುತ್ತದೆ. ಕೆಲಸದ ವಾರದ ಆರಂಭದ ದಿನ, ಈ ಎಸ್ಇಎಂಐ ದರ ಹೆಚ್ಚಿರುತ್ತದೆ ಎಂದು ಸಂಶೋಧನೆ ತಿಳಿಸಿದೆ. ಮತ್ತೊಂದು ಪ್ರಮುಖ ಅಂಶ ಎಂದರೆ ಎಸ್ಟಿಇಎಂಐ ಕೂಡ ಹೆಚ್ಚಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದೇ ವೇಳೆ ತಜ್ಞರು ಈ ಬ್ಲೂ ಮಂಡೆ (Blue Monday) ವಿದ್ಯಮಾನ ಕೂಡ ಏನಕ್ಕೆ ಸಂಭವಿಸುತ್ತದೆ ಎಂಬುದನ್ನು ವಿಶ್ಲೇಷಿಸುವಲ್ಲಿ ವಿಫಲರಾಗಿದ್ದಾರೆ.
ಇವು ಪ್ರಮುಖ ಅಂಶ: ಹಿಂದಿನ ಅಧ್ಯಯನದಲ್ಲಿ, ಹೃದಯಾಘಾತಗಳು ಸೋಮವಾರದೊಂದಿಗೆ ಎಂಬ ಅಂಶವೂ ಹೃದಯದ ಬಡಿತ ಮತ್ತು ದೇಹದ ನಿದ್ರೆ ಮತ್ತು ಎಚ್ಚರದ ಚಕ್ರದೊಂದಿಗೆ ಸಂಬಂಧವನ್ನು ಹೊಂದಿದೆ ಎಂಬುದನ್ನು ಎತ್ತಿ ತೋರಿಸಿದೆ.
ಕೆಲಸದ ವಾರದ ಆರಂಭ ದಿನ ಮತ್ತು ಎಸ್ಟಿಇಎಂಐ ಘಟನೆಗಳ ನಡುವಿನ ಬಲವಾದ ಅಂಕಿಅಂಶಗಳ ಸಂಬಂಧವನ್ನು ನಾವು ಕಂಡುಕೊಂಡಿದ್ದೇವೆ. ಮೊದಲೇ ವಿವರಿಸಿದಂತೆ ಅದರ ಕುತೂಹಲ ಉಳಿದಿದೆ ಎಂದು ಸಂಶೋಧನೆಯ ಪ್ರಮುಖರಾದ ಡಾ ಜಾಕ್ ಲಫಾನ್ ತಿಳಿಸಿದ್ದಾರೆ.
ಇದಕ್ಕೆ ಕಾರಣಗಳು ಹಲವು ಇರಬಹುದು. ಆದಾಗ್ಯೂ ಹಿಂದಿನ ಅಧ್ಯಯನದಲ್ಲಿ ಗಮನಿಸಿದಂತೆ ಇದು ಹೃದಯದ ಅಂಶವನ್ನು ಇದಕ್ಕೆ ಪ್ರಮುಖವಾಗಿರುತ್ತದೆ. ಎಸ್ಟಿಇಎಂಐಗೆ ತಕ್ಷಣದಲ್ಲಿ ಮೌಲ್ಯಮಾಪನ ಮತ್ತು ಚಿಕಿತ್ಸೆಯನ್ನು ನೀಡುವ ಮೂಲಕ ಹೃದಯಕ್ಕೆ ಆಗುವ ಹಾನಿಯನ್ನು ತಡೆಯಬಹುದು. ಇದು ಸಾಮಾನ್ಯವಾಗಿ ತುರ್ತು ಅಂಜಿಯೋಪ್ಲಾಸ್ಟಿ ಅವಶ್ಯಕತೆ ಬೇಡುತ್ತದೆ. ಇಲ್ಲಿ ಹೃದಯದ ಕವಾಟದಲ್ಲಿ ಆಗಿರುವ ಬ್ಲಾಕ್ಗಳನ್ನು ತೆಗೆಯಲಾಗುತ್ತದೆ. ಈ ಅಧ್ಯಯನವು ನಿರ್ದಿಷ್ಟ ಗಂಭೀರವಾದ ಹೃದಯಾಘಾತದ ಸಮಯದ ಬಗ್ಗೆ ಪುರಾವೆಗಳನ್ನು ನೀಡುತ್ತದೆ. ವಾರದ ನಿರ್ದಿಷ್ಟ ದಿನದ ಕುರಿತ ಆಯ್ಕೆಯೂ ಇದೀಗ ಈ ಗಂಭೀರ ಸಮಸ್ಯೆಯನ್ನು ಅರ್ಥ ಮಾಡಕೊಳ್ಳಲು ಸಹಾಯ ಮಾಡುತ್ತದೆ. ಇದರಿಂದ ಭವಿಷ್ಯದಲ್ಲಿ ಜೀವ ಉಳಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ದುಃಖದಿಂದ ಹೃದಯ ಸಮಸ್ಯೆ ಹೆಚ್ಚುತ್ತದೆ: ಅಧ್ಯಯನದಲ್ಲಿ ಬಯಲು