ETV Bharat / sukhibhava

ಕೋವಿಶೀಲ್ಡ್​ನಿಂದ ಪುರುಷರ ಫಲವತ್ತತೆಗೆ ತೊಂದರೆ ಇಲ್ಲ: ಮಣಿಪಾಲ ವೈದ್ಯರ ಸಂಶೋಧನೆ

ಕೋವಿಡ್​ ಲಸಿಕೆ ತುರ್ತು ಬಳಕೆ ಮಾಡಿದ್ದರಿಂದ ಅಡ್ಡ ಪರಿಣಾಮಗಳ ಬಗ್ಗೆ ಹಲವಾರು ಚರ್ಚೆಗಳು ನಡೆಯುತ್ತಿರುತ್ತದೆ. ಪುರುಷರ ಫಲವತ್ತತೆಗೆ ಲಸಿಕೆಯಿಂದ ಸಮಸ್ಯೆ ಆಗುತ್ತದೆ ಎಂಬ ಬಗ್ಗೆ ಇದ್ದ ಊಹಾಪೋಹಗಳ ಬಗ್ಗೆ ಮಣಿಪಾಲದ ಕಸ್ತೂರಿ ಬಾ ಮೆಡಿಕಲ್ ಕಾಲೇಜು ತಂಡ ಅಧ್ಯಯನ ಮಾಡಿ ವರದಿ ನೀಡಿದೆ.

covishield-does-not-affect-male-fertility-report
ಕೋವಿಶೀಲ್ಡ್​ನಿಂದ ಪುರುಷರ ಫಲವತ್ತತೆಗೆ ತೊಂದರೆ ಇಲ್ಲ
author img

By

Published : Sep 16, 2022, 5:46 PM IST

Updated : Sep 16, 2022, 11:01 PM IST

ಉಡುಪಿ: ಕೋವಿಡ್ ವಿರುದ್ಧ ಹೋರಾಡಲು ತೆಗೆದುಕೊಳ್ಳುವ ಕೋವಿಶೀಲ್ಡ್ ವ್ಯಾಕ್ಸಿನ್‌ನಿಂದ ಪುರುಷರ ಫಲವತ್ತತೆಗೆ ಯಾವುದೇ ಹಾನಿ ಉಂಟಾಗುವುದಿಲ್ಲ. ವೀರ್ಯದ ಗುಣಮಟ್ಟದಲ್ಲೂ ಯಾವುದೇ ಬದಲಾವಣೆ ಆಗುವುದಿಲ್ಲ ಎಂಬುದು ಮಣಿಪಾಲದ ಕಸ್ತೂರ್ ಬಾ ಮೆಡಿಕಲ್ ಕಾಲೇಜಿನಲ್ಲಿ ಭಾರತೀಯ ಫರ್ಟಿಲಿಟಿ ತಜ್ಞರ ತಂಡವೊಂದು ಈ ಕುರಿತು ಮೊದಲ ಬಾರಿ ನಡೆಸಿದ ಪೈಲಟ್ ಅಧ್ಯಯನದಲ್ಲಿ ಕಂಡುಕೊಂಡಿದೆ.

ಈ ಕುರಿತ ಸಂಶೋಧನಾ ವರದಿ ಇಂಗ್ಲೆಂಡ್ ಮೂಲದ ಸೊಸೈಟಿ ಫಾರ್ ರಿಪ್ರೊಡಕ್ಷನ್ ಅಂಡ್​​ ಫರ್ಟಿಲಿಟಿಯ ಅಧಿಕೃತ ಜರ್ನಲ್‌ನ ಸೆ.5ರ ಸಂಚಿಕೆಯಲ್ಲಿ ಪ್ರಕಟಗೊಂಡಿದೆ. ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ನೀಡಿದ ಪತ್ರಿಕಾ ಪ್ರಕಟಣೆಯಲ್ಲಿ ಈ ವಿಷಯವನ್ನು ತಿಳಿಸಲಾಗಿದೆ. ಕೋವಿಶೀಲ್ಡ್​​ ವ್ಯಾಕ್ಸಿನ್ ತೆಗೆದುಕೊಂಡ ಪುರುಷನ ವೀರ್ಯದ ಗುಣಮಟ್ಟದಲ್ಲಿ, ಸಂಖ್ಯೆ, ಚಲನೆಯ ಗುಣ, ಲೈಂಗಿಕತೆ ಯಾವುದೂ ಬದಲಾಗದಿರುವುದು ಸಂಶೋಧನೆ ವೇಳೆ ಕಂಡುಬಂದಿದೆ. ಇದಕ್ಕೆ ವ್ಯತಿರಿಕ್ತವಾದ ಅಂಶಗಳಾವುದು ಕಂಡುಬಂದಿಲ್ಲ ಎಂದು ಪ್ರಕಟಣೆ ಹೇಳಿದೆ.

ಕೋವಿಶೀಲ್ಡ್​ನಿಂದ ಪುರುಷರ ಫಲವತ್ತತೆಗೆ ತೊಂದರೆ ಇಲ್ಲ

ಸಂಶೋಧನೆಗಾಗಿ 53 ಮಂದಿಯ ವೀರ್ಯವನ್ನು ಪರೀಕ್ಷೆಗೆ ತೆಗೆದು ಕೊಳ್ಳಲಾಗಿದೆ. ವ್ಯಾಕ್ಸಿನ್‌ನ ಮೊದಲ ಡೋಸ್ ತೆಗೆದುಕೊಳ್ಳುವ ಮೊದಲು ಅವರ ವೀರ್ಯವನ್ನು ಪರೀಕ್ಷೆಗಾಗಿ ತೆಗೆದುಕೊಂಡಿದ್ದರೆ, ವ್ಯಾಕ್ಸಿನೇಷನ್ ಆದ ಎರಡು ತಿಂಗಳ ನಂತರ ಮತ್ತೊಮ್ಮೆ ವೀರ್ಯದ ಗುಣಮಟ್ಟವನ್ನು ಪರೀಕ್ಷಿಸಲಾಗಿದೆ. ಕೋವಿಡ್-19ಕ್ಕೆ ಪಾಸಿಟಿವ್ ಬಂದ ಅಥವಾ ಕೋವಿಡ್‌ನ ಗುಣಲಕ್ಷಣ ಕಂಡುಬಂದ ವ್ಯಕ್ತಿಗಳನ್ನು ಅಧ್ಯಯನಕ್ಕೆ ಪರಿಗಣಿಸಲಿಲ್ಲ ಎಂದು ವರದಿ ತಿಳಿಸಿದೆ.

ಅಧ್ಯಯನಕ್ಕಾಗಿ 53 ಮಂದಿ ಬಳಕೆ: ಅಧ್ಯಯನಕ್ಕಾಗಿ ಆಯ್ಕೆ ಮಾಡಿದ 53 ಮಂದಿಯೂ ಎರಡು ಡೋಸ್ ವ್ಯಾಕ್ಸಿನ್‌ನ್ನು ಸ್ವೀಕರಿಸಿದ್ದಾರೆ. ಇವರಲ್ಲಿ ಅರ್ಧದಷ್ಟು ಮಂದಿಯ ವೀರ್ಯದ ಗುಣಮಟ್ಟ ಡಬ್ಲ್ಯುಎಚ್‌ಓ ನಿಗದಿ ಪಡಿಸಿದ ಮಟ್ಟಕ್ಕಿಂತ ಕೆಳಗಿದ್ದರೂ, ವ್ಯಾಕ್ಸಿನ್ ಪಡೆದ ನಂತರವೂ ಅದರಲ್ಲಿ ಯಾವುದೇ ಗಮನಾರ್ಹ ಬದಲಾವಣೆಯಾಗಿಲ್ಲ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ. ಮಣಿಪಾಲದ ಡಾ.(ಪ್ರೊ.) ಸತೀಶ್ ಅಡಿಗ ನೇತೃತ್ವದ ಐವರು ತಜ್ಞರ ತಂಡ ಈ ಅಧ್ಯಯನವನ್ನು ನಡೆಸಿದೆ.

ಅಧ್ಯಯನದ ಕುರಿತಂತೆ ಪ್ರತಿಕ್ರಿಯಿಸಿದ ಮಾಹೆಯ ಕುಲಪತಿ ಲೆ.ಜ.(ಡಾ.)ಎಂ.ಡಿ.ವೆಂಕಟೇಶ್, ಈ ಸಂಶೋಧನೆಯಿಂದ ಭಾರತದಲ್ಲಿ ಸಾಮಾನ್ಯವಾಗಿ ಉಪಯೋಗಿಸುವ ಕೋವಿಡ್ ವ್ಯಾಕ್ಸಿನ್‌ಗಳ ಸುರಕ್ಷತೆಯ ಬಗ್ಗೆ ಭರವಸೆ ಮೂಡಿದಂತಾಗಿದೆ. ಈ ಸಂಶೋಧನೆಯಿಂದ ವ್ಯಾಕ್ಸಿನೇಷನ್ ಬಗ್ಗೆ ಇದ್ದ ಹಲವು ಊಹಾಪೋಹ, ಆತಂಕಗಳು ದೂರವಾಗುವಂತಾಗಿದೆ ಎಂದರು.

ಇದನ್ನೂ ಓದಿ : ಪುರುಷರಲ್ಲಿನ ಬಂಜೆತನಕ್ಕೂ ಇದೆ ಚಿಕಿತ್ಸೆ.. ವೀರ್ಯಾಣು ಲಸಿಕೆ ಕುರಿತು ಇಲ್ಲಿದೆ ಮಾಹಿತಿ

Last Updated : Sep 16, 2022, 11:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.