ನ್ಯೂಯಾರ್ಕ್: ಕೋವಿಡ್ ಲಸಿಕೆಯ ಬಗ್ಗೆ ವಿಜ್ಞಾನಿಗಳು ಹಲವು ಸ್ಪಷ್ಟನೆಗಳನ್ನು ನೀಡಿದ ಬಳಿಕವೂ ಈ ಬಗ್ಗೆ ಅನೇಕರಿಗೆ ಹಲವು ರೀತಿಯ ಅನುಮಾನಗಳಿವೆ. ಅದರಲ್ಲೊಂದು ಇದು ಗರ್ಭಾವಸ್ಥೆಗೆ ತೊಡಕಾಗುತ್ತದೆ ಅನ್ನೋದು. ಈ ಕುರಿತು ಭಯ ಬೇಡ ಎಂಬುದಾಗಿ ಇದೀಗ ಸಂಶೋಧಕರು ತಿಳಿಸಿದ್ದಾರೆ. ಕೋವಿಡ್ ಲಸಿಕೆಗಳು ಗರ್ಭಪಾತದ ಯಾವುದೇ ಅಪಾಯವನ್ನು ಹೆಚ್ಚಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕೋವಿಡ್ ಲಸಿಕೆಗಳನ್ನು ತೆಗೆದುಕೊಂಡ ಬಳಿಕ ಸಂತಾನೋತ್ಪತ್ತಿಗೆ ಪ್ರಯತ್ನಿಸಿದಾಗ ಯಾವುದೇ ಬಂಜೆತನ ಅಥವಾ ಗರ್ಭಪಾತದಂತಹ ಅಪಾಯವಿರದು. ಆದರೂ, ಅನೇಕರು ಲಸಿಕೆಯು ಗರ್ಭಾವಸ್ಥೆಯಲ್ಲಿ ಲಸಿಕೆ ಅಡ್ಡಪರಿಣಾಮ ಹೊಂದುವ ಭೀತಿ ಹೊಂದಿದ್ದಾರೆ.
ಜರ್ನಲ್ ಹ್ಯುಮನ್ ರಿಪ್ರೊಡಕ್ಷನ್ನಲ್ಲಿ ಪ್ರಕಟವಾದ ಈ ಅಧ್ಯಯನದಲ್ಲಿ ಲಸಿಕೆ ಪಡೆದ ಬಳಿಕ ಆರಂಭಿಕ ಗರ್ಭಪಾತದ ಅಪಾಯವನ್ನು ಮೌಲ್ಯಮಾಪನ ಮಾಡಲಾಗಿದೆ. ಬಳಿಕ ಪುರುಷರಲ್ಲಿನ ಲಸಿಕೆಯ ಪರಿಣಾಮವು ಗರ್ಭಪಾತದ ಮೇಲೆ ಉಂಟುಮಾಡುವ ಅಪಾಯದ ಕುರಿತು ಅಧ್ಯಯನ ನಡೆಸಲಾಗಿದೆ.
ಅಮೆರಿಕದ ಬೋಸ್ಟನ್ ಯುನಿವರ್ಸಿಟಿ ಸಂಶೋಧಕರು ಈ ಅಧ್ಯಯನ ನಡೆಸಿದ್ದು, ಈ ಫಲಿತಾಂಶ ಗರ್ಭಾವಸ್ಥೆಯ ಯೋಜನೆ ರೂಪಿಸುತ್ತಿರುವವರಿಗೆ ಉಪಯುಕ್ತ ಮಾಹಿತಿ ಒದಗಿಸಿದೆ. ಹಾಗೆಯೇ ಆರೋಗ್ಯ ಸಂಬಂಧ ಮಾಹಿತಿ ನೀಡಿದೆ.
ಲಸಿಕೆ ಸುರಕ್ಷಿತ: ಈ ಫಲಿತಾಂಶವನ್ನು ಗರ್ಭಾವಸ್ಥೆಗೆ ಯೋಜಿಸುತ್ತಿರುವ ದಂಪತಿಗಳ ಮೇಲೆ ಪುನರ್‌ಸ್ಥಾಪಿಸಬಹುದು ಎಂದು ಅಧ್ಯಯನದ ಪ್ರಮುಖ ಲೇಖಕ ಜೆನ್ನಿಫರ್ ಲಂಡ್ ತಿಳಿಸಿದರು. ಸಾಂಕ್ರಾಮಿಕತೆಗೆ ಮೊದಲ ಗರ್ಭಪಾತಕ್ಕೆ ಒಳಗಾದ ಭಾಗಿದಾರರನ್ನು ಲಸಿಕೆ ಪಡೆದ ಬಳಿಕ ಗರ್ಭಪಾತಕ್ಕೆ ಒಳಗಾದವರೊಂದಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಆದರೆ ನಮ್ಮ ದತ್ತಾಂಶ ಲಸಿಕೆ ಪಡೆಯದವರಿಗೆ ಹೋಲಿಕೆ ಮಾಡಿದರೆ, ಲಸಿಕೆ ಪಡೆದವರಲ್ಲಿ ಗರ್ಭಪಾತ ಅಪಾಯ ಕಡಿಮೆ ಎಂದು ತೋರಿಸಿದೆ ಎಂದು ಹೇಳಿದ್ದಾರೆ.
ಅಧ್ಯಯನಕ್ಕಾಗಿ ಅಮೆರಿಕ ಮತ್ತು ಕೆನಡಾದಲ್ಲಿ 2020ರ ಡಿಸೆಂಬರ್ನಿಂದ 2022ರ ನವೆಂಬರ್ವರೆಗೆ ಕೋವಿಡ್ ಲಸಿಕೆ ಮತ್ತು ರ್ಭಪಾತಕ್ಕೊಳಗಾದ 1,815 ಮಂದಿ ಮಹಿಳೆಯರ ಸಮೀಕ್ಷೆಯ ದತ್ತಾಂಶವನ್ನು ವಿಶ್ಲೇಷಿಸಲಾಗಿದೆ. ಅಧ್ಯಯನದಲ್ಲಿ ಮೊದಲ ಗರ್ಭವಸ್ಥೆಯ ದೃಢೀಕರಣದ ದತ್ತಾಂಶವನ್ನು ಗರ್ಭಾಪತದವರೆಗೆ ಗಮನಿಸಲಾಗಿದೆ. ಲಸಿಕೆ ಪಡೆದ ಮಹಿಳೆಯರಲ್ಲಿ ಗರ್ಭಪಾತದ ಅಪಾಯ ಶೇ 23.9ರಷ್ಟಿದೆ. ಸಿಂಗಲ್ ಡೋಸ್ ಲಸಿಕೆ ಪಡೆದವರಲ್ಲಿ ಈ ಅಪಾಯ ಶೇ 23.9 ಇದ್ದು, ಸಂಪೂರ್ಣ ಸರಣಿಯ ಲಸಿಕೆ ಪಡೆದವರಲ್ಲಿ ಶೇ 22.01 ಇದೆ. (ಐಎಎನ್ಎಸ್)
ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ಅತಿಯಾದ ತೂಕ - ಸಾವಿನ ಅಪಾಯ ಹೆಚ್ಚಿಸಬಹುದು!