ETV Bharat / sukhibhava

ಕೇರಳದಲ್ಲಿ ಹೆಚ್ಚುತ್ತಿರುವ ಕೋವಿಡ್​ ಸಂಖ್ಯೆ: ಒಂದೇ ದಿನದಲ್ಲಿ 265 ಪ್ರಕರಣ, ಒಂದು ಸಾವು

ಜ್ವರ, ರಕ್ತದಲ್ಲಿ ಆಕ್ಸಿಜನ್​ ಕೊರತೆ ಮತ್ತು ಆಯಾಸದಂತಹ ಲಕ್ಷಣಗಳು ಐದು ದಿನಕ್ಕಿಂತ ಹೆಚ್ಚಾಗಿದ್ದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಎಂದು ತಜ್ಞರು ಸಲಹೆ ನೀಡಿದ್ದಾರೆ.

http://10.10.50.85:6060/reg-lowres/22-December-2023/covid-new-2_2212newsroom_1703225553_779.jpg

author img

By ETV Bharat Karnataka Team

Published : Dec 22, 2023, 11:49 AM IST

ಹೈದರಾಬಾದ್​: ಕೇರಳದಲ್ಲಿ ಕೋವಿಡ್​ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಕಂಡಿದೆ. ಕಳೆದ 24 ಗಂಟೆಯಲ್ಲಿ 265 ಹೊಸ ಕೋವಿಡ್​ ಪ್ರಕರಣಗಳು ದಾಖಲಾಗಿದ್ದು, ಒಂದು ಸಾವು ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಶುಕ್ರವಾರ ಬೆಳಗ್ಗೆ 8ಗಂಟೆಯ ಮಾಹಿತಿ ಅನುಸಾರ, ದೇಶದಲ್ಲಿ ಹೊಸದಾಗಿ 328 ಪ್ರಕರಣಗಳು ದಾಖಲಾಗಿದೆ. ಅದರಲ್ಲಿ 265 ಪ್ರಕರಣಗಳು ಕೇರಳದಲ್ಲಿ ವರದಿಯಾಗಿದೆ. ಸದ್ಯ ದೇಶದಲ್ಲಿ 2,606 ಸಕ್ರಿಯ ಪ್ರಕರಣಗಳು ದಾಖಲಾಗಿದೆ.

  • Kerala reported 300 new active cases of Covid-19 and 3 deaths on 20th December, as per the Ministry of Health and Family Welfare.

    The total number of active cases of Covid-19 in the country is 2669. pic.twitter.com/k3Z6y5f9VO

    — ANI (@ANI) December 21, 2023 " class="align-text-top noRightClick twitterSection" data=" ">

ಇನ್ನು ಆಂಧ್ರಪ್ರದೇಶದಲ್ಲಿ ಗುರುವಾರ ಆರು ಹೊಸ ಕೋವಿಡ್​ ಪ್ರಕರಣಗಳು ದಾಖಲಾಗಿವೆ. ಇಲ್ಲಿಯವರೆಗೆ ರಾಜ್ಯದಲ್ಲಿ 925 ಆಗಿದೆ. ಇನ್ನು ಪತ್ತೆಯಾದ ಆರು ಕೋವಿಡ್​ ಪ್ರಕರಣದಲ್ಲಿ ನಾಲ್ಕು ಆಂಧ್ರ ಪ್ರದೇಶದಲ್ಲಿ ಪತ್ತೆಯಾದರೆ ಒಂದು ರಂಗಾರೆಡ್ಡಿ ಮತ್ತು ಒಂದು ಮೆದಕ್​ ಜಿಲ್ಲೆಯಲ್ಲಿ ದಾಖಲಾಗಿದೆ.

ಕೋವಿಡ್​ ಮಾರ್ಗಸೂಚಿ ಪಾಲಿಸಿ: ದೇಶದಲ್ಲಿ ಕೋವಿಡ್​ ಪ್ರಕರಣಗಳು ಏರಿಕೆ ಕಾಣುತ್ತಿದ್ದು, ರಾಜ್ಯದಲ್ಲೂ ಹೊಸ ಪ್ರಕರಣಗಳ ವರದಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಬೋಧಕ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜುಗಳು ಕೋವಿಡ್​ ಮಾರ್ಗಸೂಚಿಯನ್ನು ಅವಶ್ಯವಾಗಿ ಪಾಲಿಸಬೇಕು ಎಂದು ರಾಜ್ಯ ವೈದ್ಯಕೀಯ ಶಿಕ್ಷಣದ ಇಲಾಖೆಯ ಹೆಚ್ಚುವರಿ ನಿರ್ದೇಶ ಕೆ ಶಿವರಾಂ ಆದೇಶಿಸಿದ್ದಾರೆ.

ವೈದ್ಯರು, ನರ್ಸಿಂಗ್​ ಅಧಿಕಾರಿಗಳು ಮತ್ತು ಇತರೆ ಸಿಬ್ಬಂದಿಗಳು ಕೂಡ ಮಸ್ಕ್​ ಧರಿಸುವುದು. ಪದೇ ಪದೇ ಕೈ ತೊಳೆಯುವುದು, ಆಸ್ಪತ್ರೆ ವಾತಾವರಣವನ್ನು ಶುಚಿಯಾಗಿ ಇರಿಸುವುದು, ಆಸ್ಪತ್ರೆಯ ತ್ಯಾಜ್ಯ ನಿರ್ವಹಣೆಯ ಬಗ್ಗೆ ಹೆಚ್ಚಿನ ಗಮನ ಹೊಂದಿರಬೇಕು. ಜೊತೆಗೆ ಆಸ್ಪತ್ರೆಯಲ್ಲಿ ದಾಖಲಾಗುವ ಕೋವಿಡ್​ ದಾಖಲೆಗಳ ಮಾಹಿತಿಗಳನ್ನು ಹಂಚಿಕೊಳ್ಳುವಂತೆ ನಿರ್ದೇಶಿಸಿದ್ದಾರೆ.

ಕೋವಿಡ್​ನ ವಿಶೇಷ ಜಿನೋಮ್​ ಸೀಕ್ವೆನ್ಸ್​ ಇರುವ ಮಾದಿರಗಳನ್ನು ವಿವಿಧ ಆಸ್ಪತ್ರೆಗಳಿಂದ ಗಾಂಧಿ ಆಸ್ಪತ್ರೆಗೆ ಪರೀಕ್ಷೆಗೆ ಕಳುಹಿಸಲಾಗಿದೆ. ಈಗಾಗಲೇ ಹಲವು ವಿವಿಧ ರಾಜ್ಯದಲ್ಲಿ ಕೋವಿಡ್​ನ ಹೊಸ ತಳಿ ಜೆಎನ್​.1 ಪತ್ತೆಯಾಗಿದೆ. ಇದಕ್ಕೆ ಗಾಂಧಿ ಆಸ್ಪತ್ರೆ ಸಜ್ಜಾಗಿದ್ದು, ವಿವಿಧ ಆಸ್ಪತ್ರೆಗಳಿಂದ ಬರುವ ಕೋವಿಡ್ ಪರೀಕ್ಷಾ ಮಾದರಿಗಳ ಜೀನೋಮ್ ಪತ್ತೆ ನಡೆಸಿದೆ. ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದೆಯಾದರೂ ಯಾವುದೇ ಚಿಂತೆ ಪಡುವ ಅಗತ್ಯವಿಲ್ಲ. ಅನೇಕವೂ ಓಮ್ರಿಕಾನ್​ ರೀತಿಯ ಲಕ್ಷಣವನ್ನು ಹೊಂದಿದೆ. ಇದರಿಂದ ಆಸ್ಪತ್ರೆಗೆ ದಾಖಲಾಗುವ ಕಡಿಮೆಯಾಗಿದೆ. ವೈರಸ್​ ವೇಗವಾಗಿ ಹರಡುತ್ತಿರುವ ಹಿನ್ನಲೆ ಮುನ್ನೆಚ್ಚರಿಕೆ ಅವಶ್ಯಕವಾಗಿ ಅನುಸರಿಸಬೇಕಿದೆ. ಉಸಿರಾಟ ಸಮಸ್ಯೆ ಮತ್ತು ಇತರೆ ದೀರ್ಘ ಕಾಲದ ಸಮಸ್ಯೆಗಳಿಂದ ಬಳಲುತ್ತಿರುವವರು, ವೃದ್ಧರು ಮತ್ತು ಗರ್ಭಿಣಿ ಮಹಿಳೆಯರು ಈ ಬಗ್ಗೆ ಎಚ್ಚರದಿಂದ ಇರಬೇಕು.

ಜ್ವರ, ರಕ್ತದಲ್ಲಿ ಆಕ್ಸಿಜನ್​ ಕೊರತೆ ಮತ್ತು ಆಯಾಸದಂತಹ ಲಕ್ಷಣಗಳು ಐದು ದಿನಕ್ಕಿಂತ ಹೆಚ್ಚಾಗಿದ್ದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಎಂದು ಗಾಂಧಿ ಆಸ್ಪತ್ರೆಯ ಸೂಪರಿಟೆಂಡಂಟ್​​ ಡಾ ರಾಜಾ ರಾವ್​ ತಿಳಿಸಿದ್ದಾರೆ.

ಇದನ್ನೂ ಓದಿ: ಕೇರಳದಲ್ಲಿ ಒಂದೇ ದಿನದಲ್ಲಿ ಪತ್ತೆಯಾದವು 300 ಸಕ್ರಿಯ ಕೋವಿಡ್​ ಪ್ರಕರಣಗಳು: 3 ಸಾವು.. ಮಂಗಳೂರಲ್ಲಿ ಒಬ್ಬರಿಗೆ ಪಾಸಿಟಿವ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.